ETV Bharat / entertainment

Salaar Teaser: ಪ್ರಭಾಸ್‌ ಅಭಿನಯದ ಸಲಾರ್ ಸಿನಿಮಾ ಟೀಸರ್ ರಿಲೀಸ್‌; ಕೆಜಿಎಫ್‌ಗೆ ಹೋಲಿಸಿದ ಫ್ಯಾನ್ಸ್‌!

author img

By

Published : Jul 6, 2023, 8:32 AM IST

Salaar Teaser: ಪ್ರಶಾಂತ್ ನೀಲ್ ನಿರ್ದೇಶನ, ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಟೀಸರ್ ರಿಲೀಸ್ ಆಗಿದೆ.

Etv Bharat ಸಲಾರ್ ಚಿತ್ರ
Etv Bharat ಸಲಾರ್ ಚಿತ್ರ

ಬಹುನಿರೀಕ್ಷಿತ ಸಲಾರ್ ಚಿತ್ರದ ಅದ್ಧೂರಿ ಟೀಸರ್ ಇಂದು ಬೆಳಗ್ಗೆ 5.12ಕ್ಕೆ ರಿಲೀಸ್ ಆಗಿದೆ. ಹೊಂಬಾಳೆ ನಿರ್ಮಾಣದಲ್ಲಿ, ಕೆಜಿಎಫ್ ರೂವಾರಿ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅಭಿನಯಿಸಿರುವ ಸಿನಿಮಾದ ಟೀಸರ್ ಅದ್ಧೂರಿಯಾಗಿದೆ. ಸಲಾರ್ ಚಿತ್ರ ಎರಡು ಭಾಗಗಳಲ್ಲಿ ರಿಲೀಸ್ ಆಗಲಿದೆ ಎಂಬುದನ್ನೂ ಕೂಡ ಚಿತ್ರ ತಂಡ ಖಚಿತಪಡಿಸಿದೆ.

  • " class="align-text-top noRightClick twitterSection" data="">

ಸೆಪ್ಟಂಬರ್ 28ರಂದು ಸಲಾರ್ ಚಿತ್ರ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಟೀಸರ್ ರಿಲೀಸ್ ಬಳಿಕ ಚಿತ್ರದ ಮೇಲಿನ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಉಗ್ರಂ ಹಾಗೂ ಕೆಜಿಎಫ್ 1 ಹಾಗೂ ಕೆಜಿಎಫ್ 2 ಚಿತ್ರದ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ಪ್ರಶಾಂತ್ ನೀಲ್ ಬೇಡಿಕೆಯಲ್ಲಿರುವ ಡೈರೆಕ್ಟರ್. ಕೆಜಿಎಫ್ ಚಿತ್ರ ವಿಶ್ವದಾದ್ಯಂತ ಭಾರಿ ಗಳಿಕೆ ಕಂಡ ಹಿನ್ನೆಲೆಯಲ್ಲಿ ಸಲಾರ್ ಮೇಲೆ ಸಿನಿಮಾ ರಸಿಕರ ಕಣ್ಣು ನೆಟ್ಟಿದೆ. ಸಲಾರ್ ಹೇಗೆ ಮೂಡಿಬಂದಿರಬಹುದು ಎಂಬುದಕ್ಕೆ ಸದ್ಯದ ಟೀಸರ್ ಒಂದು ಸಣ್ಣ ಝಲಕ್ ನೀಡಿದೆ.

ಸದ್ಯ ರಿಲೀಸ್ ಆಗಿರುವ ಟೀಸರ್​ ನೋಡಿದಾಗ ಕೆಜಿಎಫ್, ಉಗ್ರಂ ರೀತಿಯೇ ಮಾಸ್ ದೃಶ್ಯಗಳಿರುವುದು ಪಕ್ಕಾ ಆಗಿದೆ. ಇದಕ್ಕೂ ಮೊದಲು ಅನಾವರಣಗೊಂಡಿರುವ ಪೋಸ್ಟರ್​​ನಲ್ಲಿ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಎಕೆ-47 ಗನ್ ಹಿಡಿದುಕೊಂಡು ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಅತ್ಯಂತ ಹಿಂಸಾತ್ಮಕ ಮನುಷ್ಯ, ಆತ ಒಬ್ಬನೇ, ಆದರೆ ಆತ ಬಹಳ ವೈಲೆಂಟ್ ಅಂತಾ ಬರೆಯಲಾಗಿತ್ತು. ಇದರಿಂದಾಗಿ ಚಿತ್ರ ಸಿಕ್ಕಾಪಟ್ಟೆ ಮಾಸ್ ಆಗಿರುತ್ತೆ ಎಂಬ ಸುಳಿವು ಸಿಕ್ಕಿತ್ತು.

ಸಲಾರ್ ಚಿತ್ರ
ಸಲಾರ್ ಚಿತ್ರ

ಕಳೆದ ವರ್ಷ ಭಾರತೀಯ ಚಿತ್ರರಂಗಕ್ಕೆ ‘ಕೆಜಿಎಫ್ 2’ ಮತ್ತು ‘ಕಾಂತಾರ’ ಎಂಬ ಎರಡು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದಂತಹ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್, ‘ಸಲಾರ್’ ಚಿತ್ರವನ್ನು ನಿರ್ಮಿಸಿದೆ. ಕಳೆದ ಎರಡು ವರ್ಷಗಳಿಂದ ಚಿತ್ರತಂಡದವರು ಚಿತ್ರೀಕರಣ ಮಾಡುತ್ತಿದ್ದರೂ, ಚಿತ್ರದ ಬಗ್ಗೆ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ಹಾಗಾಗಿ, ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆ ಇನ್ನಷ್ಟು ಹೆಚ್ಚಾಗಿತ್ತು.

ಸಲಾರ್ ಚಿತ್ರ
ಸಲಾರ್ ಚಿತ್ರ

‘ಸಲಾರ್’ ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಪ್ರಮೋದ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕನ್ನಡದ ಭುವನ್ ಗೌಡ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತವಿದೆ. ವರ್ಷದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ಸೆಪ್ಟೆಂಬರ್ 28ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಸಿನಿಪ್ರಿಯರಿಗೆ ಗುಡ್​ನ್ಯೂಸ್: ಪ್ರಶಾಂತ್ ನೀಲ್ - ಪ್ರಭಾಸ್ ಕಾಂಬೋದಲ್ಲಿ ಮತ್ತೊಂದು ಸಿನಿಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.