ETV Bharat / entertainment

ಕರಾಚಿ ಟು ನೋಯ್ಡಾ: ಸೀಮಾ ಹೈದರ್ ಮತ್ತು ಸಚಿನ್ ಲವ್ ಸ್ಟೋರಿ ಕುರಿತಾದ ಚಿತ್ರದ ಪೋಸ್ಟರ್ ಬಿಡುಗಡೆ

author img

By

Published : Aug 10, 2023, 8:46 AM IST

ಭಾರತದ ಯುವಕನಿಗಾಗಿ ಪಾಕಿಸ್ತಾನದಿಂದ ಅಕ್ರಮವಾಗಿ ದೇಶ ಪ್ರವೇಶಿಸಿರುವ ಸೀಮಾ ಹೈದರ್ ಮತ್ತು ಸಚಿನ್ ಪ್ರೇಮಕಥೆ ಮೇಲೆ ಚಿತ್ರವೊಂದು ತಯಾರಾಗುತ್ತಿದೆ. ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.

karachi to noida
ಕರಾಚಿ ಟು ನೋಯ್ಡಾ

ಮೀರತ್ ( ಉತ್ತರಪ್ರದೇಶ): ಸೀಮಾ ಹೈದರ್ ಮತ್ತು ಸಚಿನ್ ಪ್ರೇಮಕಥೆ ಆಧರಿಸಿದ ಚಲನಚಿತ್ರವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಈ ಬಗ್ಗೆ ನಿರ್ಮಾಪಕ ಹಾಗೂ ನಿರ್ದೇಶಕ ಅಮಿತ್ ಜಾನಿ ಈ ಹಿಂದೆಯೇ ಘೋಷಿಸಿದ್ದರು. ಇದೀಗ, ಚಿತ್ರದ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. ಸೀಮಾ ಹೈದರ್ ಪಾತ್ರಕ್ಕೆ ನಟಿ ಆಯ್ಕೆ ಮಾಡಲಾಗಿದ್ದು, ಸಚಿನ್ ಪಾತ್ರಕ್ಕಾಗಿ ಆಡಿಷನ್ ನಡೆಯುತ್ತಿದೆ.

ಚಿತ್ರದ ಹೆಸರನ್ನು ಜಾನಿ ಫೈರ್ ಫಾಕ್ಸ್ ಫಿಲ್ಮ್ ಪ್ರೊಡಕ್ಷನ್ ನಿರ್ಧರಿಸಿದೆ ಎಂದು ಚಿತ್ರದ ನಿರ್ಮಾಪಕ ನಿರ್ದೇಶಕ ಅಮಿತ್ ಜಾನಿ ತಿಳಿಸಿದ್ದಾರೆ. 'ಕರಾಚಿ ಟು ನೋಯ್ಡಾ' ಎಂಬ ಶೀರ್ಷಿಕೆ ಆಯ್ಕೆ ಮಾಡಲಾಗಿದ್ದು, ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯಕ್ಕೆ ಕರಾಚಿ ಟು ನೋಯ್ಡಾ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಸಚಿನ್ ಹೊರತಾಗಿ ಭಾರತದಿಂದ ಪಾಕಿಸ್ತಾನಕ್ಕೆ ಹೋದ ಅಂಜು ಅವರ ಕಥೆಯನ್ನು ಸಹ ಸಿನಿಮಾ ಮಾಡಲಾಗುವುದು ಎಂದು ಅವರು ಹೇಳಿದರು.

ಮೂರು ಚಿತ್ರಗಳ ಹೆಸರನ್ನು ಪ್ರೊಡಕ್ಷನ್ ಹೌಸ್ ಬುಕ್ ಮಾಡಿದೆ. ಮೊದಲ ಚಿತ್ರ ಸೀಮಾ ಹೈದರ್ ಕುರಿತಾಗಿದ್ದು, ಎರಡನೇ ಸಿನಿಮಾ ಅಂಜು ಅವರ ಕಥೆಯನ್ನು ಒಳಗೊಂಡಿರಲಿದೆ. ಮೂರನೇಯದು ವೆಬ್ ಸರಣಿ, ಪಾಲ್ಘರ್‌ನಲ್ಲಿ ನಡೆದ ಸಂತರ ಹತ್ಯೆಯ ಬಗ್ಗೆಯೂ ಚಿತ್ರ ನಿರ್ಮಿಸಲಾಗುವುದು. ಇದಕ್ಕೆ (ಗುಂಪು ಹತ್ಯೆ) ಮಾಬ್ ಲಿಂಚಿಂಗ್ ಎಂಬ ಹೆಸರನ್ನು ಜಾನಿ ಫೈರ್‌ಫಾಕ್ಸ್ ಫಿಲ್ಮ್ ಪ್ರೊಡಕ್ಷನ್ ಘೋಷಿಸಿದೆ ಎಂದು ನಿರ್ದೇಶಕ ಅಮಿತ್ ಜಾನಿ ಮಾಹಿತಿ ನೀಡಿದರು.

ಇದನ್ನೂ ಓದಿ : ಟೈಲರ್​ ಶಿರಚ್ಛೇದ ಪ್ರಕರಣ.. ಉದ್ಯಮಿ ಕೊಲೆಗೂ ಈ ಕಿರಾತಕರು ಇಟ್ಟಿದ್ದರಂತೆ ಮುಹೂರ್ತ!

ಇನ್ನೊಂದೆಡೆ, ಜಾನಿ ಫೈರ್‌ಫಾಕ್ಸ್ ಪ್ರೊಡಕ್ಷನ್ ಹೌಸ್​ ರಾಜಸ್ಥಾನದ ಉದಯಪುರ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯ ಕುರಿತು 'ಎ ಟೈಲರ್ಸ್ ಮರ್ಡರ್ ಸ್ಟೋರಿ' (A Tailor's Murder Story) ಎಂಬ ಶೀರ್ಷಿಕೆಯ ಚಲನಚಿತ್ರವನ್ನು ನಿರ್ಮಿಸುತ್ತಿದೆ. ಈ ಚಿತ್ರದಲ್ಲಿ 'ರಾ' ಏಜೆಂಟ್ ಪಾತ್ರಕ್ಕಾಗಿ ಸೀಮಾ ಅವರಿಗೆ ಅವಕಾಶ ನೀಡಲಾಗಿದೆ. 'ಕರಾಚಿಯಿಂದ ನೋಯ್ಡಾ' ಸಿನಿಮಾದ ಥೀಮ್ ಸಾಂಗ್ ಅನ್ನು ಮುಂದಿನ ವಾರ ಬಿಡುಗಡೆ ಮಾಡಲಾಗುವುದು. ಚಿತ್ರಕ್ಕೆ ಸಂಬಂಧಿಸಿದಂತೆ ಬೆದರಿಕೆಗಳು ಬಂದಿವೆ. ಆದರೆ, ನಾನು ಅದಕ್ಕೆಲ್ಲಾ ಹೆದರುವುದಿಲ್ಲ ಎಂದು ಅಮಿತ್ ಜಾನಿ ಹೇಳಿದರು.

ಇದನ್ನೂ ಓದಿ : ಅಕ್ರಮವಾಗಿ ಭಾರತಕ್ಕೆ ಬಂದ ಸೀಮಾ ಹೈದರ್​​ಗೆ ಸಿನಿಮಾ ಚಾನ್ಸ್​.. ಬಾಲಿವುಡ್​ ಚಿತ್ರದಲ್ಲಿ 'ರಾ' ಏಜೆಂಟ್ ಪಾತ್ರ?

'ಕರಾಚಿ ಟು ನೋಯ್ಡಾ' ಚಿತ್ರಕ್ಕೆ ಕಲಾವಿದರನ್ನು ಆಯ್ಕೆ ಮಾಡಲು ಆಡಿಷನ್ ಪ್ರಾರಂಭವಾಗಿದೆ. ನಟಿಯನ್ನು ಆಯ್ಕೆ ಮಾಡಲಾಗಿದ್ದು, ಸದ್ಯದಲ್ಲೇ ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಳ್ಳಲಾಗುವುದು. ಇದರೊಂದಿಗೆ ಸೀಮಾ ಹೈದರ್ ಕೆಲಸ ಮಾಡುತ್ತಿರುವ ಸಿನಿಮಾದ ಚಿತ್ರೀಕರಣವನ್ನು ಅಕ್ಟೋಬರ್ ವೇಳೆಗೆ ಮುಗಿಸಲು ಪ್ರಯತ್ನಿಸಲಾಗುವುದು. ಇದಾದ ನಂತರ ಕರಾಚಿ ಟು ನೋಯ್ಡಾ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದರು.

ಇದನ್ನೂ ಓದಿ : Seema Haider : ಭಾರತ-ನೇಪಾಳ ಗಡಿಯಲ್ಲಿ ಸೀಮಾ ಹೈದರ್ ಒಳಬಿಟ್ಟ ಇನ್ಸ್‌ಪೆಕ್ಟರ್,​ ಕಾನ್‌ಸ್ಟೇಬಲ್ ಸಸ್ಪೆಂಡ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.