ETV Bharat / entertainment

ಹಿಂದಿ ಚಿತ್ರ ಬಾಲಿವುಡ್​ ಎಂದು ಕರೆದುಕೊಳ್ಳುವುದನ್ನು ನಿಲ್ಲಿಸಲಿ: ಸಂಚಲನ ಮೂಡಿಸಿದ ಮಣಿ ರತ್ನಂ

author img

By

Published : Apr 20, 2023, 10:26 AM IST

ಹಿಂದಿ ಸಿನಿಮಾ ತನ್ನನ್ನು ತಾನು ಬಾಲಿವುಡ್​ ಎಂದು ಕರೆದುಕೊಳ್ಳುವುದು ನಿಲ್ಲಿಸಲಿ ಎಂದು ಖ್ಯಾತ ಚಿತ್ರ ನಿರ್ಮಾಪಕ ಮಣಿರತ್ನಂ ಹೇಳಿದ್ಧಾರೆ. ಅವರ ಈ ಹೇಳಿಕೆ ಈಗ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದೆ.

Hindi cinema should stop calling  stop calling themselves Bollywood  Mani Ratnam  ಸಂಚಲನ ಮೂಡಿಸಿದ ಖ್ಯಾತ ನಿರ್ಮಾಪಕನ ಹೇಳಿಕೆ  ಬಾಲಿವುಡ್​ ಎಂದು ಕರೆದುಕೊಳ್ಳುವುದನ್ನು ನಿಲ್ಲಿಸಲಿ  ಹಿಂದಿ ಸಿನಿಮಾ ತನ್ನನ್ನು ತಾನು ಬಾಲಿವುಡ್  ಖ್ಯಾತ ಚಿತ್ರ ನಿರ್ಮಾಪಕ ಮಣಿರತ್ನಂ  ಹಿರಿಯ ಚಲನಚಿತ್ರ ನಿರ್ಮಾಪಕ ಮಣಿರತ್ನಂ  ಸಿನಿಮಾ ಅಭಿಮಾನಿಗಳು ಪೊನ್ನಿಯಿನ್ ಸೆಲ್ವನ್ 2ಕ್ಕಾಗಿ ಕಾತುರ  ಆರ್​ಆರ್​ಆರ್​ ಹಾಗೂ ಕಾಂತಾರ ಸಿನಿಮಾ ಬಿಡುಗಡೆ
ಹಿಂದಿ ಚಿತ್ರ ಬಾಲಿವುಡ್​ ಎಂದು ಕರೆದುಕೊಳ್ಳುವುದನ್ನು ನಿಲ್ಲಿಸಲಿ

ಖ್ಯಾತ ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರ ಚಿತ್ರ ಪೊನ್ನಿಯಿನ್ ಸೆಲ್ವನ್ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಮೊದಲ ಭಾಗವು ಸೆಪ್ಟೆಂಬರ್ 2022 ರಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಆ ಸಿನಿಮಾವನ್ನು ಮೆಚ್ಚಿದ್ದರು. ಈಗ ಸಿನಿಮಾ ಅಭಿಮಾನಿಗಳು ಪೊನ್ನಿಯಿನ್ ಸೆಲ್ವನ್ 2ಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಚಿತ್ರತಂಡ ತೊಡಗಿಸಿಕೊಂಡಿದ್ದು, ಈ ಮಧ್ಯೆ ಚಿತ್ರದ ನಿರ್ದೇಶಕ ಮಣಿರತ್ನಂ ಅವರು ಹೇಳಿಕೆಯೊಂದನ್ನು ನೀಡಿದ್ದು, ಆ ಹೇಳಿಕೆ ಸಂಚಲನ ಮೂಡಿಸಿದೆ. ಇತ್ತೀಚೆಗೆ, ಪೊನ್ನಿಯಿನ್ ಸೆಲ್ವನ್ 2 ರ ನಿರ್ದೇಶಕರು ಹಿಂದಿ ಚಿತ್ರರಂಗವು ತನ್ನನ್ನು ಬಾಲಿವುಡ್ ಎಂದು ಕರೆಯುವುದನ್ನು ನಿಲ್ಲಿಸಲಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಹಿರಿಯ ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರ ಮುಂದಿನ ಚಿತ್ರ ಪೊನ್ನಿಯಿನ್ ಸೆಲ್ವನ್ 2 ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸಿಐಐ ಸೌತ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಹಿಂದಿ ಚಲನಚಿತ್ರೋದ್ಯಮವು ಬಾಲಿವುಡ್ ಪದವನ್ನು ಬಳಸುವುದನ್ನು ತಡೆಯಬೇಕು ಎಂದು ಹೇಳಿದರು. ಇದರೊಂದಿಗೆ, ಇತರ ಭಾರತೀಯ ಭಾಷೆಗಳ ಚಿತ್ರಗಳು ತಮ್ಮ ಅರ್ಹತೆಯನ್ನು ಪಡೆಯಬಹುದು. ಹಿಂದಿ ಚಿತ್ರರಂಗ ತನ್ನನ್ನು ತಾನು ಬಾಲಿವುಡ್ ಎಂದು ಕರೆಯುವುದನ್ನು ನಿಲ್ಲಿಸಿದರೆ, ಜನರು ಭಾರತೀಯ ಸಿನಿಮಾ ಎಂದ್ರೆ ಬಾಲಿವುಡ್ ಎಂದು ಗುರುತಿಸುವುದನ್ನು ನಿಲ್ಲಿಸುತ್ತಾರೆ ಎಂದು ಮಣಿರತ್ನಂ ಹೇಳಿದ್ದಾರೆ.

ಕೆಜಿಎಫ್‌, ಪುಷ್ಪ, ಆರ್​ಆರ್​ಆರ್​ ಹಾಗೂ ಕಾಂತಾರ ಸಿನಿಮಾ ಬಿಡುಗಡೆ ನಂತರ ಈ ಚಿತ್ರಗಳು ವಿಶ್ವದ ಚಿತ್ರರಂಗದ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂಬುದರ ಕುರಿತು ಮಾತನಾಡಿದ ಅವರು, ನಾನು ಬಾಲಿವುಡ್‌, ಕಾಲಿವುಡ್‌ ಎಂದು ಯಾವುದೇ ಚಿತ್ರರಂಗವನ್ನು ಪ್ರತ್ಯೇಕ ಮಾಡಿ ನೋಡಲು ಇಷ್ಟಪಡುವುದಿಲ್ಲ. ಭಾರತೀಯ ಚಿತ್ರರಂಗ ಎಂದರೆ ಅದು ಎಲ್ಲಾ ಭಾಷೆಗಳ ಸಿನಿಮಾ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಜನರ ಹಾಗೂ ನಮ್ಮ ನೆಲದ ಕಥೆಗಳನ್ನು ಹೇಳುವ ಮೂಲಕ ದಕ್ಷಿಣ ಚಿತ್ರರಂಗ ಇಂದು ವಿಶ್ವಾದ್ಯಂತ ಸಾಕಷ್ಟು ಪ್ರಭಾವ ಬೀರುತ್ತಿದೆ ಎಂದು ಮಣಿರತ್ನಂ ಹೇಳಿದರು.

ಅನೇಕ ಸಂದರ್ಭಗಳಲ್ಲಿ ದಕ್ಷಿಣ ಚಲನಚಿತ್ರೋದ್ಯಮದ ಚಲನಚಿತ್ರಗಳನ್ನು ಬಾಲಿವುಡ್ ಚಲನಚಿತ್ರಗಳು ಎಂದು ಕರೆಯಲಾಗುತ್ತಿತ್ತು. ಆರ್‌ಆರ್‌ಆರ್‌ ಚಿತ್ರದಲ್ಲೂ ಅದೇ ಸಂಭವಿಸಿತು. ಆರ್‌ಆರ್‌ಆರ್ ಬಾಲಿವುಡ್ ಚಿತ್ರ ಅಲ್ಲ. ಆದರೆ ತೆಲುಗು ಚಿತ್ರ ಎಂದು ಎಸ್‌ಎಸ್ ರಾಜಮೌಳಿ ಅಮೆರಿಕದ ಪತ್ರಕರ್ತರಿಗೆ ಪ್ರತಿಕ್ರಿಯೆಯಾಗಿ ಸ್ಪಷ್ಟಪಡಿಸಿದರು ಎಂದರು. ಇನ್ನು ಮಣಿರತ್ನಂ ಬಾಲಿವುಡ್​ ಕುರಿತು ನೀಡಿರುವ ಹೇಳಿಕೆ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದೆ. ಕಳೆದ ವರ್ಷ ಬಿಡುಗಡೆಯಾದ ಪೊನ್ನಿಯಿನ್ ಸೆಲ್ವನ್ 1 ರ ಸೀಕ್ವೆಲ್ ಆಗಿರುವ ಪೊನ್ನಿಯಿನ್ ಸೆಲ್ವನ್ ಏಪ್ರಿಲ್ 28 ರಂದು ಬಿಡುಗಡೆಯಾಗಲಿದೆ. ಮೊದಲ ಭಾಗವು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಿತ್ತು. ಆದ್ದರಿಂದ ಈಗ ಅದರ ಎರಡನೇ ಭಾಗದ ಬಗ್ಗೆಯೂ ಹೆಚ್ಚಿನ ನಿರೀಕ್ಷೆಗಳಿವೆ. ಪೊನ್ನಿಯಿನ್ ಸೆಲ್ವನ್ 1 ಪ್ರಪಂಚದಾದ್ಯಂತ 480 ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿತು. ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್, ಚಿಯಾನ್ ವಿಕ್ರಮ್, ಕಾರ್ತಿ ಸೇರಿದಂತೆ ಅನೇಕ ದೊಡ್ಡ ನಟರ ಬಳಗವೇ ಇದೆ.

ಎರಡು ದಿನಗಳ ಕಾಲ ಚೆನ್ನೈನಲ್ಲಿ ನಡೆದ ಈ ಶೃಂಗಸಭೆಯಲ್ಲಿ ನಟ-ನಟಿಯರು, ನಿರ್ದೆಶಕರು, ನಿರ್ದೇಶಕರು, ವಿತರಕರು, 60ಕ್ಕೂ ಹೆಚ್ಚು ಪ್ರಸಿದ್ಧ ಭಾಷಣಕಾರರು ಸೇರಿದಂತೆ ವಿಶ್ವದ ಸುಮಾರು 700 ಸೆಲೆಬ್ರಿಟಿಗಳು ಹಾಗೂ ಒಟಿಟಿ ಪ್ಲಾಟ್‌ಫಾರ್ಮ್‌ಗಳ ರಾಷ್ಟ್ರೀಯ ಮುಖ್ಯಸ್ಥರು ಭಾಗವಹಿಸಿದ್ದರು.

ಓದಿ: 'ಪೊನ್ನಿಯಿನ್‌ ಸೆಲ್ವನ್‌' ಮಣಿರತ್ನಂ ಅವರ ಕನಸಿನ ಸಿನಿಮಾ: ನಟ ವಿಕ್ರಮ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.