ETV Bharat / entertainment

ಬಹುನಿರೀಕ್ಷಿತ 'ಕಾಂತಾರ' ಪ್ರೀಕ್ವೆಲ್ ಬಿಡುಗಡೆಗೆ ಮುಹೂರ್ತ ನಿಗದಿ​: ಶೂಟಿಂಗ್​ ಸ್ಥಳದಲ್ಲೂ ಬದಲಾವಣೆ

author img

By ETV Bharat Karnataka Team

Published : Aug 22, 2023, 12:56 PM IST

Kantara Prequel update: ರಿಷಬ್ ಶೆಟ್ಟಿ ಸಾರಥ್ಯದ 'ಕಾಂತಾರ' ಸಿನಿಮಾದ ಪ್ರೀಕ್ವೆಲ್​ ಕುರಿತು ಹೊಸ ಅಪ್​ಡೇಟ್​ ಹೊರಬಿದ್ದಿದೆ.

Rishab Shetty starrer kantara movie update
'ಕಾಂತಾರ' ಪ್ರೀಕ್ವೆಲ್

ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಚಿತ್ರ 'ಕಾಂತಾರ'. ನಟ, ನಿರ್ದೇಶಕ ರಿಷಬ್ ಶೆಟ್ಟಿ ಸ್ವಯಂ ನಿರ್ದೇಶಿಸಿ, ನಟಿಸಿ ಸೈ ಎನಿಸಿಕೊಂಡ ಸಿನಿಮಾವಿದು. ಅದ್ಭುತ ಕಥೆಯೊಂದಿಗೆ ಪ್ರತಿ ಪಾತ್ರವನ್ನೂ ಸುಂದರವಾಗಿ, ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಬ್ಲಾಕ್​ಬಸ್ಟರ್​ ಹಿಟ್​ ಆಗುವುದರೊಂದಿಗೆ, ಪ್ರೇಕ್ಷಕರನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರದಿಂದಾಗಿ ಶೆಟ್ರ ಕ್ರೇಜ್​ ಕೂಡ ಹೆಚ್ಚಾಗಿದೆ. ಸ್ಟಾರ್​ ತಾರೆಯರಿಂದ ಹಿಡಿದು ಸಾಮಾನ್ಯ ಜನರವರೆಗೂ 'ಕಾಂತಾರ' ತಲುಪಿದೆ.

ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಕನ್ನಡ ಮಾತ್ರವಲ್ಲದೇ ಪ್ರೇಕ್ಷಕರ ಬಹುಬೇಡಿಕೆಯ ಮೇರೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ತುಳು ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಇದೇ ಖುಷಿಯಲ್ಲಿ ಚಿತ್ರತಂಡ 100 ದಿನಗಳ ಕಾರ್ಯಕ್ರಮವನ್ನೂ ಕೂಡ ಅದ್ಧೂರಿಯಾಗಿ ಆಯೋಜನೆ ಮಾಡಿತ್ತು. ಈ ಸಮಾರಂಭದಲ್ಲಿ ಸೀಕ್ವೆಲ್​ ಬದಲಿಗೆ ಕಾಂತಾರ ಪ್ರೀಕ್ವಲ್​ ನಿರ್ಮಾಣವಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು.

ಅದರಂತೆ ಮಾರ್ಚ್​ನಲ್ಲಿ ಕಾಂತಾರದ ಪ್ರೀಕ್ವೆಲ್​ ಕಥೆ ಕೆಲಸ ಶುರುವಾಯಿತು. ಅದರ ನಂತರ ಕೆಲವೊಂದು ಊಹಾಪೋಹಗಳು ಬಿಟ್ಟರೆ ಯಾವುದೇ ಅಧಿಕೃತ ಮಾಹಿತಿಗಳು ಸಿನಿಮಾ ವಿಚಾರವಾಗಿ ಸಿಕ್ಕಿರಲಿಲ್ಲ. ಈ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದರು. ಇದೀಗ ಸಿನಿ ಪ್ರಿಯರಿಗೊಂದು ಗುಡ್​ನ್ಯೂಸ್​ ಸಿಕ್ಕಿದೆ. ಈ ಸಿನಿಮಾಗೆ ಸಂಬಂಧಿಸಿದ ವಿಚಾರವೊಂದು ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ ಆಗಿದೆ.

ಇದನ್ನೂ ಓದಿ: SIIMA 2023: ಪ್ರತಿಷ್ಠಿತ ಸೈಮಾ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಕೆಜಿಎಫ್​ 2, ಕಾಂತಾರ!

ಶೂಟಿಂಗ್​ ಸ್ಥಳದಲ್ಲೂ ಬದಲಾವಣೆ: ಕಾಂತಾರ ಮೊದಲನೇ ಭಾಗದ ಬಹುತೇಕ ಚಿತ್ರೀಕರಣ ರಿಷಬ್​ ಅವರ ಹುಟ್ಟೂರು ಕುಂದಾಪುರದಲ್ಲಿ ನಡೆದಿತ್ತು. ಆದರೆ, ಎರಡನೇ ಭಾಗವು ಮಂಗಳೂರಿನಲ್ಲಿ ಚಿತ್ರೀಕರಣಗೊಳ್ಳಲಿದೆ. ಅಲ್ಲದೇ ಕಾಂತಾರವನ್ನು ಕಡಿಮೆ ಬಜೆಟ್​ನಲ್ಲಿ ನಿರ್ಮಿಸಲಾಗಿತ್ತು. ಆದರೆ, ಚಿತ್ರದ ಪ್ರೀಕ್ವೆಲ್​ಗೆ ಭಾರಿ ಬಜೆಟ್​ ಮೀಸಲಿಡಲಾಗಿದೆ. ಭೂತರಾಧನೆಯನ್ನು ಸಿನಿಮಾದಲ್ಲಿ ಇನ್ನಷ್ಟು ಆಳವಾಗಿ ತೋರಿಸಲಾಗುವುದು. ಮುಂದಿನ ವರ್ಷ 2024ರ ಕೊನೆಯಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದಿಡುವ ಯೋಚನೆ ಚಿತ್ರತಂಡದ್ದು.

ರಿಷಬ್​ ಶೆಟ್ಟಿ ಈ ಹಿಂದೆ ಸಂದರ್ಶನವೊಂದರಲ್ಲಿ ಕಾಂತಾರ 2 ಚಿತ್ರಕ್ಕೆ ಸಂಬಂಧಿಸಿದಂತೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದರು. ನಿಸರ್ಗದ ಹಿನ್ನೆಲೆಯಲ್ಲಿ ಚಿತ್ರೀಕರಣಗೊಂಡ ಮೊದಲ ಭಾಗದ ಕಥೆ ಎಲ್ಲಿ, ಹೇಗೆ ಆರಂಭವಾಯಿತು ಎಂದು ಕಾಂತಾರ ಪ್ರೀಕ್ವೆಲ್​ನಲ್ಲಿ ತೋರಿಸಲಾಗುವುದು ಎಂದು ತಿಳಿಸಿದ್ದರು. ಇನ್ನೂ ಚಿತ್ರದಲ್ಲಿ ಕರಾವಳಿ ಜನತೆ ಅಪಾರ ನಂಬಿಕೆ ಇಟ್ಟಿರುವ ದೈವ ಪಂಜುರ್ಲಿಗೆ ಸಂಬಂಧಿಸಿದ ದೃಶ್ಯಗಳೂ ಸಹ ಹೆಚ್ಚು ಇರಲಿವೆ ಎನ್ನಲಾಗಿದೆ. ಈ ಮಧ್ಯೆ ಚಿತ್ರಕ್ಕಾಗಿ ನಿರ್ದೇಶಕ, ನಟ ರಿಷಬ್ ಶೆಟ್ಟಿ ಕುದುರೆ ಸವಾರಿ ತರಬೇತಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಇದನ್ನೂ ಓದಿ: ಅಣ್ಣಾವ್ರ ಸಿನಿಮಾ ನೋಡಿ ಹೀರೋ ಆದ ಕುಂದಾಪುರದ ಹುಡುಗ - ರಿಷಬ್ ಶೆಟ್ಟಿ ಸಿನಿಪಯಣ ಸಖತ್​ ಇಂಟ್ರೆಸ್ಟ್ರಿಂಗ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.