ETV Bharat / entertainment

ಬ್ಯುಸಿ ಶೆಡ್ಯೂಲ್​: ನಟಿ ಸಮಂತಾ ಕಾರಲ್ಲೇ ಮೇಕಪ್, ಕಾರಲ್ಲೇ ಧ್ಯಾನ!

author img

By

Published : Apr 1, 2023, 6:12 PM IST

ನಟಿ ಸಮಂತಾ ತಮ್ಮ ಹೊಸ ಫೋಟೋ ಹಂಚಿಕೊಂಡು, ಸ್ವಯಂ ಆರೈಕೆ ಬಗ್ಗೆ ತಿಳಿಸಿದ್ದಾರೆ.

Samantha Ruth Prabhu self care
ಸೌತ್ ನಟಿ ಸಮಂತಾ ರುತ್ ಪ್ರಭು

ಸೌತ್ ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ಮುಂಬರುವ ಚಿತ್ರ 'ಶಾಕುಂತಲಂ' ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ವಿವಿಧ ವೇದಿಕೆಗಳಲ್ಲಿ ತಮ್ಮ ಬಹುನಿರೀಕ್ಷಿತ ಚಿತ್ರದ ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆ. 'ಶಾಕುಂತಲಂ' ಪ್ರಮೋಶನ್​ ಬ್ಯುಸಿ ಶೆಡ್ಯೂಲ್​ನಲ್ಲೂ ಸಮಂತಾ ಸ್ವಯಂ ಆರೈಕೆಯನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಇಂದು ಸಮಂತಾ ರುತ್ ಪ್ರಭು ತಮ್ಮ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಬ್ಯೂಟಿ ಫೇಸ್ ಮಾಸ್ಕ್​ ಹಾಕಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕಾರಿನಲ್ಲಿ ಕುಳಿತಿರುವ ನಟಿ ಕೈಯಲ್ಲಿ ಜಪಮಾಲಾ (ಪ್ರಾರ್ಥನಾ ಮಣಿಗಳು) ಹಿಡಿದು ಧ್ಯಾನಸ್ಥ ಸ್ಥಿತಿಯಲ್ಲಿ ಕಾಣುತ್ತಿದ್ದಾರೆ. ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಸ್ವಯಂ ಆರೈಕೆಗಾಗಿ ಕೊಂಚ ಸಮಯ ಮೀಸಲಿಟ್ಟಿದ್ದಾರೆ. ಚಿತ್ರವನ್ನು ಹಂಚಿಕೊಂಡಿರುವ ಸಮಂತಾ ಸರಳವಾಗಿ "ನಾನು" ಎಂಬ ಕ್ಯಾಪ್ಷನ್​ ಕೊಟ್ಟಿದ್ದಾರೆ.

Samantha Ruth Prabhu self care
ಸಮಂತಾ ರುತ್ ಪ್ರಭು ಇನ್‌ಸ್ಟಾಗ್ರಾಮ್ ಸ್ಟೋರಿ

35 ವರ್ಷದ ನಟಿ ಶಾಕುಂತಲಂ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಕಾಳಿದಾಸನ ಸಂಸ್ಕೃತ ನಾಟಕ ಅಭಿಜ್ಞಾನ ಶಾಕುಂತಲಂ ಅನ್ನು ಆಧರಿಸಿದೆ. ಈ ಚಿತ್ರವು ಮಹಾಭಾರತದ ಶಾಕುಂತಲಾ ಮತ್ತು ರಾಜ ದುಷ್ಯಂತ್ ಅವರ ಪ್ರೇಮಕಥೆಯ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ದುಶ್ಯಂತ್ ಪಾತ್ರವನ್ನು ದೇವ್ ಮೋಹನ್ ಮತ್ತು ಶಾಕುಂತಲಾ ಪಾತ್ರವನ್ನು ಸಮಂತಾ ರುತ್ ಪ್ರಭು ನಿರ್ವಹಿಸಿದ್ದಾರೆ.

ಶಾಕುಂತಲಂ ಚಿತ್ರ ಸೂಪರ್​ ಹಿಟ್ ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಅವರ ಮಗಳು ಅಲ್ಲು ಅರ್ಹಾ ಅಭಿನಯದ ಚೊಚ್ಚಲ ಚಿತ್ರ ಕೂಡ ಹೌದು. ರಾಜಕುಮಾರ ಭರತನ ಬಾಲ್ಯದ ಸನ್ನಿವೇಶಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಪುರಾತನ ಋಷಿ ಕಶ್ಯಪನ ಪಾತ್ರದಲ್ಲಿ ಬಾಲಿವುಡ್ ಹಿರಿಯ ನಟ ಕಬೀರ್ ಬೇಡಿ ಕೂಡ ನಟಿಸಿದ್ದಾರೆ. ಗುಣಶೇಖರ್ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರವು ಏಪ್ರಿಲ್ 14ರಂದು ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ದೊಡ್ಡ ಪರದೆಯ ಮೇಲೆ ಬರಲು ಸಿದ್ಧವಾಗಿದೆ.

ಇದನ್ನೂ ಓದಿ: ವದಂತಿ ಮಾಜಿ ಗೆಳೆಯನೊಂದಿಗೆ 'ಆಶಿಕಿ 3'ಯಲ್ಲಿ ನಟಿಸಲು ಇಚ್ಛಿಸಿದ ನಟಿ

ನಟಿ ಸಮಂತಾ ಮಯೋಸಿಟಿಸ್ ಎಂಬ ಅಪರೂಪದ ಕಾಯಿಲೆ ವಿರುದ್ಧ ಹೋರಾಡುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಕೆಲ ಕಾಲ ಸೂಕ್ತ ಚಿಕಿತ್ಸೆ, ಆರೈಕೆ ಪಡೆದಿರುವ ಅವರು ಇದೀಗ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಪ್ಯಾನ್​ ಇಂಡಿಯಾ ಚಿತ್ರ ಬಿಡುಗಡೆ ಹೊಸ್ತಿಲ್ಲಿದ್ದು, ತಮ್ಮ ಸುಂದರ ಚಿತ್ರಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅನಾರೋಗ್ಯ ಹಿನ್ನೆಲೆ ಮಾಧ್ಯಮಗಳಿಂದ ದೂರ ಉಳಿದ್ದಿದ್ದ ಸಮಂತಾ ಇದೀಗ ಬ್ಯಾಕ್ ಟು ಫೈಯರ್ ಎಂಬಂತೆ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಜೊತೆಗೆ ನಿರಂತರವಾಗಿ ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದಾರೆ. ​

ಇದನ್ನೂ ಓದಿ: ರಾಜಕೀಯ ಎಂಟ್ರಿ ಬಗ್ಗೆ ವದಂತಿ... April 1st ಹೀಗೆ ಹೇಳಿ ಎಂದ ರಿಷಬ್ ಶೆಟ್ಟಿ

ಇತ್ತೀಚೆಗೆ ಇದೇ ಸಿನಿಮಾದ ಸಂದರ್ಶನವೊಂದರಲ್ಲಿ ತಮ್ಮ ದಾಂಪತ್ಯ ಜೀವನ ಮತ್ತು 'ಊ ಅಂಟಾವಾ' ಹಾಡಿನ ಬಗ್ಗೆ ಮಾತನಾಡಿದ್ದರು. ನನ್ನ ದಾಂಪತ್ಯ ಜೀವನ ಅಂತ್ಯಗೊಂಡ ಸಮಯ 'ಊ ಅಂಟಾವಾ' ಆಫರ್ ಬಂದಿತ್ತು. ತಪ್ಪು ಮಾಡದ ನಾನೇಕೆ ಮನೆಯಲ್ಲಿ ಬೇಸರದಿಂದ ಕುಳಿತುಕೊಳ್ಳಬೇಕು? ಎಂದನಿಸಿತು. ಪುಷ್ಪ ಚಿತ್ರದ ಆ ಹಾಡನ್ನು ಘೋಷಿಸಿದ ಕೂಡಲೇ ನನ್ನ ಕುಟುಂಬ ಸದಸ್ಯರು ಮತ್ತು ಆಪ್ತರು ನನಗೆ ಕರೆ ಮಾಡಿ ಆ ಆಫರ್​ ತಿರಸ್ಕರಿಸುವಂತೆ ಸಲಹೆ ಕೊಟ್ಟರು. ನನ್ನ ದಾಂಪತ್ಯ ಜೀವನ ವಿಷಯದಲ್ಲಿ ನಾನು ಶೇ.100 ರಷ್ಟು ಪ್ರಾಮಾಣಿಕ ಎಂಬುದು ನನಗೆ ಗೊತ್ತಿತ್ತು. ನಾನು ಮಾಡದ ತಪ್ಪಿಗೆ ನಾನೇಕೆ ನರಳಬೇಕು?. ಹಾಗಾಗಿ ಸಿನಿಮಾಗಳಲ್ಲಿ ಸಕ್ರಿಯಳಾಗಿದ್ದೇನೆಂದು ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.