ETV Bharat / entertainment

'ಪ್ರೀತಿಯಲ್ಲಿ ಬೀಳಬೇಡಿ, ಬೆಳೆಯಿರಿ': ರಾಮ್ ಚರಣ್ - ಉಪಾಸನಾ ಪ್ರೇಮಕಥೆಯಿದು

author img

By

Published : Apr 2, 2023, 6:55 PM IST

ಆರ್​ಆರ್​ಆರ್​ ಸ್ಟಾರ್ ರಾಮ್ ಚರಣ್ ಪತ್ನಿ ಉಪಾಸನಾ ತಮ್ಮ ವೈವಾಹಿಕ ಜೀವನದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

Ram Charan Upasana Konidela
ರಾಮ್ ಚರಣ್ ಉಪಾಸನಾ ಪ್ರೇಮಕಥೆ

ಆರ್‌ಆರ್‌ಆರ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ಮದುವೆಯಾಗಿ ಒಂದು ದಶಕ ಕಳೆದಿದೆ. ಆದರೆ ಸಂಬಂಧದಲ್ಲಿ ಪ್ರೀತಿ, ವಿಶ್ವಾಸ, ಹೊಸತನವನ್ನು ಹೇಗೆ ಜೀವಂತವಾಗಿಡುವುದು ಎಂಬುದು ಈ ಸ್ಟಾರ್ ದಂಪತಿಗೆ ಚೆನ್ನಾಗಿಯೇ ತಿಳಿದಿದೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಉಪಾಸನಾ ತಮ್ಮ ವೈವಾಹಿಕ ಜೀವನ ಮತ್ತು ಪ್ರೀತಿ ಬಗ್ಗೆ ಮಾತನಾಡಿದ್ದಾರೆ. ರಾಮ್ ಚರಣ್ ಒಮ್ಮೆ ತಮ್ಮ ಪ್ರೀತಿಯನ್ನು ವ್ಯಾಖ್ಯಾನಿಸಿದ್ದ ರೀತಿಯನ್ನೂ ತಿಳಿಸಿದ್ದಾರೆ. ವಿಭಿನ್ನ ಹಿನ್ನೆಲೆಯಿಂದ ಬಂದಿದ್ದರೂ ತಮ್ಮ ಸಂಬಂಧ ಬಲಪಡಿಸಿದ ಬಗ್ಗೆ ಮಾತನಾಡಿದರು.

ತಮ್ಮ ಪ್ರೇಮಕಥೆಯ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ ರಾಮ್​​ ಚರಣ್​ ಪತ್ನಿ ಉಪಾಸನಾ, "ನಾವಿಬ್ಬರೂ ಬಹಳ ಪ್ರ್ಯಾಕ್ಟಿಕಲ್ ಆಗಿ ಯೋಚಿಸುವ ವ್ಯಕ್ತಿಗಳು ಎಂಬುದನ್ನು ಜೀವನದಲ್ಲಿ ಅರಿತುಕೊಂಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ನೀವು ಪ್ರೀತಿಯಲ್ಲಿ ಬೀಳಲು ಸಾಧ್ಯವಿಲ್ಲ, ಪ್ರೀತಿಯಲ್ಲಿ ಬೆಳೆಯಬೇಕು ಎಂದು ರಾಮ್ ಹೇಳುತ್ತಾರೆ. ಅವರು ನನಗೆ ಹಾಗೆ ಹೇಳಿದಾಗ ಅದು ಚೀಸೀ ಡೈಲಾಗ್ ಎಂದು ನಾನು ಭಾವಿಸಿದೆ. ಆದರೆ ನಂತರ ಅದು ಅರ್ಥವಾಗಲು ಪ್ರಾರಂಭಿಸಿತು. ಏಕೆಂದರೆ ಪ್ರತಿದಿನ ನೀವು ನಿಮ್ಮ ಸಂಗಾತಿಯ ಬಗ್ಗೆ ಏನನ್ನಾದರೂ ತಿಳಿಯುತ್ತೀರಿ ಮತ್ತು ನೀವು ಅವರೊಂದಿಗೆ ಬೆಳೆಯಲು ಪ್ರಾರಂಭಿಸುತ್ತೀರಿ'' ಎಂದು ತಿಳಿಸಿದರು.

ನಾನು ಮತ್ತು ರಾಮ್ ಚರಣ್ ಪರಸ್ಪರವಾಗಿ ವಿಭಿನ್ನ ರೀತಿಯಲ್ಲಿ ಪೂರಕವಾಗಿದ್ದೇವೆ. ತಮ್ಮ ಸಂಬಂಧವನ್ನು ದೃಢಪಡಿಸಲು ಕೆಲವೊಮ್ಮೆ ಕೆಲ ವಿಷಯಗಳಲ್ಲಿ ರಾಜಿ, ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. 6 ತಿಂಗಳ ಗರ್ಭಿಣಿ ಆಗಿರುವ ಉಪಾಸನಾ ಅವರಿಗೆ ಇತ್ತೀಚೆಗೆ ರಾಮ್​ ಸರ್ಪ್ರೈಸ್​ ಕೂಡ ಕೊಟ್ಟಿದ್ದಾರೆ. ಅವರು ಇತ್ತೀಚೆಗೆ ತಿಮಿಂಗಿಲವನ್ನು ವೀಕ್ಷಿಸಲು ನನ್ನನ್ನು ಕರೆದೊಯ್ದರು ಎಂದು ಉಪಾಸನಾ ತಿಳಿಸಿದರು. ರಾಮ್ ತಮ್ಮ ಜೀವನದಲ್ಲಿ ಅತ್ಯಂತ ಉತ್ತಮ, ತಮ್ಮನ್ನು ಶಾಂತಗೊಳಿಸುವ ಅಂಶ ಎಂದು ಉಪಾಸನಾ ಒಪ್ಪಿಕೊಂಡಿದ್ದಾರೆ. ಅವರು ನನ್ನ ಜೀವನದಲ್ಲಿ ಮೊದಲೇ ಭೇಟಿಯಾಗಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು ಎಂದು ಕೂಡ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ಯಾರಾಲಿಂಪಿಯನ್ ದೀಪಾ ಮಲಿಕ್ ಜೊತೆ ಎಸ್​​ಆರ್​ಕೆ ಮಾತು: ನೆಟ್ಟಿಗರ ಮನಗೆದ್ದ ವಿಡಿಯೋ

ತಮ್ಮ ಮತ್ತು ರಾಮ್‌ನ ಸಂಬಂಧವನ್ನು ಗಟ್ಟಿಗೊಳಿಸುವ ಬಗ್ಗೆ ಒತ್ತಿಹೇಳುತ್ತಾ, 10 ವರ್ಷಗಳ ವೈವಾಹಿಕ ಜೀವನದ ನಂತರ ಪೋಷಕರಾಗಲು ನಿರ್ಧರಿಸಿದೆವು. ದಂಪತಿಯಾಗಿ ತಮ್ಮ ಮಗುವನ್ನು ಸ್ವೀಕರಿಸಲು ಹೊರಗಿನ ಅಥವಾ ಕುಟುಂಬದ ಒತ್ತಡಕ್ಕೆ ಮಣಿಯಲಿಲ್ಲ. ಸರಿಯಾದ ಸಮಯ ಎಂದು ಭಾವಿಸಿದ ಬಳಿಕವೇ ಪೋಷಕರಾಗಲು ನಿರ್ಧರಿಸಿದೆವು. ಇದು ಪರಸ್ಪರರ ನಿರ್ಧಾರ, ಅಭಿಪ್ರಾಯಗಳಿಗೆ ಕೊಡುವ ಮಹತ್ವ ಎಂದು ಭಾವಿಸುತ್ತೇನೆ. ಸದ್ಯ ಪೋಷಕರಾಗಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ವದಂತಿ ಗೆಳೆಯ ರಾಘವ್​ ಜೊತೆ ಮುಂಬೈಗೆ ವಾಪಸಾದ ಪರಿಣಿತಿ - ವಿಡಿಯೋ

2011ರ ಜೂನ್ 14ರಂದು ರಾಮ್​​ ಚರಣ್ ಮತ್ತು ಉಪಾಸನಾ ದಾಂಪತ್ಯ ಜೀವನ ಆರಂಭಿಸಿದರು. ಚೆನ್ನೈನಲ್ಲಿದ್ದ ವೇಳೆ ಇವರಿಬ್ಬರೂ ಒಂದೇ ಶಾಲೆಯಲ್ಲಿ ಓದಿದ್ದರು. ಬಳಿಕ ಹಿರಿಯರು ನಿಶ್ಚಯಿಸಿ ಈ ಮದುವೆ ನಡೆಯಿತು. ವೈವಾಹಿಕ ಜೀವನದಲ್ಲಿ ಯಶಸ್ವಿ ಪ್ರಯಾಣ ನಡೆಸುತ್ತಿರುವ ಈ ಜೋಡಿ ಮದುವೆಯಾಗಿ ದಶಕ ಪೂರೈಸಿದ ಬಳಿಕ ಪೋಷಕರಾಗುತ್ತಿದ್ದಾರೆ. ರಾಮ್ ಚರಣ್ ಸಿನಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಉಪಾಸನಾ ಅವರು ಅಪೋಲೋ ಆಸ್ಪತ್ರೆಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅಲ್ಲದೇ ಸಮಾಜ ಸೇವೆಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಯೂಟ್ಯೂಬ್​ ಚಾನಲ್ ಮೂಲಕವೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.