ETV Bharat / entertainment

ಪ್ರಿಯಾಂಕಾ ಪ್ರಿ ಆಸ್ಕರ್​ ಪಾರ್ಟಿಯಲ್ಲಿ ರಾಮ್​ಚರಣ್​ ದಂಪತಿ ಭಾಗಿ

author img

By

Published : Mar 11, 2023, 1:16 PM IST

ಬಾಲಿವುಡ್​ ತಾರೆ ಪ್ರಿಯಾಂಕಾ ಚೋಪ್ರಾ ಆಯೋಜಿಸಿದ್ದ ಸೌತ್​ ಏಷ್ಯನ್​ ಎಕ್ಸಲೆನ್ಸ್​ ಪ್ರಿ ಆಸ್ಕರ್​ ಪಾರ್ಟಿಯಲ್ಲಿ ರಾಮ್​ಚರಣ್​ ದಂಪತಿ ಭಾಗಿಯಾಗಿದ್ದರು.

chopra
ರಾಮ್​ಚರಣ್​ ದಂಪತಿ

ದಕ್ಷಿಣ ಏಷ್ಯಾದ ಆಸ್ಕರ್​ ನಾಮನಿರ್ದೇಶಿತ ತಾರೆಯರಿಗಾಗಿ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಲಾಸ್ ಏಂಜಲೀಸ್‌ನಲ್ಲಿರುವ ತಮ್ಮ ಅತ್ತೆ ಮನೆಯಲ್ಲಿ ವಿಶೇಷ ಪಾರ್ಟಿಯನ್ನು ಆಯೋಜಿಸಿದ್ದರು. ಇದರಲ್ಲಿ ಭಾರತೀಯ ಚಿತ್ರರಂಗದ ಅನೇಕ ತಾರೆಯರು ಭಾಗಿಯಾಗಿದ್ದರು. ದಕ್ಷಿಣ ಚಿತ್ರರಂಗದ ಬ್ಲಾಕ್‌ಬಸ್ಟರ್ ಚಿತ್ರ 'ಆರ್‌ಆರ್‌ಆರ್' ನಟರಾದ ಜೂನಿಯರ್ ಎನ್‌ಟಿಆರ್, ರಾಮ್​ಚರಣ್​, ಬಾಲಿವುಡ್ ನಟಿ ಪ್ರೀತಿ ಜಿಂಟಾ, ಜಾಕ್ವೆಲಿನ್ ಫರ್ನಾಂಡಿಸ್, ಅನೇಕ ದೇಶೀಯ ಮತ್ತು ವಿದೇಶಿ ತಾರೆಯರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರಾಮ್​ಚರಣ್​ ದಂಪತಿ ಪ್ರಿಯಾಂಕಾ ಚೋಪ್ರಾ ಜೊತೆ ಕಾಣಿಸಿಕೊಂಡಿದ್ದಾರೆ. ಆರ್​ಆರ್​ಆರ್​ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ರಾಮ್​ಚರಣ್​ ತಮ್ಮ ಪತ್ನಿ ಉಪಾಸನಾ ಕಾಮಿನೇನಿ ಜೊತೆ ಕಳೆದ ಒಂದು ವಾರದಿಂದ ಅಮೆರಿಕದಲ್ಲಿದ್ದಾರೆ. ಇದೀಗ ರಾಮ್​ಚರಣ್​ ದಂಪತಿ ಪ್ರಿಯಾಂಕಾ ಚೋಪ್ರಾ ಅವರು ಆಯೋಜಿಸಿದ್ದ ಪ್ರಿ ಆಸ್ಕರ್​ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಅವರೊಂದಿಗಿನ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಉಪಾಸನಾ ಕಾಮನೇನಿ, ಪ್ರಿ ಆಸ್ಕರ್​ ಪಾರ್ಟಿ ಆಯೋಜಿಸಿದ್ದಕ್ಕಾಗಿ ಪ್ರಿಯಾಂಕಾ ಚೋಪ್ರಾಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಸಬಾ ಆಜಾದ್ ಜೊತೆ ಹೃತಿಕ್ ರೋಷನ್ ಸುಂದರ ಕ್ಷಣ: ನೆಟ್ಟಿಗರಿಗೆ ನೆನಪಾದ ಕಂಗನಾ ರಣಾವತ್

ಫೋಟೋದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಬಿಳಿ ಬಣ್ಣದ ಡ್ರೆಸ್​ ತೊಟ್ಟಿದ್ದರೆ, ರಾಮ್​ಚರಣ್​ ಕಪ್ಪು ಬಣ್ಣದ ಸೂಟ್​ ಧರಿಸಿ ಸ್ಟೈಲಿಶ್​ ಆಗಿ ಕಾಣುತ್ತಿದ್ದಾರೆ. ಇನ್ನು, ನಟನ ಪತ್ನಿ ಉಪಾಸನಾ ಕಾಮಿನೇನಿ ಬಹುವರ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಜೊತೆಗೆ ರಾಮ್ ಚರಣ್ ಮತ್ತು ಉಪಾಸನಾ ಅವರು ಪ್ರಿಯಾಂಕಾ ಅವರ ಅತ್ತೆಯಂದಿರು ಮತ್ತು ಅವರ ತಾಯಿ ಮಧು ಚೋಪ್ರಾ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಮಧ್ಯೆ ಉಪಾಸನಾ ಮತ್ತು ರಾಮ್ ಚರಣ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2012 ರಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿರಿಸಿದ್ದರು.

ಮಾರ್ಚ್ 12 ರಂದು ಆರ್​ಆರ್​ಆರ್​​ ನಿರ್ದೇಶಕ ಎಸ್‌ಎಸ್ ರಾಜಮೌಳಿ, ಜೂನಿಯರ್ ಎನ್‌ಟಿಆರ್ ಮತ್ತು ತಂಡದೊಂದಿಗೆ ರಾಮ್ ಚರಣ್ ಆಸ್ಕರ್​ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಲಿದ್ದಾರೆ. ಈ ಅದ್ಭುತ ಕ್ಷಣಕ್ಕಾಗಿ ಇಡೀ ದೇಶ ಕಾಯುತ್ತಿದೆ. ಜೊತೆಗೆ ಆರ್​ಆರ್​ಆರ್​ ಸಿನಿಮಾದ ನಾಟು-ನಾಟು ಹಾಡು ಆಸ್ಕರ್‌ನಲ್ಲಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಭಾರತೀಯರ ಚಿತ್ತ ಆರ್​ಆರ್​ಆರ್​ ಸಿನಿಮಾದ ಆಸ್ಕರ್​ ಗೆಲುವಿನತ್ತ ನೆಟ್ಟಿದೆ.

ಇದನ್ನೂ ಓದಿ: ಸಹೋದರಿ ಅನ್ಶುಲಾ ರ‍್ಯಾಂಪ್‌ ವಾಕ್​ಗೆ ಸಹೋದರ ಅರ್ಜುನ್ ಕಪೂರ್ ಹರ್ಷೋದ್ಗಾರ..!

ಪಾರ್ಟಿಯಲ್ಲಿ ಜೂ. ಎನ್​ಟಿಆರ್​ ಭಾಗಿ: ಸೌತ್​ ಏಷ್ಯನ್​ ಪ್ರಿ ಆಸ್ಕರ್​ ಸಮಾರಂಭದಲ್ಲಿ ತೆಲುಗು ಸೂಪರ್​ಸ್ಟಾರ್​ ಜೂನಿಯರ್​ ಎನ್​ಟಿಆರ್​​ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ನಟ ನೀಲಿ ಸೂಟ್​ ಧರಿಸಿ ಡ್ಯಾಪರ್​ ಲುಕ್​ನಲ್ಲಿ ಕಾಣಿಸಿಕೊಂಡರು. ಸೂಪರ್​ಸ್ಟಾರ್​ ತಮ್ಮ ಒಂದು ನೋಟವನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಜೊತೆಗೆ "ಜಸ್ಟ್​..:)" ಎಂಬ ಶೀರ್ಷಿಕೆಯನ್ನು ಹಾಕಿಕೊಂಡಿದ್ದಾರೆ. ಇನ್ನು, ಬಾಲಿವುಡ್​ ನಟಿ ಪ್ರೀತಿ ಜಿಂಟಾ ಕೂಡ ಪ್ರಿ ಆಸ್ಕರ್​ ಸಮಾರಂಭದಲ್ಲಿ ಕಾಣಿಸಿಕೊಂಡರು. ಜೂನಿಯರ್​ ಎನ್​ಟಿಆರ್​ ಜೊತೆ ಫೋಟೋಗೆ ಪೋಸ್​ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.