ETV Bharat / entertainment

ರಾಜಕೀಯಕ್ಕೆ ನಿರ್ಮಾಪಕ ಕೆ ಮಂಜು: ಪದ್ಮನಾಭ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಘೋಷಣೆ

author img

By

Published : Mar 31, 2023, 4:30 PM IST

ನಿರ್ಮಾಪಕ ಕೆ ಮಂಜು ಪದ್ಮನಾಭ ಕ್ಷೇತ್ರದಿಂದ ಕಣಕ್ಕೆ ಇಳಿಯುವುದಾಗಿ ಇಂದು ಬಹಿರಂಗಪಡಿಸಿದ್ದಾರೆ.

producer-k-manju-for-politics-official-in-another-two-days
producer-k-manju-for-politics-official-in-another-two-days

ಬೆಂಗಳೂರು: ರಾಜ್ಯ ಚುನಾವಣೆ ಅಖಾಡ ರಂಗೇರಿರುವಾಗಲೇ ಅನೇಕ ಮಂದಿ ಅದೃಷ್ಟ ಪರೀಕ್ಷೆ ಇಳಿಯುವುದು ಸಾಮಾನ್ಯ. ಇದೀಗ ಆ ಸಾಲಿಗೆ ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕ ಎಂದು ಗುರುತಿಸಿಕೊಂಡಿರುವ ಕೆ ಮಂಜು ಧುಮುಕಲು ಮುಂದಾಗಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣದಿಂದ ಹೆಸರು ಮಾಡಿರುವ ಅವರು ಇದೀಗ ರಾಜ್ಯ ವಿಧಾನಸಭೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುವುದಾಗಿ ಘೋಷಣೆ ಮಾಡಿದ್ದಾರೆ.

ತಮ್ಮ ಮಗ ಶ್ರೇಯಸ್​ ಅವರ ಹೊಸ ಚಿತ್ರ 'ದಿಲ್​ದಾರ್​' ಸಿನಿಮಾ ಮುಹೂರ್ತದ ವೇಳೆ ತಮ್ಮ ರಾಜಕೀಯ ಪ್ರವೇಶ ಕುರಿತು ಮಾತನಾಡಿರುವ ಅವರು, ಈ ಬಾರಿ ಪದ್ಮನಾಭನಗರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಥಿಸುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನು ಪದ್ಮನಾಭನಗರದಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುತ್ತಾರೋ ಅಥವಾ ಯಾವುದಾದರೂ ಪಕ್ಷ ಸೇರ್ಪಡೆ ಆಗಿ ಟೆಕೆಟ್​ ಪಡೆದು ನಿಲುತ್ತಾರಾ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಈ ಬಗ್ಗೆ ಎಲ್ಲಾ ವಿವರಣೆಗಳನ್ನು ಇನ್ನೆರಡು ದಿನದೊಳಗೆ ಪ್ರಕಟಸುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ರಾಜಕೀಯಕ್ಕೆ ಪ್ರವೇಶ ಮಾಡುವ ಸಂಬಂಧ ನಮ್ಮ ನಾಯಕರ ಜೊತೆಗೆ ಮಾತುಕತೆ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುವುದು. ಪದ್ಮನಾಭನಗರದಲ್ಲಿ ಒಕ್ಕಲಿಗ ಮತಗಳು ಹೆಚ್ಚಿದ್ದು, ಜನರ ಆಶೀರ್ವಾದ ಸಿಗಲಿದೆ. ಈ ಹಿನ್ನಲೆ ಆ ಕ್ಷೇತ್ರದಿಂದಲೇ ಕಣಕ್ಕೆ ಇಳಿಯುವುದು ಖಚಿತ ಎಂದಿದ್ದಾರೆ.

ಚಿತ್ರ ನಿರ್ಮಾಣದಿಂದ ದೂರ ಸರಿದಿರುವ ಮಂಜು: ಕೆ ಮಂಜು ಅವರ ಮಗ ಶ್ರೇಯಸ್​ ಈಗಾಗಲೇ ನಟನಾಗಿ ಗುರುತಿಸಿಕೊಂಡಿದ್ದಾರೆ. ಮಗ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಬೆನ್ನಲ್ಲೇ ನಿರ್ಮಾಣದಿಂದ ಕೊಂಚ ಅಂತರ ಕಾಯ್ದುಕೊಂಡಿರುವ ಕೆ ಮಂಜು, ನಾವು ಜನ ಸೇವೆ ಮಾಡುವ ಹಂಬಲ ಹೊಂದಿರುವುದಾಗಿ ತಿಳಿಸಿದ್ದಾರೆ.

ಪದ್ಮನಾಭ ಕ್ಷೇತ್ರದ ನೋಟ: ಒಕ್ಕಲಿಗ ಮತಗಳು ಹೆಚ್ಚಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್​ಗಿಂತ ಜೆಡಿಎಸ್​ ಬಲ ಹೆಚ್ಚಿದ್ದು, ಕೆ ಮಂಜು ಈ ಎರಡು ಪಕ್ಷದಲ್ಲಿ ಯಾವುದರಿಂದ ಕಣ್ಣಕ್ಕೆ ಇಳಿಯುತ್ತಾರೊ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಕ್ಷೇತ್ರದವರ ರಾಜಕೀಯ: ಸಿನಿಮಾ ಮಂದಿ ರಾಜಕೀಯ ಪ್ರವೇಶ ಮಾಡಿ ಈಗಾಗಲೇ ಯಶಸ್ಸು ಕಂಡವರಿದ್ದಾರೆ. ಮುನಿರತ್ನ ಕೂಡ ಈ ಹಿಂದೆ ಸಿನಿಮಾ ನಿರ್ಮಾಪಕ ಆಗಿದ್ದು, ಇದೀಗ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ಎ ಟಿ ರಾಮಸ್ವಾಮಿ ರಾಜೀನಾಮೆ... ಜೆಡಿಎಸ್​ಗೂ ಗುಡ್​ ಬೈ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.