ETV Bharat / entertainment

ಸಲಾರ್​ ಮೇಲೆ ಬೆಟ್ಟದಷ್ಟು ನಿರೀಕ್ಷೆ: ಸಿನಿಮಾದಲ್ಲಿ 750ಕ್ಕೂ ಹೆಚ್ಚು ವಾಹನಗಳ ಬಳಕೆ!

author img

By ETV Bharat Karnataka Team

Published : Nov 2, 2023, 5:08 PM IST

Salaar: Part 1-Ceasefire: ಸಲಾರ್​ ಸಿನಿಮಾ ಕುರಿತ ಇಂಟ್ರೆಸ್ಟಿಂಗ್​ ಮಾಹಿತಿ ಇಲ್ಲಿದೆ.

Salaar
ಸಲಾರ್

ಪ್ಯಾನ್​ ಇಂಡಿಯಾ ಸ್ಟಾರ್ ಮತ್ತು ಕೆಜಿಎಫ್​​, ಕಾಂತಾರಗಳಂತಹ ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಕಾಂಬೋದ ಮುಂದಿನ ಬಹುನಿರೀಕ್ಷಿತ ಚಿತ್ರ ''ಸಲಾರ್​''. ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹಿನ್ನೆಲೆ ಸಿನಿಮಾದ ಮೇಲೆ ಶಿಖರದಷ್ಟು ನಿರೀಕ್ಷೆಗಳಿವೆ. ಸಿನಿಪ್ರಿಯರ ನಿರೀಕ್ಷೆ ಪೂರೈಸಲು ಚಿತ್ರತಂಡ ಸಹ ಸಂಪೂರ್ಣ ಶ್ರಮ ಹಾಕಿದೆ.

  • " class="align-text-top noRightClick twitterSection" data="">

ದಕ್ಷಿಣ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಸಲಾರ್ ಭಾಗ 1 ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಒಳಗೊಂಡಿರಲಿದೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಆ್ಯಕ್ಷನ್​ ಕಟ್​​ ಹೇಳಿರುವ ಈ ಸಿನಿಮಾದ ಆ್ಯಕ್ಷನ್​ ಸೀಕ್ವೆನ್ಸ್​ ಶೂಟಿಂಗ್​ ಸಂದರ್ಭ ಜೀಪ್ಸ್, ಟ್ಯಾಂಕ್ಸ್, ಟ್ರಕ್ಸ್ ಸೇರಿದಂತೆ 750ಕ್ಕೂ ಹೆಚ್ಚು ವಾಹನಗಳನ್ನು ಬಳಸಿಕೊಳ್ಳಲಾಗಿದೆ.

ಇತ್ತೀಚೆಗಷ್ಟೇ ಸಲಾರ್ ಭಾಗ 1ರ ಟೀಸರ್ ಬಿಡುಗಡೆ ಆಗಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳನ್ನು ಕುತೂಹಲದಿಂದ ಕಾಯುವಂತೆ ಮಾಡಿದೆ. ಪ್ರಭಾಸ್ ಮತ್ತು ಪ್ರಶಾಂತ್ ಕಾಂಬೋದ ಚೊಚ್ಚಲ ಚಿತ್ರವು ಅತಿ ಹೆಚ್ಚು ಕ್ರೇಜ್​ ಕ್ರಿಯೇಟ್​ ಮಾಡಿರುವ ಕಂಪ್ಲೀಟ್​​ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾವಾಗಿದೆ.

ಚಿತ್ರ ನಿರ್ಮಾಣ ತಂಡದಲ್ಲಿರುವವರು ಸಲಾರ್ ಆ್ಯಕ್ಷನ್ ಸೀಕ್ವೆನ್ಸ್‌ಗಳ ಕೊಂಚ ಮಾಹಿತಿ ಹಂಚಿಕೊಂಡಿದ್ದಾರೆ. ಸಲಾರ್‌ನ ಚಿತ್ರೀಕರಣಕ್ಕಾಗಿ 750ಕ್ಕೂ ಹೆಚ್ಚು ವಿವಿಧ ಬಗೆಯ ವಾಹನಗಳನ್ನು ಬಳಸಿಕೊಳ್ಳಲಾಗಿದೆ. ಜೀಪ್‌ಗಳು, ಟ್ರಕ್‌ಗಳು ಸೇರಿದಂತೆ ಹಲವು ವಾಹನಗಳನ್ನು ಶೂಟಿಂಗ್​ಗೆ ಬಳಸಲಾಗಿದೆ. ಹಾಲಿವುಡ್​ ಮೂವಿಯಲ್ಲಿರುವಂತೆ ಅತಿ ದೊಡ್ಡ ಆ್ಯಕ್ಷನ್​​ ಸೀನ್​ಗಳನ್ನು ಚಿತ್ರಿಸಲಾಗಿದೆ. ಸಿನಿಮಾದಲ್ಲಿ ಯುದ್ಧ ಭೂಮಿಯೇ ನಿರ್ಮಾಣಗೊಂಡಿದೆ. ಅದ್ಭುತ ಆ್ಯಕ್ಷನ್​ ಸನ್ನಿವೇಶಗಳನ್ನು ಚಿತ್ರದಲ್ಲಿ ತೋರಿಸಲು ಚಿತ್ರತಂಡ ಸಜ್ಜಾಗಿದೆ ಎಂದು ಮೂಲಗಳು ಮಾಹಿತಿ ಹಂಚಿಕೊಂಡಿವೆ.

ಇದನ್ನೂ ಓದಿ: ಡಂಕಿ vs ಸಲಾರ್​: ಶಾರುಖ್​ ಸಿನಿಮಾ ಟೀಸರ್​​ ರಿಲೀಸ್​ ಬೆನ್ನಲ್ಲೇ ಫ್ಯಾನ್ಸ್ ವಾರ್​ ಶುರು - ಟ್ವೀಟ್​​ಗಳನ್ನೇನಿದೆ?

ಸಲಾರ್ ಭಾಗ 1ರಲ್ಲಿ ಕೆಜಿಎಫ್​​ ಸರಣಿಯಲ್ಲಿ ಕಂಡುಬರುವಂತೆ ಅದ್ಭುತ ಸಾಹಸ ದೃಶ್ಯಗಳನ್ನು ಪ್ರಶಾಂತ್​ ನೀಲ್​ ರಚಿಸಿದ್ದಾರೆಂದು ಅಭಿಮಾನಿಗಳು ನಂಬಿದ್ದು, ಸಖತ್​ ಸದ್ದು ಮಾಡುತ್ತಿದೆ. ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಶನ್​​ ಹೆಚ್ಚು ಗಮನ ಸೆಳೆದಿದೆ. ಚಿತ್ರದ ಕಥಾಹಂದರವು ದರೋಡೆಕೋರನೊಬ್ಬ ಸೇಡು ತೀರಿಸಿಕೊಳ್ಳುವ ವಿಷಯದ ಸುತ್ತ ಸುತ್ತುತ್ತದೆ. ಪ್ರಭಾಸ್ ಜೊತೆಗೆ ಶ್ರುತಿ ಹಾಸನ್ ನಟಿಸಿದ್ದು, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿದ್ದಾರೆ.

ಇದನ್ನೂ ಓದಿ: ಎಸ್​​ಆರ್​ಕೆ 'ಡಂಕಿ' ಟೀಸರ್​​ ರಿಲೀಸ್​​: ಸಿನಿಪ್ರಿಯರ ವಿಮರ್ಶೆ ಇಲ್ಲಿದೆ

ಚಿತ್ರದ ಸೀಕ್ವೆಲ್​​​ ಆರು ತಿಂಗಳೊಳಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. 2024ರ ಏಪ್ರಿಲ್​​ನಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಸಲಾರ್‌ ಪಾರ್ಟ್ 1 ಬಿಡುಗಡೆ ಸಂದರ್ಭ ಪಾರ್ಟ್ 2 ರಿಲೀಸ್​ ಡೇಟ್​ ಅನ್ನು ಘೋಷಿಸುವ ಸಾಧ್ಯತೆ ಇದೆ. ಭಾಗ ಎರಡರ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇವೆ. ಸಾಹಸಮಯ ಸಿನಿಮಾ ಡಿಸೆಂಬರ್​ 22ರಂದು ತೆರೆಗಪ್ಪಳಿಸಲಿದೆ. ಅಂದೇ ಶಾರುಖ್​ ಖಾನ್​ ನಟನೆಯ ಡಂಕಿ ಸಿನಿಮಾ ಕೂಡ ರಿಲೀಸ್​ ಆಗಲಿದೆ. ಇಂದು ಎಸ್​ಆರ್​ಕೆ ಜನ್ಮದಿನ ಹಿನ್ನೆಲೆ ಡಂಕಿ ಟೀಸರ್​ ರಿಲೀಸ್​​ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.