ETV Bharat / entertainment

ಹಿಂದಿ ಬಿಗ್​ ಬಾಸ್ 16 ಶೀಘ್ರದಲ್ಲೇ ಆರಂಭ.. ಪ್ರೋಮೋ ರಿಲೀಸ್-ಪ್ರೇಕ್ಷಕರ ಕುತೂಹಲ ಹೆಚ್ಚಳ

author img

By

Published : Sep 14, 2022, 4:55 PM IST

ಹಿಂದಿ ಬಿಗ್ ಬಾಸ್ ಸೀಸನ್ 16 ಪ್ರೋಮೋ ರಿಲೀಸ್ ಆಗಿದ್ದು ಪ್ರೇಕ್ಷಕರ ಕುತೂಹಲ ಹೆಚ್ಚಿದೆ.

Bigg Boss 16
ಹಿಂದಿ ಬಿಗ್​ ಬಾಸ್ 16 ಶೀಘ್ರದಲ್ಲೇ ಆರಂಭ

ಬಾಲಿವುಡ್ ನಟ ಸಲ್ಮಾನ್ ಖಾನ್ ಬಿಗ್ ಬಾಸ್ ಸೀಸನ್ 16 ನಿರೂಪಕರಾಗಿ ಮರಳಲು ಸಿದ್ಧರಾಗಿದ್ದಾರೆ. ನಿರ್ಮಾಪಕರು ಬಿಗ್ ಬಾಸ್ 16 ಪ್ರೋಮೋ ರಿಲೀಸ್ ಮಾಡಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ. ಆದರೆ ಶೋ ಪ್ರಸಾರ ದಿನಾಂಕ ಮತ್ತು ಸ್ಪರ್ಧಿ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.

ಬಿಗ್ ಬಾಸ್ ಸೀಸನ್ 16 ತಯಾರಕರು ಹೊಸ ಪ್ರೋಮೋ ಅನಾವರಣಗೊಳಿಸಿದ್ದಾರೆ. ಈ ಸೀಸನ್‌ನಲ್ಲಿ ಸ್ವತಃ ಬಿಗ್ ಬಾಸ್ ಆಡುತ್ತಾರೆ ಎಂದು ಹೇಳುವ ಮೂಲಕ ಜನರ ನಿರೀಕ್ಷೆ ಹೆಚ್ಚಿಸಿದ್ದಾರೆ. ಆದರೆ ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸುವ ಬಗ್ಗೆ ತಯಾರಕರು ಹೆಚ್ಚು ಜಾಗರೂಕರಾಗಿರುವಂತೆ ತೋರುತ್ತಿದೆ. ಯಾರ ಹೆಸರನ್ನೂ ಕೂಡ ಬಹಿರಂಗಪಡಿಸಿಲ್ಲ.

ಇನ್ನು ವರದಿಗಳ ಪ್ರಕಾರ, ಬಿಗ್ ಬಾಸ್ ಸೀಸನ್ 15 ಖ್ಯಾತಿಯ ಶೆಹನಾಜ್ ಗಿಲ್ ಅವರು ಸಲ್ಮಾನ್ ಖಾನ್ ಅವರೊಂದಿಗೆ ಬಿಗ್ ಬಾಸ್ 16ಅನ್ನು ಹೋಸ್ಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಕ್ಟೋಬರ್ 1 ರಂದು ರಿಯಾಲಿಟಿ ಶೋ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದ್ದರೂ ಅಧಿಕೃತ ಘೋಷಣೆ ಆಗಿಲ್ಲ. ಇನ್ನೂ ಬಿಗ್ ಬಾಸ್ 16 ರ ಪ್ರೀಮಿಯರ್ ಸಂಚಿಕೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆಯಂತೆ. ಅದರ ದ್ವಿತೀಯಾರ್ಧವನ್ನು ಭಾನುವಾರ, ಅಕ್ಟೋಬರ್ 2ರಂದು ಪ್ರಸಾರ ಮಾಡಲಾಗುತ್ತದೆ ಎನ್ನುವ ಮಾಹಿತಿಯಿದೆ.

ಇದನ್ನೂ ಓದಿ: ಪುಷ್ಪ ಸಿನಿಮಾದ ಸಾಮಿ ಸಾಮಿ ಹಾಡಿಗೆ ಡ್ಯಾನ್ಸ್​​.. ಈ ಬಾಲಕಿಯನ್ನು ಭೇಟಿಯಾಗಬೇಕೆಂದ ನಟಿ ರಶ್ಮಿಕಾ ಮಂದಣ್ಣ

ಕಲರ್ಸ್​ ಟಿವಿ ಇನ್​​ಸ್ಟಾಗ್ರಾಮ್​​ನಲ್ಲಿ ಇದು ಬಿಗ್​​ಬಾಸ್​ ಟೈಮ್​ ಎನ್ನುವ ಕ್ಯಾಪ್ಷನ್​ನೊಂದಿಗೆ ಪ್ರೋಮೋ ಶೇರ್ ಮಾಡಿದೆ. ಇದಕ್ಕೆ ಪ್ರೇಕ್ಷಕರು ಪ್ರತಿಕ್ರಿಯೆ, ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.