ETV Bharat / entertainment

ಬಹುನಿರೀಕ್ಷಿತ 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಸಿನಿಮಾಗೆ ಮುಹೂರ್ತ ಫಿಕ್ಸ್​.. ಯಾವಾಗ ಗೊತ್ತಾ?

author img

By

Published : Jul 1, 2023, 7:36 PM IST

'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಜುಲೈ 21 ರಂದು ತೆರೆ ಕಾಣಲಿದೆ.

Hostel hudugaru bekagiddare
'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ

ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳು ನಿರ್ಮಾಣವಾಗುತ್ತಿದೆ. ಭಾರತೀಯ ಚಿತ್ರರಂಗವೇ ಸ್ಯಾಂಡಲ್​ವುಡ್​ನತ್ತ ತಿರುಗಿ ನೋಡುವಂತಹ ಸಿನಿಮಾಗಳು ನಮ್ಮಲ್ಲಿ ನಿರ್ಮಾಣಗೊಂಡಿವೆ. ಕಾಂತಾರ, ಕೆಜಿಎಫ್ 1 ಮತ್ತು ಕೆಜಿಎಫ್​​ 2ಗಳಂತಹ ಸಿನಿಮಾಗಳು ದೇಶದೆಲ್ಲೆಡೆ ಅಬ್ಬರಿಸಿದೆ. ಈ ಬಣ್ಣದ ಲೋಕದಲ್ಲಿ ಹೊಸ ಪ್ರತಿಭೆಗಳ ಆಗಮನವೂ ಆಗುತ್ತಿದೆ. ಅವರು ಕೂಡ ವಿಭಿನ್ನ ಕಥಾಹಂದರವುಳ್ಳ ಸಿನಿಮಾಗಳನ್ನು ಮಾಡುತ್ತಾ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ': ಸೆಟ್ಟೇರಿದಾಗಿಂದಲೂ ಕನ್ನಡ ಚಿತ್ರರಂಗದಲ್ಲಿ ಒಂದಲ್ಲ ಒಂದು ವಿಷಯಕ್ಕೆ ಸಖತ್ ಸುದ್ದಿಯಲ್ಲಿರುವ ಚಿತ್ರ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'. ಕ್ರಿಯೇಟಿವ್ ಕಂಟೆಂಟ್, ಟೈಟಲ್​ ಹಾಗೂ ವಿಭಿನ್ನ ಪ್ರಚಾರದಿಂದಲೇ ಗಮನ ಸೆಳೆಯುತ್ತಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ಈಗಾಗಲೇ ನಟರಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಡಾಲಿ ಧನಂಜಯ, ಧ್ರುವ ಸರ್ಜಾ, ದಿಗಂತ್​, ಶೈನ್​ ಶಟ್ಟಿ, ರಮ್ಯಾ, ಪವನ್​ ಕುಮಾರ್​ ಸೇರಿದಂತೆ ಅನೇಕ ಚಂದನವನದ ತಾರೆಯರು ಸಾಥ್ ನೀಡಿದ್ದಾರೆ.

ಈಗಾಗಲೇ ಸಿನಿಮಾದ ಹಾಡು, ಪೋಸ್ಟರ್​ಗಳು ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಸದ್ಯ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್​ ಆಗಿದೆ. ಬಿಡುಗಡೆ ದಿನಾಂಕ ಘೋಷಿಸಿರುವ ಚಿತ್ರತಂಡ ಶೀಘ್ರದಲ್ಲಿಯೇ ಟ್ರೇಲರ್ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಅದರ ನಂತರ ಚಿತ್ರವು ಜುಲೈ 21 ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ.

Hostel hudugaru bekagiddare
'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಹೊಸ ಪೋಸ್ಟರ್​

ಇದನ್ನೂ ಓದಿ: Upendra ಬರ್ತ್​ಡೇಗೆ 'ಬುದ್ಧಿವಂತ 2' ಟೀಸರ್​ ಜೊತೆ ರಿಲೀಸ್​ ಡೇಟ್​ ಅನೌನ್ಸ್​; ವಿಭಿನ್ನ ಅವತಾರದಲ್ಲಿ ರಿಯಲ್​ ಸ್ಟಾರ್​​!

ಯೂತ್ ಸಬ್ಜೆಕ್ಟ್ ಕಥೆಯನ್ನೊಳಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿದ್ದಾರೆ. ಬಹುತೇಕ ರಂಗಭೂಮಿ ಪ್ರತಿಭೆಗಳು ನಟಿಸಿರುವ ಚಿತ್ರವನ್ನು ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮ್ಸ್ ಬ್ಯಾನರ್ ಅಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ. ಕಶ್ಯಪ್ ಬಂಡವಾಳ ಹೂಡಿದ್ದಾರೆ.

ಪ್ರತಿ ಬಾರಿ ಯೂನಿಕ್ ಕಾನ್ಸೆಪ್ಟ್​​ ಮೂಲಕ ಪ್ರಚಾರ ಮಾಡುತ್ತಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಛಾಯಾಗ್ರಹಣ, ಸುರೇಶ್ ಸಂಕಲನವಿದ್ದು ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ.

ಜುಲೈ 7ಕ್ಕೆ ದಿಗಂತ್ ಲುಕ್ ರಿವೀಲ್: ದಿ. ಪುನೀತ್ ರಾಜ್‌ಕುಮಾರ್, ರಮ್ಯಾ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಶೈನ್​ ಶೆಟ್ಟಿ, ಪವನ್ ಕುಮಾರ್ ಬೆಂಬಲ ಕೊಟ್ಟಿರುವ ಚಿತ್ರದಲ್ಲಿ ದಿಗಂತ್​​ ಬಣ್ಣ ಹಚ್ಚಿದ್ದಾರೆ. ಆದರೆ ಅವರ ಪಾತ್ರ ಏನೆಂಬುದನ್ನು ಚಿತ್ರತಂಡ ಸಸ್ಪೆನ್ಸ್ ಆಗಿಟ್ಟಿದೆ. ಜುಲೈ 7ಕ್ಕೆ ದಿಗಂತ್ ಲುಕ್ ರಿವೀಲ್ ಮಾಡಲು ಚಿತ್ರತಂಡ ಪ್ಲ್ಯಾನ್​​​​ ಹಾಕಿಕೊಂಡಿದೆ.

ಸೆಟ್ಟೇರಿದಾಗಿಂದಲೂ ಒಂದಲ್ಲೊಂದು ವಿಚಾರವಾಗಿ ಸಿನಿಮಾ ಸುದ್ದಿಯಲ್ಲಿದೆ. ಚಿತ್ರದ ಮೊದಲ ಹಾಡನ್ನು ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧನಂಜಯ, ಧ್ರುವ ಸರ್ಜಾ ಅವರು ಬಿಡುಗಡೆ ಮಾಡುವ ಮೂಲಕ ಹೊಸ ಚಿತ್ರತಂಡಕ್ಕೆ ಬೆಂಬಲ ಸೂಚಿಸಿದ್ದರು. ಪ್ರೊಟೆಸ್ಟ್ ಸಾಂಗ್​ನಲ್ಲಿ ಹಾಸ್ಟೆಲ್​ನಲ್ಲಿರುವ ಹುಡುಗರ ಕಥೆ, ವ್ಯಥೆ ಅನಾವರಣಗೊಂಡಿತ್ತು. ಇನ್ನು ಸ್ಯಾಂಡಲ್​ವುಡ್​ನ ಮೋಹಕ ತಾರೆ ರಮ್ಯಾ ಕೂಡ ಈ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Actor Komal: ಭಯದ ಜೊತೆ ನಗಿಸಲು ಮತ್ತೆ ಬಂದ್ರು 'ನಮೋ ಭೂತಾತ್ಮ 2' ಗ್ಯಾಂಗ್​; ಹಾರರ್ ಟೀಸರ್​ ನೋಡಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.