ETV Bharat / entertainment

'ಋತುಚಕ್ರ ರಜೆ ಅಗತ್ಯವಿಲ್ಲ': ಸ್ಮೃತಿ ಇರಾನಿ ಹೇಳಿಕೆ ಬೆಂಬಲಿಸಿದ ಕಂಗನಾ ರಣಾವತ್​

author img

By ETV Bharat Karnataka Team

Published : Dec 15, 2023, 10:28 AM IST

'ಪೀರಿಯಡ್ ಲೀವ್' ನೀಡುವ ಕುರಿತು ಸಚಿವೆ ಸ್ಮೃತಿ ಇರಾನಿ ಅವರ ಹೇಳಿಕೆಯನ್ನು ನಟಿ ಕಂಗನಾ ರಣಾವತ್​ ಬೆಂಬಲಿಸಿದ್ದಾರೆ.

Kangana Ranaut supports Smriti Irani's period leave statement
ಸ್ಮೃತಿ ಇರಾನಿ ಅವರ ಪೀರಿಯಡ್​ ಲೀವ್ ಹೇಳಿಕೆಯನ್ನು ಕಂಗನಾ ರಣಾವತ್ ಬೆಂಬಲಿಸಿದ್ದಾರೆ

ಸಚಿವೆ ಸ್ಮೃತಿ ಇರಾನಿ ಅವರು ಡಿಸೆಂಬರ್ 14 ರಂದು ರಾಜ್ಯಸಭೆಯಲ್ಲಿ ಮಹಿಳೆಯರಿಗೆ 'ಪೀರಿಯಡ್ ಲೀವ್' ನೀಡುವ ಕುರಿತು ಚರ್ಚೆ ನಡೆಸಿದರು. ಋತುಚಕ್ರ ಮಹಿಳೆಯರ ಜೀವನದ ನೈಸರ್ಗಿಕ ಭಾಗ ಎಂಬುದನ್ನು ಒತ್ತಿ ಹೇಳಿದರು. ಇದನ್ನು ಅಂಗವಿಕಲತೆ ಎಂದು ಪರಿಗಣಿಸಬಾರದು ಎಂಬುದಾಗಿ ತಿಳಿಸಿದರು. ಜೊತೆಗೆ, 10 ರಿಂದ 19 ವರ್ಷ ವಯಸ್ಸಿನ ಹದಿಹರೆಯದ ಹುಡುಗಿಯರನ್ನು ಗಮನದಲ್ಲಿಟ್ಟಿಕೊಂಡು ಮಾಡಿರುವ 'ಋತುಚಕ್ರ ನೈರ್ಮಲ್ಯ ನಿರ್ವಹಣೆ' (MHM) ಯೋಜನೆಯನ್ನು ಸಚಿವರು ಎತ್ತಿ ಹಿಡಿದರು. ಸ್ಮೃತಿ ಇರಾನಿ ಅವರ ಈ ಹೇಳಿಕೆಯನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ಬೆಂಬಲಿಸಿದ್ದಾರೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲ್ಯೂಸಿಡಿ) ಇಲಾಖೆ ಸಚಿವರ ಹೇಳಿಕೆಯನ್ನು ಬೆಂಬಲಿಸಿರುವ ಧಾಕಡ್ ನಟಿ ಕಂಗನಾ ರಣಾವತ್​ ಗುರುವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸಚಿವೆ ಸ್ಮೃತಿ ಇರಾನಿ ಅವರ ಸುದ್ದಿ ಹಂಚಿಕೊಂಡ ನಟಿ, ''ಕೆಲಸ ಮಾಡುವ ಮಹಿಳೆ ಒಂದು 'ಮಿಥ್​​', ಮನುಕುಲದ ಇತಿಹಾಸದಲ್ಲಿ ದುಡಿಯದ ಮಹಿಳೆ ಇಲ್ಲವೇ ಇಲ್ಲ. ವ್ಯವಸಾಯದಿಂದ ಹಿಡಿದು ಮನೆ ಕೆಲಸದಿಂದ, ಮಕ್ಕಳನ್ನು ಬೆಳೆಸುವವರೆಗೆ, ಮಹಿಳೆಯರು ಯಾವಾಗಲೂ ಕೆಲಸ ಮಾಡುತ್ತಿರುತ್ತಾರೆ. ಕುಟುಂಬ, ಸಮುದಾಯ ಅಥವಾ ರಾಷ್ಟ್ರದ ಮೇಲಿನ ಅವರ ಬದ್ಧತೆಗೆ ಯಾವ ವಿಚಾರಗಳೂ ಅಡ್ಡಿಯಾಗುವುದಿಲ್ಲ. ಇದೊಂದು (ಋತುಚಕ್ರ) ನಿರ್ದಿಷ್ಟ ವೈದ್ಯಕೀಯ ಪರಿಸ್ಥಿತಿ. ಮಹಿಳೆಯರಿಗೆ ಅವರ ಋತುಚಕ್ರಕ್ಕೆ ಪೈಡ್​ ಲೀವ್​ನ ಅಗತ್ಯವಿಲ್ಲ. ಇದು ಋತುಚಕ್ರವೇ ಹೊರತು ರೋಗ ಅಥವಾ ಅಂಗವಿಕಲತೆ ಅಲ್ಲ ಎಂಬುದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ'' ಎಂದು ಬರೆದುಕೊಂಡಿದ್ದಾರೆ.

Kangana Ranaut instagram story
ನಟಿ ಕಂಗನಾ ರಣಾವತ್ ಇನ್​ಸ್ಟಾಗ್ರಾಮ್​ ಸ್ಟೋರಿ

ಇದನ್ನೂ ಓದಿ : ಬಾಲಿವುಡ್​ ನಟ ಶ್ರೇಯಸ್ ತಲ್ಪಾಡೆಗೆ ಹೃದಯಾಘಾತ

ಕಂಗನಾ ರಣಾವತ್​ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿಯ ಕೊನೆಯ ಚಿತ್ರ 'ತೇಜಸ್'. ಸಿನಿಮಾ ಮತ್ತು ಅವರ ಅಭಿನಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಾಕ್ಸ್​ ಆಫೀಸ್​​ ಕಲೆಕ್ಷನ್​​ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ. ತೇಜಸ್​​​ ಸಿನಿಮಾಗೂ ಮುನ್ನ ಬಂದ ಚಂದ್ರಮುಖಿ 2 ಕೂಡ ನಿರೀಕ್ಷೆ ತಲುಪುವಲ್ಲಿ ಕೊಂಚ ಹಿನ್ನಡೆ ಕಂಡಿತು. ಮುಂದಿನ ದಿನಗಳಲ್ಲಿ 'ಎಮರ್ಜೆನ್ಸಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಹುನಿರೀಕ್ಷಿತ ಚಿತ್ರವನ್ನು ಸ್ವತಃ ನಟಿಯೇ ನಿರ್ದೇಶಿಸಿ, ನಿರ್ಮಿಸಿದ್ದಾರೆ. ಎಮರ್ಜೆನ್ಸಿ ಚಿತ್ರದಲ್ಲಿ ಕಂಗನಾ ರಣಾವತ್ ಅವರು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನುಪಮ್ ಖೇರ್ ಮತ್ತು ದಿವಂಗತ ಸತೀಶ್ ಕೌಶಿಕ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : 2023ರಲ್ಲಿ ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರಿವರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.