ETV Bharat / entertainment

ಭಾರತದಾದ್ಯಂತ ಪೊನ್ನಿಯಿನ್ ಸೆಲ್ವನ್ 2 ಪ್ರಚಾರ: ಪ್ರೈವೆಟ್ ಜೆಟ್​ನಲ್ಲಿ ಹೊರಟ ಚಿತ್ರತಂಡ

author img

By

Published : Apr 16, 2023, 8:10 PM IST

ಪೊನ್ನಿಯಿನ್ ಸೆಲ್ವನ್ 2 ತಂಡ ಭಾರತದಾದ್ಯಂತ ಚಿತ್ರದ ಪ್ರಚಾರ ಕೈಗೊಂಡಿದೆ.

Ponniyin Selvan 2
ಪೊನ್ನಿಯಿನ್ ಸೆಲ್ವನ್ 2 ತಂಡ

ಪೊನ್ನಿಯಿನ್ ಸೆಲ್ವನ್​ ಕಳೆದ ವರ್ಷದ ಹಿಟ್​​ ಚಿತ್ರಗಳಲ್ಲಿ ಒಂದು. ಮಣಿರತ್ನಂ ನಿರ್ದೇಶನದ ಚಿತ್ರ 2022ರ ಸೆಪ್ಟೆಂಬರ್​ 30ರಂದು ತೆರೆಕಂಡು ಧೂಳೆಬ್ಬಿಸಿತ್ತು. ವಿಕ್ರಮ್​, ಜಯಂ ರವಿ, ಕಾರ್ತಿ, ತ್ರಿಷಾ, ಶೋಭಿತಾ, ಪ್ರಕಾಶ್ ರಾಜ್, ಐಶ್ವರ್ಯಾ ರೈ ಬಚ್ಚನ್​​​ ಸೇರಿದಂತೆ ಅನೇಕ ಘಟಾನುಘಟಿಗಳ ಚಿತ್ರ ಉತ್ತಮ ಕಲೆಕ್ಷನ್​ (480 ಕೋಟಿ ರೂ.) ಮಾಡುವಲ್ಲಿ ಯಶಸ್ವಿ ಆಗಿತ್ತು. ಇದೀಗ ಪೊನ್ನಿಯಿನ್ ಸೆಲ್ವನ್ ಸೀಕ್ವೆಲ್​ ಬಿಡುಗಡೆಗೆ ಸಜ್ಜಾಗಿದೆ.

ಮಣಿರತ್ನಂ ನಿರ್ದೇಶನದಲ್ಲೇ ಪೊನ್ನಿಯಿನ್ ಸೆಲ್ವನ್​ 2 ರೆಡಿಯಾಗಿದ್ದು, ಮೊದಲ ಭಾಗದಲ್ಲಿದ್ದವರು ಮುಂದುವರಿದಿದ್ದಾರೆ. ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದೆ. ಏಪ್ರಿಲ್​ 28ರಂದು ಬಹುನಿರೀಕ್ಷಿತ ಚಿತ್ರ ತೆರೆ ಕಾಣಲಿದ್ದು, ಇದೀಗ ರಾಷ್ಟ್ರವ್ಯಾಪಿ ಪ್ರಚಾರ ಪ್ರವಾಸವನ್ನು ಚಿತ್ರತಂಡ ಆರಂಭಿಸಿದೆ.

ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ವಿಕ್ರಮ್, ಐಶ್ವರ್ಯಾ ರೈ, ಜಯಂ ರವಿ, ತ್ರಿಶಾ ಮತ್ತು ಕಾರ್ತಿ ಒಳಗೊಂಡಿರುವ ಚಿತ್ರತಂಡ ಚಿತ್ರ ಪ್ರಚಾರಕ್ಕಾಗಿ ಕೊಯಮತ್ತೂರ್‌ಗೆ ಆಗಮಿಸಿದೆ. ನಟ ವಿಕ್ರಮ್ ಟ್ವಿಟರ್‌ನಲ್ಲಿ ಇಡೀ ತಂಡದ ಚಿತ್ರವನ್ನು ಹಂಚಿಕೊಂಡಿದ್ದಾರೆ. ತಂಡವು ಕೊಚ್ಚಿ, ಬೆಂಗಳೂರು ಮತ್ತು ಮುಂಬೈ ಸೇರಿದಂತೆ ರಾಷ್ಟ್ರದಾದ್ಯಂತ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದೆ.

ಪೊನ್ನಿಯಿನ್ ಸೆಲ್ವನ್​ ಚಲನಚಿತ್ರವು ಇಲ್ಲಿಯವರೆಗಿನ ಅತ್ಯಂತ ದುಬಾರಿ ತಮಿಳು ಚಲನಚಿತ್ರಗಳಲ್ಲಿ ಒಂದಾಗಿದೆ. ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್‌ನಿಂದ ಹಣವನ್ನು ಹೂಡಲಾಗಿದೆ. ಮೊದಲ ಭಾಗ ಕೆಲಕ್ಷನ್​ ವಿಚಾರದಲ್ಲಿ ಸದ್ದು ಮಾಡಿದ್ದು, ಸಕ್ವೆಲ್​ ಮೇಲೂ ಭಾರಿ ನಿರೀಕ್ಷೆ ಇದೆ.

ಇದನ್ನೂ ಓದಿ: 'ಟ್ಯಾಕ್ಸಿ ಡ್ರೈವರ್​ಗೆ ಹಣ ಕೊಡದೇ ಓಡಿ ಹೋಗಿದ್ದೆ': ಕಷ್ಟದ ದಿನಗಳನ್ನು ಸ್ಮರಿಸಿದ ಸಲ್ಮಾನ್​ ಖಾನ್​​

ಎ.ಆರ್.ರೆಹಮಾನ್ ಮತ್ತೊಮ್ಮೆ ಪೊನ್ನಿಯಿನ್ ಸೆಲ್ವನ್ 2ಗಾಗಿ ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದಾರೆ. ಚಿತ್ರದ ಎರಡು ಹಾಡುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅವರು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವೀಕರಿಸಿದೆ. ಮಣಿರತ್ನಂ ಮತ್ತು ಎಲಂಗೋ ಕುಮಾರವೇಲ್ ಚಿತ್ರಕಥೆಯನ್ನು ಬರೆದಿದ್ದಾರೆ ಮತ್ತು ಎ.ಶ್ರೀಕರ್ ಪ್ರಸಾದ್ ಸಂಕಲನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಇದನ್ನೂ ಓದಿ: ಗೋವುಗಳೊಂದಿಗೆ ಜನ್ಮದಿನ ಆಚರಿಸಿಕೊಂಡ ರಿಷಬ್​ ಶೆಟ್ಟಿ ಪುತ್ರ: ಮುದ್ದಾದ ವಿಡಿಯೋ ನೋಡಿ

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್​​ ಕೆಲವು ವರ್ಷಗಳಿಂದ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಪೊನ್ನಿಯಿನ್ ಸೆಲ್ವನ್ ಚಿತ್ರಕ್ಕೆ ಬಣ್ಣ ಹಚ್ಚಿದ್ದು ಸಿನಿಮಾದ ಹೈಲೆಟ್​. ನಿರ್ದೇಶಕ ಮಣಿರತ್ನಂ ಹಾಗೂ ಐಶ್ವರ್ಯಾ ಒಟ್ಟಾಗಿ ಕೆಲಸ ಮಾಡಿದ ನಾಲ್ಕನೇ ಚಿತ್ರ ಪೊನ್ನಿಯಿನ್ ಸೆಲ್ವನ್​ 1. ಪೊನ್ನಿಯಿನ್ ಸೆಲ್ವನ್​ 2 ಈ ಇಬ್ಬರ ಕಾಂಬೋದಲ್ಲಿ ಮೂಡಿ ಬರುತ್ತಿರುವ ಐದನೇ ಸಿನಿಮಾ. 1997ರಲ್ಲಿ ತಮಿಳಿನ 'ಇರುವರ್' ಸಿನಿಮಾ ಮೂಲಕ ಮಣಿರತ್ನಂ ಅವರು ಮಾಜಿ ವಿಶ್ವಸುಂದರಿಯನ್ನು ಸಿನಿ ರಂಗಕ್ಕೆ ಪರಿಚಯಿಸಿದರು. ಈ ಕಾರಣಕ್ಕೆ ಮಣಿರತ್ನಂ ಅವರಿಗೆ ಐಶ್ವರ್ಯಾರ ಮನಸ್ಸಿನಲ್ಲಿ ವಿಸೇಷ ಸ್ಥಾನವಿದೆ. ಗುರು, ಮಾರ್ಗದರ್ಶಕ ಎಂದು ಹೇಳಿಕೊಂಡು ಬಂದಿದ್ದಾರೆ. ಇರುವರ್​ ನಂತರ 2007ರಲ್ಲಿ 'ಗುರು' ಮತ್ತು 2010ರಲ್ಲಿ 'ರಾವಣ' ಸಿನಿಮಾದಲ್ಲಿ ಈ ನಟಿ ನಿರ್ದೇಶಕ ಜೋಡಿ ಕೆಲಸ ಮಾಡಿತ್ತು. ಇದೀಗ ಪೊನ್ನಿಯಿನ್ ಸೆಲ್ವನ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.