ETV Bharat / entertainment

ಸಿಟಾಡೆಲ್‌ ಶೂಟಿಂಗ್​ ಸೆಟ್​ನಲ್ಲಿ ಗಾಯಗೊಂಡ ಸೌತ್​ ನಟಿ ಸಮಂತಾ!

author img

By

Published : Feb 28, 2023, 12:57 PM IST

ಸೌತ್​ ನಟಿ ಸಮಂತಾ ರುತ್​ ಪ್ರಭು ಗಾಯಗೊಂಡಿರುವ ಫೋಟೋ ಶೇರ್ ಮಾಡಿದ್ದಾರೆ.

Samantha inured
ಗಾಯಗೊಂಡ ಸಮಂತಾ

ಸೌತ್ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಮತ್ತು ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಅಭಿನಯದ ಯಶಸ್ವಿ ಪುಷ್ಪ - ದಿ ರೈಸ್ ಚಿತ್ರದ ಸೂಪರ್​ ಹಿಟ್ ಊ ಅಂಟಾವಾ ಐಟಂ ಸಾಂಗ್‌ನಲ್ಲಿ ಸೊಂಟ ಬಳುಕಿಸಿ ಸೌತ್​ ನಟಿ ಸಮಂತಾ ರುತ್​ ಪ್ರಭು ಸಾಕಷ್ಟು ಹೆಸರು ಗಳಿಸಿದ್ದಾರೆ. ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಇತ್ತೀಚೆಗಷ್ಟೇ 13 ವರ್ಷ ಪೂರೈಸಿರುವ ನಟಿ ಸಮಂತಾ ರುತ್​ ಪ್ರಭು ಸದ್ಯ ತಮ್ಮ ಹೊಸ ಸರಣಿ 'ಸಿಟಾಡೆಲ್' ಕುರಿತು ಚರ್ಚೆಯಲ್ಲಿದ್ದಾರೆ.

ನಟಿ ಸಮಂತಾ ಅಭಿನಯಿಸುತ್ತಿರುವ ಸಿಟಾಡೆಲ್ ಸರಣಿಯು ಪ್ರಿಯಾಂಕಾ ಚೋಪ್ರಾ ಅವರ ವಿದೇಶಿ ಸೀರಿಸ್​ ಸಿಟಾಡೆಲ್‌ನ ಹಿಂದಿ ಆವೃತ್ತಿ. ಇದರಲ್ಲಿ ನಟಿ ಸಮಂತಾ ಜೊತೆಗೆ ಬಾಲಿವುಡ್ ನಟ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಮಂತಾ ಈ ಸರಣಿಯ ಶೂಟಿಂಗ್​ಗೆ ಬೇಕಾದ ತಯಾರಿಯನ್ನು ಬಹಳ ಹಿಂದೆಯೇ ಪ್ರಾರಂಭಿಸಿದ್ದಾರೆ. ಈ ಆ್ಯಕ್ಷನ್ ಸೀರಿಸ್​ ಶೂಟಿಂಗ್​​ ಸಮಯದಲ್ಲಿ ಸಮಂತಾ ಗಾಯಗೊಂಡಿದ್ದು, ಆ ಗಾಯಗಳ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಿಟಾಡೆಲ್​ ಸರಣಿಯಲ್ಲಿ ನಟಿ ಸಮಂತಾ ಪತ್ತೇದಾರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರ ಈ ಪಾತ್ರವು ಸಾಕಷ್ಟು ಕಠಿಣ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಹೊಂದಿದೆ. ಅನಾರೋಗ್ಯದ ವಿರುದ್ಧ ಹೋರಾಡುತ್ತಿರುವ ಸಮಂತಾ ಅವರಿಗೆ ಸದ್ಯ ದೈಹಿಕವಾಗಿ ಸವಾಲಿನ ದೃಶ್ಯಗಳನ್ನು ಎಳೆಯುವುದು ಸುಲಭವಲ್ಲ. ಆದಾಗ್ಯೂ, ಅವರು ಶೂಟಿಂಗ್​ನಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಟಿ ಸಮಂತಾ ರುತ್​ ಪ್ರಭು ತಮ್ಮ ಇನ್​​​ಸ್ಟಾ ಸ್ಟೋರಿಸ್​ನಲ್ಲಿ ಗಾಯಗೊಂಡಿರುವ ತಮ್ಮ ಕೈಗಳ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗೆ "Perks of action" ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ. ಈ ಫೋಟೋ ಸಿಟಾಡೆಲ್ ಶೂಟಿಂಗ್​ ಸೆಟ್​ನಿಂದ ಬಂದಿದ್ದಾಗಿದೆ. ​ಇದಕ್ಕೂ ಮುನ್ನ ಸಮಂತಾ ತಮ್ಮ ಸರಣಿಯ ಬಗ್ಗೆ ಮಾಹಿತಿ ನೀಡುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ, ಅವರು ಈ ಸರಣಿಯ ಸಾಹಸ ದೃಶ್ಯಗಳನ್ನು ಅಭ್ಯಾಸ ಮಾಡುತ್ತಿರುವುದು ಕಂಡುಬಂದಿತ್ತು. ಸಾಹಸ ನಿರ್ದೇಶಕ ಯಾಂಚಿಕ್ ಬೆನ್ ಅವರ ಮಾರ್ಗದರ್ಶನದಲ್ಲಿ ಸಮಂತಾ ಈ ಸಾಹಸಗಳನ್ನು ಮಾಡಿದ್ದಾರೆ.

ಸಿಟಾಡೆಲ್ ಅಂತಾರಾಷ್ಟ್ರೀಯ ಸರಣಿಯ ಭಾರತೀಯ ರೂಪಾಂತರವಾಗಿದೆ. ರುಸ್ಸೋ ಬ್ರದರ್ಸ್ ಅದನ್ನು ಸಿದ್ಧಪಡಿಸಿದ್ದಾರೆ. ವಿದೇಶಿ ಸಿಟಾಡೆಲ್ ಸರಣಿಯಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಪ್ರಮುಖ ಪಾತ್ರದಲ್ಲಿದ್ದಾರೆ. ಪ್ರಿಯಾಂಕಾ ಜೊತೆಗೆ ರಿಚರ್ಡ್ ಮಾಡೆನ್ ಮತ್ತು ಸ್ಟಾನ್ಲಿ ಟುಸಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಪ್ರಿಯಾಂಕಾ ಚೋಪ್ರಾ ನಿನ್ನೆ ರಾತ್ರಿ (ಫೆಬ್ರವರಿ 27) ಸಿಟಾಡೆಲ್‌ನಿಂದ ತಮ್ಮ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಅವರ ಪತಿ ನಿಕ್ ಜೋನಾಸ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಮಂತಾ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ರಾಜಮೌಳಿ ಹಾಗು ಕೀರವಾಣಿ ಅವರಿಂದ ಮೆಚ್ಚುಗೆ ಪಡೆದ ಚಿತ್ರಸಾಹಿತಿ ವರದರಾಜ್ ಚಿಕ್ಕಬಳ್ಳಾಪುರ: ಶತಕದ ಖುಷಿ

ಸಿಟಾಡೆಲ್ ಸರಣಿಯ ಹಿಂದಿ ರೂಪಾಂತರಕ್ಕೆ ಇನ್ನೂ ಶೀರ್ಷಿಕೆ ನೀಡಲಾಗಿಲ್ಲ. ಈ ಸರಣಿಯು ಈ ತಿಂಗಳ ಆರಂಭದಲ್ಲಿ ಮುಂಬೈನಲ್ಲಿ ಸೆಟ್ಟೇರಿದೆ. ಸರಣಿಯನ್ನು ಉತ್ತರ ಭಾರತದಲ್ಲಿಯೂ ಚಿತ್ರೀಕರಿಸಲಾಗುವುದು, ನಂತರ ತಂಡವು ಸರ್ಬಿಯಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ಹೋಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.