ETV Bharat / entertainment

ಕನ್ನಡದ 'ವಿಕ್ರಾಂತ್ ರೋಣ' ಪ್ರೀಮಿಯರ್ ಶೋ.. ಸಂಸದರು, ಅಧಿಕಾರಿಗಳಿಗೆ ಕಿಚ್ಚನ ವಿಶೇಷ ಆಹ್ವಾನ

author img

By

Published : Jul 26, 2022, 10:03 PM IST

'ಕಿಚ್ಚ' ಸುದೀಪ್​, ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್‌ನ 'ವಿಕ್ರಾಂತ್ ರೋಣ' ಬಿಡುಗಡೆಯಾಗಲು ಕ್ಷಣಗಣನೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಸಂಸದರು, ಉನ್ನತ ಅಧಿಕಾರಿಗಳಿಗೋಸ್ಕರ ಸುದೀಪ್​ ವಿಶೇಷ ಪ್ರೀಮಿಯರ್ ಶೋ ಆಯೋಜನೆ ಮಾಡಿದ್ದಾರೆ.

Vikrant rona premier show in Dehli
Vikrant rona premier show in Dehli

ಸಿಕ್ಕಾಪಟ್ಟೆ ಕ್ರೇಜ್​ ಹುಟ್ಟಿಸಿರುವ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್​ ರೋಣ' ಚಿತ್ರ ನಾಡಿದ್ದು(ಜುಲೈ 28) ತೆರೆಗೆ ಅಪ್ಪಳಿಸಲಿದೆ. ಅದಕ್ಕೋಸ್ಕರ ಭರದ ಪ್ರಚಾರ ಕಾರ್ಯ ನಡೆಯುತ್ತಿದೆ. ಇದರ ಮಧ್ಯೆ ಸಂಸದರು, ಉನ್ನತ ಅಧಿಕಾರಿಗಳಿಗೋಸ್ಕರ ಸುದೀಪ್ ದೆಹಲಿಯಲ್ಲಿ ವಿಶೇಷ ಪ್ರೀಮಿಯರ್ ಶೋ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.

ದೆಹಲಿಯಲ್ಲಿ ಜುಲೈ 28ರಂದು ಸಂಜೆ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ದೆಹಲಿಯ ಚಾಣಕ್ಯಪುರಿಯ ಪಿವಿಆರ್​ ಥಿಯೇಟರ್​​ನಲ್ಲಿ ಪ್ರೀಮಿಯರ್ ಶೋ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಭಾಗಿಯಾಗುವಂತೆ ಸಂಸದ ಪ್ರತಾಪ್​ ಸಿಂಹ ಅವರಿಗೂ ಆಹ್ವಾನ ಹೋಗಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಸುದೀಪ್​​ಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಪ್ರಿಮಿಯರ್ ಶೋನಲ್ಲಿ ರಾಜ್ಯಸಭಾ, ಲೋಕಸಭಾ ಸದಸ್ಯರು ಹಾಗೂ ಕೇಂದ್ರ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: 'ವಿಕ್ರಾಂತ್ ರೋಣ' ಪ್ಯಾನ್​ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್​ ಸಿನಿಮಾ'... ಉಪ್ಪಿ ಮಾತಿನಲ್ಲೇ ಕೇಳಿ!

ಜುಲೈ 28ರಂದು ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್​ ಭಾಷೆಯಲ್ಲಿ ಚಿತ್ರ ರಿಲೀಸ್​ ಆಗಲಿದ್ದು, ಇದರಲ್ಲಿ ಸುದೀಪ್ ಜೊತೆ ಜಾಕ್ವಲಿನ್​, ನಿರೂಪ್ ಭಂಡಾರಿ ಹಾಗೀ ನೀತಾ ಅಶೋಕ್​ ಇದ್ದಾರೆ. ಟೀಸರ್ ಹಾಗೂ ಟ್ರೈಲರ್​ಗಳ ಮೂಲಕ ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡಿರುವ ಈ ಚಿತ್ರ ವೀಕ್ಷಣೆ ಮಾಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.