ETV Bharat / entertainment

ಮುದ್ದಾದ ಮಗಳ ಫೋಟೋ ಹಂಚಿಕೊಂಡ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ

author img

By

Published : Aug 11, 2022, 1:24 PM IST

ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಅವರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Priyanka Chopra shared her daughter Malti Marie Chopra Jonas picture
ಮುದ್ದಾದ ಮಗಳ ಫೋಟೋ ಹಂಚಿಕೊಂಡ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ದಂಪತಿ ತಮ್ಮ ಮುದ್ದಾದ ಮಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ.

ಬಾಲಿವುಡ್‌ನ 'ದೇಸಿ ಗರ್ಲ್', ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ಕೊನೆಗೂ ತಮ್ಮ ಅಭಿಮಾನಿಗಳ ಕಾಯುವಿಕೆಯನ್ನು ಕೊನೆಗೊಳಿಸಿದ್ದಾರೆ. ನಟಿ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಚಿತ್ರವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮೊಗದಲ್ಲಿ ನಗು ತರಿಸುವ ಕೆಲಸವನ್ನು ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಮಗಳನ್ನು ನೋಡಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

ರಕ್ಷಾ ಬಂಧನದ ಈ ಶುಭ ಸಂದರ್ಭದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಹಂಚಿಕೊಂಡಿರುವ ಮಗಳ ಫೋಟೋ ನಿಜವಾಗಿಯೂ ತುಂಬಾ ಸುಂದರವಾಗಿದೆ. ಈ ಚಿತ್ರದಲ್ಲಿ ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಬಿಳಿ ಟೀ ಶರ್ಟ್‌ನಲ್ಲಿ ಕುಳಿತಿದ್ದಾಳೆ. ಬಾಲಿವುಡ್​ನಲ್ಲಿ ಪ್ರಿಯಾಂಕಾ ಚೋಪ್ರಾ ದೇಸಿ ಗರ್ಲ್ ಎಂದು ಹೆಸರು ಪಡೆದಿದ್ದು, ಈಗ ಮಗಳನ್ನು 'ದೇಸಿ ಗರ್ಲ್' ಎಂದೇ ಪರಿಗಣಿಸಿದ್ದಾರೆ.

ಇದನ್ನೂ ಓದಿ: ಕಾಫಿ ವಿತ್​ ಕರಣ್​ 7: ಅರ್ಜುನ್, ಮಲೈಕಾ ಮದುವೆಯಾಗ್ತಾರಾ.. ಮದುವೆಯ ಯೋಜನೆ ಬಗ್ಗೆ ಕಪೂರ್​ ಹೇಳಿದ್ದೇನು?

ಮಾಲ್ತಿಯ ಟೀ ಶರ್ಟ್ ಮೇಲೆ 'ದೇಸಿ ಗರ್ಲ್' ಎಂದು ಬರೆಯಲಾಗಿದೆ. ಈ ಚಿತ್ರವನ್ನು ಹಂಚಿಕೊಂಡಿರುವ ಪ್ರಿಯಾಂಕಾ ಚೋಪ್ರಾ 'ದೇಸಿ ಗರ್ಲ್' ಎಂಬ ಶೀರ್ಷಿಕೆಯನ್ನು ಕೂಡ ಬರೆದಿದ್ದಾರೆ. ಈ ಚಿತ್ರದಲ್ಲಿ ಮಾಲ್ತಿಯ ಮುಖ ಅರ್ಧದಷ್ಟು ಗೋಚರಿಸುತ್ತದೆ. ಪುಟ್ಟ ಮಗುವಿನ ಈ ಫೋಟೋ ಸಖತ್ ಕ್ಯೂಟ್ ಆಗಿದೆ ನೋಡಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.