ETV Bharat / entertainment

ಟಾಲಿವುಡ್​ ಗಾಸಿಪ್: ದುಬೈನಲ್ಲಿ ದುಬಾರಿ ವಿಲ್ಲಾ ಖರೀದಿಸಿದ್ರಂತೆ ಮಹೇಶ್​ ಬಾಬು

author img

By

Published : May 1, 2023, 12:18 PM IST

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಸಾಲು ಸಾಲು ಚಿತ್ರಗಳೊಂದಿಗೆ ಮುನ್ನುಗ್ಗುತ್ತಿದ್ದಾರೆ. ಸ್ವಲ್ಪ ಬಿಡುವು ಸಿಕ್ಕರೂ ಫಾರಿನ್ ಟ್ರಿಪ್ ಹೋಗಲು ಇಷ್ಟಪಡುವ ನಟ, ಇತ್ತೀಚೆಗೆ ದುಬೈಗೆ ಹೋಗಿದ್ದರು. ಈ ಪ್ರವಾಸದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲದ ಸುದ್ದಿಯೊಂದು ಹರಿದಾಡುತ್ತಿದೆ.

Mahesh Babu bought a luxurious villa  Mahesh Babu bought a luxurious villa in Dubai  Tollywood star Mahesh Babu news  ದುಬೈನಲ್ಲಿ ದುಬಾರಿ ವಿಲ್ಲಾ ಖರೀದಿಸಿದ್ದಾರಂತೆ ಮಹೇಶ್  ದುಬಾರಿ ವಿಲ್ಲಾ ಖರೀದಿಸಿದ್ದಾರಂತೆ ಮಹೇಶ್​ ಬಾಬು  ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು  ಫಾರಿನ್ ಟ್ರಿಪ್ ಹೋಗಲು ಇಷ್ಟಪಡುವ ಮಹೇಶ್  ಸ್ವಲ್ಪ ಗ್ಯಾಪ್ ಸಿಕ್ಕರೂ ಫ್ಯಾಮಿಲಿ ಸಮೇತ ಟೂರ್  ವ್ಯಾಪಾರದ ಮೂಲಕ ಎರಡೂ ಕೈಗಳಿಂದ ಸಂಪಾದನೆ  ಸರ್ಕಾರ ವಾರಿ ಪಾಟ ಸಿನಿಮಾ ಕಳೆದ ವರ್ಷ
ದುಬೈನಲ್ಲಿ ದುಬಾರಿ ವಿಲ್ಲಾ ಖರೀದಿಸಿದ್ದಾರಂತೆ ಮಹೇಶ್​ ಬಾಬು!

ಹೈದರಾಬಾದ್​ (ತೆಲಂಗಾಣ): ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರು ರಜಾ ದಿನಗಳನ್ನು ಸಂಭ್ರಮಿಸುತ್ತಾರೆ. ಸಾಲು ಸಾಲು ಚಿತ್ರಗಳೊಂದಿಗೆ ಮುಂದಡಿ ಇಡುತ್ತಿರುನ ಹೀರೋ ಸ್ವಲ್ಪ ಗ್ಯಾಪ್ ಸಿಕ್ಕರೂ ಸಾಕು ಫ್ಯಾಮಿಲಿ ಸಮೇತ ಟೂರ್ ಹೋಗ್ತಾರೆ. ಈಗಾಗಲೇ ಫ್ರಾನ್ಸ್‌ ಮತ್ತು ಜರ್ಮನಿಗೆ ಪ್ರವಾಸ ಹೋಗಿ ಬಂದಿದ್ದಾರೆ. ಇತ್ತೀಚೆಗೆ ಮಹೇಶ್ ಮತ್ತೊಮ್ಮೆ ವಿದೇಶ ಪ್ರವಾಸ ಕೈಗೊಂಡಿದ್ದರು. ಈ ಬಾರಿ ಅವರು ದುಬೈಗೆ ತೆರಳಿದ್ದರು. ಆದರೆ, ಮಹೇಶ್ ದುಬೈ ಪ್ರವಾಸದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸುದ್ದಿ ಹರಿದಾಡುತ್ತಿದೆ.

ಸಿನಿಮಾ ಹಾಗೂ ವ್ಯಾಪಾರದ ಮೂಲಕ ಎರಡೂ ಕೈಗಳಲ್ಲೂ ಸಂಪಾದನೆ ಮಾಡುತ್ತಿರುವ ಮಹೇಶ್​ ದುಬೈನಲ್ಲಿ ದುಬಾರಿ ಬೆಲೆಯ ವಿಲ್ಲಾ(ಐಷಾರಾಮಿ ಮನೆ) ಖರೀದಿಸಿದ್ದಾರಂತೆ. ಈ ವಿಲ್ಲಾದ ನೋಂದಣಿ ಪ್ರಕ್ರಿಯೆಗಾಗಿ ದುಬೈಗೆ ತೆರಳಿದ್ದರು ಎಂಬ ವರದಿಗಳಿವೆ. ಈ ನೋಂದಣಿ ಪ್ರಕ್ರಿಯೆಗೆ ಎರಡು ದಿನಗಳ ಕಾಲಾವಕಾಶ ಬೇಕಾಗುತ್ತದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಮಹೇಶ್ ಬಾಬು ತುಟಿಬಿಚ್ಚಿಲ್ಲ.

'ಸರ್ಕಾರ ವಾರಿ ಪಾಟ' ಸಿನಿಮಾ ಕಳೆದ ವರ್ಷ ಮೇ 12 ರಂದು ಬಿಡುಗಡೆಯಾಗಿತ್ತು. ಆ ಸಿನಿಮಾ ಹೆಚ್ಚು ಚಿತ್ರಮಂದಿರಗಳಲ್ಲಿ ಸದ್ದು ಮಾಡಿರಲಿಲ್ಲ. ಸದ್ಯ ಸ್ಟಾರ್ ಹೀರೋ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ SSMB 28 ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಶುರುವಾಗಿದ್ದು ಒಂದಷ್ಟು ಅಡೆತಡೆಗಳು ಎದುರಾಗಲಿವೆ. ಇದಕ್ಕೆ ಕಾರಣ ನಾಯಕ ಮಹೇಶ್ ಮತ್ತು ತ್ರಿವಿಕ್ರಮ್ ನಡುವೆ ಸಾಮರಸ್ಯದ ಕೊರತೆ ಎಂಬ ವರದಿಗಳಿವೆ.

ಇನ್ನು ನಿರ್ಮಾಪಕ ಸೂರ್ಯದೇವರ ನಾಗವಂಶಿ ಈ ಗಾಸಿಪ್‌ಗಳನ್ನು ಅಲ್ಲಗಳೆದಿದ್ದಾರೆ. ಅಂಥದ್ದೇನೂ ಇಲ್ಲ ಎಂಬುದು ಅವರ ಮಾತು. ನಿರ್ದೇಶಕ ಹಾಗೂ ನಾಯಕನ ಬಾಂಧವ್ಯ ಚೆನ್ನಾಗಿದೆ. ಆದರೆ, ಮಹೇಶ್ ಅವರ ಇತ್ತೀಚೆಗಿನ ವಿದೇಶ ಪ್ರವಾಸದಿಂದಾಗಿ ಈ ಸಿನಿಮಾದ ಶೂಟಿಂಗ್ ಶೆಡ್ಯೂಲ್ ಮತ್ತಷ್ಟು ವಿಳಂಬವಾಗುವ ಸೂಚನೆಗಳು ಕಾಣುತ್ತಿವೆ ಎಂದು ಹೇಳಿದ್ದಾರೆ.

ಮಹೇಶ್ ಮತ್ತು ತ್ರಿವಿಕ್ರಮ್ ಮೂರನೇ ಬಾರಿಗೆ 'SSMB 28' ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ, ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಅತಡು' ಮತ್ತು 'ಖಲೇಜಾ' ಬ್ಲಾಕ್‌ಬಸ್ಟರ್‌ ಆಗಿದ್ದವು. ಚಿತ್ರದಲ್ಲಿ ಮಹೇಶ್ ಎದುರು ಎರಡನೇ ಬಾರಿಗೆ ಪೂಜಾ ಹೆಗಡೆ ನಟಿಸಲಿದ್ದಾರೆ. 2019 ರ ಮಹರ್ಷಿ ಚಿತ್ರದಲ್ಲಿ ಮಹೇಶ್ ಜೊತೆ ಈ ಸುಂದರಿ ತೆರೆ ಹಂಚಿಕೊಂಡಿದ್ದರು. ಸಿನಿಮಾದಲ್ಲಿ ಶ್ರೀಲೀಲಾ, ರಮ್ಯಾ ಕೃಷ್ಣನ್ ಮತ್ತು ಪ್ರಕಾಶ್ ರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ. ನವೀನ್ ನೂಲಿ ಸಂಕಲನವಿದ್ದು, ತಮನ್ ಎಸ್. ಸಂಗೀತ ಸಂಯೋಜಿಸಿದ್ದಾರೆ. ರಾಮ್-ಲಕ್ಷ್ಮಣ್ ನೃತ್ಯ ನಿರ್ದೇಶನ, ಪಿ.ಎಸ್.ವಿನೋದ್ ಛಾಯಾಗ್ರಹಣ, ಎ.ಎಸ್.ಪ್ರಕಾಶ್ ಕಲಾ ನಿರ್ದೇಶನವಿದೆ. ಈ ಚಿತ್ರ ಮುಗಿದ ನಂತರ ದಿಗ್ಗಜ ನಿರ್ದೇಶಕ ರಾಜಮೌಳಿ ಜೊತೆ 'SSMB 29' ಚಿತ್ರ ಮಾಡಲಿದ್ದಾರೆ.

ಇದನ್ನೂ ಓದಿ: ನನ್ನ ಪ್ರೇಮಕಥೆಗಳು ನನ್ನ ಜೊತೆಯೇ ಸಮಾಧಿ ಆಗುತ್ತವೆ, ನನ್ನ ಸುತ್ತಲೂ ಅನೇಕ ಬಂದೂಕುಗಳಿವೆ: ನಟ ಸಲ್ಮಾನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.