ETV Bharat / entertainment

ನಿರ್ಮಾಪಕಿಯಾಗಿ ಮಿಂಚಲು ರೆಡಿಯಾದ ಬಾಲಿವುಡ್​ ಬೇಬೋ ಕರೀನಾ ಕಪೂರ್

author img

By

Published : Oct 7, 2022, 8:59 PM IST

ಲಂಡನ್‌ನಲ್ಲಿ ನಿರ್ದೇಶಕ ಹನ್ಸಲ್ ಮೆಹ್ತಾ ಅವರೊಂದಿಗೆ ಖಾನ್ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಿರುವುದಾಗಿ ಬಾಲಿವುಡ್ ನಟಿ ಕರೀನಾ ಕಪೂರ್ ತಿಳಿಸಿದ್ದಾರೆ.

Kareena Kapoor is 'excited' to see her name as producer on clapboard
ನಿರ್ಮಾಪಕಿಯಾಗಿ ಮಿಂಚಲು ರೆಡಿಯಾದ ಬಾಲಿವುಡ್​ ಬೇಬೋ ಕರೀನಾ ಕಪೂರ್

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ನಿರ್ಮಾಪಕಿಯಾಗಿ ಮಿಂಚಲು ರೆಡಿಯಾಗಿದ್ಧಾರೆ. ಲಂಡನ್‌ನಲ್ಲಿ ನಿರ್ದೇಶಕ ಹನ್ಸಲ್ ಮೆಹ್ತಾ ಅವರೊಂದಿಗೆ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಿರುವುದಾಗಿ ನಿರ್ಮಾಪಕಿಯಾಗಿ ಮಿಂಚಲು ರೆಡಿಯಾದ ತಿಳಿಸಿದ್ದಾರೆ.

ಹನ್ಸಲ್ ಮೆಹ್ತಾ ಅವರ ನಿರ್ದೇಶನದ ಈ ಸಿನಿಮಾ ಮೂಲಕ ಕರೀನಾ ಕಪೂರ್​ ಚಿತ್ರ ನಿರ್ಮಾಪಕಿಯಾಗಿ ತನ್ನ ಚೊಚ್ಚಲ ಪ್ರವೇಶವನ್ನು ಮಾಡಲಿದ್ದಾರೆ. ನಿರ್ಮಾಪಕಿ ಆಗಿ ಈ ನಟಿ ಗುರುತಿಸಿಕೊಳ್ಳಲಿದ್ದಾರೆ. ಮರ್ಡರ್ ಮಿಸ್ಟರಿಯಾಗಿರುವ ಈ ಫೀಚರ್ ಪ್ರಾಜೆಕ್ಟ್ ಕರೀನಾ ಅವರನ್ನು ಪತ್ತೆದಾರಿಯಾಗಿ ತೋರಿಸಲಿದೆ. ಇದನ್ನು ಬಾಲಾಜಿ ಮೋಷನ್ ಪಿಕ್ಚರ್ಸ್ ಮೂಲಕ ಏಕ್ತಾ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ.

Kareena Kapoor is 'excited' to see her name as producer on clapboard
ನಿರ್ಮಾಪಕಿಯಾಗಿ ಮಿಂಚಲು ರೆಡಿಯಾದ ಬಾಲಿವುಡ್​ ಬೇಬೋ ಕರೀನಾ ಕಪೂರ್

ಕರೀನಾ ಅವರು ಸಿನಿಮಾ ನಿರ್ಮಾಣದಲ್ಲಿ ತೊಡಗಿರುವ ಉತ್ಸಾಹವನ್ನು ಇನ್​ಸ್ಟಾಗ್ರಾಮ್​ ಸ್ಟೋರಿಸ್​ನಲ್ಲಿ ಹಂಚಿಕೊಂಡಿದ್ದಾರೆ. ನಿರ್ಮಾಪಕಿಯಾಗಿ ತನ್ನ ಹೆಸರನ್ನು ಬರೆದಿರುವ ಕ್ಲಾಪ್‌ಬೋರ್ಡ್ ಅನ್ನು ಹಿಡಿದಿರುವ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ. ಕ್ಲಾಪ್‌ಬೋರ್ಡ್​​​ನಲ್ಲಿ ನನ್ನ ಹೆಸರನ್ನು ನೋಡಲು ತುಂಬಾ ಉತ್ಸುಕಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಬನಾರಸ್ ಸಿನಿಮಾ ವಿತರಣಾ ಹಕ್ಕು ಡಿ ಬೀಟ್ಸ್ ತೆಕ್ಕೆಗೆ

ಇನ್ನೂ ಹೆಸರಿಡದ ಈ ಚಿತ್ರವು ಲಂಡನ್‌ನಲ್ಲಿ ಎರಡು ಶೆಡ್ಯೂಲ್‌ಗಳಲ್ಲಿ ಚಿತ್ರೀಕರಣಗೊಳ್ಳಲಿದೆ. ಕರೀನಾ ಅವರು ಎರಡನೇ ಶೆಡ್ಯೂಲ್‌ಗೆ ಹೊರಡುವ ಮೊದಲು ತಮ್ಮ ಕುಟುಂಬದೊಂದಿಗೆ ದೀಪಾವಳಿ ಆಚರಿಸಲು ದೇಶಕ್ಕೆ ಮರಳಲಿದ್ದಾರೆ. ಮುಂಬರುವ ಚಿತ್ರದ ಬಗ್ಗೆ ಹೆಚ್ಚು ಬಹಿರಂಗಪಡಿಸಿಲ್ಲ. ಆದರೂ ಹನ್ಸಲ್ ಮೆಹ್ತಾ ಮತ್ತು ಕರೀನಾ ಕಾಂಬಿನೇಷನ್​ನಲ್ಲಿ ಮೂಡಿ ಬರಲಿರುವ ಈ ಚಿತ್ರದ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.