ETV Bharat / entertainment

ಹಿನಾ ಖಾನ್ ನಟನೆಯ ಕಂಟ್ರಿ ಆಫ್ ಬ್ಲೈಂಡ್ ಚಿತ್ರ ಆಸ್ಕರ್​​ಗೆ ನಾಮನಿರ್ದೇಶನಗೊಳ್ಳುತ್ತಾ?

author img

By ETV Bharat Karnataka Team

Published : Dec 27, 2023, 6:58 AM IST

ಹಿನಾ ಖಾನ್-ನಟಿಸಿದ ಕಂಟ್ರಿ ಆಫ್ ಬ್ಲೈಂಡ್ ಚಿತ್ರ ಅದೇ ಹೆಸರಿನ HG ವೆಲ್ಸ್ ಅವರ ಕಾದಂಬರಿಯ ರೂಪಾಂತರವಾಗಿದೆ. ಆಸ್ಕರ್​ ನಾಮನಿರ್ದೇಶನ ರೇಸ್‌ಗಾಗಿ ಸ್ಪರ್ಧಿಸುವ ವಿವಿಧ ಚಲನಚಿತ್ರಗಳಲ್ಲಿ ಈ ಚಿತ್ರವೂ ಕೂಡಾ ಒಂದಾಗಿದೆ.

Hina Khan-starrer Country of Blind to get Oscar nomination?
ಹಿನಾ ಖಾನ್ ನಟನೆಯ ಕಂಟ್ರಿ ಆಫ್ ಬ್ಲೈಂಡ್ ಚಿತ್ರ ಆಸ್ಕರ್​​ಗೆ ನಾಮನಿರ್ದೇಶನಗೊಳ್ಳುತ್ತಾ?

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಲೇಖಕ ಎಚ್‌ಜಿ ವೆಲ್ಸ್ ವಿರಚಿತ ಕಾದಂಬರಿ ಆಧರಿಸಿ ನಿರ್ಮಾಣವಾಗಿರುವ ಕಂಟ್ರಿ ಆಫ್ ಬ್ಲೈಂಡ್ ಚಿತ್ರವು ವಿಶ್ವಾದ್ಯಂತ ವಿಮರ್ಶಾತ್ಮಕ ಮೆಚ್ಚುಗೆ ಪಡೆದುಕೊಂಡಿದೆ. ಈ ಚಿತ್ರವು ಲಾಸ್ ಏಂಜಲೀಸ್‌ನ ಸಿನಿಲೌಂಜ್‌ನಲ್ಲಿ ವಿಶೇಷ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು. ಈ ವರ್ಷದ ಅಕ್ಟೋಬರ್‌ನಲ್ಲಿ ಆಸ್ಕರ್ ಲೈಬ್ರರಿಯ ಪರ್ಮನೆಂಟ್ ಕೋರ್ ಕಲೆಕ್ಷನ್‌ನಲ್ಲಿ ಸ್ಕ್ರಿಪ್ಟ್‌ಗೆ ಈ ಹಿಂದೆ ಬಹುಮಾನ ಕೂಡಾ ನೀಡಿ ಸಮ್ಮಾನಿಸಲಾಗಿತ್ತು. ಇದೇ ಆಧಾರದ ಮೇಲೆ ಇಲ್ಲಿನ ಅಕಾಡೆಮಿ ಸದಸ್ಯರು ಆಸ್ಕರ್ ನಾಮನಿರ್ದೇಶನಕ್ಕಾಗಿ ಶಿಫಾರಸು ಮಾಡಿದ್ದಾರೆ.

  • " class="align-text-top noRightClick twitterSection" data="">

ರಾಹತ್ ಕಜ್ಮಿ ನಿರ್ದೇಶಿಸಿದ ಮತ್ತು ತಾರಿಕ್ ಖಾನ್ ನಿರ್ಮಿಸಿದ ಈ ಚಲನಚಿತ್ರವನ್ನು ಸಂಪೂರ್ಣವಾಗಿ ಕಾಶ್ಮೀರದಲ್ಲಿ ಚಿತ್ರೀಕರಿಸಲಾಗಿದೆ. ಈ ಚಲನಚಿತ್ರದ ಬಹುಪಾಲು ಕಾಶ್ಮೀರಿ ಪಾತ್ರವರ್ಗ ಇದೆ, ಸ್ಥಳೀಯ ಪ್ರದರ್ಶಕರಾದ ಅಹ್ಮರ್ ಹೈದರ್, ಮೀರ್ ಸರ್ವರ್ ಮತ್ತು ಹುಸೇನ್ ಖಾನ್ ಅವರನ್ನು ಈ ಚಿತ್ರ ಒಳಗೊಂಡಿದೆ. ಜೊತೆಗೆ ಕಾಶ್ಮೀರ ಮೂಲದ ನಟರಾದ ಹಿನಾ ಖಾನ್ ಮತ್ತು ಶೋಬ್ ನಿಕಾಶ್ ಷಾ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗಾಗಿ ಈ ಚಿತ್ರ ಈಗ ಭಾರಿ ಸದ್ದು ಮಾಡುತ್ತಿದೆ.

ಚಿತ್ರದ ತಿರುಳೇನು?: 1904 ರಲ್ಲಿ ಪ್ರಕಟವಾದ HG ವೆಲ್ಸ್ ಅವರ ಕಾದಂಬರಿಯಲ್ಲಿನ ಪಾತ್ರವಾದ ನುನೆಜ್, ಕುರುಡರ ದೇಶವನ್ನು ಕಂಡುಹಿಡಿದ ವ್ಯಕ್ತಿಯಾಗಿದ್ದಾರೆ, ಅಂಧರ ಜನಸಂಖ್ಯೆ ಹೆಚ್ಚಿರುವ ಆಂಡಿಯನ್ ಕಣಿವೆ ರಹಸ್ಯ. ಕುರುಡು ನಿವಾಸಿಗಳು ನೋಡುವ ಸಾಮರ್ಥ್ಯದ ಹೊರತಾಗಿಯೂ, ಕುರುಡರನ್ನು ಜನ ಯಾವ ರೀತಿಯಾಗಿ ನೋಡುತ್ತಾರೆ ಎಂಬುದು ಕಾದಂಬರಿ ಪಾತ್ರದಾರಿ ನುನೆಜ್​ಗೆ ಚನ್ನಾಗಿಯೇ ಗೊತ್ತಿದೆ. ಕಣಿವೆಯ ಹೊರಗಿನ ಪ್ರಪಂಚದ ಅವರ ಚಿತ್ರಣಗಳು ಸಮುದಾಯಕ್ಕೆ ಅಸಂಬದ್ಧ ಎಂದು ತೋರುತ್ತದೆ ಎಂಬುದನ್ನು ಚಿತ್ರದಲ್ಲಿ ವಿವರಿಸಲಾಗಿದೆ.

ನುನೆಜ್ ಮದೀನಾ-ಸರೋಟೆಯೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ಅವಳ ತಂದೆ ಅವನನ್ನು ತಿರಸ್ಕರಿಸುತ್ತಾನೆ. ಏಕೆಂದರೆ ಅವನಿಗೆ ಕಣ್ಣು ಕಾಣುವುದಿಲ್ಲ ಎಂಬ ಕಾರಣಕ್ಕಾಗಿ. ಈ ವಿಚಾರ ಇನ್ನಷ್ಟು ಸಂಕೀರ್ಣಗೊಳಿಸುತ್ತದೆ. ನುನೆಜ್ ಅವರು ಹೊರ ಜಗತ್ತಿಗೆ ಹಿಂತಿರುಗಬೇಕೇ ಅಥವಾ ಅಂಧರ ದೇಶದಲ್ಲಿ ಉಳಿಯಬೇಕೇ ಎಂದು ಯೋಚಿಸುವಂತೆ ಮಾಡುತ್ತದೆ. ಅಲ್ಲಿ ಅವನು ಬಹಿಷ್ಕೃತನಾಗಿದ್ದಾನೆ. ಅವನು ಎರಡು ವಾಸ್ತವಗಳ ನಡುವೆ ಸಿಲುಕಿಕೊಂಡಿದ್ದಾನೆ. ಅವರ ಅಂತಿಮ ಆಯ್ಕೆ ಮತ್ತು ಹಣೆಬರಹ ಕಾದಂಬರಿಯುದ್ದಕ್ಕೂ ಅಸ್ಪಷ್ಟವಾಗಿಯೇ ಉಳಿದಿದೆ.

ಕಥೆಯು ಗ್ರಹಿಕೆ, ವೈವಿಧ್ಯತೆ ಮತ್ತು 'ಅಂಗವೈಕಲ್ಯ'ದ ಸಾರ್ವತ್ರಿಕ ವ್ಯಾಖ್ಯಾನದ ಕಲ್ಪನೆಯನ್ನು ಚಿತ್ರ ಪರಿಶೋಧಿಸುತ್ತದೆ. ನಮ್ಮ ದೃಷ್ಟಿಕೋನಗಳು ಸಾಮಾಜಿಕ ರೂಢಿಗಳಿಂದ ಹೇಗೆ ರೂಪುಗೊಂಡಿವೆ ಎಂಬುದನ್ನು ಪರಿಗಣಿಸುವಂತೆ ಮಾಡುತ್ತದೆ. ನುನೆಜ್ ಈ ನಾಗರಿಕತೆಯ ವಿಶಿಷ್ಟ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಆಯ್ಕೆಯನ್ನು ಕಂಡುಕೊಳ್ಳುತ್ತಾನೆ. ಅಥವಾ ಕಾದಂಬರಿಯು ಉದ್ದೇಶಪೂರ್ವಕವಾಗಿ ಅವನ ಭವಿಷ್ಯವನ್ನು ಅಸ್ಪಷ್ಟವಾಗಿಯೇ ಇರುವಂತೆ ಬಿಡಲಾಗಿದೆ

ಅಮೆರಿಕದಲ್ಲಿ ಯಶಸ್ವಿ ಪ್ರದರ್ಶನ: ಒಂದು ಗಂಟೆ ನಲವತ್ತೊಂದು ನಿಮಿಷಗಳ ಅವಧಿಯ ಈ ಚಿತ್ರವು ಅಕ್ಟೋಬರ್ 6 ರಂದು ಅಮೆರಿಕದಲ್ಲಿ ಬಿಡುಗಡೆ ಆಗಿದೆ, ಅಷ್ಟೇ ಅಲ್ಲ ಈ ಸಿನಿಮಾ ಪ್ರೇಕ್ಷಕರ ಗಮನವನ್ನೂ ಸೆಳೆದಿದೆ. ಇತ್ತೀಚಿನ ಅಕಾಡೆಮಿ ಅವಾರ್ಡ್ಸ್ ಸ್ಕ್ರೀನಿಂಗ್‌ನಲ್ಲಿ ಭಾಗವಹಿಸಿದವರು ಚಲನಚಿತ್ರಕ್ಕೆ ಹೆಚ್ಚಿನ ಅಂಕಗಳನ್ನು ನೀಡಿದ್ದಾರೆ. ಇದು ಆಸ್ಕರ್ ನಾಮನಿರ್ದೇಶನಕ್ಕೆ ಅರ್ಹವಾದ ಸಿನಿಮಾ ಎಂದು ಹಲವರು ಅಭಿಪ್ರಾಯ ಕೂಡಾ ಪಟ್ಟಿದ್ದಾರೆ. ವರದಿಗಳ ಪ್ರಕಾರ, ಮುಂದಿನ ವರ್ಷದ ಮಾರ್ಚ್‌ನಲ್ಲಿ ನಡೆಯಲಿರುವ 96 ನೇ ಅಕಾಡೆಮಿ ಪ್ರಶಸ್ತಿಗಳಿಗೆ ಈ ಚಲನಚಿತ್ರವು ನಾಮನಿರ್ದೇಶನಗೊಳ್ಳಲು ಸ್ಪರ್ಧಿಸುತ್ತಿದೆ.

ಚಲನಚಿತ್ರ ನಿರ್ಮಾಪಕ ಮತ್ತು ಗೋಲ್ಡನ್ ಗ್ಲೋಬ್ ವಿಜೇತ ಸಿದ್ದಿಕ್ ಬರ್ಮಾಕ್ ಚಿತ್ರವನ್ನು "ಮೋಡಿ ಮಾಡುವ" ಸಿನಿಮೀಯ ಅನುಭವ ಎಂದು ಕರೆದಿದ್ದಾರೆ. ಚಿತ್ರದ ಪ್ರದರ್ಶನದ ನಂತರ, ಬರ್ಮಾಕ್ ಹೇಳಿಕೆ ನೀಡಿದ್ದು, ಇದು ಯುದ್ಧ ಭೂಮಿಯಾಗುತ್ತದೆ, ಅಲ್ಲಿ ಸ್ವಾತಂತ್ರ್ಯ ಮತ್ತು ಪ್ರೀತಿಯ ಘರ್ಷಣೆ ಇದೆ. ಕುರುಡುತನ ಮತ್ತು ದೃಷ್ಟಿಯ ನಡುವಿನ ಸಂಘರ್ಷ ಮಾತ್ರ ಮುಗಿಯದ ಕಥೆ ಎಂದು ಅವರು ಬಣ್ಣಿಸಿದ್ದಾರೆ.

ಚಿತ್ರದ ಲಾಸ್ ಏಂಜಲೀಸ್ ಪ್ರೀಮಿಯರ್ ಶೋ ನಂತರ ಮಾತನಾಡಿದ ನಿರ್ದೇಶಕ ರಹತ್ ಕಾಜ್ಮಿ, "ಸಾಂಕೇತಿಕತೆ, ಪ್ರೇಮಕಥೆ ಮತ್ತು ಸಾಹಸಗಳನ್ನು ಸಂಯೋಜಿಸಿ, ಕಂಟ್ರಿ ಆಫ್ ಬ್ಲೈಂಡ್ ಚಿತ್ರವನ್ನು ಮಾಡಲು ಹಲವು ವರ್ಷಗಳಿಂದ ಯೋಜನೆ ರೂಪಿಸಿದ್ದೆ, ಅದರಂತೆ ಈ ಚಿತ್ರದ ಸಂಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ. "ಈ ಸವಲತ್ತಿಗಾಗಿ ನಾನು ಅಕಾಡೆಮಿಗೆ ಧನ್ಯವಾದ ಹೇಳುತ್ತೇನೆ ಮತ್ತು ನನ್ನ ಈ ಕೆಲಸವು ಇದುವರೆಗೆ ಬರೆದ ಕೆಲವು ಮೆಚ್ಚಿನ ಸ್ಕ್ರಿಪ್ಟ್‌ಗಳ ಜೊತೆಗೆ ಇರುತ್ತದೆ ಎಂದು ನಾನು ಭಾವಿಸಿದ್ದೇನೆ" ಎಂದು ಹೇಳಿದ್ದಾರೆ.

ಸಣ್ಣ ಕಥೆಯ ಅದ್ಬುತ್​ ರೂಪ: ಸಿನಿಮಾ ವಿಭಾಗದ ನಿರ್ದೇಶಕ ಮತ್ತು ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ತೀರ್ಪುಗಾರರ ಮುಖ್ಯಸ್ಥ ಕ್ರಿಶ್ಚಿಯನ್ ಜ್ಯೂನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಂಟ್ರಿ ಆಫ್ ಬ್ಲೈಂಡ್ ಎಚ್‌ಜಿ ವೆಲ್ಸ್ ಅವರ ಈ ಚಿತ್ರ ಸಣ್ಣ ಕಥೆಯ ಅದ್ಭುತ ರೂಪಾಂತರವಾಗಿದೆ. ಅವರ ಬರವಣಿಗೆಯು ಸಮಕಾಲೀನ ಚಲನಚಿತ್ರ ನಿರ್ಮಾಪಕರ ಸಿನಿಮೀಯ ದೃಷ್ಟಿಗೆ ಹೊಂದಿಕೆಯಾಗುತ್ತದೆ ಎಂಬುದನ್ನು ಸಾಬೀತು ಪಡಿಸಿದೆ ಎಂದು ಹೇಳಿದ್ದಾರೆ.

ಹರ್ಷ ವ್ಯಕ್ತಪಡಿಸಿದ ಹಿನಾ ಖಾನ್​: "ಈ ಚಿತ್ರವು ಆಸ್ಕರ್​ಗೆ ನಾಮನಿರ್ದೇಶನಗೊಳ್ಳುತ್ತದೆ ಎಂದು ನಾನು ಆಶಿಸುತ್ತೇನೆ. ನನ್ನ ಎಲ್ಲಾ ಕಠಿಣ ಪರಿಶ್ರಮವು ಅಂತಹ ವಿಶಿಷ್ಟ ರೀತಿಯಲ್ಲಿ ಪ್ರತಿಫಲ ಕಂಡಾಗ ನನಗೆ ತುಂಬಾ ಸಂತೋಷವಾಗುತ್ತದೆ . ಕೇನ್ಸ್‌ನಿಂದ ಆಸ್ಕರ್‌ವರೆಗಿನ ಹಾದಿ ಅದ್ಭುತವಾಗಿದೆ" ಎಂದು ಹಿನಾ ಖಾನ್ ಹರ್ಷ ವ್ಯಕ್ತಪಡಿಸಿದ್ದಾರೆ. "ಕೇನ್ಸ್ ಮತ್ತು ಈಗ ಆಸ್ಕರ್‌ನಂತಹ ಪ್ರತಿಷ್ಠಿತ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಲು ಸಾಧ್ಯವಾಗುತ್ತಿರುವುದು ನನಗೆ ಮತ್ತು ನಮ್ಮ ಇಡೀ ಚಿತ್ರತಂಡಕ್ಕೆ ನಿಜವಾಗಿಯೂ ಹೆಮ್ಮೆಯ ಕ್ಷಣವಾಗಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.