ETV Bharat / entertainment

ತೇಜಸ್​ ಟೀಸರ್​ ರಿಲೀಸ್​: 'ಭಾರತದ ತಂಟೆಗೆ ಬಂದರೆ ಬಿಡುವ ಮಾತೇ ಇಲ್ಲ' ಅಂತಿದ್ದಾರೆ ಕಂಗನಾ ರಣಾವತ್​

author img

By ETV Bharat Karnataka Team

Published : Oct 2, 2023, 1:44 PM IST

Updated : Oct 2, 2023, 2:24 PM IST

ಕಂಗನಾ ಏರ್​ಫೋರ್ಸ್​ ಪೈಲಟ್​ ಪಾತ್ರದಲ್ಲಿ ತೇಜಸ್​ ಅಕ್ಟೋಬರ್​ 27 ರಂದು ತೆರೆಗೆ ಬರಲು ಸಜ್ಜಾಗಿದೆ.

Kangana Ranaut starrer Tejas teaser released
ಕಂಗನಾ ರಣಾವತ್​ ಅಭಿನಯದ ತೇಜಸ್​ ಟೀಸರ್​ ರಿಲೀಸ್​

ಬಾಲಿವುಡ್​ ನಟಿ ಕಂಗನಾ ರಣಾವತ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಬಹು ನಿರೀಕ್ಷಿತ ಸಿನಿಮಾ ತೇಜಸ್​ ಟೀಸರ್​ ರಿಲೀಸ್​ ಆಗಿದ್ದು, ಅ. 2 ಗಾಂಧಿ ಜಯಂತಿಯಂದು ಬಿಡುಗಡೆಯಾಗಿದೆ. ದೇಶ ಪ್ರೇಮ ಸಾರುವ ಸಿನಿಮಾದಲ್ಲಿ ಕಂಗನಾ ರಣಾವತ್​ ಏರ್​ ಫೋರ್ಸ್​ ಪೈಲಟ್​ ತೇಜಸ್​ ಗಿಲ್​ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಟೀಸರ್​ ಸಿಂಪ್ಲಿ ಥ್ರಿಲ್ಲಿಂಗ್​ ಆಗಿದ್ದು, ಹಿನ್ನೆಲೆ ಸಂಗೀತಕ್ಕೆ ರೋಮಾಂಚನವಾಗುತ್ತಿದೆ. ಅದರಲ್ಲೂ ಏರ್​ಫೋರ್ಸ್​ ಫೈಲಟ್​ ಯೂನಿಫಾರ್ಮ್​ ನಲ್ಲಿ ಬರುವ ಕಂಗನಾ ರಣಾವತ್​ ಲುಕ್​ ಗಂತೂ ಅಭಿಮಾನಿಗಳು ಫಿದಾ ಆಗಿದ್ದಾರೆ. ಟೀಸರ್​ನಲ್ಲಿ ಕಂಗನಾ ಅವರ ಲುಕ್​ ಅನಾವರಣಗೊಂಡಿದ್ದು, ಜೊತೆಗೆ ತೇಜಸ್​ ಗಿಲ್​ ಆಗಿ ಅವರಾಡುವ ದೇಶ ಪ್ರೇಮದ ಮಾತುಗಳು ಇನ್ನೂ ರೋಮಾಂಚನಕಾರಿಯಾಗಿವೆ. "ಪ್ರತಿಯೊಂದು ಮಾತುಗಳು ಪ್ರತಿ ಸಲ ಗೆಲ್ಲಲೇ ಬೇಕು ಎನ್ನುವ ಅವಶ್ಯಕತೆ ಇಲ್ಲ. ಯುದ್ಧದ ಭೂಮಿಯಲ್ಲಿ ಈಗ ಯುದ್ಧ ನಡೆಯಬೇಕಾಗಿದೆ. ಈಗ ಆಕಾಶದಿಂದ ಮಳೆಯಲ್ಲಿ ಬೆಂಕಿಯ ಸುರಿ ಮಳೆಯಾಗುತ್ತೆ. ಭಾರತದ ತಂಟೆಗೆ ಬಂದ್ರೆ ಬಿಡುವ ಮಾತೇ ಇಲ್ಲ.." ಎನ್ನುವ ಡೈಲಾಗ್​ ದೇಶ ಪ್ರೇಮವನ್ನು ಹೆಚ್ಚಿಸುವಂತಿದೆ. ಟೀಸರ್​ ನಲ್ಲಿ ಸಿನಿಮಾದ ಟ್ರೈಲರ್​ ಬಿಡುಗಡೆಯ ದಿನಾಂಕವನ್ನೂ ಘೋಷಣೆ ಮಾಡಿದ್ದು, ಏರ್​ಫೋರ್ಸ್​ ದಿನ ಅಕ್ಟೋಬರ್​ 8 ರಂದು ಬಿಡುಗಡೆ ಮಾಡುವುದಾಗಿ ಹೇಳಿದೆ.

ಟೀಸರ್​ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟಿ ಕಂಗನಾ ರಣಾವತ್​ 'ನಮ್ಮ ರಾಷ್ಟ್ರಪ್ರೇಮಕ್ಕಾಗಿ ಟೇಕಾಫ್​ ಆಗಲು ಸಿದ್ಧವಾಗಿದೆ. ಭಾರತವನ್ನು ತೆಗಳಿದರೆ ಬಿಡುವ ಮಾತೇ ಇಲ್ಲ. ಅಕ್ಟೋಬರ್​ 8 ಏರ್​ಫೋರ್ಸ್​ ದಿನದಂದು ಟ್ರೈಲರ್​ ಬಿಡುಗಡೆಯಾಗಲಿದೆ' ಎಂದು ಬರೆದುಕೊಂಡಿದ್ದಾರೆ.

ನಿರ್ದೇಶಕ ಸರ್ವೇಶ್​ ಮೇವಾರ ಅವರು ಕಥೆ ಬರೆದು ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರದಲ್ಲಿ ನಟ ಅನ್ಶುಲ್ ಚೌಹಾಣ್​, ವರುಣ್​ ಮಿತ್ರಾ, ವೀಣಾ ನಾಯರ್​, ಮಿರ್ಕೋ ಕ್ವೈನಿ, ರೋಹೆದ್​ ಖಾನ್​ ಹಾಗೂ ಅನುಜ್​ ಖುರಾನಾ​ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆರ್​ಎಸ್​ವಿಪಿ ಬ್ಯಾನರ್​ ಅಡಿಯಲ್ಲಿ ರೋನಿ ಸ್ಕ್ರೂವಾಲಾ ಅವರು ಬಂಡವಾಳ ಹೂಡಿದ್ದು, ಸಿನಿಮಾ ಅಕ್ಟೋಬರ್​ 27 ರಂದು ತೆರೆಗೆ ಬರಲು ಸಜ್ಜಾಗಿದೆ.

  • " class="align-text-top noRightClick twitterSection" data="">

ಇತ್ತೀಚೆಗೆ ಪಿ ವಾಸು ನಿರ್ದೇಶನದ ಕಂಗನಾ ರಣಾವತ್​ ಅಭಿನಯದ ಚಂದ್ರಮುಖಿ 2 ಸಿನಿಮಾ ಬಿಡುಗಡೆಯಾಗಿತ್ತು. ತಮಿಳಿನ ಹಾರರ್​ ಕಾಮಿಡಿ ಸಿನಿಮಾ ಚಂದ್ರಮುಖಿಯ ಭಾಗ 2 ಇದಾಗಿದೆ. ಇದರಲ್ಲಿ ನಟ ರಜನಿಕಾಂತ್​ ಹಾಗೂ ಜ್ಯೋತಿಕಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಚಂದ್ರಮುಖಿ 2 ಸಿನಿಮಾದಲ್ಲಿ ಕಂಗನಾ ರಣಾವತ್​ ಅವರು ರಾಜನ ಆಸ್ಥಾನದಲ್ಲಿ ತನ್ನ ಸೌಂದರ್ಯ ಹಾಗೂ ನೃತ್ಯ ಕೌಶಲ್ಯಗಳಿಗೆ ಹೆಸರುವಾಸಿಯಾದ ನರ್ತಕಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: 'ಸಲಾರ್​' ಪ್ರಶಾಂತ್​ ನೀಲ್​ ನಿರ್ದೇಶನದ 'ಉಗ್ರಂ' ರಿಮೇಕ್​; ರವಿ ಬಸ್ರೂರು ವಿಡಿಯೋ ವೈರಲ್​

Last Updated : Oct 2, 2023, 2:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.