ETV Bharat / entertainment

'ಜೂನಿ' ಕ್ಯಾರೆಕ್ಟರ್ ಟೀಸರ್ ಅನಾವರಣ; ಚೆಫ್ ಆದ ಪೃಥ್ವಿ ಅಂಬಾರ್

author img

By ETV Bharat Karnataka Team

Published : Jan 10, 2024, 7:52 AM IST

Juni Character Teaser: ನಟ ಪೃಥ್ವಿ ಅಂಬಾರ್ ಅಭಿನಯದ 'ಜೂನಿ' ಚಿತ್ರದ ಕ್ಯಾರೆಕ್ಟರ್ ಟೀಸರ್ ರಿಲೀಸ್​ ಆಗಿದೆ.

prithvi-ambar-starrer-juni-movie-character-teaser-released
'ಜೂನಿ' ಕ್ಯಾರೆಕ್ಟರ್ ಟೀಸರ್ ಅನಾವರಣ; ಚೆಫ್ ಆದ ಪೃಥ್ವಿ ಅಂಬಾರ್

'ದಿಯಾ' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಜನಮನ ಸೆಳೆದ ನಟ ಪೃಥ್ವಿ ಅಂಬಾರ್. ವಿಭಿನ್ನ ಕಥೆ ಹಾಗೂ ಡಿಫ್ರೆಂಟ್ ಮ್ಯಾನರಿಸಂನಿಂದ ಕನ್ನಡಿಗರ ಮನಸ್ಸು ಕದ್ದಿರುವ ಪೃಥ್ವಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಸದಾ ಲವರ್ ಬಾಯ್ ಆಗಿ ಮಿಂಚುವ ಪೃಥ್ವಿ, ಈಗ ಅಂತಹದ್ದೇ ಪ್ರೇಮಕಥೆಯನ್ನು ಒಳಗೊಂಡ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರಕ್ಕೆ 'ಜೂನಿ' ಅಂತಾ ಟೈಟಲ್ ಇಟ್ಟಿದ್ದು, ಅದರ ಕ್ಯಾರೆಕ್ಟರ್ ಟೀಸರ್ ಅನಾವರಣಗೊಂಡಿದೆ. ಜೂನಿ ಕ್ಯಾರೆಕ್ಟರ್ ಟೀಸರ್ ದಿಯಾ ಸಿನಿಮಾ ಫ್ಲೇವರ್ ಕೊಡುತ್ತಿದೆ. ಚೆಫ್ ಅವತಾರದಲ್ಲಿ ಪೃಥ್ವಿ ಕಾಣಿಸಿಕೊಂಡಿದ್ದು, ಸದ್ಯ ರಿವೀಲ್ ಆಗಿರುವ ಪೋಸ್ಟರ್ ಗಮನ ಸೆಳೆಯುತ್ತಿದೆ.

ಜನ್ನಿ ಎಂಬ ಕಿರುಚಿತ್ರ ನಿರ್ದೇಶಿಸಿದ್ದ ವೈಭವ್ ಮಹಾದೇವ್ ಜೂನಿ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಪ್ರಾಗ್ ಫಿಲ್ಮ್ ಸ್ಕೂಲ್​ನಲ್ಲಿ ನಿರ್ದೇಶಕರ ಕೋರ್ಸ್ ಮುಗಿಸಿರುವ ಅವರೀಗ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಭಿನ್ನ ಟೈಟಲ್​ನ ಜೂನಿ ಸಿನಿಮಾದಲ್ಲಿ ನಾಯಕಿಯಾಗಿ ರಿಷಿಕಾ ನಾಯಕ್ ತೆರೆ ಹಂಚಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಜೂನಿ ರೋಮ್ಯಾಂಟಿಕ್ ಕಥಾಹಂದರದ ಸಿನಿಮಾ. ದಿಯಾ ಬಳಿಕ ಪೃಥ್ವಿ ಮತ್ತೊಮ್ಮೆ ಪ್ರೇಮಕಥೆಗೆ ಬಣ್ಣ ಹಚ್ಚಿದ್ದಾರೆ. ಯಾರ ಮೇಲೆ ಪ್ರೀತಿ ಹುಟ್ಟುತ್ತೋ ಅವರ ಮೇಲೆಯೇ ಪ್ರೀತಿ ಆಗುತ್ತಾ? ಎಂಬ ಕಥೆಯ ಎಳೆ ಇಟ್ಕೊಂಡು ಚಿತ್ರ ಹೆಣೆಯಲಾಗಿದೆ. ತ್ರಿಶೂಲ ಕ್ರಿಯೇಷನ್ ಅಡಿ ಮೋಹನ್ ಕುಮಾರ್ ಎಸ್. ಹಣ ಹೂಡಿಕೆ ಮಾಡಿದ್ದು, ಶ್ರೇಯಸ್ ವೈ. ಎಸ್. ಸಹ ನಿರ್ಮಾಪಕನ ಜವಾಬ್ದಾರಿ ಹೊತ್ತಿದ್ದಾರೆ.

ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಶಾಂಕ್ ನಾರಾಯಣ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಅಜಿನ್ ಬಿ., ಜಿತಿನ್ ದಾಸ್ ಛಾಯಾಗ್ರಹಣವಿದ್ದು, ನವೀನ್ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮುಗಿಸಿರುವ ಜೂನಿ ಚಿತ್ರ ಫೆಬ್ರವರಿ 9 ಕ್ಕೆ ತೆರೆಗೆ ಬರುತ್ತಿದೆ.

ಇದನ್ನೂ ಓದಿ: ಬಹು ನಿರೀಕ್ಷಿತ ಮ್ಯಾಕ್ಸ್ ಚಿತ್ರದಲ್ಲಿ ಕಿಚ್ಚನ ಪಾತ್ರ ರಿವೀಲ್.. ಫಿದಾ ಆದ ಫ್ಯಾನ್ಸ್ !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.