ETV Bharat / entertainment

Jyotika and Surya: ಕೋಪನ್‌ಹೇಗನ್‌ನಲ್ಲಿ ಮಗನ ಹುಟ್ಟುಹಬ್ಬ ಆಚರಿಸಿದ ನಟ ಸೂರ್ಯ ದಂಪತಿ

author img

By

Published : Jul 3, 2023, 7:32 PM IST

ಕುಟುಂಬದೊಂದಿದೆ ಎಂಜಾಯ್​ ಮೂಡ್​ನಲ್ಲಿರುವ ನಟ ಸೂರ್ಯ ಮತ್ತು ನಟಿ ಜ್ಯೋತಿಕಾ ದಂಪತಿ ತಮ್ಮ ಮಗನ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೆಟಿಜನ್​ ಕೂಡ ತಾರಾ ಜೋಡಿಯ ಪುತ್ರನಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

Jyotika and Surya celebrate son's birthday in Copenhagen, share dreamy pictures from family vacay
ವಿದೇಶಿ ಪ್ರವಾಸದಲ್ಲಿ ಕಾಲಿವುಡ್​ ನಟ ಸೂರ್ಯ

ಹೈದರಾಬಾದ್: ಕಾಲಿವುಡ್​ ನಟ ಸೂರ್ಯ ಅವರು ಧರ್ಮಪತ್ನಿ ಹಾಗೂ ಮಕ್ಕಳೊಂದಿಗೆ ವಿದೇಶಿ ಪ್ರವಾಸದಲ್ಲಿದ್ದಾರೆ. ಪತ್ನಿ, ನಟಿ ಜ್ಯೋತಿಕಾ ಹಾಗೂ ತಮ್ಮ ಇಬ್ಬರು ಮುದ್ದು ಮಕ್ಕಳೊಂದಿಗೆ ಕೋಪನ್ ಹೇಗನ್​​ ಪ್ರವಾಸದಲ್ಲಿರುವ ಸೂರ್ಯ, ಕುಟುಂಬದವರೊಂದಿಗೆ ಸಖತ್ ಎಂಜಾಯ್​ ಮಾಡುತ್ತಿದ್ದಾರೆ. ಜ್ಯೋತಿಕಾ ಅಲ್ಲಿನ ಕೆಲವು ಸುಂದರ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೆಲವು ರೀಲ್​ಗಳನ್ನು ಸಹ ಅವರು ಪೋಸ್ಟ್ ಮಾಡಿಕೊಂಡಿದ್ದಾರೆ. ತಮ್ಮ ಮಗನ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದನ್ನು ಈ ವಿಶೇಷ ವಿಡಿಯೋದಲ್ಲಿ ನಾವು ಕಾಣಬಹುದು. ಕೋಪನ್ ಹೇಗನ್​​ನ ರುದ್ರರಮಣೀಯ ದೃಶ್ಯಾವಳಿಗಳನ್ನು ಸಹ ತಮ್ಮ ರೀಲ್​ನಲ್ಲಿ ಅತ್ಯದ್ಬುತವಾಗಿ ಸೆರೆ ಹಿಡಿದಿದ್ದಕ್ಕೆ ನೆಟಿಜನ್​ ಕೂಡ ಪುಳಕಿತರಾಗಿದ್ದಾರೆ.

ಚಿತ್ರಾಕರ್ಷಕದ ದೋಣಿಯನ್ನು ಏರಿದ ತಾರಾ ಕುಟುಂಬ, ಸುಂದರವಾದ ಸರೋವರದ ನಡುವೆ ಕೇಕ್ ಕತ್ತರಿಸುವ ಮೂಲಕ ತಮ್ಮ ಪುತ್ರನ ಹುಟ್ಟುಹಬ್ಬವನ್ನು ಖುಷಿ ಖುಷಿಯಾಗಿ ಆಚರಿಸಿದರು. ಈ ಹುಟ್ಟುಹಬ್ಬದ ಆಚರಣೆಗೂ ಮುನ್ನ ತಾರಾ ಜೋಡಿ ಫರೋ ದ್ವೀಪಗಳಿಗೆ ಭೇಟಿ ನೀಡಿತ್ತು. ಅಲ್ಲದೇ ಅಲ್ಲಿನ ವಿಡಿಯೋವನ್ನು ಸಹ ಜಾಲತಾಣದಲ್ಲಿ ಹಂಚಿಕೊಂಡಿದೆ. ಅದಕ್ಕೂ ಮುನ್ನ ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿಕೊಂಡಿದ್ದ ಈ ತಾರಾ ಜೋಡಿ, ನಮ್ಮ ಅಮುಲ್ಯವಾದ ಸಮಯ ಕಳೆಯಲು ನಮಗೆ ಇದು ಹೇಳಿ ಮಾಡಿಸಿದ ಸ್ಥಳ ಎಂದು ಹೇಳಿಕೊಂಡಿತ್ತು.

ಸದ್ಯ ಅವರು ಹಂಚಿಕೊಂಡಿರುವ ಕೋಪನ್​ಹೇಗನ್​ ವಿಡಿಯೋ ಮತ್ತು ಫೋಟೋ ಜಾಲತಾಣದಲ್ಲಿ ಜಾಗ ಪಡೆದಿವೆ. ತಮ್ಮ ನೆಚ್ಚಿನ ನಟನ ತುಂಬು ಕುಟುಂಬದ ಫೋಟೋ ಮತ್ತು ವಿಡಿಯೋ ನೋಡಿದ ನೆಟಿಜನ್​ಗಳು, ತರಹೇವಾರು ಕಾಮೆಂಟ್​ ಮಾಡುವ ಮೂಲಕ ತಾವೇ ಕೋಪನ್ ಹೇಗನ್​​ ಪ್ರವಾಸಕ್ಕೆ ತೆರಳಿದಷ್ಟು ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ದಕ್ಷಿಣ ಭಾರತದಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ನಟಿ ಜ್ಯೋತಿಕಾ ಸುಮಾರು 25 ವರ್ಷಗಳ ನಂತರ 'ಶ್ರೀ' ಎಂಬ ಚಿತ್ರದ ಮೂಲಕ ಬಾಲಿವುಡ್​ ಚಿತ್ರರಂಗಕ್ಕೆ ಮರಳಿದ್ದಾರೆ. ಸದ್ಯ ಅವರು ಹೆಸರು ಇಡದ ಮತ್ತೊಂದು ಚಿತ್ರಕ್ಕೂ ಸಹಿ ಮಾಡಿದ್ದಾರಂತೆ. ಬಹಳ ವರ್ಷಗಳ ಕಾಲ ಬಾಲಿವುಡ್​ನಿಂದ ದೂರ ಉಳಿದುಕೊಂಡಿದ್ದ ಜ್ಯೋತಿಕಾ ಈಗ ಮತ್ತೆ ಬಾಲಿವುಡ್​ಗೆ ಬಂದಿರುವುದಕ್ಕೆ ಅಭಿಮಾನಿಗಳ ಮನದಲ್ಲಿ ನಿರೀಕ್ಷೆ ಮೂಡುವಂತಾಗಿದೆ.

ಅವರ ಮುಂದಿನ ಚಿತ್ರ ಹಾರರ್​ ಸಿನಿಮಾ ಆಗಿರಲಿದ್ದು ಖ್ಯಾತ ನಟ ಅಜಯ್​ ದೇವಗನ್ ಜೊತೆ ಕಾಣಿಸಿಕೊಳ್ಳಲಿದ್ದಾರಂತೆ. ಆರ್​. ಮಾಧವನ್​ ಕೂಡ ಚಿತ್ರದಲ್ಲಿ ನಟಿಸಲಿದ್ದಾರೆ. ಚಿತ್ರತಂಡದವರಿಂದಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ಜ್ಯೋತಿಕಾ ಇದೇ ಮೊದಲ ಬಾರಿಗೆ ಅಜಯ್ ದೇವಗನ್ ಅವರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದಾರೆ. ಖ್ಯಾತ ನಿರ್ದೇಶಕ ವಿಕಾಸ್​ ಬಹ್ಲ್​ ಈ ಹಾರರ್ ಚಿತ್ರಕ್ಕೆ ಆ್ಯಕ್ಷನ್ ​ -ಕಟ್​ ಹೇಳಲಿದ್ದಾರೆ.

ಇನ್ನು ನಟ ಸೂರ್ಯ ಕೂಡ ಇತ್ತೀಚೆಗಷ್ಟೇ ಮುಂಬೈಗೆ ಶಿಫ್ಟ್ ಆಗಿದ್ದು, ಹಲವು ಚಿತ್ರಗಳನ್ನು ತಮ್ಮ ಕೈಯಲ್ಲಿಟ್ಟುಕೊಂಡಿದ್ದಾರೆ. ಇತ್ತೀಚೆಗೆ ತೆರೆಕಂಡ ಅವರ ನಟನೆಯ ‘ಸೂರರೈ ಪೋಟ್ರು’, ‘ಜೈ ಭೀಮ್​’ ಸಿನಿಮಾಗಳಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಕಮಲ್​ ಹಾಸನ್​ ನಟನೆಯ ‘ವಿಕ್ರಂ’ ಚಿತ್ರದಲ್ಲಿ ಕೊನೆ ಘಳಿಗೆಯಲ್ಲಿ ಬರುವ ಅವರ ರೋಲೆಕ್ಸ್​ ಎಂಬ ಪಾತ್ರವಂತೂ ಟ್ರೆಂಡ್​ ಸೃಷ್ಟಿ ಮಾಡಿದೆ. ಕಂಗುವ (Kanguva) ಎಂಬ ಹೊಸ ಚಿತ್ರ ಕೂಟ ಫೈನಲ್​ ಮಾಡಲಾಗಿದೆ. ಯುವಿ ಕ್ರಿಯೇಷನ್ಸ್ ಮತ್ತು ಸ್ಟುಡಿಯೋ ಗ್ರೀನ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಕಂಗುವ ಸಿನಿಮಾದಲ್ಲಿ ನಟಿ ದಿಶಾ ಪಟಾನಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು 3ಡಿಯಲ್ಲಿ 10 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಅಬ್ಬಬ್ಬಾ, 10 ಭಾಷೆಗಳಲ್ಲಿ ನಿರ್ಮಾಣವಾಗಲಿದೆ ನಟ ಸೂರ್ಯ ಸಿನಿಮಾ: ಟೈಟಲ್​ ಫಿಕ್ಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.