ETV Bharat / entertainment

ಬಿಗ್ ಬಾಸ್ OTT 2: ಆರನೇ ವಾರ ಇಬ್ಬರು ನಾಮಿನೇಟ್​.. ಯಾರಿಗೆ ಸಿಗಲಿದೆ ಗೇಟ್​ಪಾಸ್​?

author img

By

Published : Jul 25, 2023, 5:53 PM IST

ಬಿಗ್​ ಬಾಸ್​ ಓಟಿಟಿ 2ರ ಆರನೇ ವಾರ ಆರಂಭವಾಗಿದೆ. ಈ ಬಾರಿ ಇಬ್ಬರು ನಾಮಿನೇಟ್​ ಆಗಿದ್ದು, ಯಾರು ಮನೆಯಿಂದ ಹೊರಹೋಗಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

Bigg Boss OTT 2
ಬಿಗ್​ ಬಾಸ್​ ಓಟಿಟಿ 2

ಹಿಂದಿ ಬಿಗ್​ ಬಾಸ್​ ಓಟಿಟಿ 2ರ ಆರನೇ ವಾರ ಆರಂಭವಾಗಿದೆ. ಕಳೆದ ವಾರ ವೈಲ್ಡ್​​ಕಾರ್ಡ್​ ಎಂಟ್ರಿಕೊಟ್ಟ ಸ್ಪರ್ಧಿಗಳ ಸೇರ್ಪಡೆಯೊಂದಿಗೆ ಸ್ಪರ್ಧೆಯು ಮತ್ತಷ್ಟು ಬೆಳೆದಿದೆ. ಫಾಲಾಕ್​ ನಾಜ್​ ಅವರನ್ನು ಮನೆಯಿಂದ ಹೊರಹಾಕಿದ ನಂತರ, ಇದೀಗ ಈ ವಾರದ ನಾಮ ನಿರ್ದೇಶನಗಳ ಸಮಯ. ಮುಂಬರುವ ಸಂಚಿಕೆಯ ತುಣುಕನ್ನು ಜಿಯೋ ಸಿನಿಮಾದಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ಮನೆಯ ಸದಸ್ಯರೇ ಈ ಬಾರಿ ಮನೆಯ ಸದಸ್ಯರನ್ನು ನಾಮಿನೇಟ್​ ಮಾಡುವುದನ್ನು ತೋರಿಸುತ್ತದೆ.

ನಾಟಕ, ವಿವಾದಗಳು, ಜಗಳ, ತಿರುವುಗಳು ಬಿಗ್​ ಬಾಸ್​ನ ಒಂದು ಭಾಗವಾಗಿದ್ದು, ಪ್ರೇಕ್ಷಕರು ಇದನ್ನು ಸಾಕಷ್ಟು ನೋಡಿದ್ದಾರೆ. ಬಾಲಿವುಡ್​ ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ಅವರ ವಾರಾಂತ್ಯದ ಕಾರ್ಯಕ್ರಮ ಸೇರಿದಂತೆ, ಮನೆಯಲ್ಲಿ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸ್ಪರ್ಧಿಗಳು, ಬಿಸಿ ಜಗಳಗಳು, ಲವ್​ ಸ್ಟೋರಿಸ್​, ರೊಮ್ಯಾನ್ಸ್​, ಕಾಂಪಿಟೇಶನ್​, ಉತ್ತಮ ಪ್ರದರ್ಶನಗಳು ಎಲ್ಲವೂ ಬಿಗ್​ ಬಾಸ್​ ಪ್ರೇಮಿಗಳಿಗೆ ತಿಳಿದಿದೆ. ಇನ್ನೇನು ಸ್ಪರ್ಧೆಯ ಅಂತಿಮ ದಿನಗಳು ಹತ್ತಿರವಾಗುತ್ತಿದ್ದಂತೆ ಸವಾಲುಗಳು, ಕಾಂಪಿಟೇಶನ್​ಗಳು ನಿತ್ಯ ಹೆಚ್ಚು ಹೆಚ್ಚು ತೀವ್ರಗೊಳ್ಳುತ್ತಿವೆ.

ಮಂಗಳವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುವ ಬಿಗ್​ ಬಾಸ್​ ಓಟಿಟಿ 2 ಮನೆಯಲ್ಲಿ ನಾಮಿನೇಷನ್​ ಟಾಸ್ಕ್​ ನಡೆಯಲಿದೆ. ಇಂದಿನ ಸಂಚಿಕೆಯಲ್ಲಿ ಪ್ರಸ್ತುತ ಹೌಸ್​ ಕ್ಯಾಪ್ಟನ್​ ಆಗಿರುವ ಪೂಜಾ ಭಟ್​ ಅವರು ಅಭಿಷೇಕ್​ ಮಲ್ಹಾನ್​ ಅವರನ್ನು ನಾಮ ನಿರ್ದೇಶನದಿಂದ ರಕ್ಷಿಸಲು ತಮ್ಮ ಅಧಿಕಾರವನ್ನು ಚಲಾಯಿಸುತ್ತಿರುವುದನ್ನು ನಾವು ಕಾಣಬಹುದು. ಇತರ ಸ್ಪರ್ಧಿಗಳು ಒಂದು ದೊಡ್ಡ ಮರದ ಕೆಳಗೆ ನಿಂತಿರುವುದನ್ನು ನೋಡಬಹುದು.

ನಾಮನಿರ್ದೇಶನದ ವೇಳೆ ಒಬ್ಬ ಸ್ಪರ್ಧಿಯು ಮತ್ತೊಬ್ಬ ಸ್ಪರ್ಧೆಯ ಬಗ್ಗೆ ನೆಗೆಟಿವ್​ ಮಾತನಾಡುವ ಮೂಲಕ ಆತನನ್ನು ನಾಮಿನೇಟ್​ ಮಾಡಬೇಕಾಗುತ್ತದೆ. ಸ್ಪರ್ಧೆಯ ಒಂದು ನೋಟ ಹಂಚಿಕೊಳ್ಳುತ್ತಾ ತಯಾರಕರು, "ಮನೆಯವರು ಪ್ರತಿ ನಾಮನಿರ್ದೇಶನದೊಂದಿಗೆ ಕೆಲವು ಕಹಿ ಸತ್ಯಗಳನ್ನು ಹೇಳುತ್ತಾರೆ. ಇಂದು ರಾತ್ರಿ 9 ಗಂಟೆಗೆ ಬಿಗ್​ ಬಾಸ್​ ಓಟಿಟಿ 2 ಸಂಚಿಕೆಯಲ್ಲಿ ತಿಳಿಯಿರಿ. ಜಿಯೋ ಸಿನಿಮಾದಲ್ಲಿ ಉಚಿತ ಸ್ಟ್ರೀಮಿಂಗ್" ಎಂದು ಬರೆದಿದ್ದಾರೆ.

ಯಾರು ಎಷ್ಟು ಸ್ಪರ್ಧಿಗಳನ್ನು ನಾಮನಿರ್ದೇಶನ ಮಾಡುತ್ತಾರೆ ಎಂಬುದನ್ನು ಆಯ್ಕೆ ಮಾಡುವ ಅಧಿಕಾರವನ್ನು ಹೌಸ್​ ಕ್ಯಾಪ್ಟನ್​ಗೆ ನೀಡಲಾಗಿದೆ. ಮನಿಶಾ ರಾಣಿ ಮತ್ತು ಆಶಿಕಾ ಭಾಟಿಯಾ ಅವರನ್ನು ನಾಲ್ವರು ಸ್ಪರ್ಧಿಗಳು ಸೂಚಿಸಿದ್ದಾರೆ. ಜಿಯಾ ಶಂಕರ್ ಮತ್ತು ಜಡ್​ ಹದಿದ್​ ಅವರನ್ನು ಒಬ್ಬೊಬ್ಬರು ನಾಮನಿರ್ದೇಶನ ಮಾಡಿದರು. ಬೇಬಿಕಾ ಧುರ್ವೆ, ಅವಿನಾಶ್ ಸಚ್‌ದೇವ್ ಮತ್ತು ಎಲ್ವಿಶ್ ಯಾದವ್ ಅವರನ್ನು ಇಬ್ಬರು ಸ್ಪರ್ಧಿಗಳು ನಾಮನಿರ್ದೇಶನ ಮಾಡಿದ್ದಾರೆ.

ಇದರ ಪರಿಣಾಮವಾಗಿ ಮನಿಶಾ ರಾಣಿ ಮತ್ತು ಆಶಿಕಾ ಭಾಟಿಯಾ ಇಬ್ಬರೇ ನಾಮಿನೇಟ್​ ಆಗಿದ್ದಾರೆ. ಕಳೆದ ವಾರಾಂತ್ಯದಲ್ಲಿ ಫಲಾಕ್ ನಾಜ್ ಅವರನ್ನು ಮನೆಯಿಂದ ಹೊರಹಾಕಲಾಗಿತ್ತು. ಇನ್ನೂ ವಾರ ನಾಮಿನೇಟ್​ ಆಗಿರುವ ಇಬ್ಬರಿಗೂ ಅಭಿಮಾನಿಗಳ ಸಮೂಹವೇ ಇದೆ. ಹೀಗಾಗಿ ಈ ಬಾರಿ ಯಾರು ಮನೆಯಿಂದ ಹೊರಹೋಗಲಿದ್ದಾರೆ ಎಂಬುದೇ ಕುತೂಹಲವಾಗಿದೆ. ಈ ಬಗ್ಗೆ ನಿಮ್ಮಲ್ಲಿಯೂ ಆಸಕ್ತಿ ಇದ್ದಲ್ಲಿ ಪ್ರತಿ ರಾತ್ರಿ 9 ಗಂಟೆಗೆ ಜಿಯೋ ಸಿನಿಮಾದಲ್ಲಿ ಬಿಗ್​ ಬಾಸ್​ ಓಟಿಟಿ 2 ಕಾರ್ಯಕ್ರಮವನ್ನು ವೀಕ್ಷಿಸಬಹುದು.

ಇದನ್ನೂ ಓದಿ: 'ಡ್ರೀಮ್ ಗರ್ಲ್ 2' ಪೂಜಾ ಲುಕ್​ ಔಟ್​: ಮೆಚ್ಚುಗೆ ವ್ಯಕ್ತಪಡಿಸಿದ ಆಯುಷ್ಮಾನ್​ ಖುರಾನಾ ಪತ್ನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.