ETV Bharat / entertainment

ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಭರ್ಜರಿ ಓಪನಿಂಗ್​; ಮೊದಲ ದಿನದ ಕಲೆಕ್ಷನ್​ ಎಷ್ಟು?

author img

By

Published : Apr 15, 2023, 11:32 AM IST

ಸಮಂತಾ ಅಭಿನಯದ ಈ ಹಿಂದಿನ ಸಿನಿಮಾ ಯಶೋಧಾಗಿಂತ ಇದು ಉತ್ತಮ ಗಳಿಕೆ ಕಂಡಿದೆ ಎನ್ನಲಾಗಿದೆ.

Samantha starrer Shakunthalam has a great opening; How much is the first day collection?
Samantha starrer Shakunthalam has a great opening; How much is the first day collection?

ಹೈದರಾಬಾದ್​: ಸಮಂತಾ ರುತ್​ ಪ್ರಭು ಮೊದಲ ಬಾರಿಗೆ ಪೌರಣಿಕ ಪಾತ್ರದಲ್ಲಿ ಬಣ್ಣ ಹಚ್ಚಿದ ಸಿನಿಮಾ ಶಾಂಕುಂತಲಂ. ಕಾಳಿದಾಸನ ಅಭಿಜ್ಞಾ ಶಾಕುಂತಲ ಸಂಸ್ಕೃತ ನಾಟಕ ಆಧಾರಿತ ಈ ಚಿತ್ರ ಶುಕ್ರವಾರ ಬಿಡುಗಡೆಯಾಗಿದ್ದು, ಭರ್ಜರಿ ಓಪನಿಂಗ್​ ಕಂಡಿದೆ. ಚಿತದ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಮಂತಾ ಅಭಿನಯಕ್ಕೆ ಜನರು ಮೆಚ್ಚಿದ್ದಾರೆ. ಸಿನಿಮಾ ಉದ್ಯಮದ ಪ್ರಕಾರ, ಮೊದಲ ದಿನದಿನವೇ ಗುಣಶೇಖರ್​ ನಿರ್ದೇಶನದ ಈ ಸಿನಿಮಾ ಹೆಚ್ಚಿನ ವೀಕ್ಷಣೆ ಕಂಡಿದ್ದು, ಎಲ್ಲಾ ಭಾಷೆಗಳಲ್ಲಿ 5 ಕೋಟಿ ಲಾಭಾಗಳಿಸಿದೆ.

ತೆಲುಗು ರಾಜ್ಯದಲ್ಲಿ ಶಾಕುಂತಲಂ ಚಿತ್ರ ಥೀಯೆಟರ್​ನಲ್ಲಿ ಶೇ 32.60ರಷ್ಟು ದರದಲ್ಲಿ ಆಸನಗಳ ಭರ್ತಿ ಯಾಗಿದೆ. ಸಮಂತಾ ಅಭಿನಯದ ಈ ಹಿಂದಿನ ಸಿನಿಮಾ ಯಶೋಧಾಗಿಂತ ಇದು ಉತ್ತಮ ಗಳಿಕೆ ಕಂಡಿದೆ ಎನ್ನಲಾಗಿದೆ. ಚಿತ್ರದಲ್ಲಿನ ಪ್ರಮುಖ ಪಾತ್ರವಾದ ಶಾಕುಂತಲಗೆ ನಟಿ ಸಮಂತಾ ಜೀವ ತುಂಬಿದ್ದು, ದೇವ್​​ ಮೋಹನ್​ ದುಷ್ಯಂತನಾಗಿ ಕಾಣಿಸಿಕೊಂಡಿದ್ದಾರೆ. ವಾರಂತ್ಯದಲ್ಲಿ ಈ ಸಿನಿಮಾ ಮತ್ತಷ್ಟು ಜನರನ್ನು ಸೆಳೆಯುವಲ್ಲಿ ಸಫಲವಾಗಲಿದೆ ಎನ್ನಲಾಗಿದೆ.

ಸಮಂತಾ ಅಭಿನಯದ ಹಿಂದಿನ ಸಿನಿಮಾ ಯಶೋಧಾ ಮೊದಲ ದಿನ 3 ಕೋಟಿ ಲಾಭದೊಂದಿಗೆ ವಾರದೊಳಗೆ 10 ಕೋಟಿಯನ್ನು ಗಳಿಕೆಯ ದಾಖಲೆಯನ್ನು ಬಾಕ್ಸ್​ ಆಫೀಸ್​ ಹೊಂದಿದೆ. ಶಾಕುಂತಲಂ ಇದಕ್ಕೆ ಹೋಲಿಕೆ ಮಾಡಿದರೆ, ಶಾಕುಂತಲಂ ಹೆಚ್ಚಿನ ಗಳಿಕೆ ಮಾಡಿದ್ದು, ಮುಂದಿನ ದಿನದಲ್ಲಿ ಬಾಕ್ಸ್​ ಆಫೀಸ್​ನಲ್ಲಿ ಮತ್ತಷ್ಟು ದಾಖಲೆ ಬರೆಯಲಿದೆ ಎಂದು ಅಂದಾಜಿಸಲಾಗಿದೆ.

ಶಾಕುಂತಲಂ ಸಿನಿಮಾವನ್ನು ನಿರ್ಮಾಪಕರು ಭಾರೀ ಬಜೆಟ್​ನಲ್ಲಿ ನಿರ್ಮಿಸಿದ್ದು, ಇದನ್ನು ಟ್ರೈಲರ್​ನಲ್ಲೇ ಕಾಣಬಹುದಾಗಿದೆ. ಅದ್ದೂರಿ ಸೆಟ್​ಗಳ ಉತ್ತಮ ಛಾಯಗ್ರಾಹಣ ಚಿತ್ರವನ್ನು ಮತ್ತಷ್ಟು ಶ್ರೀಮಂತವಾಗಿಸಿದೆ. ಚಿತ್ರದಲ್ಲಿ ಇದೇ ಮೊದಲ ಬಾರಿ ನಟ ಅಲ್ಲು ಅರ್ಜುನ್​ ಮಗಳು ಅಲ್ಲು ಅರ್ಹಾ ಕೂಡ ಬಣ್ಣ ಹಚ್ಚಿದ್ದಾರೆ. ಇದರ ಹೊರತಾಗಿ ಅಧಿತಿ ಬಾಲನ್​, ಗೌತಮಿ, ಸಚ್ಚಿನ್​ ಖೇಡೆಕರ್​ ಮತ್ತು ಅನನ್ಯಾ ನಗಲ್ಲಾ ಸೇರಿದಂತೆ ಹಲವು ಚಿತ್ರ ಕಲಾವಿದರ ತಂಡ ಇದೆ.

ಚಿತ್ರಕ್ಕೆ ಫಿಲ್ಮ್​ ಮೇಕರ್​ ರಾಜ್​ ಮತ್ತು ಡಿಕೆ ಮೆಚ್ಚಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಸಮಂತಾ ರುತ್​ ಪ್ರಭು ಮತ್ತು ವರಣ್​ ಧವನ್​ ಅಭಿಯನದ ಸಿಟೆಡಾಲ್​ ಅನ್ನು ರಾಜ್​ ಮತ್ತು ಡಿಕೆ ನಿರ್ಮಿಸಿದ್ದಾರೆ. "ಮ್ಯಾಜಿಕಲ್​ ಸೀನ್​ಗಳು, ಉತ್ತಮ ಕಥೆ, ಜತೆಗೆ ಸಮಂತಾರ ಉತ್ತಮ ಪ್ರದರ್ಶನ ಗಮನ ಸೆಳೆಯುವಂತಿದೆ. ಕಾಳಿದಾಸರ ಮೇರುಕೃತಿಗೆ ಇದಕ್ಕಿಂತ (ಸಿನಿಮಾ, ಸಮಂತಾ ನಟನೆ) ಉತ್ತಮವಾದದ್ದು ಇರಲಾರದು. ಸಮಂತಾ ನೀವು ಮಾತ್ರ ಈ ಬೃಹತ್ ಮಹಾಕಾವ್ಯವನ್ನು ಇಷ್ಟು ಉತ್ತಮವಾಗಿ ಸಾಗಿಸಲು ಸಾಧ್ಯ. ಇಡೀ ತಂಡಕ್ಕೆ ಅಭಿನಂದನೆಗಳು, ನೋಡಲೇಬೇಕಾದ ಚಿತ್ರ'' ಎಂದು ಟ್ವೀಟ್ ಮಾಡಿ, ನಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ಯಾನ್​ ಇಂಡಿಯಾ ಸಿನಿಮಾ: ಈಗಾಗಲೇ ಕಾಳಿದಾಸನ ಈ ಅಭಿಜ್ಞಾ ಶಾಕುಂತಲೆ ನಾಟಕ ಆಧಾರಿಸಿ ಅನೇಕ ಭಾಷೆಗಳಲ್ಲಿ ಚಿತ್ರಗಳು ಹೊರ ಬಂದಿದೆ. ಇದೀಗ ಹೊಸ ಅವತರಣಿಕೆಯಲ್ಲಿ ಪಂಚ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಚಿತ್ರದಲ್ಲಿ ಬಿಳಿ ಉಡುಪಿನಲ್ಲಿ ಕಂಗೊಳಿಸಿರುವ ನಟಿ ಸಮಂತಾ ಶಾಕುಂಲತೆ ಪ್ರತಿಬಿಂಬದಂತೆ ಕಾಣುತ್ತಾರೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಥಿಯೇಟರ್, ಒಟಿಟಿ, ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ 'ವರಾಹ ರೂಪಂ' ಹಾಡು ಬಳಸದಂತೆ ಕೋರ್ಟ್ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.