ETV Bharat / entertainment

'ಮಾನ್ಸೂನ್ ರಾಗ' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ

author img

By

Published : Sep 2, 2022, 12:21 PM IST

ಶೇ.80 ರಷ್ಟು ಮಳೆಯಲ್ಲೇ ಚಿತ್ರೀಕರಣವಾಗಿರೋ ಮಾನ್ಸೂನ್ ರಾಗ ಸಿನಿಮಾ ಇದೇ ತಿಂಗಳ 16ಕ್ಕೆ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.

monsoon raga movie release date announced
ಮಾನ್ಸೂನ್ ರಾಗ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್

ಕನ್ನಡ ಚಿತ್ರರಂಗದಲ್ಲಿ ಟೈಟಲ್, ಹಾಡು, ಟ್ರೈಲರ್​ನಿಂದಲೇ ಟಾಕ್ ಆಗುತ್ತಿರುವ ಚಿತ್ರ 'ಮಾನ್ಸೂನ್ ರಾಗ'. ನಟ ಡಾಲಿ ಧನಂಜಯ್ ಹಾಗು ನಟಿ ರಚಿತಾ ರಾಮ್ ಮೊದಲ ಬಾರಿಗೆ ಒಟ್ಟಾಗಿ ಸ್ಕ್ರೀನ್ ಹಂಚಿಕೊಂಡಿರುವ ಬಹು ನಿರೀಕ್ಷೆಯ ಸಿನಿಮಾವಿದು. ಶೇ.80ರಷ್ಟು ಮಳೆಯಲ್ಲೇ ಚಿತ್ರೀಕರಣವಾಗಿರೋ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅನೌನ್ಸ್​​ ಮಾಡಿದೆ.

ಚಿತ್ರತಂಡದ ಯೋಜನೆಯಂತೆ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಸಿನಿಮಾ ಈಗಾಗಲೇ ಪ್ರೇಕ್ಷಕರಿಗೆ ದರ್ಶನ ನೀಡಬೇಕಿತ್ತು. ಆದರೆ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಹೆಚ್ಚು ಒತ್ತು ನೀಡಿದ ಕಾರಣ ಸಿನಿಮಾ ಬಿಡುಗಡೆ ದಿನಾಂಕವನ್ನು ನಿರ್ಮಾಪಕ ವಿಖ್ಯಾತ್ ಮುಂದಕ್ಕೆ ಹಾಕಿದರು.‌ ಇದೀಗ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳ 16ಕ್ಕೆ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.

monsoon raga movie release date announced
ಮಾನ್ಸೂನ್ ರಾಗ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್

ಟ್ರೈಲರ್​ನಲ್ಲಿ, ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ರಚಿತಾ ರಾಮ್‌ ಕಾಣಿಸಿಕೊಂಡಿದ್ದಾರೆ. ಕೆಲ ದೃಶ್ಯಗಳಲ್ಲಿ ಧನಂಜಯ್, ರಚಿತಾ ರಾಮ್ ಸಖತ್ ಚಾಲೆಂಜಿಂಗ್ ಆಗಿ ನಟಿಸಿದ್ದಾರೆ. ಉಳಿದ ಕಲಾವಿದರಾದ ಸುಹಾಸಿನಿ, ಅಚ್ಯುತ್ ಕುಮಾರ್ ಅವರ ಕಾಂಬಿನೇಶನ್ ಅದ್ಭುತವಾಗಿ ಬಂದಿದೆ. ಯಶಾ ಶಿವಕುಮಾರ್ 'ರಾಗ ಸುಧಾ' ಹಾಡಿನಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ: ಸ್ಪೂಕಿ ಕಾಲೇಜ್ ಸಿನಿಮಾ: 'ಮೆಲ್ಲುಸಿರೆ ಸವಿಗಾನ..' ಹಾಡಿಗೆ ಹೆಜ್ಜೆ ಹಾಕಿದ ರೀಷ್ಮಾ ನಾಣಯ್ಯ

ಸಿನಿಮಾದ ಶೇ.80ರಷ್ಟು ದೃಶ್ಯಗಳನ್ನು ಮಳೆಯಲ್ಲೇ ಶೂಟಿಂಗ್ ಮಾಡಿರೋದು ಇದರ ವಿಶೇಷತೆ. ಜೊತೆಗೆ ಎಸ್​ಕೆ‌ ರಾವ್ ಛಾಯಾಗ್ರಹಣ,‌ ಅನೂಪ್ ಸೀಳಿನ್ ಸಂಗೀತ ಮಾನ್ಸೂನ್ ರಾಗ ಚಿತ್ರದ ಹೈಲೆಟ್ಸ್. ಸಿನಿಮಾ 70-80ರ ದಶಕದಲ್ಲಿ ನಡೆಯುವಂಥ ಕಥೆಯನ್ನು ಹೊಂದಿದ್ದು ಗುರು ಕಶ್ಯಪ್ ಅವರು ಚಿತ್ರದ ಸಂಭಾಷಣೆ ಬರೆದಿದ್ದರು. ಆದರೆ ಅವರು ಇಂದು ನಮ್ಮೊಂದಿಗಿಲ್ಲ. ಚಿತ್ರ ಇನ್ನೇನು ಕೆಲ ದಿನಗಳಲ್ಲಿ ಬಿಡುಗಡೆ ಆಗಲಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.