ETV Bharat / entertainment

ಸ್ಯಾಂಡಲ್​ವುಡ್ ಪಯಣ 2023: ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಕನ್ನಡ ಚಿತ್ರಗಳಿವು

author img

By ETV Bharat Karnataka Team

Published : Dec 13, 2023, 6:38 PM IST

Updated : Dec 14, 2023, 6:20 PM IST

ಸ್ಯಾಂಡಲ್​ವುಡ್ ಸಿನಿ ಪಯಣ 2023 ಈ ಕೆಳಗಿನಂತಿದೆ..

Sandalwood movies journey 2023
ಸ್ಯಾಂಡಲ್​ವುಡ್ ಸಿನಿ ಪಯಣ 2023

ಹೊಸ ನಿರೀಕ್ಷೆಯೊಂದಿಗೆ ಹೊಸ ವರ್ಷಕ್ಕೆ ನಮ್ಮ ಸ್ಯಾಂಡಲ್​ವುಡ್ ಸಜ್ಜಾಗಿದೆ. ಪ್ರತಿ ಹೊಸ ವರ್ಷಾರಂಭ ಗೆಲುವಿನ ಕಡೆ‌ ಕಣ್ಣಾಡಿಸೋ ಮುನ್ನ, ಈ ವರ್ಷದಲ್ಲಿ ನಮ್ಮ ಸಾಧನೆ ಏನು ಎಂಬುದರ ಲೆಕ್ಕಾಚಾರ ಹಾಕೋದು ಕಾಮನ್. 2023 ಕೊನೆ ಹಂತಕ್ಕೆ ಬಂದಿದ್ದು, ಈ ವರ್ಷ ಎಷ್ಟು ಸಿನಿಮಾಗಳು ಬಿಡುಗಡೆ ಆಗಿವೆ. ಅಷ್ಟು ಚಿತ್ರಗಳ ಪೈಕಿ ಗೆದ್ದವರು ಯಾರು? ಹಿನ್ನೆಡೆ ಕಂಡವರು ಯಾರು? ಎಂಬುದನ್ನು ನೋಡೋಣ.

Sandalwood movies journey 2023
ಸ್ಯಾಂಡಲ್​ವುಡ್ ಸಿನಿ ಪಯಣ 2023

ಇನ್ನು 18 ದಿನಗಳು ಉರುಳಿದ್ರೆ 2023 ತೆರೆ ಮರೆಗೆ ಸರಿಯುತ್ತೆ. 2024 ಹೊಸ ಉಲ್ಲಾಸದೊಂದಿಗೆ ಉದಯಿಸುತ್ತದೆ. ಸ್ಯಾಂಡಲ್​ವುಡ್ ಪಾಲಿಗೆ 2023 ಮಿಶ್ರ ಅನುಭವ ನೀಡಿದೆ. ಈ‌ ವರ್ಷ 200ಕ್ಕೂ ಹೆಚ್ಚು ಕನ್ನಡ ಚಿತ್ರಗಳು ರಿಲೀಸ್ ಆಗಿವೆ. ಅಲ್ಲದೇ ಬಾಕಿ‌ ಇರುವ 18 ದಿನಗಳಲ್ಲಿ 25ಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆಗೋ ಸಾಧ್ಯತೆಗಳಿವೆ.

ಈಗಾಗಲೇ ಕನ್ನಡದ 200ಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆಗಿವೆ. ಆದರೆ, ಈ ಚಿತ್ರಗಳಲ್ಲಿ ಎಷ್ಟು ಸಿನಿಮಾಗಳು ಗೆದ್ದಿವೆ? ಎಷ್ಟು ಸಿನಿಮಾಗಳು ಬಿದ್ದಿವೆ? ಎಂಬುದನ್ನು ಲೆಕ್ಕಾಚಾರ ಹಾಕೊಕೆ ಹೋದ್ರೆ ನಮಗೆ ನಿರಾಸೆ ಆಗೋದು ಗ್ಯಾರಂಟಿ. ಯಾಕಂದ್ರೆ ಈ ವರ್ಷ ನಮ್ಮ ಕನ್ನಡ ಸಿನಿಮಾಗಳ ಗೆದ್ದ ಸಂಖ್ಯೆ ಬೆರಳೆಣಿಕೆಯಷ್ಟಿದ್ರೆ, ದೊಡ್ಡ ಮಟ್ಟಿಗೆ ಸದ್ದು ಮಾಡದ ಸಿನಿಮಾಗಳ ಸಂಖ್ಯೆ ಬೆಟ್ಟದಂತಿದೆ. ಕಳೆದ ವರ್ಷದ ಕೊನೆಯಲ್ಲಿ ಬಂದ ಕಾಂತಾರ ಹಾಗೂ ಚಾರ್ಲಿ 777 ಸ್ಯಾಂಡಲ್​​ವುಡ್​ ಇಂಡಸ್ಟ್ರಿಗೆ ಹೊಸ ಹುರುಪು ಕೊಟ್ಟಿದ್ದವು. ಅಲ್ಲದೇ, 2022ರಲ್ಲಿ ಕನ್ನಡ‌ ಚಿತ್ರಗಳು 2,000 ಕೋಟಿಗೂ ಹೆಚ್ಚು ವ್ಯವಹಾರ ನಡೆಸಿದ್ದವು. ಅಲ್ಲದೇ 2023ನ್ನು ಅದ್ಧೂರಿಯಾಗಿ ಸ್ವಾಗತಿಸುವಂತೆ ಮಾಡಿದ್ವು. ಆದರೆ 2023ರ ಆರಂಭದಿಂದಲೇ ಸ್ಯಾಂಡಲ್​ವುಡ್​ ನಿರೀಕ್ಷಿತ ಮಟ್ಟಿಗೆ ಸದ್ದು ಮಾಡಿಲ್ಲ.

Sandalwood movies journey 2023
ಸ್ಯಾಂಡಲ್​ವುಡ್ ಸಿನಿ ಪಯಣ 2023

ಡಾರ್ಲಿಂಗ್ ಕೃಷ್ಣ ಅಭಿನಯದ 'ಮಿಸ್ಟರ್ ಬ್ಯಾಚುಲರ್' ಮೂಲಕ ಹೊಸ ವರ್ಷವನ್ನು ಆರಂಭಿಸಲಾಯಿತು. ಆದರೆ ಲವ್ ಮಾಕ್ಟೈಲ್ ಚಿತ್ರದ ಯಶಸ್ಸಿನಲ್ಲಿದ್ದ ಡಾರ್ಲಿಂಗ್​ ಕೃಷ್ಣನಿಗೆ ಈ ಚಿತ್ರ ಸೋಲಿನ ರುಚಿ ತೋರಿಸಿತ್ತು. ಈ ಚಿತ್ರದ ಬಳಿಕ ಬಂದ ಸಿನಿಮಾ ಕ್ರಾಂತಿ. ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಮೇಲಿನ ನಿರೀಕ್ಷೆ ಮೌಂಟ್ ಎವರೆಸ್ಟ್ ಎತ್ತರಕ್ಕೆ ಇತ್ತು. ಅದ್ರೆ ಈ ಚಿತ್ರ ಕೂಡ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ.

ಇನ್ನೂ ಅದ್ಧೂರಿ ಮೇಕಿಂಗ್ ಹಾಗೂ ಟ್ರೇಲರ್​​ನಿಂದಲೇ ಭಾರತೀಯ ಚಿತ್ರರಂಗ ಮತ್ತೆ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವಂತೆ ಮಾಡಿದ ಸಿನಿಮಾ ಕಬ್ಜ. ಆರ್. ಚಂದ್ರು ನಿರ್ದೇಶನದ, ಉಪ್ಪಿ ನಟನೆಯ ಕಬ್ಜ ಕಮರ್ಷಿಯಲ್ ಆಗಿ ಹಿಟ್ ಆಯ್ತು. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಾನದಾರಿಯಲ್ಲಿ ಚಿತ್ರ ಗೆಲುವಿನ ದಾರಿ ಬಿಟ್ಟು ಸೋಲಿನ‌ ಸುಳಿಯಲ್ಲಿ ಸಿಕ್ಕಿ ಇಂಡಸ್ಟ್ರಿ ಕಂಗಾಲಾಗುವಂತೆ ಮಾಡಿತ್ತು.

Sandalwood movies journey 2023
ಸ್ಯಾಂಡಲ್​ವುಡ್ ಸಿನಿ ಪಯಣ 2023

ಇದಲ್ಲದೇ ಡಾಲಿ ನಟನೆಯ ಹೊಯ್ಸಳ ಚಿತ್ರ ಕೂಡ 2023ರಲ್ಲಿ ದೊಡ್ಡ ಗೆಲುವಿನ ಭರವಸೆ ಮೂಡಿಸಿತ್ತು. ಆದರೆ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿ ಹೊಯ್ಸಳ ಬಾಕ್ಸ್ ಆಫೀಸ್​ನಲ್ಲಿ ಸಾಧಾರಣ ಪ್ರದರ್ಶನ ನೀಡಿತು. ಮಾಸ್ ಮಾದೇವ ರಾಜ್ ಬಿ ಶೆಟ್ಟಿ ಅಭಿನಯದ ಟೋಬಿ ಒಂದು ಮಟ್ಟಿನ ಗೆಲುವು ಕಂಡಿತು. ಕೊಂಚ ಹಿನ್ನೆಡೆ ಕಂಡಿದ್ದ ಚಂದನವನಕ್ಕೆ ಹೊಂಬಾಳೆ ಫಿಲ್ಮ್ಸ್​ನ, ಜಗ್ಗೇಶ್ ಅಭಿನಯದ 'ರಾಘವೇಂದ್ರ ಸ್ಟೋರ್ಸ್' ಆಕ್ಸಿಜನ್ ಆಗುತ್ತೆ ಅನ್ನೋ ಭರವಸೆ ಇತ್ತು. ಅದರೆ ಆ ಭರವಸೆಯೂ ಹುಸಿಯಾಯ್ತು. ಸಿನಿಮಾ ಗೆದ್ದಿತಾದರೂ ದೊಡ್ಡ ಮಟ್ಟಿಗೆ ಸದ್ದು ಮಾಡಲಿಲ್ಲ. ಈ ಸಿನಿಮಾಗಳ ಪೈಕಿ ಹಲವು ಚಿತ್ರಗಳಿಗೆ ಹಾಕಿದ ಬಂಡವಾಳ ವಾಪಸ್​ ಬಂದಿತಾದರೂ ದೊಡ್ಡ ಮಟ್ಟಿಗೆ ಜನಪ್ರಿಯವಾಗಲಿಲ್ಲ. ಇನ್ನು ಕೆಲವು ಜನಪ್ರಿಯವಾದರೂ ಹಾಕಿದ ಬಂಡವಾಳ ವಾಪಸ್ ಬರಲಿಲ್ಲ.

ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತೆ, ಹೊಸಬರೇ ನಟಿಸಿ ನಿರ್ಮಾಣ ಮಾಡಿದ್ದ ಸ್ಮಾಲ್ ಬಜೆಟ್ ಸಿನಿಮಾ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರ ಗೆದ್ದು ಮನೆ ಸೇರಿದ್ದ ಪ್ರೇಕ್ಷಕ ಪ್ರಭುಗಳನ್ನು ಚಿತ್ರಮಂದಿರಕ್ಕೆ ಬರುವಂತೆ ಮಾಡಿತ್ತು. ಇದರ ಜೊತೆಗೆ ಸದ್ದಿಲ್ಲದೇ ಬಂದ ಪಿಅರ್​ಕೆ ಫ್ರೋಡಕ್ಷನ್​ನ ಆಚಾರ್ ಅಂಡ್ ಕೋ ಫ್ಯಾಮಿಲಿ ಆಡಿಯನ್ಸ್​ನ ಮನ ಗೆದ್ದು ನಿರ್ಮಾಪಕರ ಜೇಬು ತುಂಬಿಸಿತು.

ಇದರ ಜೊತೆಗೆ ಒಂದೊಳ್ಳೆ ಕಂಟೆಂಟ್ ಮೂಲಕ ಬಂದ ಹೊಂದಿಸಿ ಬರೆಯಿರಿ, ಡೇರ್ ಡೆವಿಲ್ ಮುಸ್ತಾಫ ಚಿತ್ರಗಳು 2023ರಲ್ಲಿ ಒಂದು ಮಟ್ಟಿಗೆ ಯಶಸ್ವಿಯಾಗಿವೆ. ಅಲ್ಲದೇ ಶಶಾಂಕ್ ನಿರ್ದೇಶನದ ಬಿ.ಸಿ ಪಾಟೀಲ್ ನಿರ್ಮಾಣದ ಕೌಸಲ್ಯ ಸುಪ್ರಜಾ ರಾಮ ಚಿತ್ರ ವರ್ಷದ ಕೊನೆಯಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿತು. ಇದಾದ ನಂತ್ರ ಬಂದ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತಸಾಗರದಾಚೆ ಎಲ್ಲೋ ಚಿತ್ರ ಎರಡು ಭಾಗಗಳಾಗಿ ರಿಲೀಸ್ ಆಗಿ ಗಮನ ಸೆಳೆಯಿತು. ನಿರ್ಮಾಪಕರಿಗೆ ಲಾಸ್ ಆಗದ ರೀತಿ ಕಲೆಕ್ಷನ್ ಮಾಡಿತ್ತು. ಅಲ್ಲದೇ ತೆಲುಗಿನಲ್ಲಿ ಈ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು.

ಇದನ್ನೂ ಓದಿ: ಕಿರಿಕ್​ ಪಾರ್ಟಿ ಬಳಿಕ ಬ್ಯಾಚುಲರ್ ಪಾರ್ಟಿ: ಈ ಸಲ ಪಾರ್ಟಿ ಜೋರು! ಅಂತಿದ್ದಾರೆ ರಕ್ಷಿತ್​ ಶೆಟ್ಟಿ ಟೀಮ್

ಇನ್ನೂ ಈ ವರ್ಷ ಯಾವ ಬಿಗ್ ಸ್ಟಾರ್​ಗಳು ನಿರ್ಮಾಪಕರ ಕೈ ಹಿಡಿಯಲಿಲ್ಲ. ಅದ್ರೆ ಸದಾ ಎನರ್ಜಿಯಿಂದ ತಾನಾಯ್ತು ಸಿನಿಮಾ ಆಯ್ತು ಅನ್ನೋ ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಈ ವರ್ಷ ಮತ್ತೊಂದು ಹಿಟ್ ಕೊಟ್ರು. ಘೋಸ್ಟ್ ಚಿತ್ರದ ಮೂಲಕ ಗಮನ ಸೆಳೆದ್ರು. ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಿದ ಕರುನಾಡ ಚಕ್ರವರ್ತಿ ವರ್ಷದ ಕೊನೆಯಲ್ಲಿ ಸ್ಯಾಂಡಲ್​ವುಡ್​​ ನಿಟ್ಟುಸಿರು ಬಿಡುವಂತೆ ಮಾಡಿದ್ರು.

ಇದನ್ನೂ ಓದಿ: ಬಿಗ್‌ ಬಾಸ್‌ ಶಾಲೆಯಲ್ಲಿ ವಿದ್ಯಾರ್ಥಿಗಳ ಡ್ಯಾನ್ಸ್; ಟೀಚರ್ಸ್ ಸುಸ್ತೋ ಸುಸ್ತು!

ದರ್ಶನ್ ಅಭಿನಯದ ಕಾಟೇರ ಸಿನಿಮಾ ಈ ವರ್ಷದ ಅಂತ್ಯದಲ್ಲಿ ಬಿಡುಗಡೆ ಆಗೋದಿಕ್ಕೆ ಸಜ್ಜಾಗಿದೆ. ಸದ್ಯ ಹಾಡುಗಳಿಂದ ಗಮನ ಸೆಳೆಯುತ್ತಿರೋ ಕಾಟೇರ ಸಿನಿಮಾ ದರ್ಶನ್ ಸಿನಿಮಾ ಕೆರಿಯರ್​ಗೆ ಸಕ್ಸಸ್ ತಂದು ಕೊಡೋ ನಿರೀಕ್ಷೆಯಲ್ಲಿದೆ. ಇದರ ಜೊತೆಗೆ ಇನ್ನೂ 25 ಹೊಸಬರ ಸಿನಿಮಾಗಳು ಈ ವರ್ಷವೇ ರಿಲೀಸ್​​ಗೆ ಸಜ್ಜಾಗಿದ್ದು, ಈ ಚಿತ್ರಗಳಲ್ಲಿ ಯಾವ ಚಿತ್ರವಾದ್ರು ಸರ್ಪ್ರೈಸ್ ರಿಸಲ್ಟ್ ಕೊಡುತ್ತಾ ಅನ್ನೋ ನಿರೀಕ್ಷೆ ಸಿನಿಪ್ರಿಯರದ್ದು.

Last Updated : Dec 14, 2023, 6:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.