ETV Bharat / entertainment

ಬಾಲಿವುಡ್ ಬೇಬೋ ಪುತ್ರನ ಜನ್ಮದಿನ: ಶೂಟಿಂಗ್​ ಸೆಟ್​​ನಿಂದಲೇ ಫೋಟೋ ಹಂಚಿಕೊಂಡ ಕರೀನಾ

author img

By

Published : Feb 21, 2023, 12:51 PM IST

ಬಾಲಿವುಡ್ ತಾರಾ ದಂಪತಿ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಅವರ ಕಿರಿಯ ಪುತ್ರ ಜೆಹ್ ಅಲಿ ಖಾನ್‌ ಇಂದು ಎರಡನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

jeh ali khan birthday
ಜೆಹ್ ಅಲಿ ಖಾನ್‌ ಜನ್ಮ ದಿನ

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಪುತ್ರ ಜೆಹ್ ಅಲಿ ಖಾನ್‌ (Jeh Ali Khan)ಗೆ ಇಂದು ಎರಡನೇ ಹುಟ್ಟುಹಬ್ಬದ ಸಂಭ್ರಮ. ಮಗನ ಹುಟ್ಟುಹಬ್ಬಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ವಿಶೇಷವಾಗಿ ಶುಭ ಕೋರಿದ್ದಾರೆ ತಾಯಿ ಕರೀನಾ ಕಪೂರ್​. ತನ್ನ ಪುಟ್ಟ ಮಗುವಿಗೆ ಶುಭ ಹಾರೈಸುತ್ತ, ಕರೀನಾ ತಮ್ಮ ಮುಂಬರುವ ಸಿನಿಮಾ ಶೂಟಿಂಗ್​​ ಸೆಟ್​ನಿಂದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೂನಿಯರ್ ಪಟೌಡಿ ಸಹ ತಾಯಿಯೊಂದಿಗೆ ಲಂಡನ್​ಗೆ ಹಾರಿರುವುದು ವಿಶೇಷ.

ನಟಿ ಕರೀನಾ ಕಪೂರ್​ ಖಾನ್​ ಇನ್​ಸ್ಟಾಗ್ರಾಮ್​ನಲ್ಲಿ ಪುತ್ರನೊಂದಿಗಿನ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೆಹ್ ಅಲಿ ಖಾನ್‌ ಸಾಮಾನ್ಯವಾಗಿ ತಾಯಿಯೊಂದಿಗೆ ಶೂಟಿಂಗ್‌ನಲ್ಲಿ ಇರುತ್ತಾನೆ. ಅದರಂತೆ ನಟಿ ಹಂಚಿಕೊಂಡಿರುವ ಇಂದಿನ ಚಿತ್ರ ಕೂಡ ಶೂಟಿಂಗ್​ ಸೆಟ್​ನದ್ದೇ ಆಗಿದೆ. ಪುತ್ರ ಜೆಹ್ ಅಲಿ ಖಾನ್‌ ಅವರ ಹುಟ್ಟುಹಬ್ಬದ ಪೋಸ್ಟ್ ಅನ್ನು ಹಂಚಿಕೊಂಡ ಕರೀನಾ ಕಪೂರ್​ ಖಾನ್​​, ತಾನು ತನ್ನ ಮಗನನ್ನು ಪೂರ್ಣ ಹೃದಯ ಮತ್ತು ಆತ್ಮದಿಂದ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಕರೀನಾ ಕಪೂರ್​​ ಮತ್ತು ಸೈಫ್ ಅಲಿ ಖಾನ್ ದಂಪತಿ 2021ರಲ್ಲಿ ಜೆಹ್ ಅಲಿ ಖಾನ್​ನನ್ನು ಸ್ವಾಗತಿಸಿದ್ದರು.

ಕರೀನಾ ಕಪೂರ್​ ಖಾನ್​ ಸೋಷಿಯಲ್​ ಮೀಡಿಯಾದಲ್ಲಿ ಈ ಚಿತ್ರಗಳನ್ನು ಹಂಚಿಕೊಂಡ ಕೂಡಲೇ, ಅವರ ಕಾಮೆಂಟ್‌ಗಳ ವಿಭಾಗ ಸದ್ದು ಮಾಡಲು ಆರಂಭಿಸಿತು. ನಟಿ ಆಲಿಯಾ ಭಟ್ ಅವರ ತಾಯಿ ಸೋನಿ ರಜ್ದಾನ್, ಡಿಸೈನರ್ ಫರಾಜ್ ಮನನ್ ಮತ್ತು ನಟಿ ಶೀಬಾ ಸೇರಿದಂತೆ ಚಿತ್ರರಂಗದ ಹಲವರು ಮತ್ತು ಕರೀನಾ ಕಪೂರ್​​, ಸೈಫ್ ಅಲಿ ಖಾನ್ ಅವರ ಅಭಿಮಾನಿಗಳು ಜೆಹ್ ಅಲಿ ಖಾನ್‌ ಜನ್ಮದಿನಕ್ಕೆ ಶುಭಾಶಯ ಕೋರುತ್ತಿದ್ದಾರೆ.

ಇದನ್ನೂ ಓದಿ: ದಾದಾಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿ: ರಣಬೀರ್, ಆಲಿಯಾ ದಂಪತಿಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ ​

ಕರೀನಾ ಕಪೂರ್​ ಖಾನ್​​​ ಹಂಚಿಕೊಂಡ ಚಿತ್ರಗಳು ಹನ್ಸಲ್ ಮೆಹ್ತಾ ಅವರ ಮುಂಬರುವ ಚಿತ್ರದಿಂದ ಬಂದಿವೆ. ನಟಿ ಕಳೆದ ನವೆಂಬರ್‌ನಲ್ಲಿ ಮರ್ಡರ್​​ ಮಿಸ್ಟರಿ ಶೂಟಿಂಗ್​ ಅನ್ನು ಪೂರ್ಣಗೊಳಿಸಿದ್ದಾರೆ. ಮುಂಬರುವ ಚಿತ್ರವು ಕರೀನಾ ಕಪೂರ್​ ಖಾನ್​ ಅವರಿಗೆ ನಿರ್ಮಾಪಕರಾಗಿ ಚೊಚ್ಚಲ ಚಿತ್ರವಾಗಿದೆ. ಅವರು ಏಕ್ತಾ ಕಪೂರ್ ಅವರೊಂದಿಗೆ ಹೆಸರಿಡದ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಇನ್ನು, ಸುಜೋಯ್ ಘೋಷ್ ಅವರ ಮುಂದಿನ ಚಿತ್ರದಲ್ಲೂ ನಟಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: 29 ವರ್ಷಗಳ ಬಳಿಕ ಮತ್ತೊಮ್ಮೆ ಆಮೀರ್​ - ಸಲ್ಮಾನ್​ ಜೋಡಿ; ಸ್ಪಾನಿಷ್​ ರಿಮೇಕ್​ ಚಿತ್ರದಲ್ಲಿ ಸೂಪರ್​ ಸ್ಟಾರ್​ಗಳು

ಸೈಫ್ ಅಲಿ ಖಾನ್ ಮತ್ತು ​ಕರೀನಾ ಕಪೂರ್​ ಹೆಚ್ಚಾಗಿ ಸುದ್ದಿಯಲ್ಲಿರುವ ತಾರಾ ದಂಪತಿ. ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯ. ಪುತ್ರರಾದ ತೈಮೂರ್ ಅಲಿ ಖಾನ್​ ಮತ್ತು ಜೆಹ್ ಅಲಿ ಖಾನ್ ಕೂಡ ಕಡಿಮೆ ಇಲ್ಲ. ಸ್ಟಾರ್​ ಕಿಡ್ಸ್ ಎಂದ ಮೇಲೆ ಅಭಿಮಾನಿಗಳು ಕೂಡ ಅವರ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಅದಂತೆ ಇಂದು ಕೂಡ ಜೆಹ್ ಅಲಿ ಖಾನ್‌ ಫೋಟೋ, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.