ETV Bharat / entertainment

'54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ'ಕ್ಕೆ ವಿಜಯ್ ರಾಘವೇಂದ್ರರ 'ಗ್ರೇ ಗೇಮ್ಸ್' ಆಯ್ಕೆ

author img

By ETV Bharat Karnataka Team

Published : Nov 22, 2023, 7:49 PM IST

ವಿಜಯ್‍ ರಾಘವೇಂದ್ರ ನಟನೆಯ 'ಗ್ರೇ ಗೇಮ್ಸ್' ಚಿತ್ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ.

'Grey Games' selected for '54th International Film Festival'
'54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ'ಕ್ಕೆ 'ಗ್ರೇ ಗೇಮ್ಸ್' ಆಯ್ಕೆ

ಗೋವಾ ಸರ್ಕಾರ, ಎಂಟರ್​ಟೈನ್‍ಮೆಂಟ್‍ ಸೊಸೈಟಿ ಆಫ್‍ ಗೋವಾ ಮತ್ತು ಎನ್‍.ಎಫ್‍.ಡಿ.ಸಿ ಇಂಡಿಯಾ ಜಂಟಿಯಾಗಿ ಗೋವಾದ ಪಣಜಿಯಲ್ಲಿ ಆಯೋಜಿಸಿರುವ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (IFFI) ಕನ್ನಡದ 'ಗ್ರೇ ಗೇಮ್ಸ್' ಚಿತ್ರ ಆಯ್ಕೆ ಆಗಿದೆ. ವಿಜಯ್‍ ರಾಘವೇಂದ್ರ, ಭಾವನಾ ರಾವ್‍, ಶ್ರುತಿ ಪ್ರಕಾಶ್‍, ಅಪರ್ಣ ವಸ್ತಾರೆ, ಜೈ ಸೇರಿದಂತೆ ಹಲವರು ನಟಿಸಿರುವ ಈ ಚಿತ್ರವನ್ನು ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಗಂಗಾಧರ್ ಸಾಲಿಮಠ್‍ ನಿರ್ದೇಶಿಸಿದ್ದಾರೆ.

ಈಗಾಗಲೇ ಬಿಡುಗಡೆಗೆ ಸಜ್ಜಾಗಿರುವ 'ಗ್ರೇ ಗೇಮ್ಸ್' ಸಿನಿಮಾ ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ರೆಡ್‍ ಕಾರ್ಪೆಟ್‍ ಗಾಲ ಪ್ರೀಮಿಯರ್‍' ವಿಭಾಗದಡಿ ಮೊದಲ ಪ್ರದರ್ಶನ ಕಾಣುತ್ತಿದೆ. ಈ ವಿಭಾಗದಲ್ಲಿ ಭಾರತದ ಹಲವು ಚಿತ್ರಗಳು ಪ್ರೀಮಿಯರ್ ಆಗುತ್ತಿದ್ದು, ಈ ಪೈಕಿ ಕನ್ನಡದ 'ಗ್ರೇ ಗೇಮ್ಸ್' ಸಹ ಒಂದಾಗಿರುವುದು ವಿಶೇಷ.

'Grey Games' selected for '54th International Film Festival'
'54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ'ಕ್ಕೆ 'ಗ್ರೇ ಗೇಮ್ಸ್' ಆಯ್ಕೆ

ಈ ಚಿತ್ರದಲ್ಲಿ ಕನ್ನಡದ ಹೆಸರಾಂತ ನಟ ವಿಜಯ್‍ ರಾಘವೇಂದ್ರ ಸೈಕಾಲಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಭಾವನಾ ರಾವ್ ಪೊಲೀಸ್‍ ಅಧಿಕಾರಿಯಾಗಿ ನಟಿಸಿದ್ದಾರೆ. ಶ್ರುತಿ ಪ್ರಕಾಶ್‍ ಈ ಚಿತ್ರದಲ್ಲಿ ಓರ್ವ ನಟಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಮೂಲಕ ಜೈ (ವಿಜಯ್ ರಾಘವೇಂದ್ರ ಹಾಗೂ ಶ್ರೀಮುರಳಿ ಸಹೋದರಿ ಪುತ್ರ) ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹಲವು ರೋಚಕ ತಿರುವುಗಳಿರುವ ಈ ಚಿತ್ರ, ಅಷ್ಟೇ ಭಾವನಾತ್ಮಕವಾಗಿ ಮೂಡಿಬಂದಿದೆ.

ಗೋವಾ ಚಿತ್ರೋತ್ಸವಕ್ಕೆ ಚಿತ್ರ ಆಯ್ಕೆಯಾಗಿರುವ ಬಗ್ಗೆ ಖುಷಿ ವ್ಯಕ್ತಪಡಿಸುವ ನಿರ್ದೇಶಕ ಗಂಗಾಧರ್ ಸಾಲಿಮಠ್‍, ''ಇದೊಂದು ಫ್ಯಾಮಿಲಿ ಸಸ್ಪೆನ್ಸ್ ಡ್ರಾಮಾ ಆಗಿದ್ದು, ವರ್ಚುವಲ್​​ ಮತ್ತು ನೈಜತೆ ನಡುವೆ ಯಾವುದು ಸರಿ, ಯಾವುದು ತಪ್ಪು ಎಂಬ ನಮ್ಮ ದೃಷ್ಟಿಕೋನಕ್ಕೆ ಸವಾಲು ಎಸೆಯುವಂತಿದೆ. ಈ ಚಿತ್ರ ಪ್ರೇಕ್ಷಕರನ್ನು ರಂಜಿಸುವುದರ ಜೊತೆಗೆ ಅವರ ಮೇಲೆ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಖಂಡಿತ ಇದೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಡಂಕಿ ಸಿನಿಮಾದ ಫಸ್ಟ್ ಸಾಂಗ್​ ರಿಲೀಸ್: ಆ್ಯಕ್ಷನ್​ ಅವತಾರದಿಂದ ಹೊರಬಂದ ಶಾರುಖ್​ ಖಾನ್

ತಮ್ಮ ಚಿತ್ರವನ್ನು ಗುರುತಿಸಿ, ಪ್ರೀಮಿಯರ್ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಿರುವ ಚಿತ್ರೋತ್ಸವ ಸಮಿತಿಗೆ ಧನ್ಯವಾದ ಸಲ್ಲಿಸಿದ ನಿರ್ಮಾಪಕ ಆನಂದ್ ಹೆಚ್‍ ಮುಗುದ್‍, ''ಈ ಆಯ್ಕೆಯು ನಮ್ಮ ತಂಡದ ಶ್ರದ್ಧೆ ಮತ್ತು ಅವಿರತ ಶ್ರಮಕ್ಕೆ ಸಿಕ್ಕ ಪ್ರತಿಫಲ. ನಮ್ಮ ತಂಡಕ್ಕೆ ಇಂಥದ್ದೊಂದು ಅವಕಾಶ ಕಲ್ಪಿಸಿಕೊಟ್ಟ ಆಯ್ಕೆ ಸಮಿತಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಒಂದು ಅದ್ಭುತ ಅನುಭವ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ'' ಎಂದು ತಿಳಿಸಿದರು.

ಇದನ್ನೂ ಓದಿ: ರಣ್​ಬೀರ್ ಕಪೂರ್​ಗೆ ಕನ್ನಡ, ತೆಲುಗು ಕಲಿಸಿದ ರಶ್ಮಿಕಾ ಮಂದಣ್ಣ: ವಿಡಿಯೋ ನೋಡಿ

ಮೆಟಾವರ್ಸ್ ಮತ್ತು ಆನ್‍ಲೈನ್‍ ಗೇಮಿಂಗ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಸರೀಶ್‍ ಗ್ರಾಮಪುರೋಹಿತ್‍, ಅರವಿಂದ್‍ ಜೋಷಿ ಮತ್ತು ಡೋಲೇಶ್ವರ್ ರಾಜ್‍ ಸುಂಕು ಸಹ ನಿರ್ಮಾಪಕರು‌. ವರುಣ್‍ ಡಿ.ಕೆ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಗ್ರೇ ಗೇಮ್ಸ್ ಚಿತ್ರ 2024ಕ್ಕೆ ಬಿಡುಗಡೆ ಆಗಲು ಸಿದ್ಧತೆ ನಡೆಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.