ETV Bharat / entertainment

ಬಾಕ್ಸ್​ ಆಫೀಸ್​ನಲ್ಲಿ 'ಅನಿಮಲ್' ನಾಗಾಲೋಟ; 700 ಕೋಟಿ ಸಂಪಾದನೆ

author img

By ETV Bharat Karnataka Team

Published : Dec 11, 2023, 4:46 PM IST

Animal worldwide box office collection: 'ಅನಿಮಲ್'​ ಸದ್ಯ ಬಾಲಿವುಡ್​ನ ಭರ್ಜರಿ ಪ್ರದರ್ಶನ ಕಾಣುತ್ತಿರುವ ಚಿತ್ರವಾಗಿದ್ದು, ನಟ ರಣಬೀರ್​ ಕಪೂರ್​ ಅವರಿಗೆ ಅತ್ಯಂತ ಬಿಗ್​ ಹಿಟ್​ ನೀಡಿದ ಸಿನಿಮಾ ಆಗಿದೆ.

ranbir kapoor animal film success continues in second week
ranbir kapoor animal film success continues in second week

ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಚಿತ್ರ 'ಅನಿಮಲ್'​ ಬಾಕ್ಸ್​ ಆಫೀಸ್​ನಲ್ಲಿ ತನ್ನ ನಾಗಾಲೋಟ ಮುಂದುವರೆಸಿದ್ದು, 'ಅನಿಮಲ್'​ ಸಿನಿಮಾ ದೇಶಿಯ ಗಲ್ಲಾ ಪೆಟ್ಟಿಯಲ್ಲಿ 432.37 ಕೋಟಿಯನ್ನು ಇಲ್ಲಿಯವರೆಗೆ ಗಳಿಸುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿಯೂ ತನ್ನ ಅಬ್ಬರವನ್ನು ಮುಂದುವರೆಸಿದೆ. ಹಿಂಸಾತ್ಮಕ ವಿಷಯ, ಸ್ತ್ರೀ ದ್ವೇಷದ ಧ್ಯೇಯ ಎಂಬ ಟೀಕೆಗಳ ಹೊರತಾಗಿ ಸಿನಿಮಾವೂ ಜಾಗತಿಕವಾಗಿ 700 ಕೋಟಿ ಹಣ ಸಂಪಾದಿಸಿದೆ.

'ಟಿ ಸೀರಿಸ್​ ಫಿಲ್ಮ್ಸ್'​​ನಲ್ಲಿ ನಿರ್ಮಾಣ ಬ್ಯಾನರ್​ನಲ್ಲಿ 'ಅನಿಮಲ್'​ ಚಿತ್ರ ಮೂಡಿ ಬಂದಿದ್ದು, ಸೋಮವಾರ ಅಂದರೆ ಚಿತ್ರ ಬಿಡುಗಡೆಗೊಂಡ 10 ನೇ ದಿನದ ವರ್ಲ್ಡ್​​ ವೈಡ್​ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮಾಹಿತಿಯನ್ನು ಹಂಚಿಕೊಂಡಿದೆ. ಅದರ ಅನುಸಾರ ಜಾಗತಿಕವಾಗಿ ಚಿತ್ರವೂ 717.46 ಕೋಟಿಯನ್ನು ಸಂಪಾದಿಸಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ತಿಳಿಸಿದೆ. ಸಿನಿಮಾವೂ ರೆಕಾರ್ಡ್​​ಗಳನ್ನು ಮಾಡುವ ಮೂಲಕ ಬಾಕ್ಸ್​ ಆಫೀಸ್​ ಕೊಳ್ಳೆಹೊಡೆಯುತ್ತಿದೆ ಎಂದಿದ್ದಾರೆ.

ಚಿತ್ರದ ಎರಡನೇ ವಾರದ ಗಳಿಕೆಯನ್ನು ಈ ಮುಂಚೆ ಹಂಚಿಕೊಳ್ಳಲಾಗಿತ್ತು. ಎರಡನೇ ವಾರದಲ್ಲಿ ಹಿಂದಿ ವರ್ಷನ್​ನಲ್ಲಿ ಚಿತ್ರವೂ ಭಾರತದಲ್ಲಿ 87.56 ಕೋಟಿ ಸಂಪಾದಿಸುವ ಮೂಲಕ ದೊಡ್ಡ ಹಿಟ್​ ನೀಡುತ್ತಾ ಮುಂದುವರೆದಿದೆ. ಎರಡನೇ ಶುಕ್ರವಾರದಂದು ಚಿತ್ರವೂ 22.59 ಕೋಟಿ ಗಳಿಕೆ ಮಾಡಿದರೆ, ಶನಿವಾರ 34.74 ಕೋಟಿ ಮತ್ತು ಶನಿವಾರ ಎಲ್ಲಾ ಭಾಷೆಗಳಲ್ಲಿ ನಿವ್ಹಳ ಲಾಭ 36 ಕೋಟಿ ಎಂದು ತೋರಿಸಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್​​​ ಹೊಸ ಅವತಾರದಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದ್ದಾರೆ.

'ಅನಿಮಲ್'​ ಚಿತ್ರವೂ ಸದ್ಯ ಬಾಲಿವುಡ್​ನ ಭರ್ಜರಿ ಪ್ರದರ್ಶನ ಕಾಣುತ್ತಿರುವ ಚಿತ್ರವಾಗಿದ್ದು, ನಟ ರಣಬೀರ್​ ಕಪೂರ್​ ಅವರಿಗೆ ಅತ್ಯಂತ ಬಿಗ್​ ಹಿಟ್​ ನೀಡಿದ ಸಿನಿಮಾ ಆಗಿದೆ. ಅಲ್ಲದೇ ರಣಬೀರ್​ ಅವರ 'ಸಂಜು' ಚಿತ್ರದ ದಾಖಲೆಯನ್ನು ಇದು ಧೂಳಿಪಟ ಮಾಡಿದೆ. ಕ್ರಿಸ್ಮಸ್​ನಲ್ಲಿ ದೊಡ್ಡ ದೊಡ್ಡ ಹೊಸ ಚಿತ್ರ ಬಿಡುಗಡೆ ಆಗುವವರೆಗೂ 'ಅನಿಮಲ್'​ ಸಿನಿಮಾ ಬಾಕ್ಸ್​ ಆಫೀಸ್​​ನಲ್ಲಿ ಯಶಸ್ವಿ ಪ್ರದರ್ಶನ ಕಾಣಲಿದೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ನಡೆಸಿದ್ದಾರೆ. ಕ್ರಿಸ್ಮಸ್​ಗೆ ನಟ ಶಾರುಖ್​ಖಾನ್​ ಅಭಿನಯದ 'ಡಂಕಿ' ಸಿನಿಮಾ ಮತ್ತು ಮೋಹನ್​ಲಾಲ್​​ ಅಭಿನಯದ 'ನೆರು' ಚಿತ್ರ ಡಿಸೆಂಬರ್​ 21ಕ್ಕೆ ಬಿಡುಗಡೆಯಾಗಲಿದೆ. ಅಲ್ಲದೇ ಡಿಸೆಂಬರ್​ 22ಕ್ಕೆ ಪ್ರಭಾಸ್​ ನಟನೆಯ 'ಸಲಾರ್'​ ಚಿತ್ರ ಕೂಡ ತೆರೆಗೆ ಬರಲು ಸಜ್ಜಾಗಿದೆ.

  • " class="align-text-top noRightClick twitterSection" data="">

ಇದನ್ನೂ ಓದಿ: ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ₹400 ಕೋಟಿ ಸಮೀಪಿಸಿದ 'ಅನಿಮಲ್'​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.