ETV Bharat / entertainment

ಡೊಳ್ಳು ಮೂಲಕ ನಿರ್ಮಾಪಕರಾದ ನಿರ್ದೇಶಕ ಪವನ್ ಒಡೆಯರ್

author img

By

Published : Jun 7, 2022, 2:34 PM IST

ಸಾಗರ್ ಪುರಾಣಿಕ್ ನಿರ್ದೇಶನದ ಚೊಚ್ಚಲ ಸಿನಿಮಾವಾಗಿರುವ ಡೊಳ್ಳು ಚಿತ್ರದಲ್ಲಿ, ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ನಾಯಕ - ನಾಯಕಿಯಾಗಿ ನಟಿಸಿದ್ದಾರೆ.

Dollu Kannada Movie team
ಡೊಳ್ಳು ಕನ್ನಡ ಸಿನಿಮಾ ತಂಡ

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಪವನ್ ಒಡೆಯರ್ ನಿರ್ಮಾಪಕನಾಗಿರೋದು ಗೊತ್ತಿರುವ ವಿಚಾರ. ಒಡೆಯರ್ ಮೂವೀಸ್ ಬ್ಯಾನರ್​ನಲ್ಲಿ ನಿರ್ದೇಶಕ ಪವನ್ ಒಡೆಯರ್, ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿರುವ ಸಿನಿಮಾ ಡೊಳ್ಳು. ಡೊಳ್ಳು ಕುಣಿತದ ಸುತ್ತ ಎಣೆದಿರುವ ಈ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆಯೇ ಹರಿದು ಬಂದಿದೆ. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಡೊಳ್ಳು ಸಿನಿಮಾ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿದೆ.

ಮೊದಲಿಗೆ ಮಾತು ಶುರು ಮಾಡಿದ ನಿರ್ದೇಶಕ ಪವನ್‌, 'ಡೊಳ್ಳು' ಒಡೆಯರ್ ಮೂವೀಸ್​ನಡಿ ನಿರ್ಮಾಣ ಮಾಡಿರುವ ಮೊದಲ ಸಿನಿಮಾವಾಗಿದ್ದು, ನಾನು ನನ್ನ ಪತ್ನಿ, ಸ್ನೇಹಿತರಾದ ಹರೀಶ್ ನಾರಾ, ಸಚಿನ್ ತಪಶೆಟ್ಟಿ, ನರಸಿಂಹ ಜೊತೆಗೂಡಿ ಚಿತ್ರ ನಿರ್ಮಾಣ ಮಾಡಿದ್ದೇವೆ. ಇದು ನಿಜವಾದ ಸಿನಿಮಾ. ಇಡೀ ತಂಡ ಸೇರಿಕೊಂಡು ತುಂಬಾ ಅದ್ಭುತವಾದ ಸಿನಿಮಾ ಮಾಡಿದ್ದಾರೆ. ನಿರ್ಮಾಪಕನಾಗಿ ನನಗೂ ಇದು ಹೊಸ ಅನುಭವ. ಇಡೀ ಡೊಳ್ಳು ಕಲಾವಿದರು ಅಭಿನಯಿಸಿರುವ ಚಿತ್ರ ಅನ್ನೋದು ಇದರ ವಿಶೇಷ ಎಂದರು.

ನಿರ್ದೇಶಕ ಸಾಗರ್ ಪುರಾಣಿಕ್ ಮಾತನಾಡಿ, ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಪವನ್ ಸರ್​ಗೆ ಧನ್ಯವಾದ. ಕಿರುಚಿತ್ರಗಳನ್ನು ನಿರ್ದೇಶನ ಮಾಡಿದವರಿಗೆ ಸಿನಿಮಾ ಮಾಡುವುದು ದೊಡ್ದ ಸಾಹಸ. ಆ ಸಾಹಸ ಮಾಡುವುದಕ್ಕೆ ಇಡೀ ತಂಡ ಸಪೋರ್ಟ್ ಮಾಡ್ತಾ ಇರೋದು ದೊಡ್ಡ ವಿಷ್ಯ ಎಂದು ಹೇಳಿದರು.

ಸಾಗರ್ ಪುರಾಣಿಕ್ ನಿರ್ದೇಶನದ ಚೊಚ್ಚಲ ಸಿನಿಮಾವಾಗಿರುವ ಡೊಳ್ಳು ಚಿತ್ರದಲ್ಲಿ, ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ನಾಯಕ-ನಾಯಕಿಯಾಗಿ ನಟಿಸಿದ್ದು, ಬಾಬು ಹಿರಣಯ್ಯ, ಚಂದ್ರ ಮಯೂರ್, ಶರಣ್, ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅನಂತ್ ಕಾಮತ್ ಸಂಗೀತ, ಅಭಿಲಾಷ್ ಕಲಾಥಿ ಕ್ಯಾಮೆರಾವಿರುವ ಡೊಳ್ಳು ಸಿನಿಮಾ ಸದ್ಯದಲ್ಲಿಯೇ ಥಿಯೇಟರ್ ಅಂಗಳಕ್ಕೆ ಲಗ್ಗೆ ಇಡಲಿದೆ.

ಇದನ್ನೂ ಓದಿ : ಭಜರಂಗಿ 2 ಬಳಿಕ ಬೈರಾಗಿ ಮೂಲಕ ತೆರೆ ಮೇಲೆ ಅಬ್ಬರಿಸಲು ಹ್ಯಾಟ್ರಿಕ್ ಹೀರೋ ರೆಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.