ETV Bharat / entertainment

The Crew: ಮೂವರು ಬಾಲಿವುಡ್​ ಬೆಡಗಿಯರ ಜೊತೆ ಕಪಿಲ್​ ಶರ್ಮಾ

author img

By

Published : Apr 13, 2023, 3:29 PM IST

ದಿ ಕ್ರ್ಯೂ ಚಿತ್ರತಂಡಕ್ಕೆ ಕಪಿಲ್ ಶರ್ಮಾ ಎಂಟ್ರಿ ಆಗಿದ್ದಾರೆ. ವಿದೇಶದಲ್ಲಿ ಅವರ ಶೂಟಿಂಗ್​ ನಡೆಯಲಿದೆ.

Kapil Sharma entry to The Crew
ದಿ ಕ್ರ್ಯೂ ಚಿತ್ರತಂಡಕ್ಕೆ ಕಪಿಲ್ ಶರ್ಮಾ ಎಂಟ್ರಿ

ಬಾಲಿವುಡ್ ಬೆಡಗಿಯರಾದ ಕರೀನಾ ಕಪೂರ್ ಖಾನ್, ಕೃತಿ ಸನೋನ್ ಮತ್ತು ಟಬು ಅವರನ್ನು ಒಳಗೊಂಡ ಮುಂಬರುವ ಹಾಸ್ಯ ಚಲನಚಿತ್ರ ದಿ ಕ್ರ್ಯೂ (The Crew)ಗೆ ಹೊಸ ಕಲಾವಿದರ ಎಂಟ್ರಿ ಆಗಿದೆ. ರಿಯಾ ಕಪೂರ್ ಮತ್ತು ಏಕ್ತಾ ಕಪೂರ್ ನಿರ್ಮಾಣದ ಮುಂಬರುವ ಈ ಚಿತ್ರದಲ್ಲಿ ಜನಪ್ರಿಯ 'ದಿ ಕಪಿಲ್ ಶರ್ಮಾ ಶೋ'ನ ನಿರೂಪಕ ಕಪಿಲ್ ಶರ್ಮಾ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಪ್ರೇಕ್ಷಕರಿಗೆ ಸಿಹಿ ಅಚ್ಚರಿಯನ್ನುಂಟು ಮಾಡಿದೆ.

ಕಪಿಲ್ ಶರ್ಮಾ ಅವರು ಶೀಘ್ರದಲ್ಲೇ ಈ ಚಿತ್ರದ ತಮ್ಮ ಭಾಗದ ಚಿತ್ರೀಕರಣವನ್ನು ವಿದೇಶದಲ್ಲಿ ಕೈಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ತಂಡದಿಂದ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ. ಕೃತಿ ಮತ್ತು ಕರೀನಾ ಕಳೆದ ತಿಂಗಳು ತಮ್ಮ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಈ ವಾರ ಟಬು ಅವರೊಂದಿಗೆ ಸೇರಿಕೊಂಡರು. ವರದಿ ಪ್ರಕಾರ, ದಿಲ್ಜಿತ್ ದೋಸಾಂಜ್ ಅವರನ್ನು ಪ್ರಮುಖವಾಗಿ ಒಳಗೊಂಡಿರುವ ಈ ಚಲನಚಿತ್ರವನ್ನು ರಾಜೇಶ್ ಕೃಷ್ಣನ್ ನಿರ್ದೇಶಿಸುತ್ತಿದ್ದಾರೆ.

ನಿರ್ಮಾಪಕರಾದ ಏಕ್ತಾ ಕಪೂರ್​ ಪ್ರಕಾರ, ''ದಿ ಕ್ರ್ಯೂ ವೀಕ್ಷಕರಿಗೆ ಮನರಂಜನೆ ಮತ್ತು ಸ್ಫೂರ್ತಿ ನೀಡುತ್ತದೆ. ಪ್ರತಿಯೊಬ್ಬ ಸದಸ್ಯರ ಸಹಕಾರಿ ಪ್ರಯತ್ನಗಳು ಮೋಡಿ ಮಾಡುತ್ತವೆ ಎಂದು ನಾನು ಭಾವಿಸುತ್ತೇನೆ. ದಿ ಕ್ರ್ಯೂ ಮೂಲಕ ನನ್ನ ತಂಡದೊಂದಿಗೆ ಮನರಂಜನೆ ಮತ್ತು ಸ್ಫೂರ್ತಿ ನೀಡುವ ಕಥೆಯನ್ನು ರಚಿಸಲು ನಾನು ಉತ್ಸುಕಳಾಗಿದ್ದೇನೆ. ಅಂತಹ ಅದ್ಭುತವಾದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಹೊಂದಿರುವ ಈ ಚಿತ್ರ ಟೀಮ್‌ವರ್ಕ್ ಮತ್ತು ಕಲ್ಪನೆಯ ಶಕ್ತಿಗೆ ಸಾಕ್ಷಿಯಾಗಲಿದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ'' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆ ಆಶೀರ್ವಾದ ಪಡೆದ ಸಿಎಂ ಬೊಮ್ಮಾಯಿ, ಕಾಂತಾರ ಸ್ಟಾರ್​ ರಿಷಬ್ ಶೆಟ್ಟ

2018 ರ ಹಾಸ್ಯ ಚಲನಚಿತ್ರ ’ವೀರೆ ದಿ ವೆಡ್ಡಿಂಗ್‘ ನಂತರ, ದಿ ಕ್ರ್ಯೂ ಏಕ್ತಾ ಕಪೂರ್ ಮತ್ತು ರಿಯಾ ಕಪೂರ್​ ಅವರ ಎರಡನೇ ಸಹಯೋಗವಾಗಿದೆ. ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ಅನಿಲ್ ಕಪೂರ್ ಪ್ರೊಡಕ್ಷನ್ಸ್‌ನ ಸಹ ನಿರ್ಮಾಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಚಲನಚಿತ್ರವನ್ನು ಭಾರತದಾದ್ಯಂತ ಹಲವಾರು ಸ್ಥಳಗಳಲ್ಲಿ ಚಿತ್ರೀಕರಿಸಲಾಗುವುದು, ಮುಂಬೈ ಪ್ರಾಥಮಿಕ ಲೊಲೇಶನ್​ ಆಗಿ ಕಾರ್ಯ ನಿರ್ವಹಿಸುತ್ತದೆ. ಈ ವರ್ಷದಲ್ಲೇ ಚಿತ್ರ ಥಿಯೇಟರ್‌ಗೆ ಬರುವ ನಿರೀಕ್ಷೆಯಿದ್ದು, ಶೂಟಿಂಂಗ್​ ಬಿರುಸಿನಿಂದ ಸಾಗಿದೆ.

ಇದನ್ನೂ ಓದಿ: ಶಾಕುಂತಲಂ ಬಿಡುಗಡೆಗೆ ಕ್ಷಣಗಣನೆ: ವ್ಯಾಪಕ ಪ್ರಚಾರ ಬೆನ್ನಲ್ಲೇ ನಟಿ ಸಮಂತಾ ಅಸ್ವಸ್ಥ

'The Crew' ಒಂದು ವಿಭಿನ್ನ ಶೀರ್ಷಿಕೆ. ಟೈಟಲ್​ ಮತ್ತು ಬಿಗ್​ ಸ್ಟಾರ್ ಕಾಸ್ಟ್ ನಿಂದ ಗಮನ ಸೆಳೆಯುತ್ತಿದೆ. ದಿ ಕ್ರ್ಯೂ ಎಂದರೆ 'ಸಿಬ್ಬಂದಿ' ಎಂದರ್ಥ. ಮಹಿಳಾ ಪ್ರಧಾನ ಚಿತ್ರವಿದು. ಮೂರು ತಲೆಮಾರಿನ ಮೂವರು ಜನಪ್ರಿಯ ನಟಿಯರನ್ನೊಳಗೊಂ ಈ ಚಿತ್ರ ವೈಮಾನಿಕ ಕ್ಷೇತ್ರದಲ್ಲಿ ನಡೆಯುವ ಕಥೆಯನ್ನು ಹೇಳಲಿದೆ. ಇಲ್ಲಿನ ವಿವಿಧ ಹುದ್ದೆಗಳಲ್ಲಿ ತೊಡಗಿಸಿಕೊಂಡಿರುವ ಮೂವರು ಮಹಿಳೆಯರ (ಸಿಬ್ಬಂದಿ) ಕಥೆಯನ್ನು ಚಿತ್ರ ಅನಾವರಣಗೊಳಿಸಲಿದ್ದು, ಮೂವರು ನಟಿಯರಿಗೂ ವಿಭಿನ್ನ ಗ್ಲಾಮರಸ್​ ಪಾತ್ರವಿರಲಿದೆ. ಈ ಮೂವರೂ ಕೂಡ ಹಿಂದಿ ಚಿತ್ರರಂಗದ ಬೇಡಿಕೆ ನಟಿಯರಾಗಿದ್ದು, ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ಹಿನ್ನೆಲೆ ಗೆಲ್ಲುವ ವಿಶ್ವಾಸದಲ್ಲಿ ಚಿತ್ರತಂಡವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.