ETV Bharat / entertainment

ಉಪಾಸನಾ ಹುಟ್ಟುಹಬ್ಬಕ್ಕೆ ವಿಶೇಷ ವಿಡಿಯೋ ಹಂಚಿಕೊಂಡ ರಾಮ್​ಚರಣ್​: ಮಗಳ ಬಗ್ಗೆ ಹೇಳಿದ್ದೇನು?

author img

By

Published : Jul 20, 2023, 10:05 PM IST

ನಟ ರಾಮ್​ಚರಣ್​, ತಮ್ಮ ಪತ್ನಿ ಉಪಾಸನಾ ಹುಟ್ಟುಹಬ್ಬಕ್ಕೆ ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Ram Charan
ರಾಮ್​ಚರಣ್​

ಸೌತ್​ ಸೂಪರ್​ ಸ್ಟಾರ್ ರಾಮ್​ಚರಣ್ ಮತ್ತು ಉಪಾಸನಾ ದಂಪತಿ ಇತ್ತೀಚೆಗಷ್ಟೇ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಮದುವೆಯಾದ 11 ವರ್ಷಗಳ ಬಳಿಕ ಪೋಷಕರಾಗಿದ್ದಾರೆ. ಮೆಗಾ ಪ್ರಿನ್ಸೆನ್ಸ್​ಗೆ 'ಕ್ಲಿಂ ಕಾರ ಕೊನಿಡೇಲಾ' ಎಂದು ಹೆಸರಿಡಲಾಗಿದೆ. ಇಂದು (ಜುಲೈ 20) ಉಪಾಸನಾ ಅವರ ಹುಟ್ಟುಹಬ್ಬ. ಅಲ್ಲದೇ ರಾಮಚರಣ್​ ಮಗಳು ಹುಟ್ಟಿ ಇಂದಿಗೆ ಸರಿಯಾಗಿ ಒಂದು ತಿಂಗಳಾಗಿದೆ. ಈ ವಿಶೇಷ ಸಂದರ್ಭದಲ್ಲಿ ರಾಮ್​ಚರಣ್​ ಹೆಂಡತಿ ಮತ್ತು ಮಗಳಿಗಾಗಿ ಸ್ಪೆಷಲ್​ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

Ram Charan
ಉಪಾಸನಾ ಹುಟ್ಟುಹಬ್ಬಕ್ಕೆ ವಿಶೇಷ ವಿಡಿಯೋ ಹಂಚಿಕೊಂಡ ರಾಮ್​ಚರಣ್​

ಆಸ್ಪತ್ರೆಯಲ್ಲಿ ಮಗು ಜನಿಸಿದಾಗ ಭಾವುಕರಾದ ಉಪಾಸನಾ ಮತ್ತು ರಾಮ್​ಚರಣ್​, ಅವರ ಸಂತೋಷದ ಕ್ಷಣಗಳು, ರಾಮ್​ಚರಣ್​ ತಮ್ಮ ಮಗುವನ್ನು ಮೊದಲ ಬಾರಿಗೆ ಕೈಯಲ್ಲಿ ಹಿಡಿದಾಗ ಅನುಭವಿಸಿದ ಭಾವನೆ ಎಲ್ಲವನ್ನೂ ವಿಡಿಯೋದಲ್ಲಿ ತೋರಿಸಲಾಗಿದೆ. ಜೊತೆಗೆ ದೃಶ್ಯದಲ್ಲಿ ಚಿರಂಜೀವಿ, ಅವರ ಪತ್ನಿ ಸುರೇಖಾ, ಉಪಾಸನಾ ಪೋಷಕರಾದ ಶೋಭನಾ ಕಾಮಿನೇನಿ ಮತ್ತು ಅನಿಲ್​ ಕಾಮಿನೇನಿ ಕೂಡ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ. ಜೊತೆಗೆ ಉಪಾಸನಾ ಮತ್ತು ರಾಮ್​ಚರಣ್​ ಈ ಅದ್ಭುತ ಕ್ಷಣದ ಅನುಭವವನ್ನು ಹಂಚಿಕೊಂಡಿದ್ದಾರೆ.

'ನೀನು ನಮ್ಮ ಅತ್ಯುತ್ತಮ ಉಡುಗೊರೆ': ಇನ್​ಸ್ಟಾದಲ್ಲಿ ವಿಡಿಯೋ ಹಂಚಿಕೊಂಡ ಆರ್​ಆರ್​ಆರ್​ ಸ್ಟಾರ್​, "ಜನ್ಮದಿನದ ಶುಭಾಶಯಗಳು ಪ್ರಿಯ ಉಪ್ಸಿ ಮತ್ತು ಒಂದು ತಿಂಗಳ ಜನ್ಮದಿನದ ಶುಭಾಶಯಗಳು ಪ್ರಿಯ ಕಾರ. ನೀನು ನಮ್ಮ ಅತ್ಯುತ್ತಮ ಉಡುಗೊರೆ" ಎಂದು ಕ್ಯಾಪ್ಶನ್​ ನೀಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಉಪಾಸನಾ, "ಎಂಟು ತಿಂಗಳು ಒಂದೆಡೆ ಫ್ರೀಜ್​ ಮಾಡಿದ ಹಾಗಿತ್ತು. ನಾನು ಎಲ್ಲಿಯೂ ಚಲಿಸುವಂತಿರಲಿಲ್ಲ. ನಾನು ಎಲ್ಲದರಲ್ಲೂ ಭಾವುಕಳಾಗುತ್ತಿದ್ದೇನೆ. ತಾಯಿಯಾಗಿರುವುದು ನನ್ನನ್ನು ಪೂರ್ಣಗೊಳಿಸಿದೆ ಎಂದು ಭಾವಿಸುತ್ತೇನೆ. ಹಾಗಾಗಿ ಜನರು ಮಗುವನ್ನು ಜಾಸ್ತಿ ಪ್ರೀತಿ ಮಾಡುತ್ತಾರೆ. ಎಲ್ಲರಿಂದಲೂ ಉತ್ತಮ ಭಾವನೆಯನ್ನೇ ನೀಡಿದೆ. ಇದು ತುಂಬಾ ಸುಂದರವಾಗಿದೆ ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿ ನಾನು ನಿಜವಾಗಿಯೂ ಕೃತಜ್ಞಳಾಗಿದ್ದೇನೆ" ಎಂದು ಹೇಳಿದ್ದಾರೆ.

ಮಗುವಿನ ಬಗ್ಗೆ ಮಾತನಾಡಿದ ಅವರು, "ನನ್ನ ಮಗು ಅವಳ ಸಾಧನೆಗಾಗಿ ಹೆಸರು ಮಾಡಬೇಕೆಂದು ಬಯಸುತ್ತೇನೆ. ಮಗುವಿನ ಹಿಂದೆ ಯಾವುದೇ ಟ್ಯಾಗ್​ಗಳನ್ನು ನಾನು ಬಯಸುವುದಿಲ್ಲ. ಅವಳು ಹೆಸರು ಮತ್ತು ಕೀರ್ತಿಯನ್ನು ತಾನೇ ಸಾಧಿಸಬೇಕೆಂದು ಬಯಸುತ್ತೇನೆ. ಆದರೆ ಅದು ಯಾವುದೇ ಒತ್ತಡದಿಂದ ಆಗಬಾರದು. ಕಠಿಣ ಪರಿಶ್ರಮದಿಂದ ಇದನ್ನು ಮಾಡಬೇಕು. ಮಕ್ಕಳನ್ನು ಬೆಳೆಸುವಲ್ಲಿ ಇದು ತುಂಬಾ ಮುಖ್ಯವಾಗಿದೆ. ಜೀವನದ ಪ್ರತಿ ಕ್ಷಣವನ್ನು ಆನಂದಿಸಬೇಕು. ನಾವು ಒಟ್ಟಿಗೆ ಇರುವ ಎಲ್ಲಾ ಸಂತೋಷದ ಸಮಯವನ್ನು ಗೌರವಿಸಬೇಕು" ಎಂದಿದ್ದಾರೆ.

ಇನ್ನೂ ವಿಡಿಯೋದಲ್ಲಿ ಮಾತನಾಡಿರುವ ರಾಮ್​ಚರಣ್​, "ಹನ್ನೊಂದು ವರ್ಷವಾಯಿತು. ನೀವಿಬ್ಬರೂ ಏನು ಮಾಡುತ್ತಿದ್ದೀರಿ? ಎಂಬ ಪ್ರಶ್ನೆಗಳಿಂದ ನಾವು ತುಂಬಾ ಒತ್ತಡಕ್ಕೆ ಒಳಗಾಗಿದ್ದೆವು. ಎಲ್ಲವೂ ಅದರ ಸಮಯಕ್ಕೆ ಅನುಗುಣವಾಗಿ ನಡೆಯುತ್ತದೆ ಎಂದು ನಾನು ನಂಬುತ್ತೇನೆ. ಈಗ ಇದು ಮಗುವಿನ ಸಮಯ. ತುಂಬಾ ಸಂತೋಷವಾಗುತ್ತಿದೆ. ಕಳೆದ 11 ವರ್ಷಗಳ ವೈವಾಹಿಕ ಜೀವನದಲ್ಲಿ ಉಪಾಸನಾ ಸಾಕಷ್ಟು ತ್ಯಾಗ ಮಾಡಿದ್ದಾರೆ. ಎಲ್ಲವೂ ಚೆನ್ನಾಗಿ ಆಯಿತು. ಮಗು ಈ ಜಗತ್ತಿಗೆ ಬರುವಾಗ ನಾನು ಎಲ್ಲಾ ಪ್ರಶ್ನೆಗಳಿಂದ ಮುಕ್ತನಾಗಿದ್ದೇನೆ. ನಾನು ಈ ಒಂಬತ್ತು ತಿಂಗಳ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನಂದಿಸಿದೆ" ಎಂದು ನುಡಿದರು.

ಇದನ್ನೂ ಓದಿ: ಚಿರಂಜೀವಿ ಮೊಮ್ಮಗಳಿಗೆ ಸ್ಪೆಷಲ್​ ರೂಂ... ಫಾರೆಸ್ಟ್ ಥೀಮ್​ನೊಂದಿಗೆ ರೆಡಿಯಾಯ್ತು ರಾಮ್ ಚರಣ್ ಪುತ್ರಿಯ ಕೊಠಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.