ETV Bharat / entertainment

ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಆದಿತ್ಯ - ಅನನ್ಯಾ: ವದಂತಿಗೆ ತುಪ್ಪ ಸುರಿದ ಫೋಟೋ

author img

By

Published : Jul 18, 2023, 5:44 PM IST

ಆದಿತ್ಯ ರಾಯ್​ ಕಪೂರ್​ ಮತ್ತು ಅನನ್ಯಾ ಪಾಂಡೆ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಪೋರ್ಚುಗಲ್​ನ ಲಿಸ್ಟನ್​ನಲ್ಲಿರುವ ರೆಸ್ಟೋರೆಂಟ್​ನಲ್ಲಿ ಇಬ್ಬರು ಜೊತೆಯಾಗಿ ಕುಳಿತಿರುವ ಫೋಟೋವೊಂದು ವೈರಲ್​ ಆಗಿದೆ.

ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್
Ananya Panday and Aditya Roy Kapur

ಬಾಲಿವುಡ್​ ನಟರಾದ ಆದಿತ್ಯ ರಾಯ್​ ಕಪೂರ್​ ಮತ್ತು ಅನನ್ಯಾ ಪಾಂಡೆ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಿಟೌನ್​ ಗಲ್ಲಿಗಳಲ್ಲಿ ಸದ್ದು ಮಾಡುತ್ತಿದೆ. ಈ ಜೋಡಿ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಈ ವದಂತಿಗೆ ಪುಷ್ಟಿ ನೀಡುತ್ತಿದ್ದಾರೆ. ಇದೀಗ ಮತ್ತೆ ಪೋರ್ಚುಗಲ್​ನ ಲಿಸ್ಟನ್​ನಲ್ಲಿರುವ ರೆಸ್ಟೋರೆಂಟ್​ನಲ್ಲಿ ಇಬ್ಬರು ಜೊತೆಯಾಗಿ ಕುಳಿತಿರುವ ಫೋಟೋವೊಂದು ವೈರಲ್​ ಆಗಿದೆ.

ಈ ವದಂತಿ ಪ್ರೇಮಪಕ್ಷಿಗಳು ತಮ್ಮ ಇನ್​ಸ್ಟಾದಲ್ಲಿ ಜೊತೆಯಾಗಿರುವ ಯಾವುದೇ ಫೋಟೋಗಳನ್ನು ಹಂಚಿಕೊಂಡಿಲ್ಲ. 2022ರಲ್ಲಿ ​ನಟಿ ಕೃತಿ ಸನೋನ್ ಅವರು ಅಯೋಜಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಆದಿತ್ಯ ಮತ್ತು ಅನನ್ಯಾ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆ ಅಂದಿನಿಂದ ಡೇಟಿಂಗ್ ವದಂತಿಗಳು ಪ್ರಾರಂಭವಾಗಿವೆ. ಸದ್ಯ ಈಗ ವೈರಲ್​ ಆಗಿರುವ ಫೋಟೋದಲ್ಲಿ ಆದಿತ್ಯ ಬ್ಲೂ ಕಲರ್​ ಶರ್ಟ್​ನಲ್ಲಿ ಕಂಡಿದ್ದಾರೆ. ಅನನ್ಯಾ ಗುಲಾಬಿ ಬಣ್ಣದ ಕೋಟ್​ಗೆ ವೈಟ್​ ಡ್ರೆಸ್​ ಅನ್ನು ಹೊಂದಾಣಿಕೆ ಮಾಡಿದ್ದಾರೆ. ಚಿತ್ರದಲ್ಲಿ ಇಬ್ಬರು ಜೊತೆಯಾಗಿ ಮಾತನಾಡುತ್ತಿರುವುದನ್ನು ಕಾಣಬಹುದು.

ಆದಿತ್ಯ ಮತ್ತು ಅನನ್ಯಾ ವೈರಲ್​ ಚಿತ್ರಗಳು ಅಭಿಮಾನಿಗಳನ್ನು ಉತ್ಸುಕಗೊಳಿಸಿದೆ. ಇಬ್ಬರ ನಡುವಿನ ಪ್ರಣಯದ ಫೋಟೋ ಕಂಡ ಪ್ಯಾನ್ಸ್​ ಕಮೆಂಟ್​ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಆದಿತ್ಯ ಮತ್ತು ಅನನ್ಯಾ ಪರಸ್ಪರ ನೋಡುತ್ತಿರುವ ಈ ಚಿತ್ರಕ್ಕೆ ಲೈಕ್ಸ್​ಗಳ ಸುರಿಮಳೆಯೇ ಸಿಕ್ಕಿದೆ. ಅದಾಗ್ಯೂ, ಕೆಲವರು ಅವರ ಒಪ್ಪಿಗೆ ಇಲ್ಲದೇ ಫೋಟೋ ಶೇರ್​ ಮಾಡಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಫಿಟ್ನೆಸ್​ ಕಾಪಾಡಿಕೊಳ್ಳುವುದರಲ್ಲಿ ಮಹೇಶ್​ ಬಾಬು ಪರ್ಫೆಕ್ಟ್​: ಅವರ ಬ್ರೇಕ್​ಫಾಸ್ಟ್​ನಲ್ಲಿ ಏನಿರುತ್ತೆ ಗೊತ್ತಾ?

ಅನನ್ಯಾ ಪಾಂಡೆ ಸಿನಿಮಾ: ಈ ನಟರ ಕೆಲದ ವಿಚಾರ ಗಮನಿಸುವುದಾದರೆ, ರಾಜ್ ಶಾಂಡಿಲ್ಯ ಅವರ ಡ್ರೀಮ್ ಗರ್ಲ್ 2 ನಲ್ಲಿ ಅನನ್ಯಾ ಪಾಂಡೆ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಆಯುಷ್ಮಾನ್ ಖುರಾನಾ ಜೊತೆಗೆ ನಟಿಸಲಿದ್ದಾರೆ. ಡ್ರೀಮ್ ಗರ್ಲ್ 2 ಆಗಸ್ಟ್ 25 ರಂದು ಬಿಡುಗಡೆಗೊಳ್ಳಲು ತಯಾರಿ ನಡೆಸುತ್ತಿದೆ. ಇದರ ಜೊತೆಗೆ, ಫರ್ಹಾನ್ ಅಖ್ತರ್ ಅವರ ಖೋ ಗಯೇ ಹಮ್ ಕಹಾ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಸಿದ್ಧಾಂತ್ ಚತುರ್ವೇದಿ ಜೊತೆಗೆ ನಟಿಸಲಿದ್ದಾರೆ. ವಿಕ್ರಮಾದಿತ್ಯ ಮೋಟ್ವಾನೆ ಅವರ ಮುಂಬರುವ ಹೆಸರಿಡದ ಚಲನಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಕಾಲ್ ಮಿ ಬೇ ಎಂಬ ವೆಬ್ ಸಿರೀಸ್ ಕೂಡ ಇವರ ಕೈಯಲ್ಲಿದೆ.

ಆದಿತ್ಯ ರಾಯ್ ಕಪೂರ್ ಸಿನಿಮಾ: ನಟ ಆದಿತ್ಯ ರಾಯ್ ಕಪೂರ್ ನಟನೆಯ ದಿ ನೈಟ್ ಮ್ಯಾನೇಜರ್ ಭಾಗ 2 ಇತ್ತೀಚೆಗೆ ತೆರೆ ಕಂಡಿದೆ. ಅನುರಾಗ್ ಬಸು ಅವರ ಮೆಟ್ರೋ ಇನ್ ದಿನೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜರಾ ಹಟ್ಕೆ ಜರಾ ಬಚ್ಕೆ ಸೂಪರ್​ ಹಿಟ್​ ಚಿತ್ರದ ನಾಯಕ ನಟಿ ಸಾರಾ ಅಲಿ ಖಾನ್ ಅವರೊಂದಿಗೆ ನಟಿಸಲಿದ್ದಾರೆ. ಈ ಚಿತ್ರವು 2024ರ ಮಾರ್ಚ್ 29 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ನಟಿ ಅನನ್ಯಾ ಪಾಂಡೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಅಭಿಮಾನಿಯನ್ನು ತಳ್ಳಿದ ಬಾಡಿಗಾರ್ಡ್ಸ್ - ವಿಡಿಯೋ ವೈರಲ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.