ಪತಿ ನಿಕ್​ಗೆ ಚುಂಬಿಸಿದ ನಟಿ ಪ್ರಿಯಾಂಕಾ ಚೋಪ್ರಾ: ವಿಡಿಯೋ ವೈರಲ್​

author img

By

Published : Aug 6, 2022, 1:31 PM IST

priyanka-chopra

ಪ್ರಿಯಾಂಕಾರ 40ನೇ ಹುಟ್ಟುಹಬ್ಬದ ದಿನದ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ನಿಕ್​ಗೆ ಚುಂಬಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹೈದರಾಬಾದ್ (ತೆಲಂಗಾಣ): ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್​ ಹಾಟ್ ಪೇರ್​ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಜೋಡಿ ಸಾರ್ವಜನಿಕವಾಗಿ ಕಿಸ್​ ಮಾಡುವ ಮೂಲಕ ಸುದ್ದಿಯಾಗುವುದು ಸಹಜ. ಇದೀಗ ಮತ್ತೆ ಕಿಸ್​ ಮಾಡಿದ್ದು ವಿಡಿಯೋ ವೈರಲ್​ ಆಗಿದೆ.

ಜುಲೈ 19 ರಂದು ಪ್ರಿಯಾಂಕಾರ 40ನೇ ಹುಟ್ಟುಹಬ್ಬದ ದಿನದ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ನಿಕ್​ಗೆ ಚುಂಬಿಸಿದ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದರು. ಇದೀಗ ವಿಡಿಯೋ ಸದ್ದು ಮಾಡುತ್ತಿದೆ.

ವೈರಲ್ ವಿಡಿಯೋದಲ್ಲಿ ಪ್ರಿಯಾಂಕಾ ಮತ್ತು ನಿಕ್ ಪರಸ್ಪರ ಚುಂಬಿಸಿದ್ದಾರೆ. ನೇರಳೆ ಬಣ್ಣದ ಉಡುಪಿನಲ್ಲಿ ಮಿನುಗುತ್ತಿರುವ ಪ್ರಿಯಾಂಕಾ ಸಮುದ್ರತೀರದಲ್ಲಿ ಬರಿಗಾಲಿನಲ್ಲಿ ನಡೆದಾಡುತ್ತಿರುವುದು ಕಾಣಬಹುದು. ಬಳಿಕ ಪಿಂಕಿ ಅವರ ತಾಯಿ ಮಧು ಚೋಪ್ರಾ ಅವರ ಜೊತೆ ಡ್ಯಾನ್ಸ್​ ಮಾಡುತ್ತಿರುವುದೂ ವಿಡಿಯೋದಲ್ಲಿದೆ.

ಪ್ರಿಯಾಂಕಾ ಜನ್ಮದಿನದ ಸಂಭ್ರಮವನ್ನು ಮೆಕ್ಸಿಕೋದಲ್ಲಿ ಆತ್ಮೀಯರೊಂದಿಗೆ ಅದ್ಧೂರಿಯಾಗಿ ಆಚರಿಸಲಾಯಿತು. ತನ್ನ ಜನ್ಮದಿನವನ್ನು ಅವಿಸ್ಮರಣೀಯವಾಗಿಸಿದ್ದಕ್ಕೆ ಪ್ರಿಯಾಂಕಾ ನಿಕ್​ಗೆ ಧನ್ಯವಾದ ಹೇಳಿದ್ದರು.

ಓದಿ: ತಮ್ಮ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡ ದೀಪಿಕಾ ಪಡುಕೋಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.