ETV Bharat / entertainment

ಕರುನಾಡ ಚಕ್ರವರ್ತಿಗೆ ಮತ್ತೆ ಸಿನಿಮಾ ಮಾಡಬೇಕು : ನಿರ್ದೇಶಕ ಯೋಗಿ ಜಿ ರಾಜ್

author img

By

Published : Mar 22, 2023, 9:11 PM IST

ಶಿವಣ್ಣನಿಗಾಗಿ ಮತ್ತೊಂದು ಸಿನಿಮಾ ಮಾಡಲು ಒಳ್ಳೆ ಕಥೆ ಮಾಡುತ್ತೇನೆ ಎಂದು ನಿರ್ದೇಶಕ ಯೋಗಿ ಜಿ ರಾಜ್​ ಹೇಳಿದರು.

director is Yogi G Raj
ನಿರ್ದೇಶಕ ಯೋಗಿ ಜಿ ರಾಜ್

ಅದಷ್ಟು ಬೇಗ ಶಿವಣ್ಣನ ಇವತ್ತಿನ ಟ್ರೆಂಡ್ ಗೆ ತಕ್ಕಂತೆ ಸಿನಿಮಾ ಮಾಡುತ್ತೇನೆ : ನಿರ್ದೇಶಕ ಯೋಗಿ ಜಿ ರಾಜ್

ಈಗಾಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್​ಗೆ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ‌ಎಂಬ ಸಿನಿಮಾ ಮಾಡಿ ಭರವಸೆ ನಿರ್ದೇಶಕ ಅಂತಾ ಗುರುತಿಸಿಕೊಂಡಿದ್ದ ಯೋಗಿ ಜಿ ರಾಜ್, ಶಿವಣ್ಣನಿಗೆ ಮತ್ತೊಂದು ಸಿನಿಮಾ ಮಾಡಲು ಒಳ್ಳೆ ಕಥೆಯೊಂದನ್ನು ಹುಡುಕಿ ಸಿನಿಮಾ ಮಾಡುತ್ತೇನೆ ಎಂದು ಹೇಳಿದರು. ಸಿನಿಮಾ ವಿತರಣೆ ಹಾಗು ಸಿನಿಮಾ ನಿರ್ಮಾಣದಲ್ಲಿ ಮಂಚೂಣಿಯಲ್ಲಿರುವ ನಿರ್ದೇಶಕ ಯೋಗಿ ಜಿ ರಾಜ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಮತ್ತೆ ಯಾವಾಗ ಆ್ಯಕ್ಷನ್ ಕಟ್ ಹೇಳೋದು ಎಂಬ ವಿಚಾರಗಳನ್ನು ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ.

ನಿರ್ದೇಶನ ಬಿಟ್ಟು ಕಂಪ್ಲೀಟ್ ಆಗಿ‌ ಸಿನಿಮಾ ವಿತರಣೆ ಹಾಗೂ ನಿರ್ಮಾಣ ಮಾಡೋ ಕೆಲಸದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಯೋಗಿ ಅವರಿಗೆ ಈ ವೇಳೆ ಶಿವಣ್ಣನಿಗೆ ಯಾವಾಗ ಸಿನಿಮಾ ಮಾಡುತ್ತಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ಮತ್ತೆ ದೊಡ್ಮನೆಯ ‌ಮಗ ಶಿವರಾಜ್ ಕುಮಾರ್ ಅವರಿಗೆ ಮತ್ತೊಂದು ಸಿನಿಮಾ ಮಾಡಬೇಕು.‌ ಒಳ್ಳೆ ಕಥೆಯನ್ನು ಮಾಡಿ ಶಿವಣ್ಣನ‌ ಜೊತೆ ಸಿನಿಮಾ ಮಾಡಬೇಕು ಅನ್ನೋದು ನನಗೆ ತುಂಬಾ ಆಸೆ ಇದೆ. ಶಿವಣ್ಣ ಕೂಡ ಅವರ ವೇದ ಸಿನಿಮಾದ ಸಕ್ಸಸ್ ಮೀಟ್ ನಲ್ಲೂ ಯೋಗಿ ಮತ್ತೆ ಸಿನಿಮಾ ನಿರ್ದೇಶನ ಯಾವಾಗ ಅಂತಾ ಕೇಳಿದ್ದಾರೆ. ಅದಷ್ಟು ಬೇಗ ಶಿವಣ್ಣನ ಇವತ್ತಿನ ಟ್ರೆಂಡ್ ಗೆ ತಕ್ಕಂತೆ ಕಥೆ ಮಾಡಿ ಚಿತ್ರ ಮಾಡುತ್ತೇನೆ ಎಂದು ಯೋಗಿ ಹೇಳಿದರು.

ಈ ಸಿನಿಮಾ ಎಂಬ ಕ್ರಿಯೇಟಿವ್ ವರ್ಲ್ಡ್​ನಲ್ಲಿ ಟ್ಯಾಲೆಂಟ್‌ ಜೊತೆ ಅದೃಷ್ಟ ಇದ್ದರೆ ತಾವು ಅಂದುಕೊಂಡಂತೆ ಸಾಧಿಸಬಹುದು. ಈ ಮಾತನ್ನು ಈಗಾಗಲೇ ಸಾಕಷ್ಟು ನಟರು ಹಾಗು ನಿರ್ದೇಶಕರು ನಿಜ ಮಾಡಿದ್ದಾರೆ. ಮೂಲತಃ ಬೆಂಗಳೂರಿನವರಾದ ಯೋಗಿ ಕಾಲೇಜು ದಿನಗಳಿಂದಲೇ ಸಿನಿಮಾ ನಿರ್ದೇಶಕನಾಗಬೇಕು ಅಂತಾ ಕನಸು ಕಂಡು ಈ ಮಾಯಾ ಬಜಾರ್ ಎಂಬ ಗಾಂಧಿನಗರಕ್ಕೆ ಬಂದು, ನಿರ್ದೇಶಕರಾದ ಪ್ರೀತಮ್ ಗುಬ್ಬಿ ಮತ್ತು ಎ ಹರ್ಷರಂತಹ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಲೇ ಕಾಸ್ಟೂಮ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದರು.

ಇಂದು ಕನ್ನಡ ಚಿತ್ರರಂಗದಲ್ಲಿ ಯೋಗಿ ಜಿ ರಾಜ್‌‌ ಅಂದಾಕ್ಷಣ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್ ಅಂತಹ ಸ್ಟಾರ್ ನಟರುಗಳಿಗೆ ಖಾಯಂ ಕಾಸ್ಟೂಮ್ ಡಿಸೈನರ್. ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ಕಾಸ್ಟೂಮ್ ಡಿಸೈನರ್ ಆಗಿರುವ ಯೋಗಿ ಜಿ ರಾಜ್ ನಿರ್ದೇಶಕರಾಗಿ ಹಾಗು ನಿರ್ಮಾಪಕರಾಗಿ ಸಕ್ಸಸ್ ಕಂಡಿರುವ ಲಕ್ಕಿ‌ ಪರ್ಸನ್ ಎಂದರೆ ತಪ್ಪಾಗಲಾರದು.

ಇನ್ನು ಹೊಯ್ಸಳ ಸಿನಿಮಾ ಬಗ್ಗೆ ಮಾತನಾಡಿದ ಯೋಗಿ ಜಿ ರಾಜ್​ ಅವರು, ಡಾಲಿ ಧನಂಜಯ್ ಅಭಿನಯದ 25ನೇ ಸಿನಿಮಾ ಗುರುದೇವ್ ಹೊಯ್ಸಳ ವನ್ನು ಕೆ.ಆರ್.ಜಿ ಸ್ಟುಡಿಯೋ ಹೆಸರಿನಲ್ಲಿ ಗೆಳೆಯ ಕಾರ್ತಿಕ್ ಜೊತೆ ಸೇರಿ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದೇವೆ. ಹೊಯ್ಸಳ ಸಿನಿಮಾ ಮಾಡೋದಿಕ್ಕೆ ನಮ್ಮ ಸುತ್ತ ಮುತ್ತಲಿನಲ್ಲಿ ನಡೆಯುವ ನೈಜ ಘಟನೆಯ ಕಥೆ ಕಾರಣ‌. ಈ ಪಾತ್ರವನ್ನು ಧನಂಜಯ್ ಜೊತೆ ಮಾಡೋದಿಕ್ಕೆ ಮತ್ತೊಂದು ಕಾರಣ ರತ್ನನ್‌ ಪ್ರಪಂಚ ಸಿನಿಮಾದ ಕಾಂಬಿನೇಷನ್ ಈ ಹೊಯ್ಸಳ ಸಿನಿಮಾ ಮಾಡುವುದಕ್ಕೆ ಸಾಧ್ಯವಾಯಿತು ಎಂದು ಹೇಳಿದರು.

ಸದ್ಯ‌ಕ್ಕೆ ಯೋಗಿ ಜಿ ರಾಜ್ ಹಾಗು ಗೆಳೆಯ ಕಾರ್ತಿಕ್​ ಒಟ್ಟಾಗಿ ಸೇರಿ ಮಾಡುತ್ತಿರುವ ಕೆ.ಆರ್.ಜಿ ಸ್ಟುಡಿಯೋ ಸಂಸ್ಥೆ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಸೌಂಡ್ ಮಾಡುತ್ತಿದೆ. ಯಾಕೆಂದರೆ ಈ ಸಂಸ್ಥೆಯ ಅಡಿ ಸದಭಿರುಚಿಯ ಸಿನಿಮಾಗಳ ನಿರ್ಮಾಣದ ಜೊತೆಗೆ ಹೊಸ ಪ್ರತಿಭೆಗಳು ಸ್ಟಾರ್ ನಟರ ಸಿನಿಮಾಗಳ ವಿತರಣೆ ಮಾಡುತ್ತಿದ್ಧಾರೆ. ಇದು ಕಾಸ್ಟೂಮ್ ಡಿಸೈನರ್ ಆಗಿ, ನಿರ್ದೇಶಕನಾಗಿ ಬಳಿಕ ನಿರ್ಮಾಪಕನಾಗಿರೋ ಯೋಗಿ ಜಿ ರಾಜ್ ಚಿತ್ರರಂಗಕ್ಕೆ ಬರುವ ಅದೆಷ್ಟೋ ಯುವ ನಟ, ನಿರ್ದೇಶಕರಿಗೆ ಮಾದರಿ.

ಇದನ್ನೂ ಓದಿ :'ಮೀಸೆ ಬಿಟ್ಟಿದ್ರೆ ಚೆನ್ನಾಗಿರ್ತಿತ್ತು': 'ಗುರುದೇವ್​ ಹೊಯ್ಸಳ' ಟ್ರೇಲರ್ ಲಾಂಚ್​ ಮಾಡಿದ ಕಿಚ್ಚ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.