ETV Bharat / entertainment

ಶಿವಣ್ಣ ನಟನೆಯ 'ಘೋಸ್ಟ್​' ಚಿತ್ರದ ಶೂಟಿಂಗ್​ ಸೆಟ್​ಗೆ ಸಚಿವ ಮಧು ಬಂಗಾರಪ್ಪ ಭೇಟಿ

author img

By

Published : Jun 2, 2023, 7:43 PM IST

ನಟ ಶಿವ ರಾಜ್​ಕುಮಾರ್​ ಅಭಿನಯದ 'ಘೋಸ್ಟ್'​ ಚಿತ್ರದ ಶೂಟಿಂಗ್​ ಸೆಟ್​ಗೆ ನೂತನ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿದರು.

Ghost
ಶಿವಣ್ಣ 'ಘೋಸ್ಟ್​' ಚಿತ್ರದ ಶೂಟಿಂಗ್​ ಸೆಟ್​ಗೆ ಸಚಿವ ಮಧು ಬಂಗಾರಪ್ಪ ಭೇಟಿ

ಕನ್ನಡ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡ್ತಾ ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್ ಬ್ಯುಸಿಯಾಗಿದ್ದಾರೆ.​ ಕೆಲ ದಿನಗಳ ಹಿಂದೆ ತಮ್ಮ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ಭೈರತಿ ರಣಗಲ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಸದ್ಯ ಅವರು ಟೈಟಲ್​ನಿಂದಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಟಾಕ್ ಆಗುತ್ತಿರುವ 'ಘೋಸ್ಟ್' ಸಿನಿಮಾದ ಚಿತ್ರೀಕರಕಣದಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಮೈದಾನದಲ್ಲಿ 'ಘೋಸ್ಟ್' ಚಿತ್ರಕ್ಕಾಗಿ ಅದ್ದೂರಿ ಸೆಟ್ಟ್​ಗಳನ್ನು ಹಾಕಿ ಶೂಟಿಂಗ್ ಮಾಡಲಾಗುತ್ತಿದೆ.

Ghost
ಶಿವಣ್ಣ 'ಘೋಸ್ಟ್​' ಚಿತ್ರದ ಶೂಟಿಂಗ್​ ಸೆಟ್​ಗೆ ಸಚಿವ ಮಧು ಬಂಗಾರಪ್ಪ ಭೇಟಿ

ಸದ್ಯ ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ನೂತನ ಸಚಿವರಾದ ಮಧು ಬಂಗಾರಪ್ಪ ಸರ್​ಪ್ರೈಸ್ ಭೇಟಿ ಕೊಟ್ಟರು. ಈ ಸಂಧರ್ಭದಲ್ಲಿ ಶಿವ ರಾಜ್​ಕುಮಾರ್, ಗೀತಾ ಶಿವ ರಾಜ್​ಕುಮಾರ್ ಹಾಗೂ ನಿರ್ಮಾಪಕ ಸಂದೇಶ್ ಸೇರಿದಂತೆ ಚಿತ್ರತಂಡದವರ ಜೊತೆ ಸಚಿವರು ಸ್ವಲ್ಪ ಸಮಯ ಮಾತುಕತೆ ನಡೆಸಿದರು. ಹಾಗೇ ಈ ಸಿನಿಮಾವು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಘೋಸ್ಟ್​ ಸಿದ್ಧ: 'ಘೋಸ್ಟ್' ಸಿನಿಮಾ ಆ್ಯಕ್ಷನ್‌ ಥ್ರಿಲ್ಲರ್‌ ಜಾನರ್‌ನ ಚಿತ್ರವಾಗಿದ್ದು, ಕಮರ್ಷಿಯಲ್‌ ಎಲಿಮೆಂಟ್​ಗಳೇ ಹೆಚ್ಚು ಇವೆಯಂತೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ಶಿವ ರಾಜ್‌ಕುಮಾರ್ ಅವರಿಗೆ ನಾಯಕಿಯೇ ಇಲ್ಲ. ಸ್ಪೈ ಥ್ರಿಲ್ಲರ್‌ ಮಾದರಿಯಲ್ಲಿ ಕಥೆಯನ್ನು ಹೆಣೆಯಲಾಗಿದೆ. ಟೋಪಿವಾಲ, ಹಾಗೂ ಓಲ್ಡ್ ಮಂಕ್ ಚಿತ್ರಗಳನ್ನ ನಿರ್ದೇಶನ ಮಾಡಿರೋ ಶ್ರೀನಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

Ghost
ಶಿವಣ್ಣ 'ಘೋಸ್ಟ್​' ಚಿತ್ರದ ಶೂಟಿಂಗ್​ ಸೆಟ್​ಗೆ ಸಚಿವ ಮಧು ಬಂಗಾರಪ್ಪ ಭೇಟಿ

ಇದನ್ನೂ ಓದಿ: ಟೈಗರ್​ 3 ಶೂಟಿಂಗ್​: ಭರ್ಜರಿ ಆ್ಯಕ್ಷನ್​ ಸೀನ್​ ಪೂರ್ಣ, ಸಲ್ಲು - ಶಾರುಖ್​​ ವಿಡಿಯೋ ಲೀಕ್​!

ಈ ಚಿತ್ರದಲ್ಲಿ ಶಿವ ರಾಜ್​ಕುಮಾರ್ ಲುಕ್ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿದ್ದು, ಬಾಲಿವುಡ್ ನಟ ಅನೂಪ್ ಖೇರ್​, ಮಲೆಯಾಳಂ ನಟ ಜಯರಾಮ್, ಬಹುಭಾಷಾ ನಟ ಪ್ರಶಾಂತ್ ನಾರಾಯಣನ್, ಬಾಲಿವುಡ್​ ಎವರ್​ಗ್ರೀನ್​ ಬ್ಯೂಟಿ ಶಿಲ್ಪಾ ಶೆಟ್ಟಿ ಹಾಗೆಯೇ ಸ್ಯಾಂಡಲ್​ವುಡ್​ ದಿಗ್ಗಜರಾದ ಅಚ್ಯುತ್ ಕುಮಾರ್, ದತ್ತಣ್ಣ ಮತ್ತು ಅವಿನಾಶ್ ಪ್ರಮುಖ ಪಾತ್ರಗಳನ್ನು ಅಭಿನಯಿಸಿದ್ದಾರೆ. ಬೆಂಗಳೂರು, ಮೈಸೂರಿನಲ್ಲಿ ಘೋಸ್ಟ್ ಸಿನಿಮಾದ ಚಿತ್ರೀಕರಣ ಬಹುತೇಕ ಮಾಡಲಾಗಿದೆ.

ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ಟಗರು ಸಿನಿಮಾ ಖ್ಯಾತಿಯ ಛಾಯಾಗ್ರಾಹಕ ಮಹೇಂದ್ರ ಸಿಂಹ ಅವರ ಕ್ಯಾಮರಾ ವರ್ಕ್​ ಇದೆ. ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ (MLC) ಅರ್ಪಿಸುವ, ಸಂದೇಶ್ ಎನ್ ಈ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಆಲ್ ಮೋಸ್ಟ್ ಶೂಟಿಂಗ್ ಮುಗಿಸಿರುವ ಘೋಸ್ಟ್‌ ಚಿತ್ರದ ಟೀಸರ್ ಅಥವಾ ಟ್ರೈಲರ್ ಅನ್ನು ರಿವೀಲ್ ಮಾಡುವ ಸಿದ್ಧತೆಯಲ್ಲಿ ನಿರ್ಮಾಪಕರು ಇದ್ದಾರೆ. ಸದ್ಯ ನೂತನ ಸಚಿವ ಮಧು ಬಂಗಾರಪ್ಪ ಘೋಸ್ಟ್ ಚಿತ್ರದ ಶೂಟಿಂಗ್ ಅಡ್ಡಕ್ಕೆ ಭೇಟಿ ಕೊಟ್ಟಿದ್ದು ಇಡೀ ತಂಡಕ್ಕೆ ಖುಷಿ ತಂದಿದೆ.

ಇದನ್ನೂ ಓದಿ: ಚೇತನ್ ಗಡಿಪಾರು ಭೀತಿ: ಕೇಂದ್ರ ಸರ್ಕಾರದ ಆದೇಶದ ಮೇಲಿನ ಮಧ್ಯಂತರ ತಡೆಯಾಜ್ಞೆ ವಿಸ್ತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.