ETV Bharat / entertainment

ಮುಖಕ್ಕೆ ಗಾಯಗಳಾದ ಫೋಟೋ ಶೇರ್ ಮಾಡಿದ ನಟಿ ಪ್ರಿಯಾಂಕಾ ಚೋಪ್ರಾ!

author img

By

Published : May 18, 2022, 3:19 PM IST

ಅಮೆರಿಕದ 'ಸಿಟಾಡೆಲ್‌' ಟಿವಿ ಶೋನ ಚಿತ್ರೀಕರಣದಲ್ಲಿ ತೊಡಗಿರುವ ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಮ್​ನಲ್ಲಿ ಮುಖಕ್ಕೆ ಗಾಯಗಳಾದ ಫೋಟೋ ಶೇರ್​ ಮಾಡಿದ್ದಾರೆ.

Priyanka chopra
ಬಾಲಿವುಡ್​​ ನಟಿ ಪ್ರಿಯಾಂಕಾ ಚೋಪ್ರಾ

ಬಾಲಿವುಡ್​​ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮುಖದಲ್ಲಿ ಗಾಯಗಳಾದ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ಧಾರೆ. ಅನೇಕ ಫಾಲೋವರ್ಸ್​ ಪ್ರಿಯಾಂಕಾ ಫೋಟೋ ನೋಡಿ ಗಾಬರಿಗೊಂಡು ಯೋಗಕ್ಷೇಮ ವಿಚಾರಿಸಿದ್ದಾರೆ.

ಅಮೆರಿಕದ 'ಸಿಟಾಡೆಲ್‌' ಟಿವಿ ಶೋನ ಚಿತ್ರೀಕರಣದಲ್ಲಿ ತೊಡಗಿರುವ ಪ್ರಿಯಾಂಕಾ ಚೋಪ್ರಾ, ಮುಖದ ಮೇಲೆ ಏಟುಗಳು ಬಿದ್ದಿರುವುದು ಮತ್ತು ರಕ್ತದ ಕಲೆ ಇರುವ ಫೋಟೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ. ಈ ಫೋಟೋದಲ್ಲಿ ಪ್ರಿಯಾಂಕಾ ಮುಖಕ್ಕೆ ಗಾಯವಾಗಿರುವಂತೆ ಕಾಣುತ್ತಿದೆ. ಆದ್ದರಿಂದ ಹಲವು ಅಭಿಮಾನಿಗಳು ನಟಿ ವೃತ್ತಿ ಬದ್ಧತೆಯನ್ನು ಹೊಗಳಿದರೆ, ಕೆಲವರು ಏನಾಗಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮುಖಕ್ಕೆ ಗಾಯಗಳಾದ ಫೋಟೋ ಶೇರ್ ಮಾಡಿದ ನಟಿ ಪ್ರಿಯಾಂಕಾ ಚೋಪ್ರಾ
ಮುಖಕ್ಕೆ ಗಾಯಗಳಾದ ಫೋಟೋ ಶೇರ್ ಮಾಡಿದ ನಟಿ ಪ್ರಿಯಾಂಕಾ ಚೋಪ್ರಾ

'ಸಿಟಾಡೆಲ್' ಶೋನಲ್ಲಿ ನಟ ರಿಚರ್ಡ್ ಮ್ಯಾಡೆನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಯಾವಾಗ ಪ್ರಸಾರವಾಗುತ್ತದೆ ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ. ಅಲ್ಲದೇ, ಬಾಲಿವುಡ್ ಚಿತ್ರ 'ಜೀ ಲೇ ಜರಾ'ದಲ್ಲೂ ಪ್ರಿಯಾಂಕಾ ನಟಿಸಿದ್ದು, ಇದರಲ್ಲಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ಧಾರೆ.

ಇದನ್ನೂ ಓದಿ: 'ಆ ಯೋಗ್ಯತೆ ಬಾಲಿವುಡ್‌ನಲ್ಲಿ ಯಾರಿಗೂ ಇಲ್ಲ'; ಏನಿದು ಕಂಗನಾ ಹೊಸ ವಿವಾದ​?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.