ETV Bharat / entertainment

ಮೇಕಪ್ ಬ್ರಷ್‌ ಹಿಡಿದು ಮಗಳೊಂದಿಗೆ ಆಟವಾಡಿದ ಗ್ಲೋಬಲ್ ಐಕಾನ್​ ಪ್ರಿಯಾಂಕಾ ಚೋಪ್ರಾ

author img

By

Published : Mar 28, 2023, 1:21 PM IST

ನಟಿ ​ಪ್ರಿಯಾಂಕಾ ಚೋಪ್ರಾ ತಮ್ಮ ಇನ್​ಸ್ಟಾ ಪೇಜ್​ನಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ.

Priyanka Chopra with daughter malti marie
ಪ್ರಿಯಾಂಕಾ ಚೋಪ್ರಾ ಮಗಳು ಮಾಲ್ತಿ ಮೇರಿ

ಹಿಂದಿ ಸಿನಿಮಾಗಳಲ್ಲಿ ವೃತ್ತಿ ಜೀವನ ಆರಂಭಿಸಿ ಗ್ಲೋಬಲ್​​ ಐಕಾನ್ ಆಗಿ ಹೊರಹೊಮ್ಮಿರುವ​​ ಪ್ರಿಯಾಂಕಾ ಚೋಪ್ರಾ ಪ್ರತಿಭಾನ್ವಿತ ನಟಿ ಮಾತ್ರವಲ್ಲದೇ, ತಾಯ್ತನದ ಕರ್ತವ್ಯವನ್ನೂ ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಆಗಾಗ್ಗೆ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ಪ್ರಿಯಾಂಕಾ ಅವರು ಪುತ್ರಿ ಜೊತೆಗಿನ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮಗಳು ಮಾಲ್ತಿ ಮತ್ತು ತಾಯಿ ಚೋಪ್ರಾ ಮೇಕಪ್ ಬ್ರಷ್‌ನೊಂದಿಗೆ ಆಡುತ್ತಿರುವುದನ್ನು ಕಾಣಬಹುದು.

ಈ ಫೋಟೋ ಲಂಡನ್​ನಿಂದ ಬಂದಿದೆ. ಫೋಟೋಗೆ 'ಗ್ಲಾಮ್ ವಿತ್ ಮಮ್ಮಾ , ಎಂಎಂ' ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ. ಮೆಚ್ಚಿನ ನಟಿ ಪ್ರಿಯಾಂಕಾ ಮತ್ತು ಮಾಲ್ತಿ ಮೇಲೆ ಅಭಿಮಾನಿಗಳು ಇನ್‌ಸ್ಟಾಗ್ರಾಮ್ ಕಾಮೆಂಟ್​ ಸೆಕ್ಷನ್​ನಲ್ಲಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಕಾಮೆಂಟ್​ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್​ ಅಗಿ ಸದ್ದು ಮಾಡುತ್ತಿದೆ.

ಪ್ರಿಯಾಂಕಾ ಅವರು ಕೆಲ ದಿನಗಳ ಹಿಂದೆ ಮಗಳೊಂದಿಗಿನ ಫೋಟೋವನ್ನು 'ಬೆಡ್‌ ಟೈಮ್ ಸ್ಟೋರಿ' ಎಂಬ ಶೀರ್ಷಿಕೆಯೊಂದಿಗೆ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಮಾಲ್ತಿ ಹಾಸಿಗೆಯ ಮೇಲೆ ಆರಾಮವಾಗಿ ಮತ್ತು ಮುದ್ದಾಗಿ ಮಲಗಿರುವ ಫೋಟೋ ಇದಾಗಿತ್ತು. ಈ ಫೋಟೋ ಕೂಡ ವೈರಲ್​ ಆಗಿತ್ತು.

ಪ್ರಿಯಾಂಕಾ ಅವರು ಕೆಲ ದಿನಗಳವರೆಗೆ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಫೋಟೋಗಳನ್ನು ಸಂಪೂರ್ಣವಾಗಿ ತೋರಿಸಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕೆಲ ಫೋಟೋ ಹಂಚಿಕೊಂಡರಾದರೂ ಮಗಳ ಫೋಟೋವನ್ನು ಸಂಪೂರ್ಣವಾಗಿ ತೋರಿಸಿರಲಿಲ್ಲ. ಆದ್ರೆ ಜನವರಿ 30ರಂದು ಕ್ಯಾಲಿಫೋರ್ನಿಯಾದಲ್ಲಿ ನಡೆದ ದಿ ಜೋನಸ್ ಬ್ರದರ್ಸ್ ಅವರನ್ನು ಗೌರವಿಸುವ ಹಾಲಿವುಡ್ ವಾಕ್ ಆಫ್ ಫೇಮ್ ಸ್ಟಾರ್ ಸಮಾರಂಭದಲ್ಲಿ ಮಾಲ್ತಿ ಕಂಡುಬಂದಿದ್ದು, ಅಂದು ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಅದವು. ಜೋನಾಸ್ ಸಹೋದರರು ಸಮಾರಂಭದ ಸ್ಟೇಜ್​ನಲ್ಲಿ ಇದ್ದ ವೇಳೆ ಪ್ರಿಯಾಂಕಾ ತಮ್ಮ ಮಗಳೊಂದಿಗೆ ಮೊದಲ ಸಾಲಿನಲ್ಲಿ ಕುಳಿತು ಅವರನ್ನು ಹುರಿದುಂಬಿಸಿದ್ದರು.

ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್ ಗಾಯಕ ನಿಕ್ ಜೋನಾಸ್ 2018ರ ಡಿಸೆಂಬರ್ 1 ಮತ್ತು 2ರಂದು ಜೋಧ್‌ಪುರದ ಉಮೈದ್ ಭವನ್ ಅರಮನೆಯಲ್ಲಿ ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯದ ಪ್ರಕಾರ ಅದ್ಧೂರಿ ವಿವಾಹ ಆದರು. ಕಳೆದ ವರ್ಷ ಜನವರಿ 15ರಂದು ಬಾಡಿಗೆ ತಾಯ್ತನದ ಮೂಲಕ ತಮ್ಮ ಮಗಳನ್ನು ಸ್ವಾಗತಿಸಿದರು.

ಇದನ್ನೂ ಓದಿ: ಲಿಖಿತ್​ ಶೆಟ್ಟಿ ನಿರ್ಮಿಸಿ ನಟಿಸುತ್ತಿರುವ 'ಫುಲ್​ ಮೀಲ್ಸ್​' ಪೋಸ್ಟರ್ ಬಿಡುಗಡೆ

ಪ್ರಿಯಾಂಕಾ ಚೋಪ್ರಾ ಅವರ ಮುಂದಿನ ಸಿನಿಮಾ ಗಮನಿಸುವುದಾದರೆ, ಸಿಟಾಡೆಲ್ ಸೀರಿಸ್​ ಮೂಲಕ ಸದ್ದು ಮಾಡುತ್ತಿದ್ದಾರೆ. ಆ್ಯಕ್ಷನ್​ ಸೀರಿಸ್​ನ ಮೊದಲ ಎಪಿಸೋಡ್​​ ಪ್ರೈಮ್ ವಿಡಿಯೋದಲ್ಲಿ ಏಪ್ರಿಲ್ 28 ರಂದು ಪ್ರಸಾರ ಆಗಲಿದೆ. ಮೇ 26 ರವರೆಗೆ ಪ್ರತೀ ಶುಕ್ರವಾರ ಹೊಸ ಸಂಚಿಕೆಯನ್ನು ರಿಲೀಸ್​ ಮಾಡಲಾಗುವುದು. ​​ರುಸ್ಸೋ ಬ್ರದರ್ಸ್‌ನ ಎಜಿಬಿಒ ಬ್ಯಾನರ್‌ನಿಂದ ರೆಡಿ ಆಗಿದ್ದು, ಕಥೆಯು ಪ್ರಪಂಚದಾದ್ಯಂತದ ರಹಸ್ಯ ಸಂಸ್ಥೆ ಸಿಟಾಡೆಲ್‌ನ ಇಬ್ಬರು ಗಣ್ಯ ಏಜೆಂಟ್‌ಗಳಾದ ಮೇಸನ್ ಕೇನ್ (ರಿಚರ್ಡ್ ಮ್ಯಾಡೆನ್) ಮತ್ತು ನಾಡಿಯಾ ಸಿನ್ಹ್ (ಪ್ರಿಯಾಂಕಾ) ಸುತ್ತ ಕೇಂದ್ರೀಕೃತವಾಗಿದೆ. ಫಸ್ಟ್ ಲುಕ್​, ಪೋಸ್ಟರ್​ಗಳು ಮತ್ತು ಟ್ರೇಲರ್​ನಿಂದಲೇ ಈಗಾಗಲೇ ಸಖತ್ ಸದ್ದು ಮಾಡಿರುವ ಈ ಸೀರಿಸ್​ ವೀಕ್ಷಣೆಗೆ ಅಭಿಮಾನಿಗಳು ಕಾತರರಾಗಿದ್ದಾರೆ. ಸಿಟಾಡೆಲ್ ಅಲ್ಲದೇ ಫರ್ಹಾನ್​ ಅಖ್ತರ್ ಅವರ ಜೀ ಲೇ ಜರಾ ಚಿತ್ರದಲ್ಲಿಯೂ ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: 'ಕಾಂತಾರ'ಗೆ ಮತ್ತೆರಡು ಗರಿ: 'ಗೇಮ್​ ಚೇಂಜರ್​' ರಿಷಬ್​, 'ರೈಸಿಂಗ್​ ಸ್ಟಾರ್' ಸಪ್ತಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.