ETV Bharat / entertainment

ರವಿತೇಜ ಅಭಿನಯದ 'ಟೈಗರ್​​ ನಾಗೇಶ್ವರ ರಾವ್​' ಬಿಡುಗಡೆಗೆ ಮುಹೂರ್ತ ಫಿಕ್ಸ್​​

author img

By

Published : Mar 30, 2023, 2:30 PM IST

ತೆಲುಗು ನಟ ರವಿತೇಜ ಅಭಿನಯದ 'ಟೈಗರ್​​ ನಾಗೇಶ್ವರ ರಾವ್​' ಸಿನಿಮಾವು ಅಕ್ಟೋಬರ್​ 20 ರಂದು ಬಿಡುಗಡೆಯಾಗಲಿದೆ.

film
ಟೈಗರ್​​ ನಾಗೇಶ್ವರ ರಾವ್

ಟಾಲಿವುಡ್​ ಮಾಸ್​ ಮಹಾರಾಜ ರವಿತೇಜ ಅವರ ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ ಸಿನಿಮಾ 'ಟೈಗರ್​​ ನಾಗೇಶ್ವರ ರಾವ್​' ಬಿಡುಗಡೆಗೆ ಮುಹೂರ್ತ ಫಿಕ್ಸ್​ ಆಗಿದೆ. ದಸರಾ ಹಬ್ಬದ ಸಮಯದಲ್ಲೇ ಸಿನಿಮಾ ರಿಲೀಸ್​ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿದೆ. ಅದರಂತೆ ವಂಶಿ ನಿರ್ದೇಶನದ ಈ ಸಿನಿಮಾ ಅಕ್ಟೋಬರ್​ 20 ರಂದು ತೆರೆ ಕಾಣಲಿದೆ. ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ತಯಾರಾಗುತ್ತಿರುವ ಈ ಚಿತ್ರದ ಮೂಲಕ ರವಿ ತೇಜ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ.

'ಟೈಗರ್​ ನಾಗೇಶ್ವರ ರಾವ್'​ ಸಿನಿಮಾವನ್ನು ಕಾರ್ತಿಕೇಯ-2, ದಿ ಕಾಶ್ಮೀರಿ ಫೈಲ್ಸ್​ನಂತಹ ಹಿಟ್​ ಚಿತ್ರಗಳನ್ನು ನೀಡಿರುವ ಅಭಿಷೇಕ್​ ಅಗರ್ವಾಲ್​ ತಮ್ಮದೇ ಅಭಿಷೇಕ್​ ಅಗರ್ವಾಲ್​ ಆರ್ಟ್ಸ್​​ನಡಿ ನಿರ್ಮಿಸುತ್ತಿದ್ದಾರೆ. ಮಾಸ್​ ಮಹಾರಾಜನ ನಾಯಕಿಯಾಗಿ ನೂಪುರ್​ ಸನೋನ್​ ಮತ್ತು ಗಾಯತ್ರಿ ಭಾರದ್ವಾಜ್​ ನಟಿಸಿದ್ದಾರೆ. ವಂಶಿ ನಿರ್ದೇಶನ, ಆರ್​ ಮಧಿ ಛಾಯಾಗ್ರಹಣ, ಶ್ರೀಕಾಂತ್​ ವೀಸಾ ಸಂಭಾಷಣೆ, ವಿ ಪ್ರಕಾಶ್​ ಕುಮಾರ್​​ ಸಂಗೀತ ಸಿನಿಮಾಕ್ಕಿದೆ. ಅವಿನಾಶ್​ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್​ ಸಿಂಘಾನಿಯಾ ಸಹ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ಪೊನ್ನಿಯನ್​ ಸೆಲ್ವಂ-2 ಸಿನಿಮಾ ಟ್ರೇಲರ್​ ರಿಲೀಸ್​: ರಾಣಿಯರಾಗಿ ಮಿಂಚಿದ ಐಶ್ವರ್ಯಾ ರೈ, ತ್ರಿಶಾ

70 ರ ಕಾಲಘಟ್ಟದ ಹೈದರಾಬಾದ್​ನ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದೆ. ರವಿತೇಜ ಅವರ ಗೆಟಪ್​ ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಭಿನ್ನವಾಗಿರಲಿದೆ. 'ಟೈಗರ್​ ನಾಗೇಶ್ವರ ರಾವ್' ಸಿನಿಮಾದಲ್ಲಿ ಬಾಲಿವುಡ್​ ನಟ ಅನುಪಮ್​ ಖೇರ್​ ನಟಿಸಿದ್ದು, ಬಿಡುಗಡೆ ದಿನಾಂಕದ ಪೋಸ್ಟರ್​ ಅನ್ನು ಹಂಚಿಕೊಂಡಿದ್ದಾರೆ. "ನನ್ನ ಆತ್ಮೀಯ ರವಿತೇಜ ನಟಿಸಿರುವ ಈ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡಲು ಸಿದ್ಧವಾಗಿದೆ. ಅಕ್ಟೋಬರ್​ 20 ರಂದು ಸಿನಿಮಾ ತೆರೆ ಕಾಣಲಿದೆ" ಎಂದು ಬರೆದುಕೊಂಡಿದ್ದಾರೆ.

ಜೊತೆಗೆ ನಟ ರವಿತೇಜ ಕೂಡ ಚಿತ್ರದ ರಿಲೀಸ್​ ಪೋಸ್ಟರ್​ ಶೇರ್​ ಮಾಡಿಕೊಂಡಿದ್ದು, 'ಈ ವರ್ಷ ಇದು ನಮಗೆಲ್ಲರಿಗೂ ವಿಶೇಷವಾಗಲಿದೆ' ಎಂದು ಬರೆದುಕೊಂಡಿದ್ದಾರೆ. 'ಟೈಗರ್​ ನಾಗೇಶ್ವರ ರಾವ್​' ಪ್ಯಾನ್​ ಇಂಡಿಯಾ ಸಿನಿಮಾವಾಗಿದ್ದು, ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಪೋಸ್ಟರ್​ನಲ್ಲಿ ರವಿತೇಜ ಸ್ಟೀಮ್​ ರೈಲಿನ ಇಂಜಿನ್​ ಮೇಲೆ ನಿಂತಿರುವಂತೆ ಕಾಣಿಸುತ್ತಿದೆ.

ಇದನ್ನೂ ಓದಿ: IPL 2023: ನಾಳೆಯಿಂದ ಐಪಿಎಲ್‌ ಹಬ್ಬ; ಉದ್ಘಾಟನಾ ಸಮಾರಂಭದಲ್ಲಿ ರಶ್ಮಿಕಾ, ತಮನ್ನಾ ನೃತ್ಯ ಝಲಕ್!

ತೆಲುಗು ಚಿತ್ರರಂಗದಲ್ಲಿ ಸೂಪರ್​ ಹಿಟ್​ ಸಿನಿಮಾಗಳನ್ನು ಮಾಡಿ ರವಿತೇಜ ಅವರು ಮಾಸ್​ ಮಹಾರಾಜನೆಂದೇ ಖ್ಯಾತಿ ಪಡೆದಿದ್ದಾರೆ. ಇನ್ನೂ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ರವಿತೇಜ ಬ್ಯುಸಿಯಾಗಿದ್ದಾರೆ. ಈಗಾಗಲೇ ಒಂದರ ಹಿಂದೆ ಇನ್ನೊಂದರಂತೆ ಎರಡು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿರುವ ನಟ 'ರಾವಣಾಸುರ'ನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಈ ಮಧ್ಯೆ 'ಟೈಗರ್​​ ನಾಗೇಶ್ವರ ರಾವ್​' ಚಿತ್ರದ ಬಿಡುಗಡೆಗೂ ಡೇಟ್​ ಫಿಕ್ಸ್​ ಆಗಿದ್ದು, ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ: ಡಾಲಿ ಅಭಿನಯದ 'ಗುರುದೇವ್​ ಹೊಯ್ಸಳ' ಬಿಡುಗಡೆ: ಶುಭ ಕೋರಿದ ರಶ್ಮಿಕಾ ಮಂದಣ್ಣ ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.