ಇಂಟರ್ ನ್ಯಾಶನಲ್ ಫಿಲ್ಮ್​​ ಫೆಸ್ಟಿವಲ್​​ನಲ್ಲಿ ರೇಮೊ ಕಮಾಲ್

author img

By

Published : Nov 24, 2022, 7:51 PM IST

Remo movie screening at the International Film Festival

ಪ್ರತಿಷ್ಠಿತ 53ನೇ 'ಇಂಟರ್ ನ್ಯಾಶನಲ್ ಫಿಲ್ಮ್​ ಫೆಸ್ಟಿವಲ್ ಆಫ್ ಇಂಡಿಯಾ' ಗೋವಾದಲ್ಲಿ ನಡೆಯುತ್ತಿದೆ. ಇಲ್ಲಿಗೆ ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ರೇಮೊ ಸಿನಿಮಾ ಸೆಲೆಕ್ಟ್ ಆಗಿದ್ದು ಇಂದು ಸ್ಕ್ರೀನಿಂಗ್ ಆಗಲಿದೆ.

ಪವನ್ ಒಡೆಯರ್ ನಿರ್ದೇಶನದ, ಇಶಾನ್ ಮತ್ತು ಆಶಿಕಾ ರಂಗನಾಥ್ ಜೋಡಿಯ ರೇಮೊ ಸಿನಿಮಾ ಸ್ಯಾಂಡಲ್​ವುಡ್ ಅಂಗಳದಲ್ಲಿ ಕ್ರೇಜ್ ಸೃಷ್ಟಿಸಿದೆ. ಕ್ರೇಜಿ ಟ್ರೈಲರ್ ಮೂಲಕ ಸಿನಿ ಪ್ರೇಮಿಗಳ ಕುತೂಹಲ ಹೆಚ್ಚಿಸಿರುವ ಈ ಚಿತ್ರ ಶುಕ್ರವಾರ ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್​ ಆಗಲಿದೆ.

ಸಿನಿಮಾದ ಭರ್ಜರಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ನಾಯಕ ನಟ ಇಶಾನ್, ನಟಿ ಆಶಿಕಾ ರಂಗನಾಥ್ ಹಾಗೂ ನಿರ್ದೇಶಕ ಪವನ್ ಒಡೆಯರ್ ಗೋವಾಗೆ ತೆರಳಿದ್ದಾರೆ. ಇದಕ್ಕೆ ಕಾರಣ ಪ್ರಪಂಚದಾದ್ಯಂತ ಫೇಮಸ್ ಆಗಿರುವ 'ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ'.

ಪ್ರತಿಷ್ಠಿತ 53ನೇ 'ಇಂಟರ್ ನ್ಯಾಶನಲ್ ಫಿಲ್ಮ್​ ಫೆಸ್ಟಿವಲ್ ಆಫ್ ಇಂಡಿಯಾ' ಗೋವಾದಲ್ಲಿ ನಡೆಯುತ್ತಿದೆ. ಬೇರೆ ಬೇರೆ ದೇಶದ ವಿವಿಧ ಕೆಟಗರಿಯ ಆಯ್ದ ಸಿನಿಮಾಗಳು ಇಲ್ಲಿ ಪ್ರದರ್ಶನಗೊಳ್ಳುತ್ತವೆ. ಪ್ರಪಂಚದ ಬೇರೆ ಬೇರೆ ಭಾಷೆಯ ಹೆಸರಾಂತ ನಿರ್ದೇಶಕರು, ತಂತ್ರಜ್ಞರು, ಬರಹಗಾರರು ಈ ಫಿಲ್ಮ್​ ಫೆಸ್ಟ್​ನಲ್ಲಿ ಭಾಗಿಯಾಗಿರುತ್ತಾರೆ. ಇಂತಹ ದೊಡ್ಡ ವೇದಿಕೆಗೆ ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ರೇಮೊ ಸಿನಿಮಾ ಸೆಲೆಕ್ಟ್ ಆಗಿದ್ದು, ಸ್ಕ್ರೀನಿಂಗ್ ಆಗಿದೆ.

ಇಂಟರ್ ನ್ಯಾಶನಲ್ ಫಿಲ್ಮ್​​ ಫೆಸ್ಟಿವಲ್​​ನಲ್ಲಿ ರೇಮೊ ಕಮಾಲ್

ಇಂದಿನ ಪ್ರೀಮಿಯರ್ ಶೋನಲ್ಲಿ ರೇಮೊ ಸಿನಿಮಾ ಸ್ಕ್ರೀನಿಂಗ್ ಆಗುತ್ತಿದ್ದು, ಈ ಪ್ರಯುಕ್ತ ನಿರ್ದೇಶಕ ಪವನ್ ಒಡೆಯರ್, ನಾಯಕ ಇಶಾನ್, ಆಶಿಕಾ ರಂಗನಾಥ್ ಒಳಗೊಂಡ ಚಿತ್ರತಂಡ ಗೋವಾಗೆ ತೆರಳಿದೆ. ರೇಮೊ ಸಿನಿಮಾವನ್ನು ಎಲ್ಲರೊಂದಿಗೆ ಕುಳಿತು ವೀಕ್ಷಣೆ ಮಾಡಲಿದೆ ಚಿತ್ರತಂಡ. ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಭಾಗಿಯಾಗಿರುವ ವಿಡಿಯೋ ಹಾಗೂ ಫೋಟೋ ಹಂಚಿಕೊಂಡು ನಿರ್ದೇಶಕ ಪವನ್ ಒಡೆಯರ್ ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಇಶಾನ್ ನಟನೆಯ 'ರೇಮೊ' ಚಿತ್ರಕ್ಕೆ ಸಿಕ್ತು ಮೆಗಾಸ್ಟಾರ್ ಚಿರಂಜೀವಿ ಆಶೀರ್ವಾದ

ರೇಮೊ ಮ್ಯೂಸಿಕಲ್ ಮತ್ತು ಔಟ್ ಆ್ಯಂಡ್​ ಔಟ್ ರೊಮ್ಯಾಂಟಿಕ್ ಸಬ್ಜೆಕ್ಟ್ ಸಿನಿಮಾ. ಜಯಾದಿತ್ಯ ಬ್ಯಾನರ್​ನಡಿ ಸಿ.ಆರ್. ಮನೋಹರ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸಿ.ಆರ್ ಗೋಪಿ ಸಹ ನಿರ್ಮಾಣ ಚಿತ್ರಕ್ಕಿದೆ. ವೈದಿ ಕ್ಯಾಮರಾ ವರ್ಕ್, ಕೆ.ಎಂ. ಪ್ರಕಾಶ್ ಸಂಕಲನ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಈ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ 'ನಾನು ಕುಸುಮ' ಪ್ರದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.