ETV Bharat / entertainment

ತೆರೆಗಪ್ಪಳಿಸಿದ 'ಲಿಯೋ': ಮಿಶ್ರ ಪ್ರತಿಕ್ರಿಯೆ ವ್ಯಕ್ತ - ಆರಂಭಿಕ ಟ್ವಿಟರ್ ವಿಮರ್ಶೆ ಇಲ್ಲಿದೆ

author img

By ETV Bharat Karnataka Team

Published : Oct 19, 2023, 8:32 AM IST

Updated : Oct 19, 2023, 9:01 AM IST

Leo twitter reviews: ಚಿತ್ರಮಂದಿರಗಳಲ್ಲಿ 'ಲಿಯೋ' ಅದ್ಧೂರಿಯಾಗಿ ತೆರೆಕಂಡಿದ್ದು, ಮಿಶ್ರ ವಿಮರ್ಶೆ ವ್ಯಕ್ತವಾಗುತ್ತಿದೆ.

leo twitter reviews
ಲಿಯೋ ಟ್ವಿಟರ್ ವಿಮರ್ಷೆ

ದಕ್ಷಿಣ ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಮುಖ್ಯಭೂಮಿಕೆಯ ಆ್ಯಕ್ಷನ್​ ಥ್ರಿಲ್ಲರ್ ಸಿನಿಮಾ 'ಲಿಯೋ' ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಕೋಟ್ಯಂತರ ಅಭಿಮಾನಿಗಳ ಕಾಯುವಿಕೆ ಪೂರ್ಣಗೊಂಡಿದೆ. 2021ರ 'ಮಾಸ್ಟರ್' ಸಿನಿಮಾ ನಂತರ ನಿರ್ದೇಶಕ ಲೋಕೇಶ್ ಕನಕರಾಜ್ ಹಾಗೂ ನಟ ವಿಜಯ್ ಕಾಂಬಿನೇಷನ್​​​ನಲ್ಲಿ ಮೂಡಿ ಬಂದ ಸಿನಿಮಾ ಇದಾಗಿದೆ. 'ವಿಕ್ರಮ್'ನಂತಹ ಬ್ಲಾಕ್ ಬಸ್ಟರ್ ಹಿಟ್​ ಬಳಿಕ ಬಂದಿರುವ ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾ ಆದ ಹಿನ್ನೆಲೆ, ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಗಳಿದ್ದವು. ಅಭಿಮಾನಿಗಳು, ಸಿನಿಪ್ರಿಯರು ಥಿಯೇಟರ್​ನತ್ತ ಮುಗಿಬಿದ್ದಿದ್ದಾರೆ. ಆದರೆ, ಆರಂಭಿಕವಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಟ್ವಿಟರ್ ವಿಮರ್ಶೆ: ಮೊದಲ ಶೋ ವೀಕ್ಷಿಸಿರುವ ಪ್ರೇಕ್ಷಕರು ಟ್ವಿಟರ್​ನಲ್ಲಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಆರಂಭಿಕ ವಿಮರ್ಶೆಗಳ ಪ್ರಕಾರ, ಚಿತ್ರ ಬ್ಲಾಕ್​ ಬಸ್ಟರ್ ಹಿಟ್ ಆಗೋದು ಪಕ್ಕಾ. ಪ್ರತೀ ಪಾತ್ರವನ್ನೂ ಅದ್ಭುತವಾಗಿ ತೋರಿಸಲಾಗಿದೆ. ಮಧ್ಯಂತರಕ್ಕೂ 10 ನಿಮಿಷಗಳ ಮೊದಲ ದೃಶ್ಯಗಳು ರೋಮಾಂಚಕಾರಿಯಾಗಿವೆ. ದ್ವಿತೀಯಾರ್ಧವೂ ಉತ್ತಮವಾಗಿದೆ. ಲಿಯೋ ದಾಸ್ ಆಗಿ ದಳಪತಿ ವಿಜಯ್ ಅವರ ಸ್ಕ್ರೀನ್ ಪ್ರಸೆನ್ಸ್ ಚೆನ್ನಾಗಿದೆ. ಲೋಕೇಶ್ ಕನಕರಾಜ್ ಅವರ ನಿರ್ದೇಶನ ಶೈಲಿ, ಕಥೆ, ಟ್ವಿಸ್ಟ್​​ಗಳು ಎಲ್ಲವೂ ಉತ್ತಮ. ಸಂಜಯ್ ದತ್ ಅವರದ್ದು ಮನಸೆಳೆಯುವ ನಟನೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಚಿತ್ರದ ಹೈಲೈಟ್ ಎಂದೆಲ್ಲಾ ಸಿನಿಮಾ ನೋಡಿದವರ ಪೈಕಿ ಹಲವರು ತಿಳಿಸಿದ್ದಾರೆ.

  • #LeoReview : Directed by Lokesh, Leo is a gripping action thriller!

    Vijay, Sanjay Dutt & Arjun deliver electrifying performances in this high-octane film.

    With Anbariv's impressive stunts & Anirudh's music,it's an absolute MUST-SEE for all!

    And yes, #Leo belongs to LCU🔥 pic.twitter.com/tt0tE53umY

    — 𝐉𝐨𝐫𝐝𝐚𝐧 (@jordan10RK) October 19, 2023 " class="align-text-top noRightClick twitterSection" data=" ">

ಮಿಶ್ರ ಪ್ರತಿಕ್ರಿಯೆ: ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ್ದು, ಕೆಲ ನೆಗೆಟಿವ್ ರಿವ್ಯೂ ಕೂಡ ಬಂದಿವೆ. ಲೋಕೇಶ್ ಕನಕರಾಜ್​​ ಅವರ ಹಿಂದಿನ ಚಿತ್ರ 'ವಿಕ್ರಂ'ಗೆ ಹೋಲಿಸಿದರೆ ಲಿಯೋ ಕೊಂಚ ಹಿಂದಿದೆ ಎಂದು ಕೂಡ ಹೇಳಲಾಗಿದೆ. ಸಿನಿಮಾದಲ್ಲಿ ಹೆಚ್ಚೇನು ಹೊಸತಿಲ್ಲ, ಮಾಮೂಲಾಗಿದೆ ಎಂಬುದು ಹಲವರ ಅಭಿಪ್ರಾಯ. ಆದರೆ, ಸಿನಿಮಾ ಬ್ಲಾಕ್​ ಬಸ್ಟರ್ ಹಿಟ್​​ ಆಗುತ್ತೋ ಅಥವಾ ಮಾಮೂಲಿ ಸಿನಿಮಾವೇ ಎಂದು ನಿರ್ಧರಿಸಲು ನಾಳೆ ಬೆಳಗ್ಗೆವರೆಗೂ ಕಾಯಬೇಕಿದೆ. ಬಾಕ್ಸ್ ಆಫೀಸ್ ಅಂಕಿ ಅಂಶ ಚಿತ್ರದ ಯಶಸ್ಸನ್ನು ನಿರ್ಧರಿಸಲಿದೆ.

ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿ ಹೈದರಾಬಾದ್​ಗೆ ಮರಳಿದ ಅಲ್ಲು ಅರ್ಜುನ್​ಗೆ ಅದ್ಧೂರಿ ಸ್ವಾಗತ - ವಿಡಿಯೋ!

ಸಿನಿಮಾ ವ್ಯವಹಾರ ವಿಶ್ಲೇಷಕ ಮನೋಬಾಲ ವಿಜಯಬಾಲನ್​​​ ಸಿನಿಮಾಗೆ 2 ಸ್ಟಾರ್ ಕೊಟ್ಟಿದ್ದಾರೆ. ಸಿಂಹವಾಗಲು ಪ್ರಯತ್ನಿಸಿ, ಬೆಕ್ಕಿನಂತೆ ಕೊನೆಗೊಂಡಿತು. ಜೋಸೆಫ್ ವಿಜಯ್ ಮತ್ತು ಪಾತ್ರವರ್ಗದ ಭರವಸೆ ಮತ್ತು ಕೆಲ ಶ್ಲಾಘನೀಯ ಪ್ರಯತ್ನಗಳ ಹೊರತಾಗಿಯೂ, ಫೈನಲ್​ ರಿಸಲ್ಟ್​​ ನಿರಾಸೆ ಮೂಡಿಸಿದೆ. ಲೋಕೇಶ್ ಕನಕರಾಜ್ ಅವರ ಲಿಯೋ ನಿರೀಕ್ಷೆಗಳನ್ನು ತಲುಪುವಲ್ಲಿ ವಿಫಲವಾಗಿದೆ. ಅಲ್ಲದೇ, ಚಿತ್ರ ಸ್ಥಿರತೆಯನ್ನು ನಿರ್ವಹಿಸಿಲ್ಲ. ಈ ಚಿತ್ರ ವಿಕ್ರಮ್ ಅಥವಾ ಕೈತಿ ಸಿನಿಮಾದ ಹತ್ತಿರದಲ್ಲಿಲ್ಲ. ಲೋಕೇಶ್ ಕನಕರಾಜ್​ ವೃತ್ತಿಜೀವನದಲ್ಲೇ ದುರ್ಬಲ ಚಿತ್ರ. ಒಂದು ಸಾಧಾರಣ ಪ್ರಯತ್ನವಷ್ಟೇ ಎಂದು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್​​​ನಲ್ಲಿ ಬರೆದುಕೊಂಡಿದ್ದಾರೆ.

  • #Leo: ⭐️⭐️

    Leo - Meow

    ||#LeoReview|#LeoFDFS||

    Tried to be a lion🦁 but ended up as a cat🐈. Despite a promising premise and some commendable efforts from Joseph Vijay and cast, the end result is a disappointment. Lokesh Kanagaraj's Leo fails to live up to the expectations or… pic.twitter.com/46TSuaRAI7

    — Manobala Vijayabalan (@ManobalaV) October 19, 2023 " class="align-text-top noRightClick twitterSection" data=" ">

ಇದನ್ನೂ ಓದಿ: 'UT 69' ಟ್ರೇಲರ್​​​ ಲಾಂಚ್​ ಈವೆಂಟ್​ನಲ್ಲಿ ಕಣ್ಣೀರಿಟ್ಟ ಶಿಲ್ಪಾ ಶೆಟ್ಟಿ ಪತಿ - ಮೊದಲ ಬಾರಿ ಫೇಸ್ ಮಾಸ್ಕ್ ತೆಗೆದ ರಾಜ್ ಕುಂದ್ರಾ

Last Updated : Oct 19, 2023, 9:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.