ETV Bharat / entertainment

’’ಸರಿಯಾದ ಸಮಯದಲ್ಲಿ ಅಲ್ಲ... ಸ್ವಂತ ವಿವೇಚನೆಯಿಂದ ಮದುವೆಯಾಗಿ‘‘: ನಟಿ ಸಮಂತಾ ರುತ್ ಪ್ರಭು ಸಲಹೆ!?

author img

By

Published : Apr 27, 2023, 5:47 PM IST

ಪೆಪ್ಸಿ ಜಾಹೀರಾತಿನಲ್ಲಿ ಸಮಂತಾ ರುತ್ ಪ್ರಭು ಕಾಣಿಸಿಕೊಂಡಿದ್ದಾರೆ.

Samantha Ruth Prabhu
ಸಮಂತಾ ರುತ್ ಪ್ರಭು

ಸೌತ್​ ನಟಿ ಸಮಂತಾ ರುತ್ ಪ್ರಭು ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಮಹಿಳೆಯರು ತಮ್ಮ ಸ್ವಂತ ವಿವೇಚನೆಯಿಂದ ಮದುವೆಯಾಗುವುದು, ತಮ್ಮ ಸ್ವಂತ ವೇಗದಲ್ಲಿ ಕೆಲಸಕ್ಕೆ ಮರಳುವುದು ಮತ್ತು ಚಲನಚಿತ್ರಗಳಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ಮಾಡುವ ಬಗ್ಗೆ ಹೇಳಿಕೆ ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೆಪ್ಸಿ ಜಾಹೀರಾತಿನ ವಿಡಿಯೋ ಹಂಚಿಕೊಂಡ ಸಮಂತಾ ರುತ್​ ಪ್ರಭು "ಜಗತ್ತು ನಿಮ್ಮನ್ನು ಕೆಳಗಿಳಿಸುತ್ತದೆ, ಆದರೆ ನೀವು ಎದ್ದೇಳಬೇಕು'' ಎಂಬ ಸಂದೇಶ ರವಾನಿಸಿದ್ದಾರೆ.

ಸಮಂತಾ ರುತ್ ಪ್ರಭು ವಧುವಿನಂತೆ ರೆಡಿಯಾಗಿ ಮಂಟಪದಲ್ಲಿ ಕುಳಿತಿರುವ ದೃಶ್ಯದಿಂದ ಜಾಹೀರಾತು ಆರಂಭವಾಗುತ್ತದೆ. ಲೆಹೆಂಗಾ ಧರಿಸಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ ಸೌತ್​ ಸುಂದರಿ. ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಅತಿಥಿಯೊಬ್ಬರು ಸೂಕ್ತ ವಯಸ್ಸಿನಲ್ಲಿ ಯುವತಿಯರು ಮದವೆ ಆಗಬೇಕು ಎಂಬುವ ಬಗ್ಗೆ ಮಾತನಾಡುತ್ತಾರೆ. ಇದಕ್ಕೆ ಸಮಂತಾ ಪ್ರತಿಕ್ರಿಯಿಸುತ್ತಾ, "ಸರಿಯಾದ ಸಮಯದಲ್ಲಿ ಅಲ್ಲ, ಆದರೆ ಅವರ ಸ್ವಂತ ಇಚ್ಛೆ ಪ್ರಕಾರ ಎಂದು ಹೇಳುತ್ತಾರೆ.

ಜಾಹೀರಾತು ಮುಂದುವರಿಯುತ್ತದೆ. ಅವರು ಕೆಲಸದಿಂದ ಮನೆಗೆ ಹೋಗುವಾಗ ಚಿಕ್ಕ ಸ್ಕರ್ಟ್ ಧರಿಸಿರುವುದನ್ನು ಕಾಣಬಹುದು. ಇದನ್ನು ಗಮನಿಸಿದ ವಾಚ್​ಮ್ಯಾನ್​, 'ಯಾವ ಕೆಲಸ, ಅದು ಮಧ್ಯರಾತ್ರಿಯವರೆಗೆ ಮಾಡಬೇಕಾಗುತ್ತದೆ' ಎಂದು ಕಾಮೆಂಟ್ ರವಾನಿಸುತ್ತಾನೆ. ಮಧ್ಯರಾತ್ರಿಯಾದರೂ ಮುಗಿಯುವುದಿಲ್ಲ ಎಂದು ಸಮಂತಾ ಉತ್ತರಿಸಿದ್ದಾರೆ.

ಮುಂದಿನ ದೃಶ್ಯದಲ್ಲಿ, ಸಮಂತಾ ಆ್ಯಕ್ಷನ್ ಚಿತ್ರದ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರ ಸಹನಟ ಮಾತನಾಡಿ, ಸಿನಿಮಾಗಳಲ್ಲಿ ಆ್ಯಕ್ಷನ್ ಅನ್ನು ನಾಯಕ ನಟ ಮಾಡುತ್ತಾನೆ ಎಂದು ಹೇಳಿಕೊಳ್ಳುತ್ತಾರೆ. ಸಮಂತಾ ಅವರನ್ನು ತಳ್ಳಿ "ಆದರೆ ನಾನು ಈ ಚಿತ್ರದ ನಾಯಕ" ಎಂದು ಹೇಳುವ ಮೂಲಕ ತಮ್ಮ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲು ಹೋಗುತ್ತಾರೆ. ಕೊನೆಗೆ ನೀವು ಇತರರ ಮಾತನ್ನು ಕೇಳಿದರೆ, ನಿಮ್ಮ ಚಿಂತನೆ, ಆಸಕ್ತಿ ಪ್ರಕಾರ ಯಾವಾಗ ಕೆಲಸ ಮಾಡುತ್ತೀರಿ ಎಂದು ಹೇಳುವ ಮೂಲಕ ಸಮಂತಾ ರುತ್​​ ಪ್ರಭು ಜಾಹೀರಾತನ್ನು ಮುಕ್ತಾಯಗೊಳಿಸಿದ್ದಾರೆ.

ಇದನ್ನೂ ಓದಿ: ಕ್ಯಾಶುವಲ್​ ವೇರ್​ನಲ್ಲೂ ಕೊಲ್ಲುವ ನೋಟ: ಅಗ್ನಿಸಾಕ್ಷಿಯ ಸನ್ನಿಧಿ ಇಷ್ಟಪಟ್ಟ 'ಸುಂದರ ಬಣ್ಣ' ಯಾವುದು ಗೊತ್ತಾ?

ಸೌತ್​ ನಟಿ ಸಮಂತಾ ರುತ್​ ಪ್ರಭು ಸದ್ಯ ಆ್ಯಕ್ಷನ್ ವೆಬ್ ಸೀರಿಸ್ 'ಸಿಟಾಡೆಲ್' ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದು ರುಸ್ಸೋ ಬ್ರದರ್ಸ್ ನಿರ್ಮಾಣದ ಹಾಲಿವುಡ್​ 'ಸಿಟಾಡೆಲ್‌'ನ ಭಾರತೀಯ ರೂಪಾಂತರವಾಗಿದೆ. ಇದರಲ್ಲಿ ಹಲವಾರು ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಹೊಂದಿದ್ದಾರೆ. ಈ ಸೀರಿಸ್​ಗಾಗಿ ಸಮಂತಾ ಸಾಕಷ್ಟು ಕೆಲಸ ಮಾಡಿದ್ದಾರೆ. ಮೊದಲ ಬಾರಿಗೆ ಬಾಲಿವುಡ್​ ನಟ ವರುಣ್​ ಧವನ್​ ಜೊತೆ ತೆರೆ ಹಂಚಿಕೊಂಡಿದ್ದಾರೆ. ಹಾಲಿವುಡ್​ನ 'ಸಿಟಾಡೆಲ್'ನಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ.

ಇದನ್ನೂ ಓದಿ: ತಪ್ಪೇ ಮಾಡದೇ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ಭಾರತದ ನಟಿ: ದೋಷಮುಕ್ತರಾಗಿ ದುಬೈ ಜೈಲಿನಿಂದ ಬಿಡುಗಡೆ

ಮತ್ತೊಂದು ವೆಬ್ ಸರಣಿ ದಿ ಫ್ಯಾಮಿಲಿ ಮ್ಯಾನ್ 2ನಲ್ಲಿಯೂ ಕೆಲ ಗಂಭೀರ ಸೀನ್​ಗಳನ್ನು ಮಾಡುತ್ತಿದ್ದಾರೆ. ಮೈಯೋಸಿಟಿಸ್‌ ಎಂಬ ಕಾಯಿಲೆಯಿಂದ ಬಳಲುತ್ತಿದ್ದರೂ, ಅವರು ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.