ETV Bharat / entertainment

ಹೊಸ ಪ್ರತಿಭೆಗಳ 'ಕಾಕ್​​ಟೈಲ್​​​' ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್​​​ಕುಮಾರ್ ಸಪೋರ್ಟ್

author img

By

Published : Dec 29, 2022, 5:10 PM IST

ಕಾಕ್​​​​ಟೈಲ್​​ ಸಿನಿಮಾ ಟ್ರೈಲರ್​ ಅನ್ನು ಅಶ್ವಿನಿ ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

cocktail Trailer release
ಕಾಕ್ಟೈಲ್ ಟ್ರೈಲರ್ ರಿಲೀಸ್

ಚಿತ್ರರಂಗಕ್ಕೆ ಬರುವ ಹೊಸ ಪ್ರತಿಭೆಗಳಿಗೆ ದಿವಂಗತ ಪುನೀತ್​ ರಾಜ್​ಕುಮಾರ್​ ಬೆಂಬಲ ಸೂಚಿಸುತ್ತಿದ್ದದ್ದು ನಿಮಗೆ ತಿಳಿದಿರುವ ವಿಚಾರ. ಈಗ ಅದೇ ಮಾರ್ಗದಲ್ಲಿ ಅವರ ಪತ್ನಿ ಹೆಜ್ಜೆ ಇಡುತ್ತಿದ್ದಾರೆ. ಪವರ್ ಸ್ಟಾರ್ ಕನಸುಗಳನ್ನು ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ನನಸು‌ ಮಾಡುತ್ತಿದ್ದಾರೆ.

ಕಾಕ್​​ಟೈಲ್​​ ಟ್ರೈಲರ್ ರಿಲೀಸ್: ಹೌದು, ಕ್ಯಾಚೀ ಟೈಟಲ್ ಹೊಂದಿರುವ ಕಾಕ್ಟೈಲ್ ಸಿನಿಮಾದ ಟ್ರೈಲರ್​ ಅನ್ನು ಅಶ್ವಿನಿ ಪುನೀತ್ ರಾಜ್​​ಕುಮಾರ್ ಬಿಡುಗಡೆ ಮಾಡುವ ಮೂಲಕ ಹೊಸ ಪ್ರತಿಭೆಗಳಿಗೆ ಬೆಂಬಲ ಸೂಚಿಸಿದ್ದಾರೆ. ಟ್ರೈಲರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್, ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಈ ಚಿತ್ರತಂಡಕ್ಕೆ ಸಾಥ್ ನೀಡಿದರು.

  • " class="align-text-top noRightClick twitterSection" data="">

ಯುವ ನಟನ ಎಂಟ್ರಿ: ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮೊದಲಿಗೆ ಮಾತನಾಡಿದ ನಿರ್ದೇಶಕ ಶ್ರೀರಾಮ್, ನನಗೆ ಸುಮಾರು ಹದಿನೈದು ವರ್ಷಗಳಿಂದ ಚಿತ್ರ ರಂಗದ ಜೊತೆ ನಂಟಿದೆ. ಕಾಕ್​ಟೈಲ್​​ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಇದು ಒಂದೇ ಜಾನರ್​ನ ಚಿತ್ರವಲ್ಲ. ಈ ಚಿತ್ರದಲ್ಲಿ ಲವ್, ಹಾರರ್, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲವೂ ಇದೆ. ಕನ್ನಡದಲ್ಲಿ ಇದು ಹೊಸ ನರೇಶನ್ ಸಿನಿಮಾ. ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಕೆಲವು ಸ್ನೇಹಿತರು ಸಹ ಮೆಚ್ಚುಗೆ ಸೂಚಿಸಿದ್ದಾರೆ.

ಚಿತ್ರ ಉತ್ತಮವಾಗಿ ಬರಲು ಕಾರಣ ನನ್ನ ತಂಡ. ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ನಿರ್ಮಾಪಕ ಡಾ. ಶಿವಪ್ಪ ಅವರ ಮಗ ವೀರೆನ್ ಕೇಶವ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ ಅಂತಾ ಹೇಳಿದರು.

cocktail Trailer release
ಜನವರಿ 6 ರಂದು ಬಿಡುಗಡೆ ಆಗಲಿದೆ ಕಾಕ್ಟೈಲ್

ಎಲ್ಲಾ ಭಾವನೆಗಳನ್ನೊಳಗೊಂಡ ಸಿನಿಮಾ: ಯುವ ನಟ‌ ವೀರೆನ್ ಕೇಶವ್ ಮಾತನಾಡಿ, ನಾಲ್ಕೈದು ಡ್ರಿಂಕ್ಸ್​​​ಗಳ ಮಿಶ್ರಣಕ್ಕೆ "ಕಾಕ್ಟೈಲ್" ಎನ್ನುತ್ತಾರೆ.‌ ನಮ್ಮ ಸಿನಿಮಾದಲ್ಲೂ ಹಾಗೆ. ಲವ್ ಇದೆ, ಹಾಗಂತ ಲವ್ ಜಾನರ್ ಸಿನಿಮಾ‌ ಅಲ್ಲ.‌ ಸೆಂಟಿಮೆಂಟ್ ಇದೆ. ಆದರೆ, ಸೆಂಟಿಮೆಂಟ್ ಸಿನಿಮಾ ಅಲ್ಲ. ಎಲ್ಲ ಅಂಶಗಳನ್ನು ಒಳಗೊಂಡಿರುವ ವಿಭಿನ್ನ ಸಿನಿಮಾ ನಮ್ಮದು. ವಿಕ್ರಮ್ ಎಂಬುದು ನನ್ನ ಪಾತ್ರದ ಹೆಸರು. ಟ್ರೈಲರ್ ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜ್​​​ಕುಮಾರ್ ಅವರಿಗೆ ಧನ್ಯವಾದ ಎಂದು ಹೇಳಿದರು.

ಅಶ್ವಿನಿ ಪುನೀತ್ ರಾಜ್​​​ಕುಮಾರ್​ಗೆ ಧನ್ಯವಾದ: ನಿರ್ಮಾಪಕ ಡಾ. ಶಿವಪ್ಪ ಮಾತನಾಡಿ‌, ನಾನು ಈ ಸಮಯದಲ್ಲಿ ಮೊದಲು ನೆನಪಿಸಿಕೊಳ್ಳುವುದು ದಿವಂಗತ ಪುನೀತ್ ರಾಜಕುಮಾರ್ ಅವರನ್ನು, ನನ್ನ ಮಗನನ್ನು ನಾಯಕನನ್ನಾಗಿ ಮಾಡುವುದಿಂದ ಹಿಡಿದು ನಮ್ಮ ಚಿತ್ರದ ಕುರಿತಾದ ಎಲ್ಲ ವಿಷಯಗಳನ್ನು ಅವರ ಬಳಿ ಹಂಚಿಕೊಳ್ಳುತ್ತಿದ್ದೆ. ಅವರು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು.

ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಧೈರ್ಯ ತುಂಬುತ್ತಿದ್ದರು. ಚಿತ್ರ ಬಿಡುಗಡೆಯ ಹೊತ್ತಿಗೆ ಅವರಿಲ್ಲ ಎನ್ನುವ ವಿಷಯ ತುಂಬಾ ದುಃಖವಾಗುತ್ತಿದೆ‌. ಆದರೆ, ಇಂದು ನಮ್ಮ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಅಶ್ವಿನಿ ಪುನೀತ್ ರಾಜ್​​​ಕುಮಾರ್ ಬಂದಿದ್ದಾರೆ. ಅವರಿಗೆ ಅನಂತ ಧನ್ಯವಾದಗಳು ಎಂದು ತಿಳಿಸಿದರು.

ಇದನ್ನೂ ಓದಿ: ಸೌತ್​ ಸಿನಿಮಾ ಬಗ್ಗೆ ರಶ್ಮಿಕಾ ಹೇಳಿಕೆ.. ಟ್ರೋಲಿಗರಿಗೆ ಮತ್ತೆ ಗುರಿಯಾದ ಮಂದಣ್ಣ

ಇನ್ನೂ, ವೀರೆನ್ ಕೇಶವ್ ಜೋಡಿಯಾಗಿ ಚರಿಶ್ಮಾ ಅಭಿನಯಿಸಿದ್ದಾರೆ. ವಿಜಯಲಕ್ಷ್ಮಿ ಕಂಬೈನ್ಸ್ ಲಾಂಛನದಲ್ಲಿ ಡಾ. ಶಿವಪ್ಪ ಚಿತ್ರ ನಿರ್ಮಿಸಿದ್ದು, ಲೋಕಿ ತವಸ್ಯ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಶ್ರೀರಾಮ್ ನಿರ್ದೇಶಿಸಿರುವ ಕಾಕ್​​ಟೈಲ್​ ಚಿತ್ರ ಜನವರಿ 6 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಿ ಯಶಸ್ಸು ಕಂಡರೆ ಕಾಕ್​ಟೈಲ್​ ಪಾರ್ಟ್ 2 ಮಾಡುವ ಯೋಚನೆ‌ ಈ ಚಿತ್ರ ತಂಡಕ್ಕಿದೆ.

ಇದನ್ನೂ ಓದಿ: ಶೀಜಾನ್ ಖಾನ್ ಸಂಪರ್ಕದ ನಂತರ ತುಂಬಾ ಬದಲಾಗಿದ್ದ ತುನಿಶಾ ಶರ್ಮಾ: ಹಿಜಾಬ್ ಸಹ ಧರಿಸುತ್ತಿದ್ದಳು: ಕುಟುಂಬದ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.