ETV Bharat / entertainment

ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಲಿದ್ದಾರೆ 'ಕಾಂತಾರ' ರಿಷಬ್‌ ಶೆಟ್ಟಿ!

author img

By

Published : Mar 16, 2023, 8:44 AM IST

ದಕ್ಷಿಣ ಭಾರತದ ಚಿತ್ರರಂಗಕ್ಕೆ ಸುವರ್ಣ ಯುಗ ಪ್ರಾರಂಭವಾಗಿದೆ. ಒಂದೆಡೆ, ತೆಲುಗು ಚಿತ್ರ 'ಆರ್‌ಆರ್‌ಆರ್' ಆಸ್ಕರ್ ಪ್ರಶಸ್ತಿ ಗೆದ್ದು ಜಾಗತಿಕವಾಗಿ ತನ್ನ ಛಾಪು ಮೂಡಿಸಿದೆ. ಇನ್ನೊಂದೆಡೆ, ಕನ್ನಡದ ಜನಪ್ರಿಯ ಚಲನಚಿತ್ರ 'ಕಾಂತಾರ' ಮಾರ್ಚ್ 17 ರಂದು ವಿಶ್ವಸಂಸ್ಥೆಯಲ್ಲಿ ಪ್ರದರ್ಶನಗೊಳ್ಳಲಿದೆ. ಅದು ಕೂಡ ನಟ ಪುನೀತ್ ರಾಜ್‌ಕುಮಾರ್ ಜನ್ಮದಿನದಂದೇ ಎನ್ನುವುದು ವಿಶೇಷ.

rishab shetty
ರಿಷಬ್‌ ಶೆಟ್ಟಿ

'ಕಾಂತಾರ' ಸಿನಿಮಾ ಖ್ಯಾತಿಯ ಕನ್ನಡದ ನಟ ಹಾಗೂ ಚಲನಚಿತ್ರ ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಈಗಾಗಲೇ ಅನೇಕ ಕಾರ್ಯಕ್ರಮಗಳಲ್ಲಿ ಮಾತೃ ಭಾಷೆಯಲ್ಲೇ ಮಾತನಾಡಿ ಸ್ಯಾಂಡಲ್​ವುಡ್​ಗೆ ಕೀರ್ತಿ ತಂದಿದ್ದಾರೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ವಿಶ್ವಸಂಸ್ಥೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿರುವ ಅವರು ಕನ್ನಡದಲ್ಲೇ ಮಾತಾಡುತ್ತಾರೆ ಎಂಬುದು ನಾಡಿನ ಜನತೆಗೆ ಮತ್ತಷ್ಟು ಸಂತಸ ತಂದಿದೆ.

ಕಳೆದ ಕೆಲವು ದಿನಗಳಿಂದ ವಿಶ್ವಸಂಸ್ಥೆಯ ವಾರ್ಷಿಕ ಸಭೆ ನಡೆಯುತ್ತಿದೆ. ಜಗತ್ತಿನ ಅನೇಕ ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿ ಸದ್ಯದ ಪರಿಸ್ಥಿತಿಯಲ್ಲಿ ವಿಶ್ವ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಈ ವಾರ್ಷಿಕ ಸಭೆಯಲ್ಲಿ ಇದೀಗ ಡಿವೈನ್​ ಸ್ಟಾರ್​ ಖ್ಯಾತಿಯ ರಿಷಬ್‌ ಶೆಟ್ಟಿ ಸಹ ಭಾಗವಹಿಸಲಿದ್ದು, ಕನ್ನಡ ಡಿಂಡಿಮ ಮೊಳಗಿಸಲಿದ್ದಾರೆ. ಇದರ ಜೊತೆಗೆ ವಿವಿಧ ದೇಶಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಶೆಟ್ಟಿ ಮಾತನಾಡುವರು.

  • ಕನ್ನಡಿಗರಿಗಿಂದು ಸಂಭ್ರಮದ ದಿನ. ಪ್ರತಿಷ್ಠಿತ @UNನಲ್ಲಿ ಕರ್ನಾಟಕದ ಸುಪುತ್ರ @shetty_rishab ಭಾರತವನ್ನು ಪ್ರತಿನಿಧಿಸಿ ಕನ್ನಡದಲ್ಲೇ ಮಾತಾಡುತ್ತಾರೆ ಎಂಬುದು ಕನ್ನಡ ನಾಡಿಗೆ ಹೆಮ್ಮೆ ತಂದಿದೆ. ಕನ್ನಡ, ಕನ್ನಡಿಗರನ್ನು @narendramodi ರವರ ಸರ್ಕಾರವು ಗುರುತಿಸುವ, ಗೌರವಿಸುವ ಯಾವ ಅವಕಾಶವನ್ನೂ ಬಿಟ್ಟಿಲ್ಲ. pic.twitter.com/Q9MOlYTBpl

    — BJP Karnataka (@BJP4Karnataka) March 15, 2023 " class="align-text-top noRightClick twitterSection" data=" ">

ಈ ಕುರಿತು ಕರ್ನಾಟಕ ಬಿಜೆಪಿ ಅಧಿಕೃತ ಟ್ವಿಟರ್​ನಲ್ಲಿ ಪೋಸ್ಟ್​ವೊಂದನ್ನು ಹಾಕಿದ್ದು, 'ಕನ್ನಡಿಗರಿಗಿಂದು ಸಂಭ್ರಮದ ದಿನ. ಪ್ರತಿಷ್ಠಿತ ವಿಶ್ವಸಂಸ್ಥೆಯಲ್ಲಿ ಕರ್ನಾಟಕದ ಸುಪುತ್ರ ರಿಷಬ್‌ ಶೆಟ್ಟಿ ಭಾರತವನ್ನು ಪ್ರತಿನಿಧಿಸಿ ಕನ್ನಡದಲ್ಲೇ ಮಾತಾಡುತ್ತಾರೆ ಎಂಬುದು ಕನ್ನಡ ನಾಡಿಗೆ ಹೆಮ್ಮೆ ತಂದಿದೆ. ಕನ್ನಡ, ಕನ್ನಡಿಗರನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಗುರುತಿಸುವ, ಗೌರವಿಸುವ ಯಾವ ಅವಕಾಶವನ್ನೂ ಬಿಟ್ಟಿಲ್ಲ' ಎಂದು ತಿಳಿಸಿದೆ.

ಇದನ್ನೂ ಓದಿ: ಭರವಸೆಯ ನಟನಾಗಿ ಕಾಂತಾರ ಸ್ಟಾರ್: ಫಾಲ್ಕೆ ಪ್ರಶಸ್ತಿ 2023ರ ಸುಂದರ ಕ್ಷಣಗಳು

ಕಳೆದ ಕೆಲವು ದಿನಗಳ ಹಿಂದಷ್ಟೇ ನಟ ರಿಷಬ್ ಶೆಟ್ಟಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಅರಣ್ಯ ಮತ್ತು ಕಾಡಂಚಿನ ಜನರ ಸಮಸ್ಯೆಗಳ ಕುರಿತು ಗಮನಹರಿಸುವಂತೆ ಮನವಿ ಮಾಡಿದ್ದರು. ಅಷ್ಟೇ ಅಲ್ಲದೆ, ಅಲ್ಲಿನ ಜನ ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಪಟ್ಟಿ ಮಾಡಿ ಬೊಮ್ಮಾಯಿ ಅವರಿಗೆ ನೀಡಿದ್ದರು. ಇದೀಗ ಈ ವಿಚಾರದ ಕುರಿತೂ ಸಹ ವಿಶ್ವಸಂಸ್ಥೆಯಲ್ಲಿ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಜೊತೆಗೆ, ಮಾರ್ಚ್ 17 ರಂದು 'ಕಾಂತಾರ' ಸಿನಿಮಾವನ್ನು ವಿಶ್ವಸಂಸ್ಥೆಯ ಪ್ರತಿನಿಧಿಗಳಿಗೆ ಪ್ರದರ್ಶನ ಸಹ ಮಾಡಲಿದ್ದಾರೆ. ಬಳಿಕ ಯುಎನ್ ರಾಜತಾಂತ್ರಿಕರೊಂದಿಗೆ ಖಾಸಗಿ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: 'ಕಾಂತಾರ 2 ಕೆಲಸ ಶುರು, ಮಾರ್ಚ್​​​ನಿಂದ ಫೋನ್ ಆಫ್': ಫಾಲ್ಕೆ ಪ್ರಶಸ್ತಿ ಬಗ್ಗೆ ರಿಷಬ್​ ಶೆಟ್ಟಿ ಹೀಗಂದ್ರು!

ಇತ್ತೀಚೆಗಷ್ಟೇ ದಾದಾಸಾಹೇಬ್ ಫಾಲ್ಕೆ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2023ರಲ್ಲಿ ಅತ್ಯಂತ ಭರವಸೆಯ ನಟ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ, ಕಾಂತಾರ ಸಿನಿಮಾದ ಮೂಲಕ ಕನ್ನಡದ ಕೀರ್ತಿಯನ್ನು ಇಡೀ ಜಗತ್ತಿಗೆ ಕೊಂಡೊಯ್ದ ಕೀರ್ತಿ ಸಲ್ಲುತ್ತದೆ. ವಿಶ್ವಸಂಸ್ಥೆಯಲ್ಲಿ ರಿಷಬ್‌ ಕನ್ನಡದಲ್ಲಿ ಭಾಷಣ ಮಾಡುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದು, ಅವರ ಮಾತುಗಳನ್ನು ಆಲಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಕಾಂತಾರ 2 ಕಥೆ ಕೆಲಸ ಚುರುಕು.. ಫೋನ್ ಸ್ವಿಚ್​​ ಆಫ್ ಮಾಡಿಕೊಂಡ ಡಿವೈನ್ ಸ್ಟಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.