ETV Bharat / entertainment

ಬಿಗ್ ಬಾಸ್ ಶಶಿ 'ಮೆಹಬೂಬಾ' ಸಿನಿಮಾಗೆ ಸಚಿವ ಚಲುವರಾಯಸ್ವಾಮಿ ಸಾಥ್

author img

By ETV Bharat Karnataka Team

Published : Jan 5, 2024, 8:21 PM IST

ಸಚಿವ ಚಲುವರಾಯಸ್ವಾಮಿ ಅವರು 'ಮೆಹಬೂಬಾ' ಚಿತ್ರದ ಪೋಸ್ಟರ್ ಅನಾವರಣಗೊಳಿಸಿದ್ದಾರೆ.

Minister chaluvaraya swamy Support to 'Mehabooba' movie
'ಮೆಹಬೂಬಾ' ಸಿನಿಮಾಗೆ ಸಚಿವ ಚಲುವರಾಯಸ್ವಾಮಿ ಸಾಥ್

ಕನ್ನಡದ ರಿಯಾಲಿಟಿ ಶೋ 'ಬಿಗ್ ಬಾಸ್' ಮೂಲಕ ಚಿರಪರಿಚಿತರಾದವರು ಶಶಿ. ಇದೇ ಶಶಿ ಇದೀಗ 'ಮೆಹಬೂಬಾ' ಎಂಬ ಸಿನಿಮಾ ಮಾಡುತ್ತಿದ್ದು, ತಮ್ಮ ಹುಟ್ಟುಹಬ್ಬದಂದೇ ಚಿತ್ರತಂಡ ಪೋಸ್ಟರ್ ಹೊರತಂದಿದೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಪೋಸ್ಟರ್ ರಿಲೀಸ್ ಮಾಡಿದರು.

ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಸಚಿವ ಚಲುವನಾರಾಯಣಸ್ವಾಮಿ, ಈ ಸಿನಿಮಾದ ಹೀರೋ, ಪ್ರೊಡ್ಯೂಸರ್ ಆಗಿ ಶಶಿ ಕೆಲಸ ಮಾಡುತ್ತಿದ್ದಾರೆ. ಲಾಭ-ನಷ್ಟ ಹಾಗೂ ಹೆಸರು ಅವ್ರದ್ದೇ. ರಾಜ್ಯದ ಜನರು ಆಶೀರ್ವಾದ ಮಾಡಬೇಕು. ನಾಯಕಿ ನನ್ನ ಗೆಳೆಯನ ಮಗಳು. ಇಬ್ಬರಿಗೂ ಈ ಸಿನಿಮಾ ಸಕ್ಸಸ್ ತಂದುಕೊಡಲಿ. ಇತ್ತೀಚೆಗೆ ಅನೇಕ ಚಿತ್ರಗಳು ಯಶ ಕಾಣುತ್ತಿವೆ. ಜನರು ಯಾವ ರೀತಿಯ ಚಿತ್ರಗಳನ್ನು ಇಷ್ಟಪಡುತ್ತಾರೆ, ಪ್ರೇಕ್ಷಕರು ಯಾವ ರೀತಿ ಸಿನಿಮಾ‌‌ ನೋಡ್ತಾರೆ ಅನ್ನೋದನ್ನು ಹೇಳಲು ಬರೋದಿಲ್ಲ ಎಂದು ತಿಳಿಸಿದರು.

Minister chaluvaraya swamy Support to 'Mehabooba' movie
'ಮೆಹಬೂಬಾ' ಸಿನಿಮಾಗೆ ಸಚಿವ ಚಲುವರಾಯಸ್ವಾಮಿ ಸಾಥ್

ನಾಯಕ ನಟ ಶಶಿ ಮಾತನಾಡಿ, 'ಮೆಹಬೂಬಾ' ನನಗೆ ಎಮೋಷನಲ್ ಜರ್ನಿ. ಒಂದು ವಿಷಯವನ್ನು ಜನರಿಗೆ ತಲುಪಿಸಬೇಕು ಅನ್ನೋದು ನಮ್ಮ ಸಿನಿಮಾದ ಅಜೆಂಡಾ. 200 ಸಿನಿಮಾಗಳು ಬಂದರೂ ಹೆಸರು ಮಾಡೋದು 10 ರಿಂದ 15 ಸಿನಿಮಾಗಳು. ಆ 10-15 ಸಿನಿಮಾಗಳಲ್ಲಿ ನಮ್ಮದು ಇರಲಿ ಅನ್ನೋದು ನಮ್ಮ ಕನಸು. ಮೆಹಬೂಬಾ ನನಗೆ ಖುಷಿ ತಂದುಕೊಟ್ಟ ಸಿನಿಮಾ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಆಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: 'ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಉಡುಗೊರೆ': ಹುಟ್ಟುಹಬ್ಬದ ಬಗ್ಗೆ ಅಭಿಮಾನಿಗಳಿಗೆ ಯಶ್​ ಮನವಿ

ನಿರ್ದೇಶಕ ಅನೂಪ್ ಆಂಟೋನಿ ಮಾತನಾಡಿ, ಮೆಹಬೂಬಾ ನನ್ನ ಎರಡನೇ ಸಿನಿಮಾ. ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್​​ ಹಂತದಲ್ಲಿದೆ. ಫೆಬ್ರವರಿಗೆ ನಮ್ಮ ಚಿತ್ರವನ್ನು ರಿಲೀಸ್ ಮಾಡಲು ಪ್ಲ್ಯಾನ್​​ ಮಾಡುತ್ತಿದ್ದೇವೆ. ಅದ್ಭುತ ಲವ್ ಸ್ಟೋರಿ ಸಿನಿಮಾ ಮೂಲಕ ಶಶಿ ಸರ್ ಲಾಂಚ್ ಆಗುತ್ತಿದ್ದಾರೆ. ಪವನ ಮೇಡಂ ಅದ್ಭುತ ನಟನೆ ಮಾಡಿದ್ದಾರೆ. ಮಾರ್ಡನ್ ರೈತ ಎಂದು ಖ್ಯಾತಿ ಪಡೆದಿರುವ ಶಶಿ 'ಮೆಹಬೂಬಾ' ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಾಯಕನಾಗಿ ಈ ಚಿತ್ರದಲ್ಲಿ ಬಣ್ಣ ಹಚ್ಚುವುದರ ಜೊತೆಗೆ ನಿರ್ಮಾಪಕನಾಗಿಯೂ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕೇರಳದಲ್ಲಿ ನಡೆದ ನೈಜಘಟನೆಯೊಂದನ್ನು ಆಧರಿಸಿ ಈ ಚಿತ್ರ ಸಿದ್ಧವಾಗುತ್ತಿದೆ. ಒಟ್ಟು 5 ಹಾಡುಗಳಿವೆ ಎಂದರು.

ಇದನ್ನೂ ಓದಿ: 'ಸಲಾರ್'​ ಗಳಿಕೆ ಇಳಿಕೆ: ಈವರೆಗಿನ ಬಾಕ್ಸ್‌ ಆಫೀಸ್ ಕಲೆಕ್ಷನ್ ವಿವರ

ಮ್ಯಾಥ್ಯೂಸ್‌ ಮನು ಸಂಗೀತ ನಿರ್ದೇಶನವಿರುವ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ರಘು ಶಾಸ್ತ್ರೀ ರಚಿಸಿದ್ದಾರೆ. ಸಂಭಾಷಣೆಯನ್ನು ರಘು ಶಾಸ್ತ್ರೀ ಅವರೇ ಬರೆದಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಆಲ್ ಮೋಸ್ಟ್ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದ್ದು, ಫೆಬ್ರವರಿ ತಿಂಗಳಲ್ಲಿ ಈ ಚಿತ್ರ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್​ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.