ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ 'ಮೆಲ್ಲಗೆ' ರೊಮ್ಯಾಂಟಿಕ್‌ ಹಾಡು ಬಿಡುಗಡೆ

author img

By ETV Bharat Karnataka Desk

Published : Nov 7, 2023, 10:24 AM IST

swathi muttina male haniye movie

'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ಮೊದಲ ಹಾಡು 'ಮೆಲ್ಲಗೆ' ಅನಾವರಣಗೊಂಡಿದ್ದು, ಕೇಳುಗರಿಗೆ ಮುದ ನೀಡುತ್ತಿದೆ.

'ಸ್ವಾತಿ ಮುತ್ತಿನ ಮಳೆ ಹನಿಯೇ' ಕನ್ನಡ ಚಿತ್ರರಂಗದಲ್ಲೀಗ ಗಮನ ಸೆಳೆಯುತ್ತಿರುವ ಹೊಸ ಸಿನಿಮಾ. ಮೋಹಕತಾರೆ ರಮ್ಯಾ ನಿರ್ಮಾಣದ ಚೊಚ್ಚಲ ಚಿತ್ರ ಅನ್ನೋದು ಒಂದೆಡೆಯಾದರೆ, ಪ್ರತಿಭಾನ್ವಿತ ನಟ ರಾಜ್​ ಬಿ.ಶೆಟ್ಟಿ ನಟನೆಯ ಬಹುನಿರೀಕ್ಷಿತ ಚಿತ್ರ ಅನ್ನೋದು ಮತ್ತೊಂದು ವಿಶೇಷತೆ. ಬಿಡುಗಡೆಗೆ ಇನ್ನೇನು ಕೆಲವೇ ಕೆಲ ದಿನಗಳು ಬಾಕಿ ಉಳಿದಿದ್ದು, ಸಿನಿಮಾ ಸುದ್ದಿಯಲ್ಲಿದೆ.

  • " class="align-text-top noRightClick twitterSection" data="">

'ಮೆಲ್ಲಗೆ' ಹಾಡು ಅನಾವರಣ: ಕಾಸ್ಟ್, ಟೀಮ್​, ಟೈಟಲ್​, ಪೋಸ್ಟರ್​ನಿಂದ ಸಿನಿಪ್ರಿಯರ ಗಮನ ಸೆಳೆದಿರುವ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ 'ಮೆಲ್ಲಗೆ' ಹಾಡನ್ನು ಚಿತ್ರತಂಡ ಅನಾವರಣಗೊಳಿಸಿದೆ. ಚಿತ್ರದ ಮೊದಲ ಹಾಡು ಇದಾಗಿದ್ದು, ಕೇಳುಗರ ಗಮನ ಸೆಳೆಯುತ್ತಿದೆ. ರಾಜ್‍ ಬಿ.ಶೆಟ್ಟಿ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರಕ್ಕೆ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಬಂಡವಾಳ ಹೂಡಿದ್ದಾರೆ. ತಮ್ಮ ಆ್ಯಪಲ್‍ ಬಾಕ್ಸ್ ಸ್ಟುಡಿಯೋಸ್‍ ಮೂಲಕ ಇದೇ ಮೊದಲ ಬಾರಿಗೆ ಸಿನಿಮಾವೊಂದನ್ನು ಹೊರ ತರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದ ಮೇಲಿನ ಕುತೂಹಲ ಹೆಚ್ಚಾಗಿದೆ.

ರಾಜ್‍ ಬಿ.ಶೆಟ್ಟಿ ಹೇಳಿದ್ದು..:. 'ಮೆಲ್ಲಗೆ'' ಹಾಡಿಗೆ ಮಿಥುನ್‍ ಮುಕುಂದನ್‍ ಸಂಗೀತ ಸಂಯೋಜಿಸಿದ್ದು, ಮಾಧುರಿ ಶೇಷಾದ್ರಿ ಹಾಡಿದ್ದಾರೆ. ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪೃಥ್ವಿ ಎಂಬವರು ಹಾಡು ಬರೆದಿದ್ದಾರೆ. "ಇದು ಪ್ರೀತಿಯ ಕುರಿತಾಗಿ ಓರ್ವ ಮಹಿಳೆಯ ದೃಷ್ಟಿಕೋನದ ಹಾಡು. 'ಪ್ರೀತಿ'ಯನ್ನು ಮಹಿಳೆಯರು ಹೇಗೆ ಅನುಭವಿಸುತ್ತಾರೆ ಎನ್ನುವುದು ಬೇಕಾಗಿತ್ತು. ಹಾಗಾಗಿ, ಪೃಥ್ವಿ ಅವರಿಂದಲೇ ಬರೆಸಿದೆ" ಎಂದು ರಾಜ್‍ ಬಿ.ಶೆಟ್ಟಿ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: ಇಂದು 'ಸ್ಯಾಮ್ ಬಹದ್ದೂರ್' ಟ್ರೇಲರ್​ ಬಿಡುಗಡೆ; ದೆಹಲಿಯಲ್ಲಿ ಚಿತ್ರತಂಡ

ಈ ಹಾಡಿಗೆ ಶಾಸ್ತ್ರೀಯ ಸಂಗೀತದ ಸ್ಪರ್ಶವಿದೆ. ಸಂಗೀತ ನಿರ್ದೇಶಕ ಮಿಥುನ್‍ ಮುಕುಂದನ್‍ ತಮ್ಮ ಸಂಯೋಜನೆಯಿಂದ ಮೋಡಿ ಮಾಡಿದ್ದಾರೆ. ಸ್ವತಃ ಹಿನ್ನೆಲೆ ಗಾಯಕಿಯೂ ಆಗಿರುವ ನಟಿ ಸಿರಿ ರವಿಕುಮಾರ್ ಈ ಹಾಡಿನ ಅಭಿಮಾನಿಯಾಗಿದ್ದು, ಪದೇ ಪದೇ ಕೇಳುತ್ತಿರುವುದಾಗಿ ಹೇಳಿದ್ದಾರೆ. ಚಿತ್ರದಲ್ಲಿ ರಾಜ್‍ ಮತ್ತು ಸಿರಿ ಜೊತೆಗೆ ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಜೆ.ಪಿ.ತುಮ್ಮಿನಾಡು, ಸ್ನೇಹ ಶರ್ಮಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಇದನ್ನೂ ಓದಿ: ಹ್ಯಾಪಿ ಬರ್ತ್​ಡೇ ಕಮಲ್​ ಹಾಸನ್!​ ಮೂರು ದಶಕಗಳ ನಂತರ ಮಣಿರತ್ನಂ 'Thug Life'ನಲ್ಲಿ ಅಭಿನಯ

ಪ್ರವೀಣ್‍ ಶ್ರೀಯಾನ್‍ ಚಿತ್ರದ ಛಾಯಾಗ್ರಹಣದ ಜೊತೆಗೆ, ರಾಜ್‍ ಅವರೊಂದಿಗೆ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಲೈಟರ್ ಬುದ್ಧ ಫಿಲಂಸ್‍ ಸಹಯೋಗದೊಂದಿಗೆ ನಿರ್ಮಾಣವಾಗಿರುವ ಚಿತ್ರವನ್ನು ನವೆಂಬರ್ 24ರಂದು ಕೆ.ಆರ್.ಜಿ. ಸ್ಟುಡಿಯೋಸ್‍ ಸಂಸ್ಥೆಯು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ರಾಜ್​ ಬಿ.ಶೆಟ್ಟಿ ಕೊನೆಯದಾಗಿ ಟೋಬಿ ಚಿತ್ರದಲ್ಲಿ ನಟಿಸಿದ್ದರು. ಕಥಾಹಂದರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ಸು ಕಂಡಿತ್ತು. ಹಾಗಾಗಿ ಮುಂದಿನ ಸಿನಿಮಾ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.