ETV Bharat / entertainment

'ಪೊನ್ನಿಯಿನ್ ಸೆಲ್ವನ್ 2' ಕಲೆಕ್ಷನ್​​ ಅಬ್ಬರ.. 500 ಕೋಟಿ ದಾಟುತ್ತಾ?

author img

By

Published : May 4, 2023, 5:29 PM IST

ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಜಾಗತಿಕವಾಗಿ 250 ಕೋಟಿ ರೂಪಾಯಿ ಗಳಿಸಿದೆ.

ponniyin selvan 2
ಪೊನ್ನಿಯಿನ್ ಸೆಲ್ವನ್ 2

ಪೊನ್ನಿಯಿನ್ ಸೆಲ್ವನ್ 2 ಕಳೆದ ಶುಕ್ರವಾರ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್​​ ವಿಚಾರದಲ್ಲೂ ಉತ್ತಮ ಫಲಿತಾಂಶ ಪಡೆದುಕೊಂಡಿದೆ. ಆದ್ರೆ ಅತ್ಯಂತ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದ ಪೊನ್ನಿಯಿನ್ ಸೆಲ್ವನ್‌ನ (ಭಾಗ 1) ಮುಂದುವರಿದ ಭಾಗ ಹಿಂದಿನ ಯಶಸ್ಸನ್ನು ಪುನರಾವರ್ತಿಸಲು ಸಾಧ್ಯವಾಗುತ್ತಿಲ್ಲ.

ಕಳೆದ ವರ್ಷ ತೆರೆಕಂಡ ಪೊನ್ನಿಯಿನ್ ಸೆಲ್ವನ್‌ 1 ಗಲ್ಲಾಪೆಟ್ಟಿಗೆಯಲ್ಲಿ ಹಲವು ದಾಖಲೆಗಳನ್ನು ಪುಡಿಮಾಡಿತು. ಜಾಗತಿಕವಾಗಿ 500 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್​ ಮಾಡಿತು. ಆದಾಗ್ಯೂ, ಪೊನ್ನಿಯಿನ್ ಸೆಲ್ವನ್ 2 ಅದೇ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಬಾಕ್ಸ್​​ ಆಫೀಸ್​ ಸಂಖ್ಯೆ ಇಳಿಮುಖವಾಗುತ್ತಿದೆ.

  • All-time Top 3 #Kollywood Grossers @ the TN Box office :

    1. #PS1

    2. #Vikram

    3. #Viswasam #PS2 had a good 4-days opening weekend at the TN Box office..

    Weekdays and 2nd weekend are crucial..

    — Ramesh Bala (@rameshlaus) May 2, 2023 " class="align-text-top noRightClick twitterSection" data=" ">

ಸಿನಿಮಾ ವ್ಯವಹಾರ ವಿಮರ್ಷಕ ಸ್ಯಾಕ್ನಿಲ್ಕ್ ಪ್ರಕಾರ, ಪೊನ್ನಿಯಿನ್ ಸೆಲ್ವನ್ 2 ಭಾರತದಲ್ಲಿ ಬುಧವಾರ 8 ಕೋಟಿ ರೂ. ಗಳಿಸಿದೆ. ಚಿತ್ರ ತೆರೆ ಕಂಡ ನಂತರ ಇದೇ ಮೊದಲ ಬಾರಿಗೆ ಒಂದೇ ಅಂಕಿಯ ಮೊತ್ತ ಗಳಿಸಿದೆ. ಆದಾಗ್ಯೂ, ಸತತವಾಗಿ ಐದು ದಿನಗಳವರೆಗೆ ಎರಡಂಕಿಯ ಸಂಖ್ಯೆಯನ್ನು ಹೊತ್ತು ತಂದಿರುವ ಚಲನಚಿತ್ರವು ಎರಡನೇ ವಾರಾಂತ್ಯ ವೇಗವನ್ನು ಪಡೆಯುವ ನಿರೀಕ್ಷೆ ಇದೆ. ಸದ್ಯ ವಾರದ ದಿನ ಹಿನ್ನೆಲೆ ಕಲೆಕ್ಷನ್​ ಕೊಂಚ ಕುಂಠಿತವಾಗಿದೆ. ಶನಿವಾರ ಮತ್ತು ಭಾನುವಾರದ ಕಲೆಕ್ಷನ್ ಸಂಖ್ಯೆ ಏರುವ ನಿರೀಕ್ಷೆ ಇದೆ.​ ಈ ಚಿತ್ರವು ಪ್ರಸ್ತುತ ಭಾರತದಲ್ಲಿ 122.25 ಕೋಟಿ ರೂಪಾಯಿಗಳನ್ನು ಗಳಿಸಿದೆ ಮತ್ತು ಜಾಗತಿಕವಾಗಿ 250 ಕೋಟಿ ರೂಪಾಯಿಗಳನ್ನು ಗಳಿಸುವ ಸಮೀಪದಲ್ಲಿದೆ.

ತಮಿಳಿನಲ್ಲಿ 26.67%, ಮಲಯಾಳಂನಲ್ಲಿ 14.63%, ತೆಲುಗಿನಲ್ಲಿ 12.59% ಮತ್ತು ಹಿಂದಿಯಲ್ಲಿ 7.91% ರಷ್ಟು ಆಕ್ಯುಪೆನ್ಸಿ ದರ ಇದೆ. ಸಿನಿಮಾ ನಿರ್ಮಾಣ ಕಂಪನಿಯಾದ ಮದ್ರಾಸ್ ಟಾಕೀಸ್‌ನ ಟ್ವೀಟ್ ಪ್ರಕಾರ, ಚಿತ್ರವು ವಿದೇಶದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ, 3.5 ಮಿಲಿಯನ್ ಡಾಲರ್‌ಗೂ ಹೆಚ್ಚು ಹಣ ಗಳಿಸಿದೆ. ಯುಎಸ್​​ ವಾರಾಂತ್ಯದ ಗಲ್ಲಾಪೆಟ್ಟಿಗೆ ಕಲೆಕ್ಷನ್​ ವಿಚಾರದಲ್ಲಿ ಚಿತ್ರವು 8ನೇ ಸ್ಥಾನದಲ್ಲಿದೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ: ವಿದೇಶಕ್ಕೆ ತೆರಳಲು ಶೀಜಾನ್ ಖಾನ್​ಗೆ ಕೋರ್ಟ್ ಅನುಮತಿ

ಮನರಂಜನಾ ವಲಯದ ಟ್ರ್ಯಾಕರ್, ವಿಮರ್ಷಕ ರಮೇಶ್ ಬಾಲಾ ಮಾಹಿತಿ ಪ್ರಕಾರ, ಕಳೆದ ವಾರಾಂತ್ಯದ ಉತ್ತಮ ಪ್ರದರ್ಶನದ ನಂತರ ಪೊನ್ನಿಯಿನ್ ಸೆಲ್ವನ್ 2ಗೆ ವಾರದ ದಿನಗಳು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ. ಚಿತ್ರದ ಯಶಸ್ಸಿಗೆ ಎರಡನೇ ವಾರಾಂತ್ಯ ಮತ್ತು ವಾರದ ದಿನಗಳು ಅತ್ಯಗತ್ಯ ಎಂದರು. ಚಲನಚಿತ್ರವು ಯಶಸ್ವಿಯಾಗಿ 4 ದಿನ ಓಡಿದೆ. ಬಾಕ್ಸ್ ಆಫೀಸ್‌ನಲ್ಲಿ ಇದುವರೆಗೆ ಟಾಪ್ 3 ಕಾಲಿವುಡ್ ಸಿನಿಮಾ ಗಳಿಕೆಗಳಲ್ಲಿ (ಉತ್ತಮ ಕಲೆಕ್ಷನ್​) ಒಂದಾಗಿದೆ.

ಇದನ್ನೂ ಓದಿ: ಪವಿತ್ರಾ ಲೋಕೇಶ್ - ನರೇಶ್ 'ಮತ್ತೆ ಮದುವೆ'ಗೆ ಡೇಟ್​ ಫಿಕ್ಸ್​​

ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರಗಳು ಕಲ್ಕಿ ಕೃಷ್ಣಮೂರ್ತಿ ಅವರ ಅದೇ ಶೀರ್ಷಿಕೆಯ ಮಹಾಕಾವ್ಯವನ್ನು ಆಧರಿಸಿದೆ. ಸೀಕ್ವೆಲ್​​ ಗಲ್ಲಾಪೆಟ್ಟಿಗೆಯಲ್ಲಿ ಹಿಂದುಳಿದಿದ್ದರೂ, ದೇಶೀಯವಾಗಿ ಮತ್ತು ಸಾಗರೋತ್ತರ ಚಿತ್ರಮಂದಿರಗಳಲ್ಲಿ ಅದರ ಪ್ರದರ್ಶನದ ಒಟ್ಟಾರೆ ಸಂಖ್ಯೆಗಳ ಮೇಲೆ ಕಲೆಕ್ಷನ್​​ ಕೇಂದ್ರೀಕೃತವಾಗಿದೆ. ಎರಡನೇ ವಾರಾಂತ್ಯ ಮತ್ತು ವಾರದ ದಿನಗಳಲ್ಲಿ ಚಿತ್ರದ ಪ್ರದರ್ಶನವು ಅದರ ಒಟ್ಟಾರೆ ಯಶಸ್ಸನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 500 ಕೋಟಿ ರೂ. ದಾಟದಿದ್ದರೂ ಸದ್ಯ ಗಳಿಸಿರುವ ಸಂಖ್ಯೆ ಕಡಿಮೆ ಏನಿಲ್ಲ. ಚಿತ್ರ ಯಶಸ್ವಿಯಾಗಿದ್ದು, ಸೂಪರ್​ ಹಿಟ್​ ಆಗುವ ನಿರೀಕ್ಷೆಯನ್ನು ಚಿತ್ರತಂಡ ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.