ETV Bharat / entertainment

ಹಾಲಿವುಡ್​ ಸಿನಿಮಾದಲ್ಲಿ ರಾಮ್ ಚರಣ್.. ನೆಪೋಟಿಸಂ ಬಗ್ಗೆ RRR ಸ್ಟಾರ್ ಹೀಗಂದ್ರು

author img

By

Published : Mar 18, 2023, 7:56 PM IST

ಆರ್​ಆರ್​ಆರ್​ ಸ್ಟಾರ್ ರಾಮ್ ಚರಣ್ ಹಾಲಿವುಡ್ ಎಂಟ್ರಿ ಬಗ್ಗೆ ಚರ್ಚೆ ಜೋರಾಗಿದೆ.

Ram Charan in Hollywood movie
ಹಾಲಿವುಡ್​ ಸಿನಿಮಾದಲ್ಲಿ ರಾಮ್ ಚರಣ್

ಟಾಲಿವುಡ್​ ಸೂಪರ್​ ಸ್ಟಾರ್ ರಾಮ್ ಚರಣ್ RRR ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಮನ್ನಣೆ ಗಳಿಸಿದ್ದಾರೆ. ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿ ಪ್ರಪಂಚದಾದ್ಯಂತ ಅನೇಕ ಸಿನಿ ಪ್ರೇಮಿಗಳನ್ನು ಸೆಳೆದಿದ್ದಾರೆ. ನಟನೆ ಮತ್ತು ಆಸ್ಕರ್​ ಸಮಾರಂಭದ ಬಳಿಕ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ. ಗೋಲ್ಡನ್ ಗ್ಲೋಬ್, ಆಸ್ಕರ್​ನಂತಹ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭಕ್ಕೆ ಹೋಗಿದ್ದ ಅವರ ಆ ಸ್ಟೈಲ್ ನೋಡಿ ಅನೇಕರು ಹಾಲಿವುಡ್ ಹೀರೋ ರೀತಿ ಕಾಣುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ರಾಮ್ ಚರಣ್ ಹಾಲಿವುಡ್ ಎಂಟ್ರಿ ಬಗ್ಗೆ ಚರ್ಚೆ ನಡೆಯುತ್ತಿದ್ದು, ಅಂತಿಮ ಅಧಿಕೃತ ಮಾಹಿತಿ ಹೊರಬರಬೇಕಷ್ಟೇ.

ಹಾಲಿವುಡ್​ಗೆ ಎಂಟ್ರಿ? ಗೋಲ್ಡನ್ ಗ್ಲೋಬ್ ಮತ್ತು ಆಸ್ಕರ್ ಪ್ರಶಸ್ತಿ ಸಮಾರಂಭಗಳಲ್ಲಿ, ಸಂದರ್ಶನಗಳಲ್ಲಿ ಹಾಲಿವುಡ್ ನಿರ್ದೇಶಕರು ಮತ್ತು ನಿರ್ಮಾಪಕರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದು ರಾಮ್ ಚರಣ್ ಮನದಾಸೆಯನ್ನು ಹೊರಹಾಕಿದ್ದರು. ಇದೇ ವೇಳೆ ಅವರು ಸ್ಟಾರ್ ವಾರ್ಸ್ ನಿರ್ದೇಶಕ ಜೆಜೆ ಅಬ್ರಹಾಮ್ಸ್ ಅವರನ್ನೂ ಕೂಡ ಭೇಟಿ ಆಗಿದ್ದರು. ಒಟ್ಟಿಗೆ ಸಿನಿಮಾ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಇತ್ತು. ಆದರೆ, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಆಸ್ಕರ್ ಸಮಾರಂಭದಲ್ಲಿ ರಾಮ್​​ ಚರಣ್ ಹೇಳಿದ್ದಾರೆ. ಹಾಲಿವುಡ್ ಚಿತ್ರದಲ್ಲಿನ ಪಾತ್ರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದಾಗ್ಯೂ, ಇದು ಜೆಜೆ ಅಬ್ರಹಾಮ್ಸ್​ ಅವರೊಂದಿಗೆ ಅಲ್ಲ.

'ಚರ್ಚೆ ನಡೆಯುತ್ತಿವೆ, ನಿಮ್ಮೆಲ್ಲರ ಆಶೀರ್ವಾದ': ಹಾಲಿವುಡ್​ನ ಟಾಮ್ ಕ್ರೂಸ್ ಅವರ 'ಟಾಪ್ ಗನ್ 3' ಚಿತ್ರದಲ್ಲಿ ರಾಮ್ ಚರಣ್ ನಟಿಸುವ ಸಾಧ್ಯತೆಗಳಿವೆ ಎಂಬುದು ಲೇಟೆಸ್ಟ್ ಟಾಕ್. ಶುಕ್ರವಾರ ನಡೆದ ಸಂದರ್ಶನವೊಂದರಲ್ಲಿ, ರಾಮ್ ಚರಣ್ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಹಾಲಿವುಡ್ ಸಿನಿಮಾದಲ್ಲಿ ನಟಿಸುವುದು ನಿಜವೇ? ಹಾಲಿವುಡ್ ಚಿತ್ರದ ಆಫರ್ ಬಂದಿದೆ ಎಂಬ ವರದಿಗಳನ್ನು ಓದಿದ್ದೀರಾ ಎಂದು ಕೇಳಿದಾಗ, ಚರ್ಚೆಗಳು ನಡೆಯುತ್ತಿವೆ. ನಿಮ್ಮೆಲ್ಲರ ಆಶೀರ್ವಾದ ಎಂದು ರಾಮ್ ಚರಣ್ ಉತ್ತರಿಸಿದ್ದಾರೆ. ಹಾಲಿವುಡ್ ಚಿತ್ರಕ್ಕೆ ಸಹಿ ಹಾಕಿದ್ದೀರಾ? ಅಥವಾ ಪ್ರಕ್ರಿಯೆಯಲ್ಲಿದೆಯೇ? ಎಂಬ ಪ್ರಶ್ನೆಗೆ ಎಲ್ಲವೂ ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ಪ್ರಕ್ರಿಯೆಯಲ್ಲಿರುತ್ತದೆ, ಹಾಲಿವುಡ್ ಸಿನಿಮಾ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ ರಾಮ್ ಚರಣ್.

ನೆಪೋಟಿಸಂ ಬಗ್ಗೆ ರಾಮ್​ಚರಣ್​ ಅಭಿಪ್ರಾಯವೇನು? ಸ್ಟಾರ್ ಹೀರೋ ಮಗನಾಗಿ ಸಿನಿಮಾ ಇಂಡಸ್ಟ್ರಿಗೆ ಬಂದರೂ ಪ್ರತಿಭೆ ಇಲ್ಲದಿದ್ದರೆ ಇಲ್ಲಿ ಕೆಲಸ ಮಾಡೋದು ಕಷ್ಟ ಎಂದರು ರಾಮ್​ಚರಣ್. ಪ್ರತಿಭೆ ಇದ್ದರೆ ಮಾತ್ರ ಪ್ರೇಕ್ಷಕರು ಪ್ರೋತ್ಸಾಹಿಸುತ್ತಾರೆ. ಈ ಸ್ವಜನಪಕ್ಷಪಾತ ಏನು ಅಂತ ಅರ್ಥ ಆಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಅದರ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದಾರೆ. ಸ್ವಜನಪಕ್ಷಪಾತ ಇದೆ ಎಂದು ಭಾವಿಸುವವರಿಂದಲೇ ಈ ರೀತಿಯ ಚರ್ಚೆ ನಡೆಯುತ್ತಿದೆ. ನನಗೆ ನಟನೆ ಬಹಳ ಇಷ್ಟ. ಬಾಲ್ಯದಿಂದಲೂ ಸಿನಿಮಾ ಇಂಡಸ್ಟ್ರಿಯಲ್ಲಿದ್ದೇನೆ. ನನಗೆ ಇಷ್ಟವಾದ ಕೆಲಸ ಮಾಡಿದ್ದರಿಂದ 14 ವರ್ಷ ಇಲ್ಲಿ ನಿಲ್ಲಲು ಸಾಧ್ಯವಾಯಿತು. ಅಪ್ಪನಿಂದಲೇ ಇಂಡಸ್ಟ್ರಿಗೆ ಬಂದರೂ ನಾನೇ ಈ ಪಯಣ ಮುಂದುವರಿಸಬೇಕು. ಪ್ರತಿಭೆ ಇಲ್ಲದೇ ಈ ಪಯಣ ಸುಲಭವಲ್ಲ, 'ಯಶಸ್ವಿಯೋ, ಸೋಲೋ, ನಿನಗಾಗಿ ದುಡಿಯುವವರನ್ನು ನೋಡಿಕೋ' ಎಂದು ನನ್ನ ತಂದೆ ನನಗೆ ಆರಂಭಿಕ ದಿನಗಳಲ್ಲಿ ಹೇಳಿದ್ದರು. ಅದನ್ನು ನಾನು ಎಂದೆಂದಿಗೂ ನೆನಪಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: ತಾಯ್ನಾಡಿಗೆ ಹಿಂತಿರುಗಿದ RRR ಖ್ಯಾತಿಯ ನಟ ರಾಮ್​ಚರಣ್​ಗೆ ಅದ್ದೂರಿ ಸ್ವಾಗತ

ಆರ್​ಆರ್​ಆರ್​ ನಟ ರಾಮ್ ಚರಣ್ ಶುಕ್ರವಾರ ದೆಹಲಿಯಲ್ಲಿ ಸಂಪೂರ್ಣ ದಿನ ಬಿಡುವಿಲ್ಲದ ಸಮಯ ಕಳೆದರು. ತಂದೆ ಚಿರಂಜೀವಿ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿ ಮಾಡಿದ್ದಾರೆ. ಮಾಧ್ಯಮ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು. ನಿನ್ನೆ ಮಧ್ಯರಾತ್ರಿ ಹೈದರಾಬಾದ್ ತಲುಪಿದ್ದಾರೆ. ಅಭಿಮಾನಿಗಳಿಂದ ಅವರಿಗೆ ಆತ್ಮೀಯ ಸ್ವಾಗತ ಸಿಕ್ಕಿತು. ರಾಮ್​ ಚರಣ್ ಆಗಮಿಸುವವರೆಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಹೈದರಾಬಾದ್​ನ ಬೇಗಂಪೇಟ್ ವಿಮಾನ ನಿಲ್ದಾಣದ ಬಳಿ ಕಾದು ಕುಳಿತಿದ್ದರು.

ಇದನ್ನೂ ಓದಿ: 'ನಾನು ಸಲ್ಲು ಫ್ಯಾನ್​​, ನನ್ನ ಪತ್ನಿ ಶಾರುಖ್​ ಅಭಿಮಾನಿ': RRR ಸ್ಟಾರ್ ರಾಮ್​​ಚರಣ್ ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.