ETV Bharat / entertainment

'ಏಂಟಮ್ಮಾ' ಹಾಡಿಗೆ ಸಲ್ಮಾನ್​ ಖಾನ್​, ವೆಂಕಟೇಶ್​ ದಗ್ಗುಬಾಟಿ ಜೊತೆ ರಾಮ್​ಚರಣ್​ ಡ್ಯಾನ್ಸ್​

author img

By

Published : Apr 4, 2023, 3:14 PM IST

'ಕಿಸಿ ಕಾ ಬಾಯ್​ ಕಿಸಿ ಕಿ ಜಾನ್​' ಸಿನಿಮಾದ ಏಂಟಮ್ಮಾ ಹಾಡು ರಿಲೀಸ್​ ಆಗಿದೆ. ಸಲ್ಮಾನ್​ ಖಾನ್​, ವೆಂಕಟೇಶ್​ ದಗ್ಗುಬಾಟಿ ಜೊತೆ ರಾಮ್​ಚರಣ್​ ಸ್ಟೆಪ್​ ಹಾಕಿದ್ದಾರೆ.

Song
'ಏಂಟಮ್ಮಾ'

'ಆರ್​ಆರ್​ಆರ್'​ ಸಿನಿಮಾ ಖ್ಯಾತಿಯ ರಾಮ್​ಚರಣ್ ಅವರು​ ಬಾಲಿವುಡ್ ಸೂಪರ್​ ಸ್ಟಾರ್​ಗಳಾದ​ ಸಲ್ಮಾನ್​ ಖಾನ್​ ಮತ್ತು ವೆಂಕಟೇಶ್​ ದಗ್ಗುಬಾಟಿ ಅವರೊಂದಿಗೆ ಸ್ಕ್ರೀನ್​ ಶೇರ್​ ಮಾಡಿಕೊಂಡಿದ್ದಾರೆ.​ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಿನಿಮಾ 'ಕಿಸಿ ಕಾ ಬಾಯ್​ ಕಿಸಿ ಕಿ ಜಾನ್​' ಚಿತ್ರತಂಡ 'ಏಂಟಮ್ಮಾ' (Yentamma) ಹಾಡನ್ನು ಇಂದು ರಿಲೀಸ್​ ಮಾಡಿದೆ. ಈ ಸಾಂಗ್​ಗೆ ಸಲ್ಮಾನ್​ ಮತ್ತು ವೆಂಕಟೇಶ್​ ಜೊತೆ ರಾಮ್​ ಚರಣ್​ ಸ್ಟೆಪ್​ ಹಾಕಿದ್ದಾರೆ.

ವಿಡಿಯೋವನ್ನು ಸ್ವತಃ ರಾಮ್​ಚರಣ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೊದಲಿಗೆ ಸಲ್ಮಾನ್​ ಖಾನ್​ ಮತ್ತು ವೆಂಕಟೇಶ್​ ದಗ್ಗುಬಾಟಿ ಅವರು ಏಂಟಮ್ಮಾ ಹಾಡಿಗೆ ಕುಣಿಯುತ್ತಿರುತ್ತಾರೆ. ಹಾಡು ಮುಗಿಯುವ ಹೊತ್ತಿಗೆ ರಾಮ್​ಚರಣ್​ ಎಂಟ್ರಿ ಕೊಡುತ್ತಾರೆ. ಬಳಿಕ ಮೂವರು ಜೊತೆಯಾಗಿ ಕುಣಿಯುತ್ತಾರೆ. ಎಲ್ಲಾ ಸ್ಟಾರ್​ ನಟರು ಹಳದಿ ಬಣ್ಣದ ಶರ್ಟ್​ ಮತ್ತು ವೈಟ್​ ಲುಂಗಿ ಧರಿಸಿರುವುದನ್ನು ಕಾಣಬಹುದು. ಶಬ್ಬೀರ್ ಅಹ್ಮದ್ ಬರೆದಿರುವ ಈ ಹಾಡನ್ನು ವಿಶಾಲ್ ದಾದ್ಲಾನಿ ಮತ್ತು ಪಾಯಲ್ ದೇವ್ ಹಾಡಿದ್ದಾರೆ.

ರಾಮ್​ಚರಣ್​ ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡು, "ನನ್ನ ಅತ್ಯಂತ ಅಮೂಲ್ಯವಾದ ಆನ್-ಸ್ಕ್ರೀನ್ ಕ್ಷಣಗಳಲ್ಲಿ ಒಂದಾಗಿದೆ. ಲವ್ ಯು ಬ್ರದರ್ಸ್​. ಅದ್ಭುತ ಲೆಜೆಂಡ್ಸ್​ ಜೊತೆ ಡ್ಯಾನ್ಸ್​" ಎಂದು ಬರೆದುಕೊಂಡಿದ್ದಾರೆ. ನಟ ಅಪ್​ಡೇಟ್​ ನೀಡಿದ ಕೂಡಲೇ ನೆಟ್ಟಿಗರು ಬಗೆ ಬಗೆಯ ಬರಹಗಳಿಂದ ಕಮೆಂಟ್​ ವಿಭಾಗವನ್ನು ತುಂಬಿದ್ದಾರೆ. "ನೀವು ಸಲ್ಮಾನ್​ ಖಾನ್​ ಜೊತೆ ಡ್ಯಾನ್ಸ್​ ಮಾಡುವುದನ್ನು ನೋಡಲು ಖುಷಿಯಾಗುತ್ತದೆ" ಎಂದು ಅಭಿಮಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕನ್ ಮಾಡೆಲ್ ಗಿಗಿ ಹಡಿದ್ ಇನ್​ಸ್ಟಾ ಸ್ಟೋರಿ ಡಿಲೀಟ್​: ಮತ್ತೆ ವರುಣ್​ ಧವನ್ ಟ್ರೋಲ್​!

ಚಿತ್ರಕ್ಕೆ ಈ ಹಿಂದೆ ಕಭಿ ಈದ್ ಕಭಿ ದೀಪಾವಳಿ ಎಂದು ಟೈಟಲ್​ ಇಡಲಾಗಿತ್ತು. ನಂತರ ಕಿಸಿ ಕಾ ಭಾಯ್​ ಕಿಸಿ ಕಾ ಜಾನ್​ ಬದಲಾವಣೆ ಮಾಡಲಾಯಿತು. ಈ ಚಿತ್ರದಲ್ಲಿ ಸಲ್ಮಾನ್​ ಖಾನ್​, ವೆಂಕಟೇಶ್ ದಗ್ಗುಬಾಟಿ ಜೊತೆಗೆ ಪೂಜಾ ಹೆಗ್ಡೆ ಕೂಡ ಇದ್ದಾರೆ. ಸಿನಿಮಾವನ್ನು ಸಲ್ಮಾನ್ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ಸಲ್ಮಾನ್ ಖಾನ್ ಫಿಲ್ಮ್ಸ್ ನಿರ್ಮಿಸಿದೆ. ಫರ್ಹಾದ್ ಸಾಮ್​ಜಿ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳಿದ್ದಾರೆ.

ಇನ್ನು ಸಲ್ಮಾನ್​ ಖಾನ್​ ಸಿನಿಮಾ ವಿಚಾರವಾಗಿ ನೋಡುವುದಾದರೆ, 'ಟೈಗರ್ 3' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2012ರಲ್ಲಿ ಮೊದಲ ಭಾಗ ತೆರೆಕಂಡಿತ್ತು. ಕಬೀರ್ ಖಾನ್ ಆ್ಯಕ್ಷನ್​ ಕಟ್​​ ಹೇಳಿದ್ದ 'ಏಕ್ ಥಾ ಟೈಗರ್' 2012ರಲ್ಲಿ ತೆರೆಕಂಡು ಹಿಟ್ ಆಗಿತ್ತು. ಅದರ ಮುಂದುವರಿದ ಭಾಗ ಟೈಗರ್​ 2 ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಈ ಟೈಗರ್ ಜಿಂದಾ ಹೈ ಸಿನಿಮಾ 2017ರಲ್ಲಿ ಬಿಡುಗಡೆ ಆಗಿತ್ತು. ಇದೀಗ 'ಟೈಗರ್ 3' ಬಿಡುಗಡೆ ಹೊಸ್ತಿಲಿನಲ್ಲಿದೆ.

ಇದನ್ನೂ ಓದಿ: ತಂದೆ ಶಾರುಖ್​ ಖಾನ್​ ಡ್ಯಾನ್ಸ್​ ನೋಡಿ ಖುಷಿ ಪಟ್ಟ ಆರ್ಯನ್​ ಖಾನ್​; ವಿಡಿಯೋ ವೈರಲ್​

ಇನ್ನು ನಟ ರಾಮ್​ಚರಣ್ ಆರ್​ಆರ್​ಆರ್​ ಸಿನಿಮಾ ಹಿಟ್​ ನಂತರ ಗೇಮ್​ ಚೇಂಜರ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಫಸ್ಟ್​ ಲುಕ್​ ರಾಮ್​ಚರಣ್​ ಹುಟ್ಟುಹಬ್ಬದಂದು ರಿಲೀಸ್​ ಆಗಿದೆ.​ ಈ ಚಿತ್ರಕ್ಕೆ RC 15 ಎಂದು ತಾತ್ಕಾಲಿಕ ಶೀರ್ಷಿಕೆ ಇಡಲಾಗಿತ್ತು. ಇದರಲ್ಲಿ ನಟ ಐಎಎಸ್ ಅಧಿಕಾರಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಿಯಾರಾ ಅಡ್ವಾಣಿ ಚಿತ್ರದ ನಾಯಕಿ. ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.