ETV Bharat / entertainment

ದೇವರನಾಡಿನಲ್ಲಿ ಪಂಜುರ್ಲಿ ಅಬ್ಬರ.. ಮಲೆಯಾಳಂನಲ್ಲಿ ಕಾಂತಾರ ರಿಲೀಸ್​​

author img

By

Published : Oct 20, 2022, 12:19 PM IST

ಸೆಪ್ಟೆಂಬರ್​ 30ರಂದು ಬಿಡುಗಡೆ ಆದ ಕಾಂತಾರ ಕೇವಲ 15 ದಿನಗಳಲ್ಲಿ ಹಿಂದಿ, ತೆಲುಗು, ತಮಿಳಿಗೆ ಡಬ್​ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇಂದು ಮಲೆಯಾಳಂ ಭಾಷೆಯಲ್ಲೂ ಸಿನಿಮಾ ರಿಲೀಸ್​ ಆಗಿ ಸಖತ್​ ಸೌಂಡ್​ ಮಾಡುತ್ತಿದೆ.

Maleyalam kantara movie released
ಮಲೆಯಾಳಂನಲ್ಲಿ ಕಾಂತಾರ ರಿಲೀಸ್​​

ಭಾರತೀಯ ಚಿತ್ರರಂಗದಲ್ಲೀಗ ಕಾಂತಾರದ್ದೇ ಸುದ್ದಿ. ಬಹುತೇಕ ಸಿನಿಮಾಗಳು ಪ್ಯಾನ್​ ಇಂಡಿಯಾ ಆಗಿ ಥೀಯೇಟರ್​​ಗಳಲ್ಲಿ ಧೂಳೆಬ್ಬಿಸಿದರೆ, ಕಾಂತಾರ ಕನ್ನಡದಲ್ಲಿ ಬಿಡುಗಡೆ ಆಗಿ ಬಳಿಕ ಪ್ಯಾನ್ ಇಂಡಿಯಾ ಸಿನಿಮಾ ಸಿನಿಮಾ ಆಗಿ ಮಾರ್ಪಾಡಾದ ಹೆಗ್ಗಳಿಕೆ ಹೊಂದಿದೆ. ಕನ್ನಡದ ಸಿನಿಮಾವನ್ನು ಪರಭಾಷೆಯಲ್ಲೂ ಬಿಡುಗಡೆ ಮಾಡಬೇಕು ಎನ್ನುವ ಬೇಡಿಕೆ ಈ ಮಟ್ಟದಲ್ಲಿ ಬಂದಿದ್ದು ಇದೇ ಮೊದಲು.

ಸೆಪ್ಟೆಂಬರ್​ 30ರಂದು ಬಿಡುಗಡೆ ಆದ ಕಾಂತಾರ ಕೇವಲ 15 ದಿನಗಳಲ್ಲಿ ಹಿಂದಿ, ತೆಲುಗು, ತಮಿಳಿಗೆ ಡಬ್​ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇಂದು ಮಲೆಯಾಳಂ ಭಾಷೆಯಲ್ಲೂ ಸಿನಿಮಾ ರಿಲೀಸ್​ ಆಗಿ ಸಖತ್​ ಸೌಂಡ್​ ಮಾಡುತ್ತಿದೆ. ಮಲೆಯಾಳಂ ಚಿತ್ರರಂಗದ ಸೂಪರ್​ ಸ್ಟಾರ್ ಪೃಥ್ವಿರಾಜ್ ಸುಕುಮಾರನ್​ ಅವರು ಈ ಕಾಂತಾರ ಸಿನಿಮಾವನ್ನು ಮಲೆಯಾಳಂನಲ್ಲಿ ಪ್ರಸ್ತುತಪಡಿಸಿದ್ದಾರೆ.

ಇದನ್ನೂ ಓದಿ: ಹಿಂದಿ ಹೇರಿಕೆ ಹೇಗೆ ಒಪ್ಪೋಕಾಗಲ್ವೋ ಹಿಂದುತ್ವ ಹೇರಿಕೆಯನ್ನೂ ಒಪ್ಪಲಾಗಲ್ಲ: ನಟ ಚೇತನ್​​

ಇನ್ನೂ ಭೂತಕೋಲ ಎಂಬ ಆಚರಣೆಗಳು ಧರ್ಮಕ್ಕಿಂತ ಹಿಂದಿನಿಂದ ಇರುವವು ಎಂದು ಆ ದಿನಗಳು ನಟ ಚೇತನ್​ ಹೇಳಿಕೆ ನೀಡಿ ಪರ ವಿರೋಧ ವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಬಹುತೇಕ ಮೆಚ್ಚುಗೆಯನ್ನೇ ಗಳಿಸಿದ್ದ ಈ ಸಿನಿಮಾ ಈಗ ಟೀಕೆಗೂ ಗುರಿಯಾಗಿದೆ. ಆದರೆ, ಭೂತಕೋಲ ಎಂಬುದು ಹಿಂದೂ ಧರ್ಮದ ಆಚರಣೆ ಎಂಬುದು ಬಹುತೇಕ ಮಂದಿಯ ವಾದ.

ಇಂತಹ ಸಂದರ್ಭದಲ್ಲಿ ಕಾಂತಾರ ಸಿನಿಮಾ ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್​​ ಭೂತಕೋಲದ ಒಂದು ವಿಡಿಯೋ ಶೇರ್ ಮಾಡಿಕೊಂಡಿದೆ. ನಮ್ಮ ಭೂಮಿ, ಸಂಸ್ಕೃತಿ ಮತ್ತು ದೈವಿಕತೆಯ ಸೌಂದರ್ಯದ ಸಾಕ್ಷಿ ಎಂದು ಬರೆದುಕೊಂಡಿದೆ.

ಇದನ್ನೂ ಓದಿ: ಮತ್ತೊಂದು ಯಶಸ್ಸಿಗೆ ಸ್ಯಾಂಡಲ್​ವುಡ್​ ಸಿದ್ಧ: ಡಾಲಿಯ ಹೆಡ್ ​ಬುಷ್​ಗೆ ಕಾಂತಾರ ಸಾರಥಿಯಿಂದ ಗುಡ್‌ಲಕ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.